PM Kisan : ಪಿಎಂ ಕಿಸಾನ್‌ 4 ನಿಯಮಗಳಲ್ಲಿ ಬದಲಾವಣೆ, 13 ನೇ ಕಂತು ಈ ದಿನ ಜಮೆ ಆಗಲಿದೆ!

PM Kisan Scheme : ಈ ಸರ್ಕಾರಿ ಯೋಜನೆಗೆ ನೀವು ಸಹ ಅರ್ಜಿ ಸಲ್ಲಿಸಿದ್ದರೆ, ಈ ತಿಂಗಳಲ್ಲೇ ನಿಮ್ಮ ಖಾತೆಗೆ ಹಣ ಬರಲಿದೆ, ಆದರೆ ಅದಕ್ಕೂ ಮೊದಲು ಕೃಷಿ ಸಚಿವಾಲಯವು ನಿಯಮಗಳಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ.

Written by - Chetana Devarmani | Last Updated : Jan 16, 2023, 06:07 PM IST
  • ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ
  • ಪಿಎಂ ಕಿಸಾನ್‌ 4 ನಿಯಮಗಳಲ್ಲಿ ಬದಲಾವಣೆ
  • 13 ನೇ ಕಂತು ಈ ದಿನ ಜಮೆ ಆಗಲಿದೆ!
PM Kisan : ಪಿಎಂ ಕಿಸಾನ್‌ 4 ನಿಯಮಗಳಲ್ಲಿ ಬದಲಾವಣೆ, 13 ನೇ ಕಂತು ಈ ದಿನ ಜಮೆ ಆಗಲಿದೆ! title=
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ

PM Kisan Scheme 13th Installment Date 2023: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (pm kisan samman nidhi) 13 ನೇ ಕಂತಿಗಾಗಿ ಕಾಯುತ್ತಿರುವ ಕೋಟಿಗಟ್ಟಲೆ ಫಲಾನುಭವಿಗಳಿಗೆ ದೊಡ್ಡ ಸುದ್ದಿ ಇದೆ. ಈ ಸರ್ಕಾರಿ ಯೋಜನೆಗೆ ನೀವು ಸಹ ಅರ್ಜಿ ಸಲ್ಲಿಸಿದ್ದರೆ, ಈ ತಿಂಗಳಲ್ಲೇ ನಿಮ್ಮ ಖಾತೆಗೆ ಹಣ ಬರಲಿದೆ, ಆದರೆ ಅದಕ್ಕೂ ಮೊದಲು ಕೃಷಿ ಸಚಿವಾಲಯವು ನಿಯಮಗಳಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ.

ಸರ್ಕಾರ ಹೊರಡಿಸಿದ ಸೂಚನೆಗಳು : 

ಯುಪಿ ಸರ್ಕಾರ ನೀಡಿದ ಮಾಹಿತಿಯ ಪ್ರಕಾರ, ಪಿಎಂ ಕಿಸಾನ್‌ನ 13 ನೇ ಕಂತಿನ ಹಣವನ್ನು ಕೆಲವೇ ಫಲಾನುಭವಿಗಳು ಪಡೆಯುತ್ತಾರೆ. ಈ 4 ನಿಯತಾಂಕಗಳನ್ನು ಯಾವ ರೈತ ಪೂರೈಸುತ್ತಾನೋ ಅವನ ಖಾತೆಗೆ ಮಾತ್ರ ಹಣ ಬರುತ್ತದೆ ಎಂದು ಯುಪಿ ಸರ್ಕಾರ ಹೇಳಿದೆ. 

1 ರೈತನ ಭೂ ದಾಖಲೆಯಲ್ಲಿ ರೈತನೇ ಆ ಭೂಮಿಯ ಮಾಲೀಕ ಎಂದಿರಬೇಕು.

2 ಇದರ ಹೊರತಾಗಿ, ರೈತರು ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು PM ಕಿಸಾನ್ ಪೋರ್ಟಲ್‌ನಲ್ಲಿ ಪೂರ್ಣಗೊಳಿಸಿರಬೇಕು.

3 ಇದಲ್ಲದೇ ರೈತರ ಬ್ಯಾಂಕ್ ಖಾತೆಯನ್ನು ಆಧಾರ್ ಗೆ ಲಿಂಕ್ ಮಾಡಬೇಕು.

4 ಬ್ಯಾಂಕ್ ಖಾತೆಯನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಗೆ ಲಿಂಕ್ ಮಾಡಬೇಕು.

ಯಾವುದೇ ರೈತರು ಈ ನಾಲ್ಕು ನಿಯತಾಂಕಗಳನ್ನು ಪೂರೈಸಿದರೆ ಮಾತ್ರ ಅವರು ಈ ಸೌಲಭ್ಯದ ಪ್ರಯೋಜನವನ್ನು ಪಡೆಯಬಹುದು. ಇದಲ್ಲದೇ ವಿವರ ಪೂರ್ಣಗೊಳ್ಳದ ರೈತರ ಖಾತೆಗೆ ಹಣ ಬರುವುದಿಲ್ಲ. 

ಇದನ್ನೂ ಓದಿ : ಜಗತ್ತಿನಲ್ಲೇ ಆಗರ್ಭ ಶ್ರೀಮಂತನಾಗಿದ್ದ ಹೈದರಾಬಾದ್ ನಿಜಾಂನ ಬಗ್ಗೆ ನಿಮಗೆಷ್ಟು ಗೊತ್ತು?

ಪಿಎಂ ಕಿಸಾನ್ ಯೋಜನೆಯ 11 ನೇ ಕಂತಾಗಿ ಸುಮಾರು 22,552 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಇದೇ ವೇಳೆ ಸರಕಾರ 12ನೇ ಕಂತಾಗಿ 17,443 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಫಲಾನುಭವಿಗಳ ಸಂಖ್ಯೆಯಲ್ಲಿ ಸಾಕಷ್ಟು ಕುಸಿತ ಕಂಡುಬಂದಿದೆ. ಜನವರಿ 30 ರೊಳಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಲಾ ಅರ್ಹ ರೈತರಿಗೆ 13 ನೇ ಕಂತಿನ ಪ್ರಯೋಜನವನ್ನು ಪಡೆಯುವಂತೆ ನೋಡಿಕೊಳ್ಳುತ್ತಿವೆ.

ಪಿಎಂ ಕಿಸಾನ್ ಗೆ ಸಂಬಂಧಿಸಿದ ದೂರು ಇಲ್ಲಿ ಸಲ್ಲಿಸಿ : 

ಈ ಯೋಜನೆಗೆ ಸಂಬಂಧಿಸಿದಂತೆ ನಿಮಗೆ ಯಾವುದೇ ರೀತಿಯ ಸಮಸ್ಯೆಗಳಿದ್ದರೆ, ನೀವು ಸಹಾಯವಾಣಿ ಸಂಖ್ಯೆ 155261 ಅಥವಾ 1800115526 ಅಥವಾ ಈ ಸಂಖ್ಯೆ 011-23381092 ಅನ್ನು ಸಂಪರ್ಕಿಸಬಹುದು. ಇದಲ್ಲದೆ pmkisan-ict@gov.in ಇಮೇಲ್ ಐಡಿಗೆ ಮೇಲ್ ಮಾಡುವ ಮೂಲಕ ನಿಮ್ಮ ಸಮಸ್ಯೆಯನ್ನು ನೀವು ಹೇಳಬಹುದು. 

ಇದನ್ನೂ ಓದಿ : ರೈತರ ಗಮನಕ್ಕೆ : ಈ ತಪ್ಪು ಮಾಡಿದರೆ ನಿಮಗೆ ಬರಲ್ಲ ಪಿಎಂ ಕಿಸಾನ್ 13ನೇ ಕಂತಿನ ಹಣ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News