ಸರ್ಕಾರಿ ನೌಕರರ ಬಡ್ತಿಗೆ ಹೊಸ ನಿಯಮ ! ಸರ್ಕಾರದಿಂದ ನೋಟಿಫಿಕೇಶನ್ ಜಾರಿ

7th Pay Commission Update: ಸರ್ಕಾರ ಬಡ್ತಿ ನಿಯಮಗಳಲ್ಲಿ ಬದಲಾವಣೆ ಮಾಡಿದ್ದು, ಅಧಿಸೂಚನೆ ಕೂಡಾ ಹೊರಡಿಸಿದೆ.  ಈ ಅಧಿಸೂಚನೆಯಲ್ಲಿ ಬಡ್ತಿಗೆ ಅಗತ್ಯವಿರುವ ಅರ್ಹತೆಯ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. 

Written by - Ranjitha R K | Last Updated : Sep 12, 2023, 11:03 AM IST
  • ನೌಕರರ ಡಿಎ ಇನ್ನು ಕೆಲವೇ ದಿನಗಳಲ್ಲಿ ಹೆಚ್ಚಳವಾಗಲಿದೆ.
  • ಅದಕ್ಕೂ ಮುನ್ನ ಬಡ್ತಿಗೆ ಸಂಬಂಧಿಸಿದಂತೆ ಭರ್ಜರಿ ಸುದ್ದಿ
  • ಮಾಹಿತಿ ನೀಡಿದ ರಕ್ಷಣಾ ಸಚಿವಾಲಯ
ಸರ್ಕಾರಿ ನೌಕರರ ಬಡ್ತಿಗೆ ಹೊಸ ನಿಯಮ ! ಸರ್ಕಾರದಿಂದ ನೋಟಿಫಿಕೇಶನ್ ಜಾರಿ  title=

7th Pay Commission Update : ಕೇಂದ್ರ ಸರ್ಕಾರಿ ನೌಕರರ ಡಿಎ ಇನ್ನು ಕೆಲವೇ ದಿನಗಳಲ್ಲಿ ಹೆಚ್ಚಳವಾಗಲಿದೆ. ಆದರೆ, ಅದಕ್ಕೂ ಮುನ್ನ ಸರ್ಕಾರಿ ನೌಕರರ ಬಡ್ತಿಗೆ ಸಂಬಂಧಿಸಿದಂತೆ ಭರ್ಜರಿ ಸುದ್ದಿ ಹೊರ ಬಂದಿದೆ.  ಏಳನೇ ವೇತನ ಆಯೋಗದ ಅಡಿಯಲ್ಲಿ ವೇತನ ಪಡೆಯುತ್ತಿರುವ ಮತ್ತು ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕೆಲಸ ಮಾಡುವ ನೌಕರರಿಗೆ ಇದು ಪ್ರಯೋಜನವನ್ನು ನೀಡುತ್ತದೆ. ಸರ್ಕಾರ ಬಡ್ತಿ ನಿಯಮಗಳಲ್ಲಿ ಬದಲಾವಣೆ ಮಾಡಿದ್ದು, ಅಧಿಸೂಚನೆ ಕೂಡಾ ಹೊರಡಿಸಿದೆ.  

ಮಾಹಿತಿ ನೀಡಿದ ರಕ್ಷಣಾ ಸಚಿವಾಲಯ : 
ರಕ್ಷಣಾ ಸಚಿವಾಲಯದ ರಕ್ಷಣಾ ನಾಗರಿಕ ನೌಕರರಿಗೆ (defense civilian employees)  ಬಡ್ತಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇಲ್ಲಿ ಕನಿಷ್ಠ ಸೇವಾ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. 

ಇದನ್ನೂ ಓದಿ : ಹಿರಿಯ ನಾಗರಿಕರಿಗೆ ನಿವೃತ್ತಿ ನಂತರವೂ ಸಿಗುವುದು ಮಾಸಿಕ ಆದಾಯ !

ಹೊರ ಬಿದ್ದಿದೆ ಅಧಿಸೂಚನೆ :
ಮೂಲಗಳ ಪ್ರಕಾರ, ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯದ ಅಡಿಯಲ್ಲಿ ರಕ್ಷಣಾ ಉದ್ಯೋಗಿಗಳಿಗೆ ಪರಿಷ್ಕೃತ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಈ ಸಂಬಂಧ ರಕ್ಷಣಾ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯಲ್ಲಿ ಬಡ್ತಿಗೆ ಅಗತ್ಯವಿರುವ ಅರ್ಹತೆಯ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. 

ಗ್ರೇಡ್‌ ಪ್ರಕಾರ ಪಟ್ಟಿ ಇಲ್ಲಿದೆ : 
ಇದರಲ್ಲಿ , ಪ್ರತಿ ಹಂತಕ್ಕೆ ಅನುಗುಣವಾಗಿ ಬಡ್ತಿಯ  ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಇದರೊಂದಿಗೆ ಜ್ಞಾಪಕ ಪತ್ರವನ್ನೂ ನೀಡಲಾಗಿದೆ.  ಇದಲ್ಲದೆ ಗ್ರೇಡ್‌ ಪ್ರಕಾರ ಬಡ್ತಿ ಹೇಗಿರಲಿದೆ ಎಂದು ಪಟ್ಟಿಯನ್ನು ಶೇರ್ ಮಾಡಲಾಗಿದೆ.   

ಇದನ್ನೂ ಓದಿ : ಡಿಜಿಟಲ್ ರೂಪಾಯಿ ಕುರಿತು ಹೊಸ ಅಪ್ಡೇಟ್ ಪ್ರಕಟ!

ಎಷ್ಟು ಅನುಭವ ಅಗತ್ಯವಿದೆ:
ಬಿಡುಗಡೆ ಮಾಡಿದ ಲಿಸ್ಟ್ ಪ್ರಕಾರ, ಹಂತ 1 ರಿಂದ 2 ಮತ್ತು 2 ರಿಂದ 3 ರವರೆಗಿನ ಉದ್ಯೋಗಿಗಳು 3 ವರ್ಷಗಳ ಅನುಭವವನ್ನು ಹೊಂದಿರಬೇಕು. ಹಂತ 2 ರಿಂದ 4 ರವರೆಗೆ, 8 ವರ್ಷಗಳ ಅನುಭವ ಇರಬೇಕು. ಆದರೆ ಹಂತ 3 ರಿಂದ 4 ರವರೆಗೆ, 5 ವರ್ಷಗಳ ಅನುಭವ ಇರಬೇಕು. 17 ನೇ ಹಂತದವರೆಗಿನ ಉದ್ಯೋಗಿಗಳು 1 ವರ್ಷದ ಅನುಭವವನ್ನು ಹೊಂದಿರಬೇಕು ಮತ್ತು 6 ರಿಂದ 11 ಹಂತಗಳಿಗೆ, 12 ವರ್ಷಗಳ ಅನುಭವವನ್ನು ಹೊಂದಿರಬೇಕು. ಅದರ ಆಧಾರದ ಮೇಲೆ ನೌಕರರಿಗೆ ಬಡ್ತಿ ನೀಡಲಾಗುವುದು. 

ತುಟ್ಟಿಭತ್ಯೆಯಲ್ಲಿ ಶೀಘ್ರ ಆಗುವುದು ಹೆಚ್ಚಳ : 
ಕೇಂದ್ರ ಸರ್ಕಾರ ಶೀಘ್ರದಲ್ಲೇ ನೌಕರರಿಗೆ ಡಿಎ ಹೆಚ್ಚಳದ ಉಡುಗೊರೆ ನೀಡಬಹುದು. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ಡಿಎ ಹೆಚ್ಚಳದ ಬಗ್ಗೆ ಘೋಷಿಸಬಹುದು. ಇದರಿಂದ ಲಕ್ಷಾಂತರ ನೌಕರರು ಮತ್ತು ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ. ಈ ವರ್ಷ, ಸರ್ಕಾರದಿಂದ ಎರಡನೇ ಬಾರಿಗೆ ತುಟ್ಟಿಭತ್ಯೆ ಘೋಷಿಸಲಾಗುವುದು. ಈ ಘೋಷಣೆ ನಂತರ   ನೌಕರರ ವೇತನದಲ್ಲಿ ಬಂಪರ್ ಹೆಚ್ಚಳವಾಗಲಿದೆ. ಹೆಚ್ಚಿದ ತುಟ್ಟಿಭತ್ಯೆ ಜುಲೈ 1, 2023 ರಿಂದ ಅನ್ವಯವಾಗುತ್ತದೆ.

ಇದನ್ನೂ ಓದಿ : ನೆದರ್ಲೆಂಡ್ಸ್ ಪ್ರಧಾನಿ ಜತೆ ಹೂಡಿಕೆ, ಸುಸ್ಥಿರ ಅಭಿವೃದ್ಧಿ, ನಾವೀನ್ಯತೆ ಕುರಿತು ವಿಸ್ತೃತ ಚರ್ಚೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News