ಬೆಂಗಳೂರು : ಕೈಗೆಟುಕುವ ದರದಲ್ಲಿ SUV ಅನ್ನು ಖರೀದಿಸಲು ಬಯಸುತ್ತಿದ್ದರೆ, ಮಾರುಕಟ್ಟೆಯಲ್ಲಿ ಹಲವಾರು ಆಯ್ಕೆಗಳು ಲಭ್ಯವಿದೆ. ಅವುಗಳಲ್ಲಿ SUV ನಿಸ್ಸಾನ್ ಮ್ಯಾಗ್ನೈಟ್ ಕೂಡಾ ಸೇರಿದೆ. ಯಾವುದೇ ಕಾರು ಖರೀದಿಸುವಾಗಲೂ ಅದರ ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಈ ಹಿನ್ನೆಲೆಯಲ್ಲಿ ಅಗ್ಗದ ಬೆಲೆಯಲ್ಲಿ SUV ಖರೀದಿಸಲು ಬಯಸುವವರಿಗೆ ಈ ಬಗ್ಗೆ ಸೂಕ್ತ ಮಾಹಿತಿ ಇಲ್ಲಿದೆ.
ನಿಸ್ಸಾನ್ ಮ್ಯಾಗ್ನೈಟ್ ಎಂಜಿನ್ :
ನಿಸ್ಸಾನ್ ಮ್ಯಾಗ್ನೈಟ್ ಎರಡು ಪೆಟ್ರೋಲ್ ಎಂಜಿನ್, 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್ (72PS/96Nm) ಮತ್ತು 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (100PS/160Nm) ಆಯ್ಕೆಯೊಂದಿಗೆ ಬರುತ್ತದೆ. ಇದು 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಮತ್ತು CVT ಆಯ್ಕೆಯೊಂದಿಗೆ ಬರುತ್ತದೆ.
ಇದನ್ನೂ ಓದಿ : Arecanut Price: ರಾಜ್ಯದ ಅಡಿಕೆ ಮಾರುಕಟ್ಟೆಯ ಇಂದಿನ ಧಾರಣೆ ಹೀಗಿದೆ ನೋಡಿ
ನಿಸ್ಸಾನ್ ಮ್ಯಾಗ್ನೈಟ್ ವೈಶಿಷ್ಟ್ಯಗಳು :
SUV ವೈರ್ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಜೊತೆಗೆ 8-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಹೊಂದಿರುತ್ತದೆ. ಇದಲ್ಲದೇ ಆಟೋ ಎಸಿ, ರಿಯರ್ ವೆಂಟ್ಗಳು, ವೈರ್ಲೆಸ್ ಫೋನ್ ಚಾರ್ಜರ್, ಏರ್ ಪ್ಯೂರಿಫೈಯರ್, ಜೆಬಿಎಲ್ ಸ್ಪೀಕರ್ ಮತ್ತು ಆಂಬಿಯೆಂಟ್ ಲೈಟಿಂಗ್ನಂತಹ ವೈಶಿಷ್ಟ್ಯಗಳು ಲಭ್ಯವಿದೆ.
ನಿಸ್ಸಾನ್ ಮ್ಯಾಗ್ನೈಟ್ನ ಬಾಹ್ಯ ವಿನ್ಯಾಸ :
ಕಾರು 16-ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ನೊಂದಿಗೆ ಬರುತ್ತದೆ. ಇದಲ್ಲದೆ, ಎಲ್-ಆಕಾರದ ಎಲ್ಇಡಿ ಡಿಆರ್ ಎಲ್ ಲಭ್ಯವಿದೆ. 360-ಡಿಗ್ರಿ ಕ್ಯಾಮೆರಾಗಳು ಮತ್ತು ಪಡಲ್ ಲ್ಯಾಂಪ್ ಲಭ್ಯವಿದೆ. ಎಲ್ಇಡಿ ಡಿಆರ್ ಎಲ್ ಕೆಳಗೆ ಫಾಗ್ ಲ್ಯಾಂಪ್ ಗಳು ಕೂಡಾ ಇರಲಿವೆ.
ನಿಸ್ಸಾನ್ ಮ್ಯಾಗ್ನೈಟ್ ಬೆಲೆ :
6 ಲಕ್ಷ ರೂಪಾಯಿಗಿಂತ ಕಡಿಮೆ ಬೆಲೆಗೆ ಈ ಕಾರು ಪ್ರಾರಂಭವಾಗುತ್ತದೆ. ಆದರೂ ಇದರ ಟಾಪ್ ರೂಪಾಂತರಕ್ಕೆ 10 ಲಕ್ಷ ರೂ. ನೀಡಬೇಕಾಗುತ್ತದೆ. ಇದರ ಮೂಲ ರೂಪಾಂತರದ ಬೆಲೆ 5.97 ಲಕ್ಷ ರೂ. ಮತ್ತು ಟಾಪ್ ರೂಪಾಂತರದ ಬೆಲೆ 10.79 ಲಕ್ಷ ರೂಪಾಯಿ.
ಇದನ್ನೂ ಓದಿ : Gold Price Today : ಮತ್ತೆ ಏರಿಕೆಯಾಯಿತು ಚಿನ್ನದ ದರ .!
ಇದು ನೇರವಾಗಿ ರೆನಾಲ್ಟ್ ಕೈಗರ್ ಜೊತೆ ಸ್ಪರ್ಧಿಸುತ್ತದೆ. ಎರಡರ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ಕೈಗರ್ ನ ಬೆಲೆ 5.99 ಲಕ್ಷದಿಂದ 10.62 ಲಕ್ಷದವರೆಗೆ ಇರುತ್ತದೆ. ಇದು ಎರಡು ಎಂಜಿನ್ ಆಯ್ಕೆಯನ್ನು ಹೊಂದಿದೆ. 1-ಲೀಟರ್ ನ್ಯಾಚುರಲಿ ಆಸ್ಪರೆಟೆಡ್ ಪೆಟ್ರೋಲ್ (72PS/96Nm) ಮತ್ತು 1-ಲೀಟರ್ ಟರ್ಬೊ-ಪೆಟ್ರೋಲ್ (100PS/160Nm). ಇದು 5-ಸ್ಪೀಡ್ ಮ್ಯಾನುವಲ್, AMT ಮತ್ತು CVT ಆಯ್ಕೆಯೊಂದಿಗೆ ಬರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.