Coronavirus :ವ್ಯಾಕ್ಸಿನ್ ಸರ್ಟಿಫಿಕೇಟ್ ಅಸಲಿಯೋ ನಕಲಿಯೋ ಸುಲಭವಾಗಿ ಹೀಗೆ ಪತ್ತೆ ಹಚ್ಚಿ

ಚೆಕ್ ಪಾಯಿಂಟ್ ಎಂಬ ಸಾಫ್ಟ್‌ವೇರ್ ಕಂಪನಿಯು ನಕಲಿ ಕೋವಿಡ್ ಲಸಿಕೆ ಪ್ರಮಾಣಪತ್ರಗಳ  ಬ್ಲ್ಯಾಕ್ ಮಾರ್ಕೆಟ್ ಕಂಡುಹಿಡಿಯಲು ಅಧ್ಯಯನವನ್ನು ನಡೆಸಿತ್ತು. ಇದರಲ್ಲಿ ವಿಶ್ವದ 29 ದೇಶಗಳಲ್ಲಿ ನಕಲಿ ಲಸಿಕೆ ಪ್ರಮಾಣಪತ್ರಗಳನ್ನು ತಯಾರಿಸಲಾಗುತ್ತಿದೆ ಎನ್ನುವುದು ತಿಳಿದು ಬಂದಿದೆ.

Written by - Ranjitha R K | Last Updated : Sep 24, 2021, 01:54 PM IST
  • ಹರಿದಾಡುತ್ತಿದೆ ನಕಲಿ ಸರ್ಟಿಫಿಕೇಟ್
  • ಅಸಲಿ ವ್ಯಾಕ್ಸಿನ್ ಸರ್ಟಿಫಿಕೇಟ್ ಗುರುತಿಸುವುದು ಹೇಗೆ?
  • 29 ದೇಶಗಳಲ್ಲಿ ನಕಲಿ ಲಸಿಕೆ ಪ್ರಮಾಣಪತ್ರಗಳನ್ನು ತಯಾರಿಸಲಾಗುತ್ತಿದೆ
Coronavirus :ವ್ಯಾಕ್ಸಿನ್ ಸರ್ಟಿಫಿಕೇಟ್ ಅಸಲಿಯೋ ನಕಲಿಯೋ ಸುಲಭವಾಗಿ ಹೀಗೆ ಪತ್ತೆ ಹಚ್ಚಿ  title=
ಅಸಲಿ ವ್ಯಾಕ್ಸಿನ್ ಸರ್ಟಿಫಿಕೇಟ್ ಗುರುತಿಸುವುದು ಹೇಗೆ? (file photo)

ನವದೆಹಲಿ : ಕೊರೊನಾ ವೈರಸ್ (Coronavirus) ನಕಲಿ ವ್ಯಾಕ್ಸಿನ್ ಸರ್ಟಿಫಿಕೇಟ್ ಗಳ (Fake vaccine certificate) ಬಗ್ಗೆ ಈಗ ಎಲ್ಲೆಡೆ ಚರ್ಚೆ ಕೇಳಿ ಬರುತ್ತಿದೆ. ಬ್ಲ್ಯಾಕ್ ಮಾರ್ಕೆಟ್ ನಲ್ಲಿ ನಕಲಿ ಲಸಿಕೆ ಪ್ರಮಾಣಪತ್ರಗಳನ್ನು ತಯಾರಿಸುವ ಕೆಲಸವೂ ಈಗ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮಲ್ಲಿರುವ ಸರ್ಟಿಫಿಕೇಟ್ ಅಸಲಿಯೋ ನಕಲಿಯೋ ಎನ್ನುವುದನ್ನು ಕಂಡುಕೊಳ್ಳುವುದು ಕೂಡಾ ಬಹಳ ಮುಖ್ಯವಾಗಿರುತ್ತದೆ.  

ಲಸಿಕೆ ಪ್ರಮಾಣಪತ್ರಗಳ ಬ್ಲ್ಯಾಕ್ ಮಾರ್ಕೆಟ್ : 
ಚೆಕ್ ಪಾಯಿಂಟ್ ಎಂಬ ಸಾಫ್ಟ್‌ವೇರ್ ಕಂಪನಿಯು ನಕಲಿ ಕೋವಿಡ್ ಲಸಿಕೆ ಪ್ರಮಾಣಪತ್ರಗಳ (COVID Vaccine certificate) ಬ್ಲ್ಯಾಕ್ ಮಾರ್ಕೆಟ್ ಕಂಡುಹಿಡಿಯಲು ಅಧ್ಯಯನವನ್ನು ನಡೆಸಿತ್ತು. ಇದರಲ್ಲಿ ವಿಶ್ವದ 29 ದೇಶಗಳಲ್ಲಿ ನಕಲಿ ಲಸಿಕೆ ಪ್ರಮಾಣಪತ್ರಗಳನ್ನು (Fake vaccine certificate) ತಯಾರಿಸಲಾಗುತ್ತಿದೆ ಎನ್ನುವುದು ತಿಳಿದು ಬಂದಿದೆ. ಇದು ಆಸ್ಟ್ರಿಯಾ, ಬ್ರೆಜಿಲ್, ಲಾಟ್ವಿಯಾ, ಲಿಥುವೇನಿಯಾ, ಮಾಲ್ಟಾ, ಪೋರ್ಚುಗಲ್, ಸಿಂಗಾಪುರ, ಥೈಲ್ಯಾಂಡ್, ಯುಎಇ ಮುಂತಾದ ದೇಶಗಳನ್ನು ಒಳಗೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಅಥವಾ ಬೇರೆಯವರ ಲಸಿಕೆ ಪ್ರಮಾಣಪತ್ರ ನಿಜವೋ ಅಥವಾ ನಕಲಿಯೋ ಎಂಬುದನ್ನು ಸುಲಭವಾಗಿ ಕಂಡುಹಿಡಿಯುವುದು ಹೇಗೆ ಎಂದು ನೋಡೋಣ.. 

ಇದನ್ನೂ ಓದಿ : ನಿಮ್ಮ ಬಳಿಯೂ ಖಾಲಿ ನಿವೇಶನವಿದ್ದರೆ ಈ ವ್ಯಾಪಾರ ಆರಂಭಿಸಿ, ಉತ್ತಮ ಸಂಪಾದನೆ ನಿಮ್ಮದಾಗಿಸಬಹುದು

ಪ್ರಮಾಣಪತ್ರವನ್ನು ಗುರುತಿಸುವುದು ಹೇಗೆ ?
-ಮೊದಲಿಗೆ ಕೋವಿನ್‌ನ (Cowin) ಅಧಿಕೃತ ವೆಬ್‌ಸೈಟ್ verify.cowin.gov.in/ ಗೆ ಭೇಟಿ ನೀಡಿ.
-ಇದರ ನಂತರ ನೀವು Verify a vaccination certificate ಆಯ್ಕೆಯನ್ನು ಕ್ಲಿಕ್ ಮಾಡಿ. 
- ನೀವು ಇಲ್ಲಿ ಕ್ಲಿಕ್ ಮಾಡಿದ ತಕ್ಷಣ, ನಿಮ್ಮ ಫೋನ್‌ನಲ್ಲಿ ಕ್ಯಾಮೆರಾ ತೆರೆಯಲು ನಿಮಗೆ ಅಧಿಸೂಚನೆ ಬರುತ್ತದೆ. ನೀವು ಇದಕ್ಕೆ ಅನುಮತಿ ನೀಡಬೇಕಾಗುತ್ತದೆ. 
-ಕ್ಯಾಮರಾವನ್ನು ಕ್ಯೂಆರ್ ಕೋಡ್‌ನಲ್ಲಿ ಪೇಪರ್ ಅಥವಾ ಡಿಜಿಟಲ್ ಪ್ರಮಾಣಪತ್ರದಲ್ಲಿ ತೋರಿಸಿ ಮತ್ತು ಸ್ಕ್ಯಾನ್ ಮಾಡಿ. 
-ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ, ಸರ್ಟಿಫಿಕೇಟ್ ಅಸಲಿಯಾಗಿದ್ದರೆ 'Certificate Successfully Verified' ಎಂದು ಕಾಣಿಸಿಕೊಳ್ಳುತ್ತದೆ. 
- ನಿಮ್ಮ ಪ್ರಮಾಣಪತ್ರ ನಕಲಿಯಾಗಿದ್ದರೆ 'Certificate Invalid'  ಎಂದುಕಾಣಿಸುತ್ತದೆ 

ಇದನ್ನೂ ಓದಿ : Post office ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ ಆದಷ್ಟು ಬೇಗ ಶ್ರೀಮಂತರಾಗಿ : ಇಲ್ಲಿದೆ ಸಂಪೂರ್ಣ ಸಂಪೂರ್ಣ ಮಾಹಿತಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News