ಶೀಘ್ರ ಕೊನೆಗೊಳ್ಳಬಹುದು ATM Withdrawal ಮೇಲಿನ ಚಾರ್ಜ್..ಇಲ್ಲಿದೆ ಡೀಟೆಲ್ಸ್

ಎಟಿಎಂ  ವ್ಯವಹಾರದಲ್ಲಿ ಒಂದು ನಿಗದಿತ ಮಿತಿ ದಾಟಿದ ಮೇಲೆ ಉಳಿದ ಎಟಿಎಂ ಟ್ರಾನ್ಸಾಕ್ಷನ್ ಗಳಿವೆ ದುಡ್ಡು ಪಾವತಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಎಟಿಎಂ ಚಾರ್ಜ್  ರದ್ದಾಗಲೂ ಬಹುದು.

Written by - Ranjitha R K | Last Updated : Jan 26, 2021, 10:41 AM IST
  • ವಿಫಲ ಎಟಿಎಂ ವ್ಯವಹಾರಕ್ಕೆ ಚಾರ್ಜ್ ಹಾಕದಂತೆ ಆರ್ ಬಿಐಗೆ ಮನವಿ
  • ಆರ್ ಬಿಐಗೆ ಮನವಿ ಸಲ್ಲಿಸಿದ ಅಖಿಲ ಭಾರತೀಯ ಬ್ಯಾಂಕ್ ಠೇವಣಿದಾರರ ಸಂಘ
  • ಸದ್ಯವೇ ಆರ್ ಬಿಐ ಸಭೆ ಸೇರಲಿದ್ದು, ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ
ಶೀಘ್ರ ಕೊನೆಗೊಳ್ಳಬಹುದು ATM Withdrawal ಮೇಲಿನ ಚಾರ್ಜ್..ಇಲ್ಲಿದೆ ಡೀಟೆಲ್ಸ್ title=
ಕೊನೆಗೊಳ್ಳಬಹುದು ATM Withdrawal ಮೇಲಿನ ಚಾರ್ಜ್ (file photo)

ದೆಹಲಿ : ನಿಮಗೆ ಗೊತ್ತಿದೆ. ಎಟಿಎಂ (ATM)  ವ್ಯವಹಾರದಲ್ಲಿ ಒಂದು ನಿಗದಿತ ಮಿತಿ ದಾಟಿದ ಮೇಲೆ ಉಳಿದ ಎಟಿಎಂ ಟ್ರಾನ್ಸಾಕ್ಷನ್ ಗಳಿವೆ ದುಡ್ಡು ಪಾವತಿಸಬೇಕಾಗುತ್ತದೆ. ಎಟಿಎಂ ವಿತ್ ಡ್ರಾವಲ್  ನಿಮ್ಮ ಪಾಕೆಟ್ ಗೆ ಸಾಕಷ್ಟು ದುಬಾರಿಯಾಗುತ್ತಿರಬಹುದು. ಮುಂದಿನ ದಿನಗಳಲ್ಲಿ ಎಟಿಎಂ ಚಾರ್ಜ್ (ATM  Charge) ರದ್ದಾಗಲೂ ಬಹುದು.  ಹೇಗೆ ಗೊತ್ತಾ..?

ಅಖಿಲ ಭಾರತೀಯ ಬ್ಯಾಂಕ್ ಠೇವಣಿದಾರರ ಸಂಘವು (All India Bank Depositors Association) ಭಾರತೀಯ ರಿಸರ್ವ್ ಬ್ಯಾಂಕಿಗೆ (RBI) ಒಂದು ಮನವಿ ಮಾಡಿಕೊಂಡಿದೆ. ಎಟಿಎಂ ಕ್ಯಾಶ್ ವಿತ್ ಡ್ರಾವಲ್ ಮೇಲೆ ಹೇರಲಾಗುವ ಡಿಕ್ಲೈನ್ ಚಾರ್ಜ್ ರದ್ದು ಪಡಿಸುವಂತೆ ಸಂಘ ಮನವಿ ಮಾಡಿಕೊಂಡಿದೆ. 

ಇದನ್ನೂ ಓದಿ Budget 2021: ಕೇಂದ್ರ ‌ಬಜೆಟ್‌ನಲ್ಲಿ 'ಪ್ರತ್ಯೇಕ ಬ್ಯಾಂಕ್' ಘೋಷಣೆ ಸಾಧ್ಯತೆ

ಪ್ರಸ್ತುತ ನಿಯಮಗಳ ಪ್ರಕಾರ, ಒಂದು ಮಿತಿಯ ತನಕ ನೀವು ಎಟಿಎಂ (ATM) ನಿಂದ ಹಣ ಪಡೆಯಬಹುದು.  ಈ ಮಿತಿ ಬೇರೆ ಬೇರೆ ಬ್ಯಾಂಕ್ ಗಳಲ್ಲಿ ಬೇರೆ ಬೇರೆ ಆಗಿರುತ್ತದೆ. ಆದರೆ, ನಿಗದಿತ ಮಿತಿ ದಾಟಿದ ಮೇಲೆ ನಿಮ್ಮ ಹೆಚ್ಚುವರಿ ಟ್ರಾನ್ಸಾಕ್ಸನ್ ಮೇಲೆ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಇದರಿಂದ ನಿಮ್ಮ ಖಾತೆಯಲ್ಲಿ ದುಡ್ಡು ಖೋತಾ ಆಗುತ್ತದೆ. 

ಇಷ್ಟೇ ಅಲ್ಲ..ಒಂದು ವೇಳೆ ನಿಮ್ಮ ಟ್ರಾನ್ಸಾಕ್ಸನ್ ವಿಫಲವಾದರೂ ಅದು ನಿಮ್ಮ ಜೇಬಿಗೆ ಭಾರವಾಗುತ್ತದೆ. ನಿಮ್ಮ ಪ್ರತಿಯೊಂದು ವಿಫಲ ವ್ಯವಹಾರಕ್ಕೆ (Transaction Declined Charge) ನೀವು 25 ರೂಪಾಯಿ ಮತ್ತು ಜಿಎಸ್ ಟಿ (GST) ಪಾವತಿಸಬೇಕು. ಇದು ಒಂದು ರೀತಿಯಲ್ಲಿ ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ.
ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ (Balance)  ಇಲ್ಲದ ಸಂದರ್ಭದಲ್ಲಿಯೂ ಕೆಲವರು ಖಾತೆಯಿಂದ ಹಣ ತೆಗೆಯಲು ಮುಂದಾಗುತ್ತಾರೆ. ಆ ಟ್ರಾನ್ಸಾಕ್ಷನ್ ಪೂರ್ಣಗೊಳ್ಳುವುದಿಲ್ಲ. ಇದನ್ನು ವಿಫಲ ಟ್ರಾನ್ಸಾಕ್ಷನ್ ಎಂದೇ ಹೇಳಲಾಗುತ್ತದೆ.  ಪ್ರತಿಯೊಂದು ವಿಫಲ ವ್ಯವಹಾರಕ್ಕೆ 25 ರೂಪಾಯಿ ಪಾವತಿಸಬೇಕಾಗುತ್ತದೆ. 
ಈ ಟ್ರಾನ್ಸಾಕ್ಸನ್ ಬಗ್ಗೆ ಬ್ಯಾಂಕ್ ಠೇವಣಿದಾರರ ಸಂಘವು ಆಕ್ಷೇಪ ವ್ಯಕ್ತಪಡಿಸಿದೆ. ಈ ವ್ಯವಹಾರ ಶುಲ್ಕಕ್ಕೆ ಯಾವುದೇ ಸಮರ್ಥನೆ ಇರುವುದಿಲ್ಲ.  ಇದೇ ಕಾರಣಕ್ಕೆ ಜನರು ಬ್ಯಾಂಕ್ ನಿಂದ ದೂರವಿರುತ್ತಾರೆ. ಇದು ಬ್ಯಾಂಕಿನ ಆರ್ಥಿಕ ದುಸ್ಥಿತಿಗೂ ಕಾರಣವಾಗುತ್ತದೆ.  ಇದನ್ನು ಕೂಡಲೇ ರದ್ದುಪಡಿಸಬೇಕೆಂದು ಠೇವಣಿದಾರರ ಸಂಘ ಒತ್ತಾಯಿಸಿದೆ

ಇದನ್ನೂ ಓದಿ SBI Alert : ಡಿಜಿಟಲ್ ಮೋಸದಿಂದ ತಪ್ಪಿಸಿಕೊಳ್ಳಬೇಕೇ ? ಈ ಮಾರ್ಗಗಳನ್ನು ಅನುಸರಿಸಿ

ಈ ಸಂಬಂಧ ಆರ್ ಬಿಐ (RBI) ಕೂಡಲೇ ಒಂದು ಸಭೆ ನಡೆಸಲಿದೆ. ಠೇವಣಿದಾರರು ವ್ಯಕ್ತಪಡಿಸಿರುವ ಆಕ್ಷೇಪಗಳ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G 
Apple Link - https://apple.co/3hEw2hy 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News