Bank FD Rates : ಈ 2 ಸರ್ಕಾರಿ ಬ್ಯಾಂಕ್‌ಗಳ FD ಬಡ್ಡಿದರಗಳಲ್ಲಿ ಬದಲಾವಣೆ : ಹೊಸ ದರ ತಿಳಿಯಿರಿ

ಎರಡು ಸಾರ್ವಜನಿಕ ವಲಯದ ಬ್ಯಾಂಕ್‌ಗಳಾದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಮತ್ತು UCO ಬ್ಯಾಂಕ್ FD ಯ ಬಡ್ಡಿದರಗಳನ್ನು ಬದಲಾಯಿಸಿವೆ. ಹೊಸ ದರಗಳು ಫೆಬ್ರವರಿ 10 ರಿಂದ ಜಾರಿಗೆ ಬಂದಿವೆ. ಇದಕ್ಕೂ ಮೊದಲು, ಅನೇಕ ಬ್ಯಾಂಕ್‌ಗಳು ಎಫ್‌ಡಿ ದರಗಳನ್ನು ಬದಲಾಯಿಸಿವೆ.

Last Updated : Feb 14, 2022, 06:06 AM IST
  • CBI FD ಯ ಬಡ್ಡಿದರಗಳಲ್ಲಿ ಬದಲಾವಣೆ
  • UCO ಬ್ಯಾಂಕ್ FD ಬಡ್ಡಿದರಗಳಲ್ಲಿ ಬದಲಾವಣೆ
  • ಹಲವು ಬ್ಯಾಂಕ್‌ಗಳ FD ಬಡ್ಡಿದರಗಳಲ್ಲಿ ಬದಲಾವಣೆ ಮಾಡಲಾಗಿದೆ
Bank FD Rates : ಈ 2 ಸರ್ಕಾರಿ ಬ್ಯಾಂಕ್‌ಗಳ FD ಬಡ್ಡಿದರಗಳಲ್ಲಿ ಬದಲಾವಣೆ : ಹೊಸ ದರ ತಿಳಿಯಿರಿ title=

ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗೆ ಪಾಲಿಸಿ ದರಗಳನ್ನು ಯಥಾಸ್ಥಿತಿಯಲ್ಲಿಡಲು ನಿರ್ಧರಿಸಿದೆ. ನಿರ್ಧಾರದ ನಂತರ, ಎರಡು ಸಾರ್ವಜನಿಕ ವಲಯದ ಬ್ಯಾಂಕ್‌ಗಳು ತಮ್ಮ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಅಂದರೆ FD ಗಳನ್ನು ಪರಿಷ್ಕರಿಸಿವೆ. ವಾಸ್ತವವಾಗಿ, ಎರಡು ಸಾರ್ವಜನಿಕ ವಲಯದ ಬ್ಯಾಂಕ್‌ಗಳಾದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಮತ್ತು UCO ಬ್ಯಾಂಕ್ FD ಯ ಬಡ್ಡಿದರಗಳನ್ನು ಬದಲಾಯಿಸಿವೆ. ಹೊಸ ದರಗಳು ಫೆಬ್ರವರಿ 10 ರಿಂದ ಜಾರಿಗೆ ಬಂದಿವೆ. ಇದಕ್ಕೂ ಮೊದಲು, ಅನೇಕ ಬ್ಯಾಂಕ್‌ಗಳು ಎಫ್‌ಡಿ ದರಗಳನ್ನು ಬದಲಾಯಿಸಿವೆ.

ಸೆಂಟ್ರಲ್ ಬ್ಯಾಂಕ್ ಹೊಸ ಬಡ್ಡಿ ದರಗಳು

ಬಡ್ಡಿದರಗಳ ಬದಲಾವಣೆಯ ನಂತರ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ(Central Bank Of India)ದ ಕನಿಷ್ಠ ಬಡ್ಡಿ ದರವು ಶೇ.2.75 ರಷ್ಟು ಮತ್ತು ಗರಿಷ್ಠ ಬಡ್ಡಿ ದರವು ಶೇ.5.15 ರಷ್ಟು 
7-14 ದಿನಗಳ ಬಡ್ಡಿ ದರವು ಶೇ.2.75 ರಷ್ಟು
ಶೇ.2.90 ರಷ್ಟು ಬಡ್ಡಿ ದರ 15-30 ದಿನಗಳವರೆಗೆ
ಶೇ.2.90 ರಷ್ಟು 31-45 ದಿನಗಳವರೆಗೆ
ಶೇ.3.25 ರಷ್ಟು 46-90 ದಿನಗಳಿಗೆ
ಶೇ.3.80 ರಷ್ಟು 1-179 ದಿನಗಳವರೆಗೆ 

ಇದನ್ನೂ ಓದಿ : EPFO ನಿಂದ ನಿರುದ್ಯೋಗಿಗಳಿಗೆ ಸಿಹಿ ಸುದ್ದಿ! ತಕ್ಷಣ ಈ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಿ, ಭರ್ಜರಿ ಪ್ರಯೋಜನ ಪಡೆಯಿರಿ

UCO ಬ್ಯಾಂಕ್ ಹೊಸ ಬಡ್ಡಿದರಗಳು

UCO ಬ್ಯಾಂಕ್ ತನ್ನ ಬಡ್ಡಿದರಗಳನ್ನು ಸಹ ಬದಲಾಯಿಸಿದೆ. UCO ಬ್ಯಾಂಕ್‌(Central Bank Of India)ನ ಕನಿಷ್ಠ ಬಡ್ಡಿ ದರವು 2.80 ಪ್ರತಿಶತ ಮತ್ತು ಗರಿಷ್ಠ ಬಡ್ಡಿ ದರವು 5.60 ಪ್ರತಿಶತ.
ಶೇ.2.80 ರಷ್ಟು 7-29 ದಿನಗಳ ಬಡ್ಡಿ ದರ  
ಶೇ. 3.05 ರಷ್ಟು 30-45 ದಿನಗಳವರೆಗೆ
ಶೇ. 3.80 ರಷ್ಟು 46-90 ದಿನಗಳಿಗೆ 
ಶೇ.3.95 ರಷ್ಟು 91-180 ದಿನಗಳವರೆಗೆ 
ಶೇ.4.65 ರಷ್ಟು 181-364 ದಿನಗಳಿಗೆ 
ಶೇ.5.35 ರಷ್ಟು 1 ವರ್ಷಕ್ಕೆ 
ಶೇ.5.60 ರಷ್ಟು 1-2 ವರ್ಷಕ್ಕೆ ಶೇ
ಶೇ.5.60 ರಷ್ಟು 2-3 ವರ್ಷಕ್ಕೆ ಶೇ
ಶೇ.5.80 ರಷ್ಟು 3-5 ವರ್ಷಕ್ಕಿಂತ ಕಡಿಮೆ 
ಶೇ.5.60 ರಷ್ಟು 5 ವರ್ಷಗಳಿಗಿಂತ ಹೆಚ್ಚು

ಇದನ್ನೂ ಓದಿ : Biggest Bank Scam: 28 ಬ್ಯಾಂಕ್‌ಗಳಿಗೆ 22,842 ಕೋಟಿ ವಂಚಿಸಿದ ಕಂಪನಿ! ಸಿಬಿಐ ಪ್ರಕರಣ ದಾಖಲು

ಹಲವು ಬ್ಯಾಂಕ್‌ಗಳ FD ಬದಲಾವಣೆ ಮಾಡಿವೆ

ಇತ್ತೀಚೆಗೆ ದೇಶದ ಹಲವು ಪ್ರಮುಖ ಬ್ಯಾಂಕ್‌ಗಳಾದ- ಎಸ್‌ಬಿಐ(SBI), ಎಚ್‌ಡಿಎಫ್‌ಸಿ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್ ಇತ್ಯಾದಿಗಳು ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಬದಲಾಯಿಸಿವೆ ಎಂಬುದು ಗಮನಿಸಬೇಕಾದ ಸಂಗತಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News