Aadhaar Cardಗೆ ಸಂಬಂಧಿಸಿದ ಈ ಮುಖ್ಯ ಮಾಹಿತಿ ತಿಳಿದಿರಲಿ, UIDAI ನೀಡಿದೆ ಮಾಹಿತಿ

Aadhaar CardLatest News:ಯುಐಡಿಎಐ (UIDAI) ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಿಂದ ಟ್ವೀಟ್ ಮಾಡುವ ಮೂಲಕ ಈ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದೆ. ಪ್ರಸ್ತುತ ಆಧಾರ್  ಎಲ್ಲಾ ಕೆಲಸಗಳಿಗೂ ಪ್ರಮುಖ ದಾಖಲೆಯಾಗಿದೆ. 

Written by - Ranjitha R K | Last Updated : Aug 11, 2021, 04:45 PM IST
  • ಆಧಾರ್ ಕಾರ್ಡ್ ಬಗ್ಗೆ ತಿಳಿದುಕೊಳ್ಳಲೇಬೇಕಾದ ಅಪ್ಡೇಟ್
  • ಈ ದೊಡ್ಡ ಕೆಲಸವನ್ನು ಒಂದು ಲಿಂಕ್ ಮೂಲಕ ಮಾಡಲಾಗುತ್ತದೆ
  • ಯುಐಡಿಎಐ ಟ್ವೀಟ್ ಮೂಲಕ ನೀಡಿದೆ ಮಾಹಿತಿ
Aadhaar Cardಗೆ ಸಂಬಂಧಿಸಿದ ಈ ಮುಖ್ಯ ಮಾಹಿತಿ ತಿಳಿದಿರಲಿ, UIDAI ನೀಡಿದೆ ಮಾಹಿತಿ   title=
ಆಧಾರ್ ಕಾರ್ಡ್ ಬಗ್ಗೆ ತಿಳಿದುಕೊಳ್ಳಲೇಬೇಕಾದ ಅಪ್ಡೇಟ್ (file photo)

ನವದೆಹಲಿ : Aadhaar CardLatest News: ಆಧಾರ್ ಕಾರ್ಡ್  ಬಗೆಗಿನ ಬಹು ಮುಖ್ಯ ಸುದ್ದಿಯಿದು. ಆಧಾರ್ ಕಾರ್ಡ್ ಹೊಂದಿರುವವರು ತಿಳಿದುಕೊಂಡಿರಲೇ ಮಾಹಿತಿ ಇದು. ಒಂದು ವೇಳೆ ಆಧಾರ್ ಕಾರ್ಡ್ ಕಳೆದುಕೊಂಡರೆ, ಚಿಂತಿಸಬೇಕಾಗಿಲ್ಲ.  ಈಗ ಆನ್‌ಲೈನ್‌ನಲ್ಲಿ ಆಧಾರ್ ಡೌನ್‌ಲೋಡ್ (Aadhaar download) ಮಾಡುವುದು ಸುಲಭವಾಗಿದೆ. ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDAI) ನೇರ ಲಿಂಕ್ ಅನ್ನು ಶೇರ್ ಮಾಡಿದ್ದು, ಈ ಮೂಲಕ ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಟ್ವೀಟ್ ಮಾಡಿ ಮಾಹಿತಿ ನೀಡಿರುವ ಯುಐಡಿಎಐ :
ಯುಐಡಿಎಐ (UIDAI) ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಿಂದ ಟ್ವೀಟ್ ಮಾಡುವ ಮೂಲಕ ಈ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದೆ. ಪ್ರಸ್ತುತ ಆಧಾರ್  ಎಲ್ಲಾ ಕೆಲಸಗಳಿಗೂ ಪ್ರಮುಖ ದಾಖಲೆಯಾಗಿದೆ. ಬ್ಯಾಂಕ್ ಕೆಲಸ ಅಥವಾ ಸರ್ಕಾರಿ ಯೋಜನೆಯ ಲಾಭ ಪಡೆಯಲು ಆಧಾರ್ (Aadhaar card) ಬೇಕೇ ಬೇಕು.  'https://eaadhaar.uidai.gov.in ಲಿಂಕ್ ಮೂಲಕ ಆಧಾರ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. UIDAI, ಈ ಡೈರೆಕ್ಟ್ ಲಿಂಕ್ ಅನ್ನು ಶೇರ್ ಮಾಡಿದೆ. 

ಇದನ್ನೂ ಓದಿ : RBI New Rules: ಎಟಿಎಂನಲ್ಲಿ ಹಣ ಇಲ್ಲದಿದ್ದರೆ, ಬ್ಯಾಂಕ್‌ಗೆ ದಂಡ, ಈ ದಿನದಿಂದ ಅನ್ವಯವಾಗಲಿದೆ ಹೊಸ ನಿಯಮ

ಈ ರೀತಿ ಡೌನ್ಲೋಡ್ ಮಾಡಿಕೊಳ್ಳಬಹುದು : 
ಆಧಾರ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ (Aadhaar download) ಮಾಡಲು, eaadhaar.uidai.gov.in/ ಲಿಂಕ್‌ಗೆ ಲಾಗ್ ಇನ್ ಆಗಬೇಕು.  ನಂತರ OTP ಮೂಲಕ ಲಾಗಿನ್ ಮಾಡಿ. ಲಾಗಿನ್ ಬಳಿಕ ಕೆಲವು ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಆಧಾರ್ ಅನ್ನು ಡೌನ್ಲೋಡ್ ಮಾಡಿ.

1. ಈ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಆಧಾರ್ ಅನ್ನು ಡೌನ್ಲೋಡ್ ಮಾಡಿ
2. UIDAI ನೇರ ಲಿಂಕ್ eaadhaar.uidai.gov.in/ ಗೆ ಲಾಗಿನ್ ಮಾಡಿ.
3. ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ.
4. ಮಾಸ್ಕ್ ಆಧಾರ್ ಕಾರ್ಡ್ ಬೇಕಾಗಿದ್ದರೆ i want a masked aadhaar ಆಯ್ಕೆಯ ಎಡಭಾಗದಲ್ಲಿರುವ ಬಾಕ್ಸ್ ಮೇಲೆ ಟಿಕ್ ಮಾಡಿ.
5. ಸೆಕ್ಯೂರಿಟಿ  ಕೋಡ್ ಅಥವಾ ಕ್ಯಾಪ್ಚಾ ನಮೂದಿಸಿ.
6. ಸೆಂಡ್ ಒಟಿಪಿ ಮೇಲೆ ಕ್ಲಿಕ್ ಮಾಡಿ.
7. ನಿಮ್ಮ ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ 
8. OTP ನಮೂದಿಸಿ.
9. OTP ಸಲ್ಲಿಸಿದ ನಂತರ, ನಿಮ್ಮ ಆಧಾರ್ ಕಾರ್ಡ್ ವಿವರಗಳು ಮತ್ತು ಆಧಾರ್ ಡೌನ್‌ಲೋಡ್ ಮಾಡುವ ಆಯ್ಕೆ ನಿಮ್ಮ ಕಂಪ್ಯೂಟರ್ ಮಾನಿಟರ್ ಮೇಲೆ ಕಾಣುತ್ತದೆ. 
10. ಡೌನ್ಲೋಡ್ ಆಯ್ಕೆಯನ್ನು ಕ್ಲಿಕ್ ಮಾಡಿ ಸೇವ್ ಮಾಡಿ. 

ಇದನ್ನೂ ಓದಿ : LIC ಪಾಲಿಸಿ ತೆಗೆದುಕೊಳ್ಳುವ ವೇಳೆ ಆಗದಿರಲಿ ಈ ತಪ್ಪು, ಎದುರಿಸಬೇಕಾದೀತು ಭಾರೀ ನಷ್ಟ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News