Good News: ಕೇವಲ 4 ವರ್ಷಗಳಲ್ಲಿ 40 ಲಕ್ಷ ಗಳಿಕೆಗೆ ಕೇಂದ್ರ ಸರ್ಕಾರ ನೀಡುತ್ತಿದೆ ಈ ಅವಕಾಶ, ಮಿಸ್ ಮಾಡ್ಕೋಬೇಡಿ!

Money Earning Idea: ಭಾರತದಲ್ಲಿ, ಶೇ.80 ಕ್ಕೂ ಹೆಚ್ಚು ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ ಮತ್ತು ಕೃಷಿ ಅನೇಕ ರೈತರಿಗೆ ಮುಖ್ಯ ಆದಾಯದ ಮೂಲವಾಗಿದೆ. ರೈತರು ಕೃಷಿಯಿಂದ  ಸಾಕಷ್ಟು ಗಳಿಸುತ್ತಿದ್ದಾರೆ. ಇಂದು ನಾವು ನಿಮಗೆ ಅಂತಹ ಒಂದು ಕೃಷಿಯ ಬಗ್ಗೆ ನೀಡುತ್ತಿದ್ದು, ತನ್ಮೂಲಕ ನೀವು ಕೇವಲ 4 ವರ್ಷಗಳಲ್ಲಿ 40 ಲಕ್ಷ ರೂಪಾಯಿಗಳನ್ನು ಗಳಿಸಬಹುದು.  

Written by - Nitin Tabib | Last Updated : Feb 9, 2023, 05:57 PM IST
  • ಬಿದಿರಿನ ಕೃಷಿಯ ಒಂದು ಅತ್ಯುತ್ತಮ ವಿಶೇಷತೆ ಎಂದರೆ, ಬಿದಿರಿನ ಬೆಳೆ 40 ವರ್ಷಗಳವರೆಗೆ ಮುಂದುವರಿಯುತ್ತದೆ,
  • ಅಂದರೆ ನೀವು 25-30 ನೇ ವಯಸ್ಸಿನಲ್ಲಿ ಬಿದಿರಿನ ಕೃಷಿ ಮಾಡುತ್ತಿದ್ದರೆ, ನೀವು 65-70 ವರ್ಷ ವಯಸ್ಸಿನವರೆಗೆ ಅದೇ ಬಿದಿರಿನಿಂದ ಗಳಿಕೆ ಮಾಡುವಿರಿ
Good News: ಕೇವಲ 4 ವರ್ಷಗಳಲ್ಲಿ 40 ಲಕ್ಷ ಗಳಿಕೆಗೆ ಕೇಂದ್ರ ಸರ್ಕಾರ ನೀಡುತ್ತಿದೆ ಈ ಅವಕಾಶ, ಮಿಸ್ ಮಾಡ್ಕೋಬೇಡಿ! title=
ಬಿದಿರಿನ ಬೇಸಾಯದಿಂದ ಕೈತುಂಬಾ ಸಂಪಾದನೆ

Business Through Farming: ಭಾರತದಲ್ಲಿ, ಶೇ.80ಕ್ಕೂ ಹೆಚ್ಚು ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ ಮತ್ತು ಕೃಷಿ ಅನೇಕ ರೈತರಿಗೆ  ಆದಾಯದ ಪ್ರಮುಖ ಮೂಲವಾಗಿದೆ. ರೈತರು ಕೃಷಿಯಿಂದ ಸಾಕಷ್ಟು ಹಣ ಗಳಿಸುತ್ತಿದ್ದಾರೆ. ಇಂದು ನಾವು ನಿಮಗೆ ಅಂತಹ ಒಂದು ಕೃಷಿಯ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ, ಈ ಕೃಷಿಯ ಹೆಸರು ಬಿದಿರು ಕೃಷಿ. ಬಿದಿರನ್ನು ಹಸಿರು ಚಿನ್ನ ಎಂದು ಕರೆಯಲಾಗುತ್ತದೆ. ದೇಶದಲ್ಲಿ ಬಿದಿರು ಕೃಷಿಯನ್ನು ಉತ್ತೇಜಿಸಲು ಭಾರತ ಸರ್ಕಾರವು 2006-2007 ರಲ್ಲಿ ರಾಷ್ಟ್ರೀಯ ಬಿದಿರು ಮಿಷನ್ ಅನ್ನು ಪ್ರಾರಂಭಿಸಿದೆ. ಇದರ ಬೇಸಾಯಕ್ಕೆ ಸರಕಾರದಿಂದ ಸಹಾಯಧನವೂ ಸಿಗುತ್ತದೆ ಎಂಬುದು ಇಲ್ಲಿ ಗಮನಾರ್ಹ. ಬಿದಿರು ಬೇಸಾಯವನ್ನು ಇತರ ಬೆಳೆಗಳಿಗಿಂತ ಉತ್ತಮವೆಂದು ಪರಿಗಣಿಸಲಾಗುತ್ತದೆ ಮತ್ತು ಅದರಿಂದ ಉತ್ತಮ ಗಳಿಕೆ ಕೂಡ ಮಾಡಬಹುದು. ಇದು ಯಾವುದೇ ಋತುವಿನಲ್ಲಿ ಹಾಳಾಗುವುದಿಲ್ಲ.

ಬಿದಿರನ್ನು ಬೆಳೆಸುವುದು ಹೇಗೆ?
ಋತುಮಾನಕ್ಕೆ ತಕ್ಕಂತೆ ಬಿದಿರು ಕೃಷಿ ಮಾಡಲಾಗುವುದಿಲ್ಲ. ಇದರ ಕೃಷಿಯು 4 ವರ್ಷಗಳ ಸಮಯಾವಕಾಶ ತೆಗೆದುಕೊಳ್ಳುತ್ತದೆ ಮತ್ತು ಅದರ ಕೃಷಿಗಾಗಿ ಭೂಮಿಯನ್ನು ಸಿದ್ಧಪಡಿಸುವ ಅಗತ್ಯವಿಲ್ಲ. ಈ ಬೇಸಾಯಕ್ಕೆ ಮಣ್ಣಿನ pH ಮೌಲ್ಯವು 6.5 ರಿಂದ 7.5 ರವರೆಗೆ ಇರಬೇಕು. ಒಂದು ಹೆಕ್ಟೇರ್ ನಲ್ಲಿ 625 ಬಿದಿರಿನ ಗಿಡಗಳನ್ನು ನೆಡಬಹುದು. ಬಿದಿರು ಗಿಡಗಳನ್ನು ಕಾಲಕಾಲಕ್ಕೆ ಕಟಾವು ಮಾಡಬೇಕು.

ಇದನ್ನೂ ಓದಿ-PMK Update: ಫೆಬ್ರುವರಿ 10 ನೋಟ್ ಮಾಡಿಟ್ಟುಕೊಳ್ಳಿ, ಕಾರಣ ಇಲ್ಲಿದೆ!

ಎಷ್ಟು ಗಳಿಕೆ ಮಾಡಬಹುದು?
ಬಿದಿರು ಕೃಷಿಯಲ್ಲಿ ಹೆಕ್ಟೇರ್‌ಗೆ ಸುಮಾರು 1 ಸಾವಿರದ 500 ಗಿಡಗಳನ್ನು ನೆಡಲಾಗುತ್ತದೆ. ಸುಮಾರು 3 ವರ್ಷಗಳಲ್ಲಿ ಬಿದಿರು ಬೆಳೆ ಸಿದ್ಧವಾಗುತ್ತದೆ. 1 ಗಿಡದ ಬೆಲೆ 250 ರೂಪಾಯಿಗಳು ಮತ್ತು ಇದರಲ್ಲಿ ಸರ್ಕಾರದಿಂದ ಸಹಾಯಧನ ಲಭ್ಯವಿರುತ್ತದೆ. ಸರ್ಕಾರವು ಬಿದಿರು ಕೃಷಿಗಾಗಿ ರಾಷ್ಟ್ರೀಯ ಬಿದಿರು ಮಿಷನ್ ಅನ್ನು ನಡೆಸುತ್ತಿದೆ. ಅಂದರೆ ನೀವು ಸುಮಾರು 2 ಲಕ್ಷ ರೂಪಾಯಿ ಖರ್ಚು ಮಾಡುತ್ತೀರಿ ಮತ್ತು ನಂತರ 3 ವರ್ಷಗಳ ನಂತರ ನೀವು 1 ಹೆಕ್ಟೇರ್‌ನಿಂದ ಸುಮಾರು 3.5 ಲಕ್ಷ ರೂಪಾಯಿ ಗಳಿಸುತ್ತೀರಿ. ಇದರ ನಂತರವೂ ನಿಮ್ಮ ಗಳಿಕೆ ಮುಂದುವರಿಯುತ್ತದೆ.

ಇದನ್ನೂ ಓದಿ-Indian Railways: ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸುವ ಯಾತ್ರಿಗಳಿಗೆ ಒಂದು ಭಾರಿ ಸಂತಸದ ಸುದ್ದಿ

ಒಮ್ಮೆ ಕೃಷಿ ಮಾಡಿ, ಜೀವನ ಪೂರ್ತಿ ಕೂತು ಹಣ ಸಂಪಾದಿಸಿ
ಬಿದಿರಿನ ಕೃಷಿಯ ಒಂದು ಅತ್ಯುತ್ತಮ ವಿಶೇಷತೆ ಎಂದರೆ, ಬಿದಿರಿನ ಬೆಳೆ 40 ವರ್ಷಗಳವರೆಗೆ ಮುಂದುವರಿಯುತ್ತದೆ, ಅಂದರೆ ನೀವು 25-30 ನೇ ವಯಸ್ಸಿನಲ್ಲಿ ಬಿದಿರಿನ ಕೃಷಿ ಮಾಡುತ್ತಿದ್ದರೆ, ನೀವು 65-70 ವರ್ಷ ವಯಸ್ಸಿನವರೆಗೆ ಅದೇ ಬಿದಿರಿನಿಂದ ಗಳಿಕೆ ಮಾಡುವಿರಿ, ಅಂದರೆ ಹಣವನ್ನು ಹೂಡಿಕೆ ಮಾಡಿ. ಬಿದಿರಿನ ಕೃಷಿಯನ್ನು ಒಮ್ಮೆ ಮಾಡಿ ಮತ್ತು ಇಡೀ ಜೀವನದುದ್ದಕ್ಕೂ ಹಣ ಸಂಪಾದಿಸಿ, ಬಿದಿರಿನ ಬೆಳೆಗೆ ಹೆಚ್ಚಿನ ಕಾಳಜಿಯ ಅಗತ್ಯವಿಲ್ಲ, ಆದ್ದರಿಂದ ನೀವು ಮನೆಯಲ್ಲಿಯೇ ಕುಳಿತು ದೊಡ್ಡ ಮೊತ್ತವನ್ನು ಸಂಪಾದಿಸಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News