ವೇತನ ನಿಯಮಗಳಲ್ಲಿ ಬದಲಾವಣೆ ! ಮುಂದಿನ ತಿಂಗಳಿನಿಂದಲೇ ಕೈ ಸೇರುವುದು ಹೆಚ್ಚಿನ ವೇತನ

Salary Rules Latest News : ಮಾಸಿಕ ವೇತನ ಪಡೆಯುವ ಎಲ್ಲಾ ಉದ್ಯೋಗಿಗಳಿಗೆ ಇದು ಪ್ರಮುಖ ಸುದ್ದಿ. ಮುಂದಿನ ತಿಂಗಳಿನಿಂದ ಉದ್ಯೋಗಿಗಳ ಕೈಗೆ ಹೆಚ್ಚಿನ ವೇತನ ಸೇರಲಿದೆ. 

Written by - Ranjitha R K | Last Updated : Aug 28, 2023, 09:52 AM IST
  • ಮಾಸಿಕ ಸಂಬಳವು ಎಲ್ಲಾ ಉದ್ಯೋಗಿಗಳಿಗೆ ಮುಖ್ಯವಾಗಿದೆ
  • ಮೌಲ್ಯಮಾಪನಕ್ಕೆ ಸಂಬಂಧಿಸಿದ ನಿಬಂಧನೆಗಳಲ್ಲಿ CBDT ಪರಿಹಾರವನ್ನು ಒದಗಿಸಿದೆ.
  • ಇಲ್ಲಿದೆ ಈ ಬಗ್ಗೆ ಸರಿಯಾದ ಮಾಹಿತಿ
ವೇತನ ನಿಯಮಗಳಲ್ಲಿ ಬದಲಾವಣೆ ! ಮುಂದಿನ ತಿಂಗಳಿನಿಂದಲೇ ಕೈ ಸೇರುವುದು ಹೆಚ್ಚಿನ ವೇತನ  title=

Salary Rules Latest News : ಸೆಪ್ಟೆಂಬರ್ 1 ರಿಂದ, ಉದ್ಯೋಗಿಗಳಿಗೆ ಹೊಸ ವೇತನ ನಿಯಮಗಳು ಜಾರಿಗೆ ಬರಲಿವೆ. ಇದಾದ ನಂತರ ಅವರ ವೇತನ ಮಾದರಿಯಲ್ಲಿ ಹಲವು ಬದಲಾವಣೆ ಆಗಲಿದೆ ಎನ್ನಲಾಗಿದೆ. ಉದ್ಯೋಗಿಗಳಿಗೆ ವೇತನಕ್ಕೆ ಸಂಬಂಧಿಸಿದಂತೆ ಹೊಸ ಮಾನದಂಡಗಳನ್ನು ರೂಪಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಹಾಗಿದ್ದರೆ ಏನಿದು ಹೊಸ ನಿಯಮ?  

ನಿಮ್ಮ ಕಂಪನಿಯು ನಿಮಗೆ ಮನೆ ಅಥವಾ ವಸತಿಯನ್ನು ಒದಗಿಸಿದ್ದು, ಅದಕ್ಕೆ ನೀವು ಬಾಡಿಗೆಯನ್ನು ಪಾವತಿಸುತ್ತಿಲ್ಲ ಎಂದಾದರೆ ಈ  ಸುದ್ದಿ ನಿಮಗೆ ಸಂತಸ ತರಲಿದೆ. ಮೌಲ್ಯಮಾಪನಕ್ಕೆ ಸಂಬಂಧಿಸಿದ ನಿಬಂಧನೆಗಳಲ್ಲಿ CBDT ಪರಿಹಾರವನ್ನು ಒದಗಿಸಿದೆ. 

ಇದನ್ನೂ ಓದಿ : ಮೋದಿ ಸರ್ಕಾರದಿಂದ ಮುಂದಿನ ತಿಂಗಳು ಹೊಸ ಯೋಜನೆ ಜಾರಿ ! ಯಾರಿಗೆ ಸಿಗಲಿದೆ ಇದರ ನೇರ ಲಾಭ

CBDT ಪರ್ಕ್ವಿಸೈಟ್ ಮೌಲ್ಯಮಾಪನದ ಮಿತಿಯನ್ನು ಕಡಿಮೆ ಮಾಡಿದೆ. ಅಂದರೆ ಈಗ ಕಚೇರಿಯಿಂದ ಪಡೆದ ಮನೆಗೆ ಬದಲಾಗಿ ಸಂಬಳದ ಮೇಲಿನ ತೆರಿಗೆ ಕಡಿತವು ಕಡಿಮೆಯಾಗುತ್ತದೆ. ಹೀಗಾದಾಗ ಹೆಚ್ಚು ವೇತನ ನಿಮ್ಮ ಕೈ ಸೇರುತ್ತದೆ. ಈ ನಿಯಮ ಮುಂದಿನ ತಿಂಗಳಿನಿಂದ ಅಂದರೆ ಸೆಪ್ಟೆಂಬರ್ ನಿಂದ ಜಾರಿಗೆ ಬರಲಿದೆ.

ಇಲ್ಲಿ ತೆರಿಗೆಗೆ ಸಂಬಂಧಿಸಿದ ನಿಯಮಗಳು ಯಾವುವು ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಅನೇಕ ದೊಡ್ಡ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವಸತಿ ಒದಗಿಸುತ್ತವೆ. ಆದರೆ, ಅವರಿಂದ ಬಾಡಿಗೆ ವಸೂಲಿ  ಪಡೆಯುತ್ತಿಲ್ಲ.  ಆದರೆ ಇದನ್ನು  ಆದಾಯ ತೆರಿಗೆ ನಿಯಮಗಳ ಅಡಿಯಲ್ಲಿ ಪರ್ಕ್ವಿಸೈಟ್‌ನಲ್ಲಿ ಸೇರಿಸಲಾಗಿದೆ. ಪರ್ಕ್ವಿಸೈಟ್‌ನಲ್ಲಿ, ಉದ್ಯೋಗಿ ಬಾಡಿಗೆಯನ್ನು ಪಾವತಿಸಬೇಕಾಗಿಲ್ಲ, ಆದರೆ ಅದಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. 

ಇದನ್ನೂ ಓದಿ : ಮ್ಯೂಚವಲ್ ಫಂಡ್ ನಲ್ಲಿ ಯಾವ ರೀತಿ ಹೂಡಿಕೆಯನ್ನು ಮಾಡಿದರೆ ಹೆಚ್ಚು ಲಾಭದ ಜೊತೆಗೆ ಭದ್ರತೆ ಸಿಗುತ್ತದೆ?

ವೇತನದ ಭಾಗವಾಗಿರುವ ತೆರಿಗೆಗೆ ಪರ್ಕ್ವಿಸೈಟ್ ಮೌಲ್ಯವನ್ನು ನಿಗದಿಪಡಿಸಲಾಗಿದೆ. ಮನೆ ಇರುವ ಪ್ರದೇಶದ ಜನಸಂಖ್ಯೆಯನ್ನು ಆಧರಿಸಿ ಈ ಹಂಚಿಕೆಯನ್ನು ಮಾಡಲಾಗುತ್ತದೆ. ವ್ಯಾಲ್ಯುವೆಶನ್ ಮಾಡಿ ಪರ್ಕ್ವಿಸೈಟ್ ಮೌಲ್ಯದ ತೆರಿಗೆಯನ್ನು ವೇತನಕ್ಕೆ ಸೇರಿಸಲಾಗುತ್ತದೆ. ಇದರರ್ಥ ನೀವು ಬಾಡಿಗೆಯನ್ನು ಪಾವತಿಸದಿದ್ದರೂ, ಅದು ನಿಮ್ಮ ಆದಾಯದ ತೆರಿಗೆಯನ್ನು ಹೆಚ್ಚಿಸುತ್ತದೆ.

ಈಗ ಈ ಪ್ರದೇಶದ ಮಿತಿಯನ್ನು CBDT ಕಡಿಮೆ ಮಾಡಿದೆ. ಅಂದರೆ ಬಾಡಿಗೆಯಿಲ್ಲದ ಮನೆಯ ಬದಲಾಗಿ ಅದರ ಮೌಲ್ಯವು ವೇತನದಲ್ಲಿ ಹೆಚ್ಚಾಗುತ್ತದೆ. ಆದರೆ ಅದರ ವ್ಯಾಪ್ತಿ ಮೊದಲಿಗಿಂತ ಕಡಿಮೆ ಇರುತ್ತದೆ. ಅಧಿಸೂಚನೆಯ ಪ್ರಕಾರ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ಮತ್ತು ಇತರ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರು, ಕಂಪನಿಯ ಒಡೆತನದ ವಸತಿಗಳನ್ನು ಪಡೆದಿದ್ದರೆ, ಮೌಲ್ಯಮಾಪನವು ಹೀಗಿರುತ್ತದೆ. 

ಇದನ್ನೂ ಓದಿ : ಎಸ್ಬಿಐ ಗ್ರಾಹಕರಿಗೊಂದು ಸಂತಸದ ಸುದ್ದಿ, ಹೊಸ ಯೋಜನೆ ಆರಂಭಿಸಿದ ಬ್ಯಾಂಕ್!

ಹೆಚ್ಚು ಹಣ ಕೈ ಸೇರಲಿದೆ : 
ಈ ನಿರ್ಧಾರದಿಂದ ಕಂಪನಿಗಳು ನೀಡಿದ ಮನೆಗಳಲ್ಲಿ ವಾಸಿಸುವ ಜನರಿಗೆ ಹೆಚ್ಚಿನ ನಿರಾಳತೆ ಸಿಗಲಿದೆ. ಮೌಲ್ಯಮಾಪನ ಮಿತಿಯನ್ನು ಕಡಿಮೆ ಮಾಡುವುದರಿಂದ, ತೆರಿಗೆ ಕಡಿಮೆಯಾಗುತ್ತದೆ. ಆದ್ದರಿಂದ ತೆರಿಗೆ ಹೊಣೆಗಾರಿಕೆಯು ಕಡಿಮೆಯಾಗುತ್ತದೆ. ಇದರರ್ಥ ಹೆಚ್ಚು ಹಣ  ಉದ್ಯೋಗಿಗಳ ಕೈ ಸೇರುತ್ತದೆ.  

ಮುಂದಿನ ತಿಂಗಳಿನಿಂದ ಕೈ ಸೇರುವುದು ಅಧಿಕ ವೇತನ : 
ಒಂದು ಕೋಟಿಗೂ ಅಧಿಕ ಪಿಂಚಣಿದಾರರು ಮತ್ತು ನೌಕರರಿಗೆ ಶೇ.3ರಷ್ಟು  ಡಿಎ ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರ ಒಟ್ಟು ತುಟ್ಟಿಭತ್ಯೆಯನ್ನು   ಶೇ.45ಕ್ಕೆ ಏರಿಸಲಿದೆಎನ್ನಲಾಗುತ್ತಿದೆ. ಆದರೂ ಕೂಡಾ ಮತ್ತೊಂದೆಡೆ,  ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಳವಾಗಲಿದೆ  ಎಂದು ಕೂಡಾ ನಿರೀಕ್ಷಿಸಲಾಗಿದೆ.  ಕೇಂದ್ರ ಸರ್ಕಾರವು ಸೆಪ್ಟೆಂಬರ್ 2023 ರಲ್ಲಿ ಹೆಚ್ಚಳವನ್ನು ಘೋಷಿಸುವ ನಿರೀಕ್ಷೆಯಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News