GST Tax Slab: ಶ್ರೀ ಸಾಮಾನ್ಯರಿಗೆ ಶಾಕ್ ನೀಡಲಿದೆಯಾ ಕೇಂದ್ರ ಸರ್ಕಾರ?

GST Tax Slab: ಜಿಎಸ್‌ಟಿ ಕೌನ್ಸಿಲ್ ಕನಿಷ್ಠ ಜಿಎಸ್‌ಟಿ ದರವನ್ನು ಶೇಕಡಾ 5 ರಿಂದ 8 ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ (Central Government) ಸೂಚಿಸಿದೆ.

Written by - Nitin Tabib | Last Updated : Mar 6, 2022, 06:45 PM IST
  • ಶ್ರೀಸಾಮಾನ್ಯರಿಗೆ ಶಾಕ್ ನೀಡಲಿದೆಯಾ ಸರ್ಕಾರ?
  • GST ಕೌನ್ಸಿಲ್ ಸರ್ಕಾರಕ್ಕೆ ನೀಡಿದ ಸಲಹೆ ಏನು?
  • ವಿವರಗಳನ್ನು ತಿಳಿಯಲು ಈ ಸುದ್ದಿ ಓದಿ
GST Tax Slab: ಶ್ರೀ ಸಾಮಾನ್ಯರಿಗೆ ಶಾಕ್ ನೀಡಲಿದೆಯಾ ಕೇಂದ್ರ ಸರ್ಕಾರ?  title=
GST Tax Slab (File Photo)

ನವದೆಹಲಿ: GST Tax Slab - ಪೆಟ್ರೋಲ್‌-ಡೀಸೆಲ್‌ನಿಂದ ಖಾದ್ಯ ತೈಲ ಮತ್ತು ತರಕಾರಿಗಳ ಬೆಲೆ ಏರಿಕೆಗೆ ಜನ ತತ್ತರಿಸಿ ಹೋಗಿದ್ದಾರೆ. ಇನ್ನೊಂದೆಡೆ ರಷ್ಯಾ-ಉಕ್ರೇನ್ ಯುದ್ಧವು (Russia-Ukraine War) ಈ ಹಣದುಬ್ಬರದಲ್ಲಿ ಡಬಲ್ ಹೊಡೆತದ ಸಂಕೇತ ನೀಡುತ್ತಿದೆ. ಇಂತಹ  ಪರಿಸ್ಥಿತಿಯಲ್ಲಿ, ಕೇಂದ್ರ ಜಿಎಸ್‌ಟಿ ಕೌನ್ಸಿಲ್‌ನಿಂದ ಮತ್ತೊಂದು ಶಾಕ್ ಸಿಗುವ ಸಾಧ್ಯತೆ ಇದೆ.  ಏಕೆಂದರೆ GST ಕೌನ್ಸಿಲ್ (GST Council) ಹಲವು ಉತ್ಪನ್ನಗಳ ಮೇಲಿನ ಜಿಎಸ್‌ಟಿ ವಿನಾಯಿತಿಯನ್ನು ತೆಗೆದುಹಾಕಬಹುದು ಮತ್ತು ಅಷ್ಟೇ ಅಲ್ಲ ಕನಿಷ್ಠ GST ಸ್ಲಾಬ್ ಅನ್ನು ಶೇಕಡಾ 5 ರಿಂದ 8 ಕ್ಕೆ ಹೆಚ್ಚಿಸಬಹುದು.

ಕೇಂದ್ರಕ್ಕೆ ಸಲಹೆ ನೀಡಿದ ಜಿಎಸ್‌ಟಿ ಕೌನ್ಸಿಲ್ 
ವಾಸ್ತವದಲ್ಲಿ ಜಿಎಸ್‌ಟಿ ಕೌನ್ಸಿಲ್‌ನ ಮುಂದಿನ ಸಭೆಯಲ್ಲಿ ಕನಿಷ್ಠ ತೆರಿಗೆ ಸ್ಲ್ಯಾಬ್ ಅನ್ನು ಶೇಕಡಾ 5 ರಿಂದ 8 ಕ್ಕೆ ಹೆಚ್ಚಿಸಬಹುದು ಎಂದು ವರದಿಯಾಗಿದೆ. ಇದರೊಂದಿಗೆ, ಜಿಎಸ್‌ಟಿ ವ್ಯವಸ್ಥೆಯಲ್ಲಿನ ವಿನಾಯಿತಿಗಳ ಪಟ್ಟಿಯನ್ನು ಕೂಡ ಕಡಿಮೆ ಮಾಡಲಿದೆ. ಈ ನಿಟ್ಟಿನಲ್ಲಿ ರಾಜ್ಯ ಹಣಕಾಸು ಸಚಿವರ ಸಮಿತಿಯು ಈ ತಿಂಗಳ ಅಂತ್ಯದೊಳಗೆ ತನ್ನ ವರದಿಯನ್ನು ಜಿಎಸ್‌ಟಿ ಕೌನ್ಸಿಲ್‌ಗೆ ಸಲ್ಲಿಸಬಹುದು. ಇದರಲ್ಲಿ ಸರ್ಕಾರದ ಆದಾಯ ಹೆಚ್ಚಿಸಲು ವಿವಿಧ ಕ್ರಮಗಳನ್ನು ಸೂಚಿಸಲಾಗಿದೆ.

ಸದ್ಯಕ್ಕೆ ಜಿಎಸ್‌ಟಿಯ ನಾಲ್ಕು ಸ್ಲ್ಯಾಬ್‌ಗಳಿವೆ. 5, ಶೇ.12, ಶೇ.18 ಮತ್ತು ಶೇ.28. ಐಷಾರಾಮಿ ಉತ್ಪನ್ನಗಳು ಹೆಚ್ಚಿನ ತೆರಿಗೆಯನ್ನು ಆಕರ್ಷಿಸುತ್ತವೆ. ಐಷಾರಾಮಿ ಮತ್ತು ಪಾಪದ ಸರಕುಗಳು 28 ಶೇಕಡಾ ಸ್ಲ್ಯಾಬ್‌ಗಿಂತ ಹೆಚ್ಚಿನ ಸೆಸ್ ಅನ್ನು ಆಕರ್ಷಿಸುತ್ತವೆ. ಜಿಎಸ್‌ಟಿ ಜಾರಿಯಾದ ನಂತರ ರಾಜ್ಯಗಳಿಗೆ ಆಗುವ ಆದಾಯ ನಷ್ಟವನ್ನು ಸರಿದೂಗಿಸಲು ಈ ಸೆಸ್ ಸಂಗ್ರಹವನ್ನು ಬಳಸಲಾಗುತ್ತದೆ.

ಇದನ್ನೂ ಓದಿ-SBI ಗ್ರಾಹಕರಿಗೆ ಸಿಹಿ ಸುದ್ದಿ! ಮನೆಯಲ್ಲೇ ಕುಳಿತು ಈ ಕೆಲಸ ಮಾಡಿ, ತೆರಿಗೆಯಲ್ಲಿ ಬಂಪರ್ ವಿನಾಯಿತಿ ಸಿಗುತ್ತೆ

ಯಾವ ವಸ್ತುಗಳ ಮೇಲೆ GST ವಿಧಿಸಲಾಗುತ್ತದೆ
ಪ್ರಸ್ತುತ ಜಿಎಸ್‌ಟಿ ಕೌನ್ಸಿಲ್ ಕನಿಷ್ಠ ತೆರಿಗೆ ಸ್ಲ್ಯಾಬ್‌ನ ದರಗಳನ್ನು ಹೆಚ್ಚಿಸಲು ಸೂಚಿಸುವ ಮೂಲಕ ಶ್ರೀಸಾಮಾನ್ಯರಿಗೆ ಶಾಕ್ ನೀಡಲು ಹೊರಟಿದೆ. ಮಾಹಿತಿಯ ಪ್ರಕಾರ, ಜಿಎಸ್‌ಟಿ ಕೌನ್ಸಿಲ್‌ನ ಮುಂದಿನ ಸಭೆಯಲ್ಲಿ, ಜಿಎಸ್‌ಟಿಯಿಂದ ವಿನಾಯಿತಿ ಪಡೆದ ವಸ್ತುಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಹ ಪ್ರಸ್ತಾಪಿಸಲಾಗಿದೆ ಎನ್ನಲಾಗಿದೆ. ಪ್ರಸ್ತುತ, ಪ್ಯಾಕ್ ಮಾಡದ, ಬ್ರಾಂಡ್ ಮಾಡದ ಆಹಾರ ಮತ್ತು ಡೈರಿ ಉತ್ಪನ್ನಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ.

ಇದನ್ನೂ ಓದಿ-PM Kisan : ರೈತರಿಗೆ ಸಿಹಿ ಸುದ್ದಿ! ಪಿಎಂ ಕಿಸಾನ್ ಯೋಜನೆಯ 11ನೇ ಕಂತಿನ ಹಣ ಈ ದಿನ ಬಿಡುಗಡೆ!

ಸರ್ಕಾರದ ಆದಾಯ ಹೆಚ್ಚಿಸುವುದು ಗುರಿಯಾಗಿದೆ
ಮೂಲಗಳ ಪ್ರಕಾರ, ಜಿಎಸ್‌ಟಿಯ ಕನಿಷ್ಠ ದರವನ್ನು ಶೇಕಡಾ 5 ರಿಂದ 8 ಕ್ಕೆ ಹೆಚ್ಚಿಸುವ ಮೂಲಕ ಸರ್ಕಾರವು 1.50 ಲಕ್ಷ ಕೋಟಿ ರೂಪಾಯಿಗಳ ಹೆಚ್ಚುವರಿ ವಾರ್ಷಿಕ ಆದಾಯವನ್ನು ಪಡೆಯಬಹುದು. ಶೇ.1ರಷ್ಟು ಹೆಚ್ಚಳ ಮಾಡಿದರೆ ವಾರ್ಷಿಕ 50,000 ಕೋಟಿ ರೂ ಸರ್ಕಾರಕ್ಕೆ ಹರಿದುಬರುತ್ತದೆ. ಈ ಸ್ಲ್ಯಾಬ್ ಮುಖ್ಯವಾಗಿ ಪ್ಯಾಕೇಜ್ ಮಾಡಿದ ಆಹಾರ ಪದಾರ್ಥಗಳನ್ನು ಒಳಗೊಂಡಿದೆ.

ಇದನ್ನೂ ಓದಿ-Women's Day 2022 ಅಂಗವಾಗಿ ನೀವೂ ಕೂಡ ನಿಮ್ಮ ಪತ್ನಿಗೆ ಈ ಉಡುಗೊರೆ ಕೊಡಿ, ತಿಂಗಳಿಗೆ 44, 793 ರೂ.ಸಂಪಾದಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News