ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman)ಅವರು ಇಂದು ಸಂಸತ್ತಿನಲ್ಲಿ 2022-23ನೇ ಸಾಲಿನ ಬಜೆಟ್(Budget 2022) ಮಂಡಿಸಿದ್ದಾರೆ. ಇದರಲ್ಲಿ ಅವರು ನದಿ ಯೋಜನೆಗಳ ಬಗ್ಗೆ ಹಲವಾರು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ.
ಕಾವೇರಿ-ಪೆನ್ನಾರ್ ಸೇರಿ 5 ನದಿ ಜೋಡಣೆ ಯೋಜನೆ
Draft DPRs of 5 River Links Finalised.Ken betwa link project - irrigation, electricity generation already in implementation.
▪️Damanganga - Pinjal
▪️Par-Tapi-Narmada, ▪️godavari-krishna, ▪️krishna- pennar and ▪️pennar-kaveri: FM @nsitharaman #Budget2022 pic.twitter.com/blApUXAE27— All India Radio News (@airnewsalerts) February 1, 2022
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣ(Union Budget 2022)ದಲ್ಲಿ ಕಾವೇರಿ-ಪೆನ್ನಾರ್ ಸೇರಿ 5 ನದಿ ಜೋಡಣೆ ಯೋಜನೆಯನ್ನು ಘೋಷಿಸಿದ್ದಾರೆ. ಕಾವೇರಿ-ಪೆನ್ನಾರ್(Cauvery-Pennar Link Project), ಧಮನ್ ಗಂಗಾ-ಪಿಂಜಾಲ್, ಪರ್ ತಾಪಿ-ನರ್ಮದಾ, ಗೋದಾವರಿ-ಕೃಷ್ಣ ಹಾಗೂ ಕೃಷ್ಣಾ-ಪೆನ್ನಾರ್ ಈ 5 ನದಿ ಜೋಡಣೆ ಯೋಜನೆಗಳಿಗೆ ಡಿಪಿಆರ್ ಗೆ ಸಮ್ಮತಿ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಈ ನದಿಗಳನ್ನು ಜೋಡಿಸಲಾಗುತ್ತದೆ ಎಂದು ಹೇಳಿರುವ ಅವರು, ಫಲಾನುಭವಿ ರಾಜ್ಯಗಳ ಒಪ್ಪಿಗೆ ಬಳಿಕ ಅವುಗಳ ಜಾರಿಗೆ ನೆರವು ನೀಡಲಾಗುವುದು ಅಂತಾ ತಿಳಿಸಿದ್ದಾರೆ.
ಇದನ್ನೂ ಓದಿ: Budget 2022 ಮಂಡನೆಗೂ ಮುನ್ನ ಸಂತಸದ ಸುದ್ದಿ ಪ್ರಕಟಿಸಿದ ಬ್ಯಾಂಕ್ ಗಳು, Fixed Deposit ಬಡ್ಡಿ ದರ ಹೆಚ್ಚಳ
ಕೆನ್-ಬಾತ್ವಾ ಜೋಡಣೆಗೆ 44,605 ಕೋಟಿ ರೂ.
Implementation of the Ken-Betwa linking project at the cost Rs 44,605 crore will be taken up. This is aimed at providing irrigation benefits to 9.0 lakh hectares of farmers' land, drinking water supply to 62 lakh people, 103 MW of hydro, 23 MW of solar power. pic.twitter.com/XOjLOXDf4E
— BJP (@BJP4India) February 1, 2022
ಮಧ್ಯಪ್ರದೇಶದ ಕೆನ್-ಬಾತ್ವಾ ನದಿ ಜೋಡಣೆ(Ken-Betwa River Interlinking Project)ಗೆ ಕೇಂದ್ರ ಸರ್ಕಾರವು ಬರೋಬ್ಬರಿ 44,605 ಕೋಟಿ ರೂ. ನೆರವು ನೀಡುವುದಾಗಿ ಘೋಷಿಸಿದೆ. ಇದರಿಂದ 9 ಲಕ್ಷ ಹೆಕ್ಟೇರ್ ಕೃಷಿಭೂಮಿಗೆ ನೀರು ಸಿಗಲಿದೆ.
ಇದನ್ನೂ ಓದಿ: Budget 2022: ಈ ಬಜೆಟ್ ಅಧಿವೇಶನದಲ್ಲಿ ತೆರಿಗೆ ಪಾವತಿದಾರರಿಗೆ ಸಿಗಲಿದೆ ಈ ಸಂತಸದ ಸುದ್ದಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.