ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ : ಕೂಡಲೇ ಬಂಧನಕ್ಕೆ ಆಗ್ರಹ

Prajwal Revanna pen drive case: ಹಾಸನ ಜೆಡಿಎಸ್ ಸಂಸದ ಕೀಚಕ ಹಾಗೂ ಕಾಮುಕ ಪ್ರಜ್ವಲ್ ರೇವಣ್ಣ ಮುಗ್ಧ ಮಹಿಳೆಯರ ಮೇಲೆ ಅತ್ಯಾಚಾರ ವೇಸೆಗಿ ಮಾನಭಂಗ ಮಾಡಿ ಅತ್ಯಂತ ಕೀಳು ಮಟ್ಟದಿಂದ ಅವರನ್ನು ಅವಮಾನಿಸಿರುವ ಹಿನ್ನೆಲೆಯಲ್ಲಿ ಕೂಡಲೇ ಅವನನ್ನು ಬಂದಿಸಿ ಗಲ್ಲಿಗೇರಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿ ಪ್ರತಿಕೃತಿ ದಯಿಸಲಾಯಿತು.

Written by - Savita M B | Last Updated : Apr 28, 2024, 12:44 PM IST
  • ಅತ್ಯಾಚಾರ ಎಸಗಿ ಲೈಂಗಿಕ ಕಿರುಕುಳ ನೀಡಿ ದೌರ್ಜನ್ಯ ಮಾಡಿರುವ ಕಿಡಿಗೇಡಿ ಪ್ರಜ್ವಲ್ ರೇವಣ್ಣ
  • ದೇಶದ ಹೆಣ್ಣು ಮಕ್ಕಳನ್ನು ಈ ರೀತಿ ಹಿಂಸಿಸಿದರು ಸಹ ಮೌನಕ್ಕೆ ಶರಣಾಗಿರುವ ಬಿಜೆಪಿ
ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ : ಕೂಡಲೇ ಬಂಧನಕ್ಕೆ ಆಗ್ರಹ  title=

Prajwal Revanna: ದೇಶದ ಇತಿಹಾಸದಲ್ಲಿ ಸಂಸದ ಒಬ್ಬ ಈ ರೀತಿ ಹೆಣ್ಣು ಮಕ್ಕಳನ್ನು ಅವಮಾನಿಸಿ ಹಿಂಸಿಸಿ  ಅವರ ಮೇಲೆ ಅತ್ಯಾಚಾರ ಎಸಗಿ ಲೈಂಗಿಕ ಕಿರುಕುಳ ನೀಡಿ ದೌರ್ಜನ್ಯ ಮಾಡಿರುವ  ಕಿಡಿಗೇಡಿ ಪ್ರಜ್ವಲ್ ರೇವಣ್ಣ ಜನತಾದಳ ಸಂಸದ ಎಂಬುವ ಅರಿವಿದ್ದರೂ ಸಹ ದೇಶದ ಪ್ರಧಾನಿ ನರೇಂದ್ರ ಮೋದಿ ರವರು ಆ ಕಿಡಿಗೇಡಿನ ಕರೆದು ತನ್ನ ಕಚೇರಿಯಲ್ಲಿ ದೇವೇಗೌಡರ ಕುಟುಂಬದೊಂದಿಗೆ ಭಾವಚಿತ್ರ ತೆಗೆಸಿಕೊಂಡು ನಮ್ಮ ಸರ್ಕಾರ ಹೆಣ್ಣು ಮಕ್ಕಳ ವಿರುದ್ಧ ಇದೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

 ದೇಶದ ಹೆಣ್ಣು ಮಕ್ಕಳನ್ನು ಈ ರೀತಿ ಹಿಂಸಿಸಿದರು  ಸಹ ಮೌನಕ್ಕೆ ಶರಣಾಗಿರುವ ಬಿಜೆಪಿ ರಾಜ್ಯ ನಾಯಕರು ರಾಷ್ಟ್ರ ನಾಯಕರು ಕೂಡಲೇ ಮಹಿಳೆಯರ ಕ್ಷಮೆ ಕೋರಬೇಕು ಕೂಡಲ ಕೇಂದ್ರ ಸರ್ಕಾರ ಪ್ರಜ್ವಲ್ ರೇವಣ್ಣನ ಬಂಧಿಸಿ ಬಹಿರಂಗವಾಗಿ ಗಲ್ಲಿಗೇರಿಸಬೇಕೆಂದು ಆಗ್ರಪಡಿಸಿ ಮಹಿಳೆಯರು ತೀವ್ರ ಮನನೊಂದು  ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ-ಕಲಬುರಗಿಯಲ್ಲಿ ಪ್ರಚೋದನಾತ್ಮಕ ಹೇಳಿಕೆ ಕುರಿತು ಕೇಸ್ ವಿಚಾರ

ನೂರಾರು ಮುಗ್ಧ ಮಹಿಳೆಯರ ಮೇಲೆ ಈ ರೀತಿ ಬಹಿರಂಗವಾಗಿ ದಬ್ಬಾಳಿಕೆ ನಡೆಸಿದ್ದರು ಸಹ ಇದನ್ನ ಖಂಡಿಸದ ದೇವೇಗೌಡರ ಹಾಗೂ ಅವರ ಕುಟುಂಬದ ನಡವಳಿಕೆ ಇಡೀ ಕರ್ನಾಟಕದ ರಾಜ್ಯದ ಗೌರವವನ್ನು ಮಣ್ಣು ಪಾಲು ಮಾಡಿದೆ.

ಇದನ್ನೂ ಓದಿ-ಕೇಂದ್ರ ಸರ್ಕಾರದಿಂದ ಬರ ಪರಿಹಾರ ತಾರತಮ್ಯ ಆರೋಪ

 ಮಹಿಳೆಯರನ್ನ ತಾಯಿ ಎಂದು ನಮೂದಿಸುವ ದೇವೇಗೌಡರು ಕುಮಾರಸ್ವಾಮಿ ರವರು ಇಂತಹ ಕಿಡಿಗೇಡಿಯನ್ನು ಏಕೆ ಖಂಡಿಸುತ್ತಿಲ್ಲ ಎಂಬುದು ರಾಜ್ಯದ ಜನರ ಪ್ರಶ್ನೆಯಾಗಿದೆ. ರಾಜ್ಯದ ಮಹಿಳೆಯರ ಬಗ್ಗೆ ಕನ್ನಡಿಗರ ಮೇಲೆ ಗೌರವವಿದ್ದರೆ ಕೂಡಲೇ ಪತ್ರಿಕಗೋಷ್ಠಿ ಮೂಲಕ ಪ್ರಜ್ವಲ್ ರೇವಣ್ಣ ನನ್ನ ಗಲ್ಲಿಗೇರಿಸಿ ಎಂದು ಮಾನ್ಯ ಕುಮಾರಸ್ವಾಮಿ ರವರು ಹಾಗೂ ಎಚ್ ಡಿ ದೇವೇಗೌಡರು ಆಗ್ರಪಡಿಸಿ ಕನ್ನಡಿಗರ ಬಗ್ಗೆ ತನಗೆ ಕಾಳಜಿ  ಇದೆ ಎಂಬುದನ್ನು ತೋರಿಸಬೇಕೆಂದು ಪ್ರತಿಭಟನೆ ಮೂಲಕ ಆಗ್ರಪಡಿಸುತ್ತಿದ್ದೇವೆ.

 ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್ ಮನೋಹರ್ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಎ ಆನಂದ್  ಪ್ರಕಾಶ್ ಹೇಮರಾಜು ಪರಿಸರ ರಾಮಕೃಷ್ಣ ಉಮೇಶ್ ರಂಜಿತ್ ಚಂದ್ರಶೇಖರ್ ಚಿನ್ನಿ ಪ್ರಕಾಶ್ ಓಬಳೇಶ್ ಮಹಿಳಾ ಕಾಂಗ್ರೆಸ್ ಮುಖಂಡರಾದ ಶ್ರೀಮತಿ ಉಮಾಬಾಯಿ ಹಾಗೂ ಮಹಿಳೆಯರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News