7th Pay Commission: ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ

7th Pay Commission - ಕೊರೊನಾ ಪ್ರಕೋಪದ ಹಿನ್ನೆಲೆ LTC ಲಾಭ ಪಡೆಯದ ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ. ಈ ಕುರಿತು ಈ ಬಾರಿಯ ಬಜೆಟ್ ನಲ್ಲಿ ಘೋಷಣೆ ಮಾಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ LTC (Leave Travel Concession) ಕ್ಯಾಶ್ ವೌಚರ್ ಮೇಲೆ ತೆರಿಗೆ ವಿಧಿಸಲಾಗುವುದಿಲ್ಲ ಎಂದು ಘೋಷಿಸಿದೆ.

Written by - Nitin Tabib | Last Updated : Feb 3, 2021, 07:24 PM IST
  • ಕೇಂದ್ರ ಸರ್ಕಾರಿ ನೌಕರರಿಗೆ ಭಾರಿ ನೆಮ್ಮದಿ.
  • LTC ಕ್ಯಾಶ್ ವೌಚರ್ ಸ್ಕೀಮ್ ಮೇಲೆ ತೆರಿಗೆ ಇಲ್ಲ
  • ಈ ಕುರಿತು ಬಜೆಟ್ ಭಾಷಣದಲ್ಲಿ ಉಲ್ಲೇಖಿಸಿದ್ದ ಕೇಂದ್ರ ವಿತ್ತ ಸಚಿವರು.
7th Pay Commission: ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ title=
LTC Cash Voucher Tax Free

ದೆಹಲಿ: 7th Pay Commission - ಕೊರೊನಾ ಕಾಲದಲ್ಲಾದ ಆರ್ಥಿಕ ನಷ್ಟದ ಬಳಿಕ ಮೋದಿ ಸರ್ಕಾರ ಕೇಂದ್ರ ಸರ್ಕಾರಿ ನೌಕರರಿಗೆ ಭಾರಿ ನೆಮ್ಮದಿಯ ಸುದ್ದಿಯೊಂದನ್ನು ನೀಡಿದೆ. ಸರ್ಕಾರ ಕೇಂದ್ರ ಸರ್ಕಾರಿ ನೌಕರರ LTC Cash Voucher Scheme ಅನ್ನು ಬಜೆಟ್ ನಲ್ಲಿ ನೋಟಿಫೈ ಮಾಡಿದೆ. ಇದರರ್ಥ ಈ ಮೊತ್ತದ ಮೇಲೆ ಈಗ ಕೇಂದ್ರ ಸರ್ಕಾರಿ ನೌಕರರು ತೆರಿಗೆ ಪಾವತಿಸುವ ಅವಶ್ಯಕತೆ ಇಲ್ಲ.

ಏನಿದು  LTC Cash Voucher Scheme?
12 ಅಕ್ಟೋಬರ್ 2020 ರಂದು ಈ ಯೋಜನೆಯನ್ನು ಘೋಷಿಸಲಾಗಿತ್ತು. ಮೊದಲು ಈ ಯೋಜನೆ ಕೇವಲ ಕೇಂದ್ರ ಸರ್ಕಾರಿ ನೌಕರರಿಗೆ ಮಾತ್ರ ಸೀಮಿತವಾಗಿತ್ತು. ಆದರೆ, ಬಳಿಕ ಈ ಯೋಜನೆಯಲ್ಲಿ ಖಾಸಗಿ ವಲಯದ ನೌಕರರು ಹಾಗೂ ಇತರ ರಾಜ್ಯಗಳ ಸರ್ಕಾರಿ ನೌಕರರನ್ನು ಕೂಡ ಸೇರಿಸಲಾಗಿದೆ. ಕೊವಿಡ್ -19 ಮಹಾಮಾರಿಯ ಕಾರಣ LTC ಯನ್ನು ಟ್ಯಾಕ್ಸ್ ಪರಧಿಯ ಹೊರಗಿಡಲಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಭಾಷಣದಲ್ಲಿ ಘೋಷಿಸಿದ್ದಾರೆ.

ಇದನ್ನು ಓದಿ- ಶೀಘ್ರದಲ್ಲಿಯೇ 65 ಲಕ್ಷ ಪೆನ್ಷನ್ ಧಾರಕರಿಗೆ ಸಿಗಲಿದೆ Modi Govt ನೀಡಲಿದೆಯೇ ಈ ಗಿಫ್ಟ್

ಇದರಿಂದ ಸರ್ಕಾರಿ ನೌಕರರ ಜೇಬಿಗೆ ಹೆಚ್ಚಿನ ಪ್ರಮಾಣದ ಹಣ ಹೋಗಲಿದೆ ಎಂಬುದು  ಸರ್ಕಾರದ ನಿರೀಕ್ಷೆ ಹಾಗೂ ಹಣವಿದ್ದಾಗ ನೌಕರರು ಅದನ್ನು ಖರ್ಚು ಕೂಡ ಮಾಡುವವರು ಎಂಬುದು ಸರ್ಕಾರದ ಅಭಿಪ್ರಾಯ. ಈ ಎಲ್ಲ ವ್ಯವಸ್ಥೆಯ ಹಿಂದೆ ಆರ್ಥಿಕಸ್ಥಿತಿ ಸುಧಾರಣೆಯ ಉದ್ದೇಶ ಸರ್ಕಾರದ್ದಾಗಿದೆ.  ಕೊರೊನಾ ಪ್ರಕೋಪದ ಹಿನ್ನೆಲೆ ನೌಕರರಿಗೆ LTC ಲಾಭ ಸಿಕ್ಕಿರಲಿಲ್ಲ. ಹೀಗಾಗಿ ಇದರಿಂದ ಆ ನೌಕರರಿಗೆ ಭಾರಿ ಪರಿಹಾರ ಸಿಗಲಿದೆ.

ಇದನ್ನು ಓದಿ- ಸರ್ಕಾರಿ ನೌಕರರಿಗೆ ಮೋದಿ ಸರ್ಕಾರದ ದೀಪಾವಳಿ ಗಿಫ್ಟ್

LTC ಎಂದರೇನು?
ಕೇಂದ್ರ ಸರ್ಕಾರಿ ನೌಕರರಿಗೆ 4 ವರ್ಷಗಳ LTC ಲಾಭ ಸಿಗುತ್ತದೆ. ಇದನ್ನು ಬಳಸಿ ಅವರು ದೇಶದ ಯಾವದೇ ಭಾಗಕ್ಕೆ ಯಾತ್ರೆ ಕೈಗೊಳ್ಳಬಹುದು. ಈ ಅವಧಿಯಲ್ಲಿ ಅವರಿಗೆ ಎರಡೆರಡು ಬಾರಿ ಅವರಿಗೆ ತಮ್ಮ ಹೋಮ್ ಟೌನ್ ಗೆ ಭೇಟಿ ನೀಡುವ ಅವಕಾಶ ಸಿಗುತ್ತದೆ. ಇದರಲ್ಲಿ ನೌಕರರಿಗೆ ವಿಮಾನ ಪ್ರಯಾಣ, ರೈಲು ಪ್ರಯಾಣದ ವೆಚ್ಚ ಸಿಗುತ್ತದೆ. ಇದಲ್ಲದೆ ನೌಕರರಿಗೆ 10 ದಿನಗಳ PL ಅಥವಾ CL ಕೂಡ ಸಿಗುತ್ತದೆ. 

ಇದನ್ನು ಓದಿ- ಸರ್ಕಾರಿ ನೌಕರರಿಗೆ ಇಲ್ಲಿದೆ ಒಂದು ಸಂತಸದ ಸುದ್ದಿ, ತಪ್ಪದೆ ಓದಿ

ಇದನ್ನು ಓದಿ- Samsung New Launch 2021: ಫೆ.2ರಂದು ಬಿಡುಗಡೆಯಾಗಲಿದೆ ಅತ್ಯಂತ ಅಗ್ಗದ Samsung 5000 mAh ಬ್ಯಾಟರಿ ಹೊಂದಿದ ಫೋನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News