Car Price Rise: TATAದ ಈ ಅಗ್ಗದ 2 ಕಾರುಗಳು ಮತ್ತಷ್ಟು ದುಬಾರಿ..!

ಮಾರುತಿ ಸುಜುಕಿ, ಮಹೀಂದ್ರಾ, ಹ್ಯುಂಡೈ ಮತ್ತು ಹೋಂಡಾ ನಂತರ ಈಗ ಟಾಟಾ ಮೋಟಾರ್ಸ್ ಮತ್ತೊಮ್ಮೆ ಬೆಲೆಗಳನ್ನು ಹೆಚ್ಚಿಸಿದೆ.

Written by - Puttaraj K Alur | Last Updated : May 8, 2022, 01:57 PM IST
  • ಮತ್ತಷ್ಟು ದುಬಾರಿಯಾಗಲಿವೆ ಟಾಟಾ ಕಂಪನಿಗಳ ಈ ಅಗ್ಗದ 2 ಕಾರುಗಳು
  • ಮಾರುತಿ ಸುಜುಕಿ, ಮಹೀಂದ್ರಾ, ಹ್ಯುಂಡೈ & ಹೋಂಡಾ ಬಳಿಕ ಟಾಟಾ ಕಾರುಗಳ ಬೆಲೆ ಹೆಚ್ಚಳ
  • ನೆಕ್ಸಾನ್, ಪಂಚ್, ಸಫಾರಿ, ಹ್ಯಾರಿಯರ್, ಆಲ್ಟ್ರೊಜ್, ಟಿಯಾಗೊ ಮತ್ತು ಟಿಗೊರ್ ಬೆಲೆ ಏರಿಕೆ
Car Price Rise: TATAದ ಈ ಅಗ್ಗದ 2 ಕಾರುಗಳು ಮತ್ತಷ್ಟು ದುಬಾರಿ..! title=
ಟಾಟಾ ಕಾರುಗಳು ಮತ್ತಷ್ಟು ದುಬಾರಿ

ನವದೆಹಲಿ: ಹೊಸ ವರ್ಷ ಮತ್ತು ಹೊಸ ಹಣಕಾಸು ವರ್ಷದಲ್ಲಿ ವಾಹನಗಳ ಬೆಲೆ ಹೆಚ್ಚಿಸುವುದು ತಯಾರಕರ ಪ್ರವೃತ್ತಿಯಾಗಿದೆ. ಏಪ್ರಿಲ್ 2022ರಿಂದ ಕಂಪನಿಗಳು ತಮ್ಮ ವಾಹನಗಳ ಬೆಲೆಗಳನ್ನು ಹೆಚ್ಚಿಸುತ್ತಿವೆ. ಮಾರುತಿ ಸುಜುಕಿ, ಮಹೀಂದ್ರಾ, ಹ್ಯುಂಡೈ ಮತ್ತು ಹೋಂಡಾ ನಂತರ ಈಗ ಟಾಟಾ ಮೋಟಾರ್ಸ್ ಮತ್ತೊಮ್ಮೆ ಬೆಲೆಗಳನ್ನು ಹೆಚ್ಚಿಸಿದೆ. ಈ ವರ್ಷದಲ್ಲಿ ಇದು 3ನೇ ಬಾರಿಗೆ ಟಾಟಾ ಮೋಟಾರ್ಸ್ ಕಾರುಗಳ ಬೆಲೆ ಹೆಚ್ಚಿಸುತ್ತಿದೆ. ಈ ಬಾರಿಯೂ ಬೆಲೆ ಏರಿಕೆಯನ್ನೇ ನೆಪವಾಗಿಟ್ಟುಕೊಂಡು ಕಂಪನಿಯು ವಾಹನಗಳ ಬೆಲೆ ಹೆಚ್ಚಿಸಿದೆ. ಟಾಟಾ ಮೋಟಾರ್ಸ್ ಸರಾಸರಿ ದರದಲ್ಲಿ ಶೇ.1.1ರಷ್ಟು ಹೆಚ್ಚಳವನ್ನು ಘೋಷಿಸಿದೆ.

ಇದನ್ನೂ ಓದಿ: Honda Affordable Bikes: ಪ್ರತಿಯೊಬ್ಬರ ಬಜೆಟ್‌ಗೆ ಸರಿಹೊಂದುವ ಬೈಕ್ ಬಿಡುಗಡೆ ಮಾಡಲಿದೆ ಹೋಂಡಾ , ಶೀಘ್ರದಲ್ಲೇ ಮಾರುಕಟ್ಟೆಗೆ

12,000 ರಿಂದ 15,000 ರೂ. ಹೆಚ್ಚಳ

ಟಾಟಾ ನೆಕ್ಸಾನ್, ಪಂಚ್, ಸಫಾರಿ, ಹ್ಯಾರಿಯರ್, ಆಲ್ಟ್ರೊಜ್, ಟಿಯಾಗೊ ಮತ್ತು ಟಿಗೊರ್ ಬೆಲೆಯನ್ನು ಹೆಚ್ಚಿಸಲಾಗಿದೆ. ಮುಖ್ಯವಾಗಿ ಟಾಟಾ ಮೋಟಾರ್ಸ್ ತನ್ನ ಅಗ್ಗದ ಕಾರು ಟಿಯಾಗೊ ಮತ್ತು ಜನಪ್ರಿಯ ಹ್ಯಾಚ್‌ಬ್ಯಾಕ್ ಟಿಗೊರ್ ಬೆಲೆಯನ್ನು 12,000 ರಿಂದ 15,000 ರೂ. ಹೆಚ್ಚಿಸಿದೆ. ಕಂಪನಿಯು ಈ ಎರಡೂ ಕಾರುಗಳ ಸಿಎನ್‌ಜಿ ರೂಪಾಂತರಗಳ ಬೆಲೆಯನ್ನು ಒಂದೇ ರೀತಿ ಹೆಚ್ಚಿಸಿದೆ. ಕಚ್ಚಾವಸ್ತುಗಳ ಬೆಲೆ ಏರಿಕೆ ಪರಿಣಾಮ ಕಾರುಗಳ ಬೆಲೆ ಹೆಚ್ಚಿಸುವ ಅಗತ್ಯವಿತ್ತು ಮತ್ತು ಒಟ್ಟು ಹೆಚ್ಚಳದ ಸ್ವಲ್ಪ ಭಾಗವನ್ನಷ್ಟೇ ಗ್ರಾಹಕರಿಗೆ ವರ್ಗಾಯಿಸಲಾಗಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ಹೇಳಿಕೊಂಡಿದೆ.

ಇದನ್ನೂ ಓದಿ: Mahindra Atom EV :ಕೇವಲ 3 ಲಕ್ಷ ರೂಪಾಯಿಗಳಿಗೆ ಮಹೀಂದ್ರ ಬಿಡುಗಡೆ ಮಾಡುತ್ತಿದೆ ಎಲೆಕ್ಟ್ರಿಕ್ ಕಾರು ..!

ಬೆಲೆ ಏರಿಕೆ ಟ್ರೆಂಡ್ ಆಗಿಬಿಟ್ಟಿದೆ

ಟಾಟಾ ಮೋಟಾರ್ಸ್ ಮಾತ್ರವಲ್ಲದೇ ಭಾರತದ ಇತರ ಪ್ರಮುಖ ವಾಹನ ತಯಾರಕರು ಸಹ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ವಾಹನ ತಯಾರಕರು ಹೊಸ ಕ್ಯಾಲೆಂಡರ್ ವರ್ಷದ ಆರಂಭದಲ್ಲಿ ಮಾತ್ರ ಬೆಲೆ ಹೆಚ್ಚಿಸುತ್ತಿದ್ದರು. ಆದರೆ, ಈಗ ಹೊಸ ಆರ್ಥಿಕ ವರ್ಷದಲ್ಲಿಯೂ ಸಹ ಬೆಲೆಗಳನ್ನು ಹೆಚ್ಚಿಸಲು ಪ್ರಾರಂಭಿಸಿದ್ದಾರೆ. ಎಲ್ಲಾ ಕಂಪನಿಗಳು ಬೆಲೆ ಏರಿಕೆ ಉಲ್ಲೇಖಿಸಿಯೇ ಬೆಲೆಗಳನ್ನು ಹೆಚ್ಚಿಸುತ್ತಿವೆ. ಏಪ್ರಿಲ್ 2022ರಲ್ಲಿ ಮಾರುತಿ ಸುಜುಕಿ, ಹ್ಯುಂಡೈ, ಹೋಂಡಾ ಕಾರ್ಸ್ ಇಂಡಿಯಾ, ಮಹೀಂದ್ರಾ ಆಟೋಮೋಟಿವ್ ಮತ್ತು ಟೊಯೊಟಾ ಜೊತೆಗೆ ಮರ್ಸಿಡಿಸ್ ಬೆಂಜ್, ಆಡಿ ಮತ್ತು ವೋಲ್ವೋ ಕಂಪನಿಗಳು ಸಹ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News