ಸರ್ಕಾರಿ ನೌಕರರಿಗೆ ಹೊಡೆಯಲಿದೆ ಲಾಟರಿ, ಶೀಘ್ರದಲ್ಲೇ ಮೋದಿ ಸರ್ಕಾರ ಕೈಗೊಳ್ಳಲಿದೆ ಈ ನಿರ್ಧಾರ!

7th Pay Commission: ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ನೀಡಲಾಗುವ ತುಟ್ಟಿಭತ್ಯೆಯನ್ನು ಕಾರ್ಮಿಕ ಬ್ಯೂರೋ ಮೂಲಕ ಪ್ರತಿ ತಿಂಗಳು ನೀಡಲಾಗುವ ಕೈಗಾರಿಕಾ ಕಾರ್ಮಿಕರಿಗೆ (CPI-IW) ಗ್ರಾಹಕ ಬೆಲೆ ಸೂಚ್ಯಂಕದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಲೇಬರ್ ಬ್ಯೂರೋ ಕಾರ್ಮಿಕ ಸಚಿವಾಲಯದ ಒಂದು ಶಾಖೆಯಾಗಿದೆ. ಇದೆ ವೇಳೆ, ಸರ್ಕಾರಿ ನೌಕರರು ಸಹ ಸಾಕಷ್ಟು ಡಿಎ ಪ್ರಯೋಜನಗಳನ್ನು ಪಡೆಯುತ್ತಾರೆ (Business News In Kannada).  

Written by - Nitin Tabib | Last Updated : Aug 6, 2023, 06:45 PM IST
  • ಈ ಕುರಿತು ಮಾತನಾಡಿರುವ ಅಖಿಲ ಭಾರತ ರೈಲ್ವೇಮೆನ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ,
  • "ಜೂನ್ 2023 ರ ಸಿಪಿಐ-ಐಡಬ್ಲ್ಯೂ ಅನ್ನು ಜುಲೈ 31, 2023 ರಂದು ಬಿಡುಗಡೆ ಮಾಡಲಾಗಿದೆ. ತುಟ್ಟಿಭತ್ಯೆಯಲ್ಲಿ ಶೇ.4 ರಷ್ಟು ಹೆಚ್ಚಳಕ್ಕೆ ನಾವು ಒತ್ತಾಯಿಸುತ್ತಿದ್ದೇವೆ.
  • ಆದರೆ ಸರ್ಕಾರ ತುಟ್ಟಿಭತ್ಯೆಯನ್ನು ಶೇ.3ರಷ್ಟು ಹೆಚ್ಚಿಸಬಹುದು ಮತ್ತು ಅದು ಶೇ.45 ರಷ್ಟಾಗುವ ಸಾಧ್ಯತೆ ಇದೆ.
ಸರ್ಕಾರಿ ನೌಕರರಿಗೆ ಹೊಡೆಯಲಿದೆ ಲಾಟರಿ, ಶೀಘ್ರದಲ್ಲೇ ಮೋದಿ ಸರ್ಕಾರ ಕೈಗೊಳ್ಳಲಿದೆ ಈ ನಿರ್ಧಾರ! title=

ನವದೆಹಲಿ: ಸರ್ಕಾರಿ ನೌಕರರು ತುಟ್ಟಿಭತ್ಯೆ ಹೆಚ್ಚಳದ ಕುರಿತು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಹೀಗಿರುವಾಗ ಇದೀಗ ಡಿಎ ಕುರಿತು ಮಹತ್ವದ ಮಾಹಿತಿ ಮುನ್ನೆಲೆಗೆ ಬಂದಿದ್ದು, ಶೀಘ್ರವೇ ಮೋದಿ ಸರಕಾರ ಕೂಡ ಡಿಎ ಬಗ್ಗೆ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಬಹುತೇಕ ನಿಚ್ಚಳವಾಗುತ್ತಿದೆ (Business News In Kannada). ವಾಸ್ತವದಲ್ಲಿ, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರಿ ನೌಕರರ ಡಿಎ ಹೆಚ್ಚಳವಾಗುವ ಸಾಧ್ಯತೆ ಇದೆ. ಒಪ್ಪಿದ ಸೂತ್ರದ ಅಡಿಯಲ್ಲಿ ಕೇಂದ್ರ ಸರ್ಕಾರವು ತನ್ನ ಒಂದು ಕೋಟಿಗೂ ಹೆಚ್ಚು ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು (ಡಿಎ) ಶೇ.3 ರಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಪ್ರಸ್ತುತ  ಡಿಎ ಶೇ. 42ರಷ್ಟಿದ್ದು, ಒಂದು ವೇಳೆ ಡಿಎಯನ್ನು ಶೇ.3 ರಷ್ಟು ಹೆಚ್ಚಾದರೆ, ಅದು ಶೇ. 45 ರಷ್ಟಾಗಲಿದೆ.

ಡಿಎ ಹೇಗೆ ನಿರ್ಧರಿಸಲಾಗುತ್ತದೆ?
ಡಿಎ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಏತನ್ಮಧ್ಯೆ, ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು ಕಾರ್ಮಿಕ ಬ್ಯೂರೋ ಮೂಲಕ ಪ್ರತಿ ತಿಂಗಳು ನೀಡಲಾಗುವ ಕೈಗಾರಿಕಾ ಕಾರ್ಮಿಕರಿಗೆ (CPI-IW) ಗ್ರಾಹಕ ಬೆಲೆ ಸೂಚ್ಯಂಕದ ಆಧಾರದ ಮೇಲೆ ನಿಗದಿಪಡಿಸಲಾಗುತ್ತದೆ. ಲೇಬರ್ ಬ್ಯೂರೋ ಕಾರ್ಮಿಕ ಸಚಿವಾಲಯದ ಒಂದು ಶಾಖೆಯಾಗಿದೆ. ಇದೇ ವೇಳೆ, ಸರ್ಕಾರಿ ನೌಕರರು ಸಹ ಸಾಕಷ್ಟು ಡಿಎ ಪ್ರಯೋಜನಗಳನ್ನು ಪಡೆಯುತ್ತಾರೆ.

ಇದನ್ನೂ ಓದಿ-ಈ ಐದು ಬ್ಯಾಂಕ್ ಗಳಲ್ಲಿ SB Account ಮೇಲೆಯೇ ಸಿಗುತ್ತಿದೆ ಶೇ.7.5 ರಷ್ಟು ಬಡ್ಡಿ!

ನೌಕರ ಬೇಡಿಕೆ ಏನಿದೆ?
ಈ ಕುರಿತು ಮಾತನಾಡಿರುವ ಅಖಿಲ ಭಾರತ ರೈಲ್ವೇಮೆನ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ, "ಜೂನ್ 2023 ರ ಸಿಪಿಐ-ಐಡಬ್ಲ್ಯೂ ಅನ್ನು ಜುಲೈ 31, 2023 ರಂದು ಬಿಡುಗಡೆ ಮಾಡಲಾಗಿದೆ. ತುಟ್ಟಿಭತ್ಯೆಯಲ್ಲಿ ಶೇ.4 ರಷ್ಟು ಹೆಚ್ಚಳಕ್ಕೆ ನಾವು ಒತ್ತಾಯಿಸುತ್ತಿದ್ದೇವೆ. ಆದರೆ ಸರ್ಕಾರ ತುಟ್ಟಿಭತ್ಯೆಯನ್ನು ಶೇ.3ರಷ್ಟು ಹೆಚ್ಚಿಸಬಹುದು ಮತ್ತು ಅದು ಶೇ.45 ರಷ್ಟಾಗುವ ಸಾಧ್ಯತೆ ಇದೆ.

ಇದನ್ನೂ ಓದಿ-ಕೇವಲ 25 ಸಾವಿರ ಹೂಡಿಕೆ ಮಾಡಿದ್ರೆ 70 ಲಕ್ಷಕ್ಕೂ ಅಧಿಕ ಲಾಭ ಕೊಡುತ್ತೇ ಈ ಉದ್ಯಮ!

ಡಿಎ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ
ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು ಅದರ ಆದಾಯದ ಪರಿಣಾಮಗಳೊಂದಿಗೆ ಡಿಎ ಹೆಚ್ಚಳದ ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತದೆ ಮತ್ತು ಅನುಮೋದನೆಗಾಗಿ ಕೇಂದ್ರ ಸಚಿವ ಸಂಪುಟದ ಮುಂದೆ ಪ್ರಸ್ತಾವನೆಯನ್ನು ಇರಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ಡಿಎ ಹೆಚ್ಚಳವು ಜುಲೈ 1, 2023 ರಿಂದ ಜಾರಿಗೆ ಬರಲಿದೆ. ಪ್ರಸ್ತುತ ಒಂದು ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಶೇ.42 ತುಟ್ಟಿಭತ್ಯೆ ಪಡೆಯುತ್ತಿದ್ದಾರೆ. DA ನಲ್ಲಿ ಕೊನೆಯ ಪರಿಷ್ಕರಣೆಯನ್ನು ಮಾರ್ಚ್ 24, 2023 ರಂದು ಮಾಡಲಾಯಿತು ಮತ್ತು ಜನವರಿ 1, 2023 ರಿಂದ ಅದು ಜಾರಿಗೆ ಬಂದಿತ್ತು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News