ಇಲ್ಲಿಂದ ಖರೀದಿಸಿದರೆ 29 ರೂಪಾಯಿಗೆ ಸಿಗುವುದು ಗೋಧಿ ಹಿಟ್ಟು! ಸರ್ಕಾರದ ಮಹತ್ವದ ಘೋಷಣೆ

Bharat Flour Price : ಕೇಂದ್ರೀಯ ಭಂಡಾರದಲ್ಲಿ ಪ್ರತಿ ಕೆ.ಜಿ.ಗೆ ಕೇವಲ 29.50 ರೂ. ದರದಲ್ಲಿ ಗೋಧಿ ಹಿಟ್ಟು ದೊರೆಯಲಿದೆ. ಈ ಹಿಟ್ಟು ಭಾರತ್ ಅಟ್ಟಾ ಬ್ರಾಂಡ್‌ನದ್ದಾಗಿರಲಿದೆ. 

Written by - Ranjitha R K | Last Updated : Feb 3, 2023, 01:02 PM IST
  • ಗೋಧಿ ಹಿಟ್ಟಿನ ಬೆಲೆ ಕೂಡಾ ಹೆಚ್ಚುತ್ತಿದೆ
  • ಬೆಲೆ ಹೆಚ್ಚಳದಿಂದ ಪರಿಹಾರ ನೀಡಲು ಮುಂದಾದ ಕೇಂದ್ರ ಸರ್ಕಾರ
  • ಯಾವ ಬೆಲೆಯಲ್ಲಿ ಸಿಗಲಿದೆ ಗೋಧಿ ಹಿಟ್ಟು
ಇಲ್ಲಿಂದ ಖರೀದಿಸಿದರೆ 29 ರೂಪಾಯಿಗೆ ಸಿಗುವುದು ಗೋಧಿ ಹಿಟ್ಟು! ಸರ್ಕಾರದ ಮಹತ್ವದ ಘೋಷಣೆ  title=

Bharat Flour Price : ಏರುತ್ತಿರುವ ಗೋಧಿ ಬೆಲೆಯಿಂದಾಗಿ ಗೋಧಿ ಹಿಟ್ಟಿನ ಬೆಲೆ ಕೂಡಾ ಹೆಚ್ಚುತ್ತಿದೆ.  ಈ ಬೆಲೆ ಹೆಚ್ಚಳದಿಂದ ಜನಸಾಮಾನ್ಯರಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಗೋಧಿ ಹಿಟ್ಟಿನ ಬೆಲೆಗೆ ಸಂಬಂಧಿಸಿದಂತೆ ಮಹತ್ವದ  ಘೋಷಣೆ ಮಾಡಿದೆ. ಇದೀಗ ಕೇಂದ್ರೀಯ ಭಂಡಾರಗಳಂತಹ ಸರ್ಕಾರಿ ಮಳಿಗೆಗಳಲ್ಲಿ ಕಡಿಮೆ ಬೆಲೆಗೆ ಹಿಟ್ಟು ಲಭ್ಯವಾಗುವಂತೆ ಮಾಡಲು ಸರ್ಕಾರ ನಿರ್ಧರಿಸಿದೆ. ಕೇಂದ್ರೀಯ ಭಂಡಾರದಲ್ಲಿ ಪ್ರತಿ ಕೆ.ಜಿ.ಗೆ ಕೇವಲ 29.50 ರೂ. ದರದಲ್ಲಿ ಗೋಧಿ ಹಿಟ್ಟು ದೊರೆಯಲಿದೆ. ಈ ಹಿಟ್ಟು ಭಾರತ್ ಅಟ್ಟಾ ಬ್ರಾಂಡ್‌ನದ್ದಾಗಿರಲಿದೆ. ಹೆಚ್ಚುತ್ತಿರುವ ಹಿಟ್ಟಿನ ಬೆಲೆಯನ್ನು  ಗಮನದಲ್ಲಿಟ್ಟುಕೊಂಡು ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಅಲ್ಲದೆ,  ಹಿಟ್ಟಿನ ಪೂರೈಕೆಯನ್ನು ಹೆಚ್ಚಿಸಲು ಸೂಚನೆಗಳನ್ನು ನೀಡಲಾಗಿದೆ.  ಮೊಬೈಲ್ ವ್ಯಾನ್‌ಗಳ ಮೂಲಕವೂ ಜನರಿಗೆ ಹಿಟ್ಟನ್ನು ತಲುಪಿಸಲಾಗುವುದು ಎಂದು ಆಹಾರ ಕಾರ್ಯದರ್ಶಿ ತಿಳಿಸಿದ್ದಾರೆ. ಫೆಬ್ರವರಿ 6 ರಿಂದ, ಎನ್‌ಸಿಸಿಎಫ್ ಮತ್ತು ಎನ್‌ಎಎಫ್‌ಇಡಿ ಕೂಡಾ ಇದೇ ದರದಲ್ಲಿ ಹಿಟ್ಟು ಮಾರಾಟ ಮಾಡಲಿದೆ.

ಯಾವ ಬೆಲೆಯಲ್ಲಿ ಸಿಗಲಿದೆ ಗೋಧಿ ಹಿಟ್ಟು : 
ಕೇಂದ್ರ ಸರ್ಕಾರವು ಸಹಕಾರಿ ಸಂಸ್ಥೆಗಳು, ಸರ್ಕಾರಿ ಪಿಎಸ್‌ಯುಗಳು, ಕೇಂದ್ರೀಯ ಭಂಡಾರ, ಎನ್‌ಎಎಫ್‌ಇಡಿ ಮತ್ತು ಎನ್‌ಸಿಸಿಎಫ್‌ನಂತಹ ಒಕ್ಕೂಟಗಳಿಗೆ 3 ಲಕ್ಷ ಟನ್ ಗೋಧಿ ಹಿಟ್ಟನ್ನು ಕೆಜಿಗೆ 23.50 ರೂ ದರದಲ್ಲಿ ಕಾಯ್ದಿರಿಸಿದೆ. ಭಾರತ್ ಗೋಧಿ ಹಿಟ್ಟನ್ನು ಸರ್ಕಾರಿ ಮಳಿಗೆಗಳಲ್ಲಿ ಕೆಜಿಗೆ ಗರಿಷ್ಠ 29.50 ರೂ.ಗೆ ಮಾರಾಟ ಮಾಡಬಹುದು.

ಇದನ್ನೂ ಓದಿ : ಹಾಲಿನ ದರದಲ್ಲಿ ಮೂರು ರೂಪಾಯಿ ಹೆಚ್ಚಳ!

ಮೊಬೈಲ್ ವ್ಯಾನ್ ಮೂಲಕ ಹಿಟ್ಟು ಮಾರಾಟ :
ಕೇಂದ್ರೀಯ ಭಂಡಾರ, NAFED, FCI ಮತ್ತು NCCFಗೆ ಆಹಾರ ಕಾರ್ಯದರ್ಶಿ ಭೇಟಿ ನೀಡಿದ್ದಾರೆ. ಇದಾದ ನಂತರ ಎಫ್‌ಸಿಐ ಡಿಪೋಗಳಿಂದ 3 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಗೋಧಿಯನ್ನು ಈ ಸಂಸ್ಥೆಗಳು ಖರೀದಿಸಿವೆ. ಈ ಗೋಧಿಯನ್ನು ಇಲ್ಲಿ ಹಿಟ್ಟಾಗಿ ಪರಿವರ್ತಿಸಲಾಗುತ್ತಿದೆ. ಇದಾದ ನಂತರ ಚಿಲ್ಲರೆ ಅಂಗಡಿಗಳು ಮತ್ತು ಮೊಬೈಲ್ ವ್ಯಾನ್‌ಗಳ ಮೂಲಕ ಗ್ರಾಹಕರಿಗೆ ಪ್ರತಿ ಕೆಜಿಗೆ 29.50 ರೂ.ಯಂತೆ ಹಿಟ್ಟನ್ನು ಮಾರಾಟ ಮಾಡಲಾಗುವುದು.

ಗೋಧಿ ಹರಾಜು ಪ್ರಕ್ರಿಯೆ ಪ್ರಾರಂಭ : 
ಗೋಧಿ ಬೆಲೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಗೋಧಿ ಹರಾಜು ಪ್ರಕ್ರಿಯೆ ಆರಂಭಿಸಿದೆ. ಹರಾಜಿನ ಮೊದಲ ದಿನವೇ 22 ರಾಜ್ಯಗಳಲ್ಲಿ 8.88 ಲಕ್ಷ ಮೆಟ್ರಿಕ್ ಟನ್ ಗೋಧಿ ಮಾರಾಟವಾಗಿದೆ. ಗುರುವಾರ ರಾಜಸ್ಥಾನದಲ್ಲೂ ಹರಾಜು ಪ್ರಕ್ರಿಯೆ ನಡೆದಿದೆ. ಮಾರ್ಚ್ ಎರಡನೇ ವಾರದವರೆಗೆ, ಇ-ಹರಾಜು ಮೂಲಕ ಗೋಧಿ ಮಾರಾಟವು ದೇಶಾದ್ಯಂತ ಪ್ರತಿ ಬುಧವಾರ ಮುಂದುವರಿಯುತ್ತದೆ.

ಇದನ್ನೂ ಓದಿ : Pension News : ಪಿಂಚಣಿದಾರರಿಗೆ ಭರ್ಜರಿ ಸಿಹಿ ಸುದ್ದಿ : ಮೋದಿ ಸರ್ಕಾರದಿಂದ ಮಹತ್ವದ ಮಾಹಿತಿ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News