ನವದೆಹಲಿ: ಬಹುತೇಕ ಜನರು ಕಾರು ಖರೀದಿಸುವಾಗ ಉತ್ತಮ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ಹುಡುಕುತ್ತಿರುತ್ತಾರೆ. ಹೊಸ ಕಾರು ಖರೀದಿಸಲು ಆಫರ್ಗಳ ಬಗ್ಗೆ ತಿಳಿಯಲು ಗ್ರಾಹಕರು ಶೋರೂಂಗೆ ಭೇಟಿ ನೀಡುತ್ತಾರೆ. ನೀವು ಸಹ ಕಾರು ಖರೀದಿಸುವ ಬಗ್ಗೆ ಆಸಕ್ತಿ ಹೊಂದಿದ್ದರೆ ಇಲ್ಲಿದೆ ಭರ್ಜರಿ ಆಫರ್. ಮಾರುತಿ ಸುಜುಕಿ ಕಾರು ಖರೀದಿಯ ಮೇಲೆ ನೀವು ಉತ್ತಮ ಕೊಡುಗೆಗಳನ್ನು ಪಡೆಯಬಹುದು. ಜುಲೈನಲ್ಲಿ ಮಾರುತಿ ಸುಜುಕಿ ತನ್ನ ಕೆಲವು ಕಾರುಗಳ ಮೇಲೆ ಕ್ಯಾಶ್ಬ್ಯಾಕ್ ಜೊತೆಗೆ ಕಾರ್ಪೊರೇಟ್ ಬೋನಸ್ ಮತ್ತು ವಿನಿಮಯ ಕೊಡುಗೆಯ ಪ್ರಯೋಜನವನ್ನು ನೀಡುತ್ತಿದೆ. ಕಂಪನಿಯ WagonR, Swift, Dzire, Brezza, Celerio, S-Presso, Alto ಮತ್ತು Eecoನಲ್ಲಿ ಆಫರ್ಗಳು ಲಭ್ಯವಿವೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಮಾರುತಿ ಸುಜುಕಿ ಆಲ್ಟೊ ಕೆ10 ಮೇಲೆ 40 ಸಾವಿರ ರೂ. ಕ್ಯಾಶ್ಬ್ಯಾಕ್, 15 ಸಾವಿರ ರೂ. ಎಕ್ಸ್ಚೇಂಜ್ ಬೋನಸ್ ಮತ್ತು 4,100 ರೂ. ಕಾರ್ಪೊರೇಟ್ ರಿಯಾಯಿತಿಯೊಂದಿಗೆ ನೀಡಲಾಗುತ್ತಿದೆ. ಈ ದಿನಗಳಲ್ಲಿ ಡಿಜೈರ್ ಸೆಡಾನ್ ಮೇಲೆ ಕೇವಲ 15 ಸಾವಿರ ರೂ.ಗಳ ವಿನಿಮಯ ಬೋನಸ್ ಲಭ್ಯವಿದೆ. ಈ ತಿಂಗಳು ಮಾರುತಿ ಸುಜುಕಿ ಸೆಲೆರಿಯೊದ ಮೇಲೆ 35 ಸಾವಿರ ರೂ. ಕ್ಯಾಶ್ಬ್ಯಾಕ್, 15 ಸಾವಿರ ರೂ. ವಿನಿಮಯ ಬೋನಸ್ ಮತ್ತು 4100 ರೂ. ಕಾರ್ಪೊರೇಟ್ ರಿಯಾಯಿತಿ ನೀಡಲಾಗುತ್ತಿದೆ.
ಇದನ್ನೂ ಓದಿ: Direct Tax Collection: ನಿವ್ವಳ ನೇರ ತೆರಿಗೆ ಸಂಗ್ರಹದಲ್ಲಿ 15.87% ಏರಿಕೆ, 4.75 ಲಕ್ಷ ಕೋಟಿಗೆ ಜಂಪ್!
ಅದೇ ರೀತಿ ಎಸ್-ಪ್ರೆಸ್ಸೊದಲ್ಲಿ 39 ಸಾವಿರ ರೂ. ಕ್ಯಾಶ್ಬ್ಯಾಕ್, 15 ಸಾವಿರ ರೂ. ವಿನಿಮಯ ಬೋನಸ್ ಮತ್ತು 4100 ರೂ. ಕಾರ್ಪೊರೇಟ್ ರಿಯಾಯಿತಿ ನೀಡಲಾಗುತ್ತಿದೆ. WagonRನ ಮೇಲೆಯೂ ಉತ್ತಮ ಕೊಡುಗೆ ಇದ್ದು, 30 ಸಾವಿರ ರೂ. ಕ್ಯಾಶ್ಬ್ಯಾಕ್, 20 ಸಾವಿರ ರೂ. ವಿನಿಮಯ ಬೋನಸ್ ಮತ್ತು 4,100 ರೂ. ಕಾರ್ಪೊರೇಟ್ ರಿಯಾಯಿತಿ ಲಭ್ಯವಿದೆ.
ಸ್ವಿಫ್ಟ್ ಮೇಲೆ 25 ಸಾವಿರ ರೂ.ಗಳ ನಗದು ರಿಯಾಯಿತಿ ಜೊತೆಗೆ 20 ಸಾವಿರ ರೂ.ಗಳ ವಿನಿಮಯ ಬೋನಸ್ ಮತ್ತು 4,100 ರೂ.ಗಳ ಕಾರ್ಪೊರೇಟ್ ರಿಯಾಯಿತಿ ಸಿಗುತ್ತಿದೆ. Eeco ಮೇಲೆ 20 ಸಾವಿರ ರೂ. ಕ್ಯಾಶ್ಬ್ಯಾಕ್, 10 ಸಾವಿರ ರೂ. ವಿನಿಮಯ ಬೋನಸ್ ಮತ್ತು 3,100 ರೂ. ಕಾರ್ಪೊರೇಟ್ ರಿಯಾಯಿತಿಯೊಂದಿಗೆ ನೀಡಲಾಗುತ್ತಿದೆ.
ಇದನ್ನೂ ಓದಿ: ಹೆಚ್ಚಿನ ಪಿಂಚಣಿ ಪಡೆಯಬೇಕಾದರೆ ಇಂದೇ ಪೂರೈಸಬೇಕು ಈ ಕೆಲಸ ! ಇಲ್ಲವಾದರೆ ನಿಮಗೇ ನಷ್ಟ
(ಗಮನಿಸಿ: ಈ ರಿಯಾಯಿತಿ ಕೊಡುಗೆಗಳ ಕುರಿತು ಡೀಲರ್ಶಿಪ್ನೊಂದಿಗೆ ಪರಿಶೀಲಿಸಿ. ಸ್ಥಳ ಮತ್ತು ಡೀಲರ್ಶಿಪ್ ಆಧರಿಸಿ ಆಫರ್ಗಳು ಬದಲಾವಣೆಗೆ ಒಳಪಟ್ಟಿರುತ್ತವೆ)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.