Gold Silver price Today : ಏರುತ್ತಲೇ ಇದೆ ಚಿನ್ನದ ಬೆಲೆ ! ಬೆಳ್ಳಿ ಕೂಡಾ ಬಿದ್ದಿಲ್ಲ ಹಿಂದೆ : ಇಂದಿನ ದರ ಹೀಗಿದೆ

Gold Silver Price: ನಿನ್ನೆಯಿಂದ ಇಂದಿನವರೆಗೆ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ 200 ರೂಪಾಯಿ ಏರಿಕೆಯಾಗಿದೆ. ಯಾವ ನಗರದಲ್ಲಿ ಚಿನ್ನ ಬೆಳ್ಳಿ ಬೆಲೆ ಎಷ್ಟು  ನೋಡೋಣ. 

Written by - Ranjitha R K | Last Updated : Jan 31, 2024, 02:36 PM IST
  • ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆ
  • ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 58,150 ರೂ.
  • 24ಕ್ಯಾರೆಟ್ ಚಿನ್ನದ ಬೆಲೆ 63,200 ರೂ.
Gold Silver price Today : ಏರುತ್ತಲೇ ಇದೆ ಚಿನ್ನದ ಬೆಲೆ ! ಬೆಳ್ಳಿ ಕೂಡಾ ಬಿದ್ದಿಲ್ಲ ಹಿಂದೆ : ಇಂದಿನ ದರ ಹೀಗಿದೆ   title=

Gold Silver Price : ಇಂದು ಅಂದರೆ ಬುಧವಾರದಂದು ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 58,150 ರೂ.ಆಗಿದ್ದರೆ  24ಕ್ಯಾರೆಟ್ ಚಿನ್ನದ ಬೆಲೆ 63,200 ರೂ. ಆಗಿದೆ. ನಿನ್ನೆಯಿಂದ ಇಂದಿನವರೆಗೆ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ 200 ರೂಪಾಯಿ ಏರಿಕೆಯಾಗಿದೆ. ಯಾವ ನಗರದಲ್ಲಿ ಚಿನ್ನ ಬೆಳ್ಳಿ ಬೆಲೆ ಎಷ್ಟು  ನೋಡೋಣ. 

ದೆಹಲಿ-  22 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ
22 ಕ್ಯಾರೆಟ್ ಚಿನ್ನ-ಪ್ರತಿ 10 ಗ್ರಾಂ- 58,150
24 ಕ್ಯಾರೆಟ್ ಚಿನ್ನದ ಬೆಲೆ-10 ಗ್ರಾಂಗೆ- 63,420 

ಬೆಂಗಳೂರು -  22 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ
22 ಕ್ಯಾರೆಟ್ ಚಿನ್ನ-ಪ್ರತಿ 10 ಗ್ರಾಂ- 58,00 0 
24 ಕ್ಯಾರೆಟ್ ಚಿನ್ನದ ಬೆಲೆ-10 ಗ್ರಾಂಗೆ- 63,270    

ಮುಂಬೈ - 22 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ 
58,000 (22 ಕ್ಯಾರೆಟ್)
63,270 (24 ಕ್ಯಾರೆಟ್)

ಕೇರಳ - 22 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ 
58,000 (22 ಕ್ಯಾರೆಟ್)
63,270 (24 ಕ್ಯಾರೆಟ್)

ಇದನ್ನೂ ಓದಿ : Investment strategies for girl child : ಕೇವಲ 4 ಸಾವಿರ ಹೂಡಿಕೆ ಮಾಡಿದರೆ ಸಿಗುವುದು 22 ಲಕ್ಷ ! ಹೆಣ್ಣು ಮಕ್ಕಳಿಗಾಗಿ ಇದೆ ಈ ವಿಶೇಷ ಸ್ಕೀಮ್

ಬೆಳ್ಳಿ ಬೆಲೆ: 
ಇಂದು ಭಾರತದಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 76,500 ರೂ. ಆಗಿದೆ. ಮೇಲೆ ತಿಳಿಸಲಾದ ಚಿನ್ನದ ದರಗಳು ಸೂಚಕವಾಗಿವೆ ಮತ್ತು GST, TCS ಮತ್ತು ಇತರ ಶುಲ್ಕಗಳನ್ನು ಒಳಗೊಂಡಿರುವುದಿಲ್ಲ.ನಿಖರವಾದ ದರಗಳಿಗಾಗಿ ನಿಮ್ಮ ಸ್ಥಳೀಯ ಆಭರಣ  ಮಳಿಗೆಯನ್ನು ಸಂಪರ್ಕಿಸಬಹುದು. 

ಚಿನ್ನದ ಪರಿಶುದ್ಧತೆಯನ್ನು ತಿಳಿಯುವುದು ಹೇಗೆ:
ಚಿನ್ನದ ಪರಿಶುದ್ಧತೆಯನ್ನು ಗುರುತಿಸಲು ISO (ಇಂಡಿಯನ್ ಸ್ಟ್ಯಾಂಡರ್ಡ್ ಆರ್ಗನೈಸೇಶನ್) ಹಾಲ್ ಮಾರ್ಕ್‌ಗಳನ್ನು ನೀಡಲಾಗುತ್ತದೆ. 24 ಕ್ಯಾರೆಟ್ ಚಿನ್ನದ ಆಭರಣಗಳ ಮೇಲೆ 999, 23 ಕ್ಯಾರೆಟ್‌ನಲ್ಲಿ 958, 22 ಕ್ಯಾರೆಟ್‌ನಲ್ಲಿ 916, 21 ಕ್ಯಾರೆಟ್‌ನಲ್ಲಿ 875 ಮತ್ತು 18 ಕ್ಯಾರೆಟ್‌ನಲ್ಲಿ 750 ಎಂದು ಬರೆಯಲಾಗಿರುತ್ತದೆ. ಹೆಚ್ಚಾಗಿ ಚಿನ್ನವನ್ನು 22 ಕ್ಯಾರೆಟ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ಆದರೆ ಕೆಲವರು 18 ಕ್ಯಾರೆಟ್‌ಗಳನ್ನು ಸಹ ಬಳಸುತ್ತಾರೆ.

22 ಮತ್ತು 24 ಕ್ಯಾರೆಟ್ ಚಿನ್ನದ ನಡುವಿನ ವ್ಯತ್ಯಾಸ?
24 ಕ್ಯಾರೆಟ್ ಚಿನ್ನವು 99.9% ಶುದ್ಧವಾಗಿದೆ ಮತ್ತು 22 ಕ್ಯಾರೆಟ್ ಚಿನ್ನವು ಸರಿಸುಮಾರು 91% ಶುದ್ಧವಾಗಿದೆ. 22 ಕ್ಯಾರೆಟ್ ಚಿನ್ನದಲ್ಲಿ ತಾಮ್ರ, ಬೆಳ್ಳಿ, ಸತುವು ಮುಂತಾದ ವಿವಿಧ ಲೋಹಗಳ 9% ರಷ್ಟು ಮಿಶ್ರಣ ಮಾಡಿ ಆಭರಣವನ್ನು ತಯಾರಿಸಲಾಗುತ್ತದೆ. 24 ಕ್ಯಾರೆಟ್ ಚಿನ್ನದಿಂದ ಆಭರಣ ತಯಾರಿಸುವುದು ಸಾಧ್ಯವಿಲ್ಲ. ಅದಕ್ಕಾಗಿಯೇ ಹೆಚ್ಚಿನ ಅಂಗಡಿಯವರು 22 ಕ್ಯಾರೆಟ್‌ನಲ್ಲಿ ಚಿನ್ನವನ್ನು ಮಾರಾಟ ಮಾಡುತ್ತಾರೆ.

ಇದನ್ನೂ ಓದಿ : IMPS Rule Change: ಫೆಬ್ರುವರಿ 1 ರಿಂದ ಬದಲಾಗಲಿದೆ ಹಣ ವರ್ಗಾವಣೆ ವಿಧಾನದ ಈ ನಿಯಮ, ನೀವು ತಿಳಿದುಕೊಳ್ಳಿ!

ಹಾಲ್‌ಮಾರ್ಕ್ ಅನ್ನು ನೆನಪಿನಲ್ಲಿಡಿ : 
ಚಿನ್ನವನ್ನು ಖರೀದಿಸುವ ಮೊದಲು, ನೀವು ಚಿನ್ನದ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಹಾಲ್‌ಮಾರ್ಕ್ ಮಾರ್ಕ್ ನೋಡಿದ ನಂತರವೇ ಗ್ರಾಹಕರು ಖರೀದಿಸಬೇಕು. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಹಾಲ್‌ಮಾರ್ಕ್ ಅನ್ನು ನಿರ್ಧರಿಸುತ್ತದೆ. ಹಾಲ್‌ಮಾರ್ಕಿಂಗ್ ಯೋಜನೆಯು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಆಕ್ಟ್, ನಿಯಮಗಳು ಮತ್ತು ನಿಬಂಧನೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.

ನಿಮ್ಮ ಮಾಹಿತಿಗಾಗಿ : 
ಚಿನ್ನವನ್ನು ಖರೀದಿಸುವ ಮೊದಲು, ಚಿನ್ನದ ಬೆಲೆಯ ಬಗ್ಗೆ ನಿಖರವಾದ ಮಾಹಿತಿಯನ್ನು ಹೊಂದಿರಬೇಕು. ಚಿನ್ನ ಮತ್ತು ಬೆಳ್ಳಿಯ ನಿಖರವಾದ ಬೆಲೆಯನ್ನು ನಿಮ್ಮ ನಗರದ ಅಂಗಡಿಗಳಿಂದ ಪರಿಶೀಲಿಸಬಹುದು. ಈ ಲೇಖನದಲ್ಲಿ, ನಾವು ಚಿನ್ನ ಮತ್ತು ಬೆಳ್ಳಿಯ  ಅಪ್ಡೇಟೆಡ್ ಬೆಲೆಯನ್ನು ತೋರಿಸುತ್ತಿದ್ದೇವೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News