ಡಿಎ ಹೆಚ್ಚಳವಾಯ್ತು ! ಇದೀಗ ಮತ್ತೊಂದು ಭತ್ಯೆಯಲ್ಲಿ ಹೆಚ್ಚಳ ! ಸರ್ಕಾರಿ ನೌಕರರ ವೇತನದಲ್ಲಿ ಆಗಲಿದೆ 12,600 ರೂ.ಹೆಚ್ಚಳ

HRA Calculation :ಡಿಎ 50 ಪರ್ಸೆಂಟ್ ತಲುಪಿದ ಕಾರಣ ಮನೆ ಬಾಡಿಗೆ ಭತ್ಯೆ ಎಷ್ಟು ಹೆಚ್ಚಾಗುತ್ತದೆ ಎನ್ನುವ ಕುತೂಹಲ ಕೂಡಾ ಕಾಡುತ್ತಿದೆ. ಇದಕ್ಕೆ ಉತ್ತರ ಇಲ್ಲಿದೆ. 

Written by - Ranjitha R K | Last Updated : Apr 15, 2024, 08:46 AM IST
  • ತುಟ್ಟಿಭತ್ಯೆಯನ್ನು ಶೇ.50ಕ್ಕೆ ಹೆಚ್ಚಿಸಿ ಕೇಂದ್ರ ಸರ್ಕಾರ ಆದೇಶ
  • ಮಾರ್ಚ್ ಮೊದಲ ವಾರದಲ್ಲಿಯೇ ಸರ್ಕಾರ ಈ ಬಗ್ಗೆ ಘೋಷಣೆ
  • DA 50 ಪ್ರತಿಶತವನ್ನು ತಲುಪಿದಾಗ,ಮನೆ ಬಾಡಿಗೆ ಭತ್ಯೆ ಮತ್ತು ಇತರ ಕೆಲವು ಭತ್ಯೆಗಳಲ್ಲಿ ಬದಲಾವಣೆ
ಡಿಎ ಹೆಚ್ಚಳವಾಯ್ತು ! ಇದೀಗ ಮತ್ತೊಂದು ಭತ್ಯೆಯಲ್ಲಿ ಹೆಚ್ಚಳ ! ಸರ್ಕಾರಿ ನೌಕರರ ವೇತನದಲ್ಲಿ ಆಗಲಿದೆ 12,600 ರೂ.ಹೆಚ್ಚಳ  title=

HRA Calculation : ಲಕ್ಷಗಟ್ಟಲೆ ಉದ್ಯೋಗಿಗಳ ತುಟ್ಟಿಭತ್ಯೆಯನ್ನು ಶೇ.50ಕ್ಕೆ ಹೆಚ್ಚಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಮಾರ್ಚ್ ಮೊದಲ ವಾರದಲ್ಲಿಯೇ ಸರ್ಕಾರ ಈ ಬಗ್ಗೆ ಘೋಷಣೆ ಮಾಡಿದೆ. ಜನವರಿ ಒಂದರಿಂದಲೇ ಅನ್ವಯವಾಗುವಂತೆ ಈ ಆದೇಶ ಜಾರಿಗೊಳಿಸಲಾಗಿದೆ. ನಿಯಮಗಳ ಪ್ರಕಾರ, DA 50 ಪ್ರತಿಶತವನ್ನು ತಲುಪಿದಾಗ,ಮನೆ ಬಾಡಿಗೆ ಭತ್ಯೆ (HRA) ಮತ್ತು ಇತರ ಕೆಲವು ಭತ್ಯೆಗಳು ಬದಲಾಗುತ್ತವೆ. ಹಾಗಾಗಿ ಡಿಎ ಹೆಚ್ಚಳದ ನಂತರ ಕೇಂದ್ರ ನೌಕರರು ಇದೀಗ ಮತ್ತೊಂದು ಭತ್ಯೆ ಹೆಚ್ಚಳಕ್ಕಾಗಿ ಕಾಯುತ್ತಿದ್ದಾರೆ.

ಹೆಚ್‌ಆರ್‌ಎ ಬದಲಾವಣೆ ಕುರಿತು ಯಾವುದೇ ಆದೇಶ ಹೊರಡಿಸಿಲ್ಲ : 
ಡಿಒಪಿಟಿ ಈಗಾಗಲೇ ಭತ್ಯೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಡಿಎ ಹೆಚ್ಚಳದ ನಂತರ ಇದನ್ನು ಪರಿಷ್ಕರಿಸಲಾಗುವುದು.ಆದರೆ ಮನೆ ಬಾಡಿಗೆ ಭತ್ಯೆ ಕುರಿತು ಯಾವುದೇ ಆದೇಶ ಬಂದಿಲ್ಲ.ಕೇಂದ್ರ ಸರ್ಕಾರ ಎಚ್‌ಆರ್‌ಎ ಬದಲಾವಣೆ ಬಗ್ಗೆ ಪ್ರತ್ಯೇಕವಾಗಿ ತಿಳಿಸುತ್ತದೆಯೇ ಎಂಬುದು ಪ್ರಶ್ನೆ. ಡಿಎ 50 ಪರ್ಸೆಂಟ್ ತಲುಪಿದ ಕಾರಣ ಮನೆ ಬಾಡಿಗೆ ಭತ್ಯೆ ಎಷ್ಟು ಹೆಚ್ಚಾಗುತ್ತದೆ ಎನ್ನುವ ಕುತೂಹಲ ಕೂಡಾ ಕಾಡುತ್ತಿದೆ.ಇದಕ್ಕೆ ಉತ್ತರ ಇಲ್ಲಿದೆ. 

ಇದನ್ನೂ ಓದಿ : Electricity Generation: ಬೇಸಿಗೆಯಲ್ಲಿ ಇನ್ಮುಂದೆ ವಿದ್ಯುತ್ ಕೊರತೆ ನಿಮ್ಮನ್ನು ಕಾಡುವುದಿಲ್ಲ, ಕಾರಣ ಇಲ್ಲಿದೆ

ಡಿಎ 50% ತಲುಪಿದಾಗ ಎಚ್‌ಆರ್‌ಎಯಲ್ಲಿ ಬದಲಾವಣೆಯಾಗುತ್ತದೆ. ಆದರೆ ಎಚ್‌ಆರ್‌ಎ  ನಗರಕ್ಕೆ ಅನುಸಾರವಾಗಿ ಬದಲಾಗುತ್ತದೆ. ನಗರವು ಉದ್ಯೋಗಿ ಮತ್ತು ಅವನ ಕುಟುಂಬ ವಾಸಿಸುವ ಸ್ಥಳವಾಗಿದೆ.HRA ಲೆಕ್ಕಾಚಾರಕ್ಕಾಗಿ ಕೆಲವು ಆಧಾರದ ಮೇಲೆ ನಗರಗಳನ್ನು X, Y ಮತ್ತು Z ವರ್ಗಗಳಾಗಿ ವರ್ಗೀಕರಿಸಲಾಗಿದೆ. ಏಳನೇ ವೇತನ ಆಯೋಗದ ಪ್ರಕಾರ HRA ಅನ್ನು 1 ಜುಲೈ 2017 ರಿಂದ ವರ್ಗ X, Y ಮತ್ತು Z ನಗರಗಳಿಗೆ ಕ್ರಮವಾಗಿ 24%, 16% ಮತ್ತು 8% ಮೂಲ ವೇತನಕ್ಕೆ ಹೆಚ್ಚಿಸಲಾಗಿದೆ. 

ಹಳೆಯ ದರದಂತೆ HRA  ಲೆಕ್ಕ : 
ನಂತರ DA 25% ತಲುಪಿದಾಗ, X, Y ಮತ್ತು Z ನಗರಗಳಿಗೆ HRA ದರವು ಕ್ರಮವಾಗಿ ಮೂಲ ವೇತನದ 27%, 18% ಮತ್ತು 9%  ಹೆಚ್ಚಿಸಲಾಯಿತು. ಇದರ ಪ್ರಕಾರ ಉದ್ಯೋಗಿಯ ಮೂಲ ವೇತನವು 35,000 ರೂಪಾಯಿಗಳಾಗಿದ್ದರೆ ನಗರ ವರ್ಗದ ಪ್ರಕಾರ HRA ಈ ರೀತಿ ಇರುತ್ತದೆ.

1.) X ವರ್ಗದ ನಗರಗಳಿಗೆ, 35,000 ರೂ. ಮೂಲ ವೇತನವಾದರೆ 27% ಅಂದರೆ ರೂ. 9,450
2.) Y ವರ್ಗದ ನಗರಗಳಿಗೆ 6,300 ರೂ. 
3.) Z ವರ್ಗದ ನಗರಗಳಿಗೆ, 3,150  ರೂ. 

ಹೀಗಾಗಿ, ಎಕ್ಸ್ ಕೆಟಗರಿ ನಗರಕ್ಕೆ ಎಚ್ ಆರ್ ಎ 9450 ರೂ.,ವೈ ಕೆಟಗರಿ ನಗರಕ್ಕೆ 6300 ರೂ. ಮತ್ತು ಝಡ್ ಕೆಟಗರಿ ನಗರಕ್ಕೆ 3150 ರೂ.ಆಗುತ್ತದೆ.ಆದರೆ ಈಗ 7 ನೇ ವೇತನ ಆಯೋಗದ ಶಿಫಾರಸಿನ ಪ್ರಕಾರ DA 50% ಆಗಿರುವಾಗ X, Y ಮತ್ತು Z ವರ್ಗದ ನಗರಗಳಿಗೆ ಕ್ರಮವಾಗಿ 30%, 20% ಮತ್ತು 10% ಆಗಿರಬೇಕು.

ಇದನ್ನೂ ಓದಿ : Business Idea: ಇದಕ್ಕಿಂತ ಉತ್ತಮ ಮತ್ತೊಂದಿಲ್ಲ, ಕೇವಲ 75 ರಿಂದ 95 ದಿನಗಳಲ್ಲಿ ಬಂಪರ್ ಗಳಿಕೆ!

ಹೊಸ ದರದಂತೆ ಎಚ್‌ಆರ್‌ಎ ಲೆಕ್ಕಾಚಾರ  : 
ಈಗ ಹೊಸ ದರದ ಪ್ರಕಾರ 35,000 ರೂ.ಮೂಲ ವೇತನವಿರುವ ಕೇಂದ್ರ ನೌಕರರಿಗೆ ಪರಿಷ್ಕೃತ ಎಚ್‌ಆರ್‌ಎ ನೀಡಲಾಗುತ್ತದೆ.

1.) X ವರ್ಗದ ನಗರಗಳಿಗೆ, 35,000 ಮೂಲವೇತನದ ಪ್ರಕಾರ ಹೆಚ್ಆರ್ ಎ 30% ಅಂದರೆ  10,500 ರೂ.
2.) Y ವರ್ಗದ ನಗರಗಳಿಗೆ, 7,000 ರೂ. 
3.) Z ವರ್ಗದ ನಗರಗಳಿಗೆ, 3,500 ರೂ . 

ವೇತನದಲ್ಲಿ ಏನೆಲ್ಲಾ ಬದಲಾವಣೆಯಾಗಲಿದೆ : 
ಹೀಗಾಗಿ ಎಚ್‌ಆರ್‌ ಎಕ್ಸ್‌ ಮಾದರಿ ನಗರಕ್ಕೆ 10500 ರೂ., ವೈ ಮಾದರಿಗೆ 7000 ರೂ. ಮತ್ತು ಝಡ್‌ ಮಾದರಿಯ ನಗರಕ್ಕೆ 3500 ರೂ.ಗೆ ಏರಿಕೆಯಾಗಲಿದೆ. ಅಂದರೆ, ಎಕ್ಸ್ ಟೈಪ್ ಸಿಟಿ ಹೋಲ್ಡರ್ ತಿಂಗಳಿಗೆ 1050 ರೂ. ವಾರ್ಷಿಕ ಆಧಾರದಲ್ಲಿ 12600 ರೂ. ಹೆಚ್ ಆರ್ ಎ  ಪಡೆಯುತ್ತಾರೆ. ವೈ ವರ್ಗಕ್ಕೆ ಸೇರಿದವರಿಗೆ 8400 ರೂ., ಝಡ್ ವರ್ಗಕ್ಕೆ ಸೇರಿದವರು ವಾರ್ಷಿಕವಾಗಿ 4200 ರೂ ಹೆಚ್ಆರ್ ಎಪಡೆಯುತ್ತಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News