ಈ ಕಾರಿನ ಮೇಲೆ ಸಿಗುತ್ತಿದೆ 1.20 ಲಕ್ಷ ರೂಪಾಯಿ ರಿಯಾಯಿತಿ.! ಖರೀದಿಗೆ ಇದುವೇ ಶುಭ ಸಮಯ

Diwali Offers :  ಜರ್ಮನ್ ವಾಹನ ತಯಾರಕ ವೋಕ್ಸ್‌ವ್ಯಾಗನ್ ಭಾರತದಲ್ಲಿ ತನ್ನ ಟೈಗುನ್  ಮಿಡ್ ಸೈಜ್ SUV ಮೇಲೆ 1.20 ಲಕ್ಷ ರೂ.ವರೆಗೆ ಆಕರ್ಷಕ ರಿಯಾಯಿತಿಯನ್ನು ನೀಡುತ್ತಿದೆ. 

Written by - Ranjitha R K | Last Updated : Oct 24, 2022, 02:15 PM IST
  • ದೀಪಾವಳಿ ಹಿನ್ನೆಲೆಯಲ್ಲಿ ಕಾರಿನ ಮೇಲೆ ಆಫರ್
  • ಈ ಕಾರಿನ ಮೇಲೆ ಸಿಗುತ್ತಿದೆ 1.20 ಲಕ್ಷ ರೂಪಾಯಿ ರಿಯಾಯಿತಿ
  • ಆಫರ್ ಬಳಿಕ ಎಷ್ಟಾಗಲಿದೆ ಈ ಕಾರಿನ ಬೆಲೆ
ಈ ಕಾರಿನ ಮೇಲೆ ಸಿಗುತ್ತಿದೆ 1.20 ಲಕ್ಷ ರೂಪಾಯಿ ರಿಯಾಯಿತಿ.! ಖರೀದಿಗೆ ಇದುವೇ ಶುಭ ಸಮಯ  title=
Diwalioffer on car

Diwali Offers : ದೀಪಾವಳಿಯ ಸಮಯದಲ್ಲಿ, ಎಲ್ಲಾ ಕಂಪನಿಗಳು ತಮ್ಮ ಉತ್ಪನ್ನಗಳ ಮೇಲೆ  ಭಾರೀ ಆಫರ್ ಗಳನ್ನೂ ನೀಡುತ್ತಿವೆ. ಕಾರು ಕಂಪನಿಗಳು ಕೂಡಾ ಕಾರಿನ ಮೇಲೆ ಆಫರ್ ನೀಡುತ್ತಿವೆ. ಜರ್ಮನ್ ವಾಹನ ತಯಾರಕ ವೋಕ್ಸ್‌ವ್ಯಾಗನ್ ಭಾರತದಲ್ಲಿ ತನ್ನ ಟೈಗುನ್  ಮಿಡ್ ಸೈಜ್ SUV ಮೇಲೆ 1.20 ಲಕ್ಷ ರೂ.ವರೆಗೆ ಆಕರ್ಷಕ ರಿಯಾಯಿತಿಯನ್ನು ನೀಡುತ್ತಿದೆ. ಫೋಕ್ಸ್‌ವ್ಯಾಗನ್ ಟೈಗನ್ 1.0-ಲೀಟರ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಬರುತ್ತದೆ. 

ಟೈಗುನ್‌ನ 1.5-ಲೀಟರ್ ಮ್ಯಾನುವಲ್ ರೂಪಾಂತರದ ಆನ್-ರೋಡ್ ಬೆಲೆ 18,77,900 ರೂಪಾಯಿ ಆಗಿದೆ. ಆಫರ್‌ ನಂತರ ಈ ಕಾರನ್ನು 17,57,900 ರೂಪಾಯಿಗೆ ಖರೀದಿಸಬಹುದು. ಮಾದರಿಯ ಎಕ್ಸ್ ಶೋ ರೂಂ ಬೆಲೆ 15.95 ಲಕ್ಷ ರೂ. ಅದೇ ಸಮಯದಲ್ಲಿ, ಅದರ 1.0 ಲೀಟರ್ ಪೆಟ್ರೋಲ್ ಎಂಜಿನ್ ರೂಪಾಂತರವು 25,000  ರೂ. ಕಂಪನಿ ಸ್ಕೀಮ್,  40,000 ರೂ. ಡೀಲರ್ ಮಾರ್ಜಿನ್ ಮತ್ತು 10,000 ರೂ . ಕಾರ್ಪೊರೇಟ್ ರಿಯಾಯಿತಿಯನ್ನು ಪಡೆಯುತ್ತಿದೆ. ಇದೆಲ್ಲವೂ ಸೇರಿದರೆ ಈ ವೆರಿಯೇಂಟ್ ಮೇಲೆ 75,000 ರೂ.ವರೆಗೆ ಆಫರ್ ಸಿಕ್ಕಿದಂತಾಗುತ್ತದೆ. ಈ ಕಾರಿನ  ಆನ್ ರೋಡ್ ಬೆಲೆ 13,54,724 ರೂ.ಆಗಿದ್ದು, ಆಫರ್ ನಂತರ.12,79,724  ರೂ. ಗೆ ಇಳಿಯುತ್ತದೆ. ಆದರೂ ಈ ಕೊಡುಗೆಗಳ ಮೇಲೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಕಾರನ್ನು ಖರೀದಿಸುವ ಮೊದಲು ಡೀಲರ್‌ಶಿಪ್ ಅನ್ನು ಪರಿಶೀಲಿಸಬೇಕು. ಈ ಕೊಡುಗೆಯು ಅಕ್ಟೋಬರ್ ತಿಂಗಳಿಗೆ ಮಾತ್ರ ಮಾನ್ಯವಾಗಿರುತ್ತದೆ.

ಇದನ್ನೂ ಓದಿ : Arecanut Price: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ

ಇದಲ್ಲದೇ, ಮಾರುತಿ ಸುಜುಕಿ, ಟಾಟಾ, ಹ್ಯುಂಡೈ ಮತ್ತು ಹೋಂಡಾದಂತಹ ದೊಡ್ಡ ಕಂಪನಿಗಳು ಸೇರಿದಂತೆ ಅನೇಕ ಇತರ ಕಾರು ಕಂಪನಿಗಳು ತಮ್ಮ ಕಾರುಗಳ ಮೇಲೆ  ರಿಯಾಯಿತಿ ನೀಡುತ್ತಿವೆ. ಈ ಯಾವುದೇ ಕಂಪನಿಗಳಿಂದ ಕಾರನ್ನು ಖರೀದಿಸುವಾಗ ಆಫರ್‌ಗಳ ಕುರಿತು ಡೀಲರ್‌ಶಿಪ್ ಅನ್ನು ಕೇಳಬಹುದು.

ಇದನ್ನೂ ಓದಿ : Ola Cheapest Bike: ಅತ್ಯಂತ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಒಲಾ, ಕೇವಲ ರೂ.999 ಪಾವತಿಸಿ ಬುಕ್ ಮಾಡಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News