Bajaj Pulsar: ಕೇವಲ ರೂ.1000 ನೀಡಿ ಬುಕ್ ಮಾಡಿ Bajaj Pulsar, ಮುಂದಿನ ವಾರವೇ ನಿಮ್ಮ ಮನೆ ತಲುಪಲಿದೆ ಬೈಕ್

Bajaj Pulsar ತನ್ನ ಜನಪ್ರೀಯ ಬ್ರಾಂಡ್ ಪಲ್ಸರ್ ನ ಎರಡು ರೂಪಾಂತರಿಗಳಾದ  Pulsar N250 ಮತ್ತು  Pulsar F250 ಅನ್ನು ಬಿಡುಗಡೆ ಮಾಡಿದೆ. ಕೇವಲ 1000 ರೂಪಾಯಿಗೆ ಈ ಬೈಕ್ ಅನ್ನು ನೀವು ಬುಕ್ ಮಾಡಬಹುದು.

Written by - Nitin Tabib | Last Updated : Nov 6, 2021, 09:15 PM IST
  • ಬಜಾಜ್ 2 ಹೊಸ 250CC ಬೈಕ್‌ಗಳನ್ನು ಬಿಡುಗಡೆ ಮಾಡಿದೆ.
  • ನಿಮ್ಮ ಬಜಾಜ್ ಪಲ್ಸರ್ ಅನ್ನು ರೂ.1000 ನೀಡಿ ಬುಕ್ ಮಾಡಿ.
  • ಮುಂದಿನ ವಾರದಿಂದ ಬೈಕ್ ವಿತರಣೆ ಆರಂಭವಾಗಲಿದೆ.
Bajaj Pulsar: ಕೇವಲ ರೂ.1000 ನೀಡಿ ಬುಕ್ ಮಾಡಿ Bajaj Pulsar, ಮುಂದಿನ ವಾರವೇ ನಿಮ್ಮ ಮನೆ ತಲುಪಲಿದೆ ಬೈಕ್  title=
Bajaj Pulsar (File Photo)

ನವದೆಹಲಿ:  Bajaj Pulsar - ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ Bajaj Auto ತನ್ನ ಜನಪ್ರಿಯ ಮೋಟಾರ್‌ಸೈಕಲ್ ಪಲ್ಸರ್ ನ Pulsar N250 ಮತ್ತು Pulsar F250 ಎರಡು ರೂಪಾಂತರಗಳನ್ನು ಹಬ್ಬದ ಋತುವಿನಲ್ಲಿ ಬಿಡುಗಡೆ ಮಾಡಿದೆ. ಇದೀಗ 125 ಸಿಸಿಯಿಂದ 250 ಸಿಸಿ ವರೆಗಿನ ಬೈಕ್‌ಗಳು ಪಲ್ಸರ್ ಬ್ರಾಂಡ್‌ನ ಅಡಿಯಲ್ಲಿ ಮಾರುಕಟ್ಟೆಗೆ ಬರಲಿವೆ.

ಕೇವಲ ರೂ. 1000 ನೀಡಿ ನಿಮ್ಮ Bajaj Pulsar ಬುಕ್ ಮಾಡಿ
ಹೊಸ ಬಜಾಜ್ ಪಲ್ಸರ್ 250 ನ ಆನ್‌ಲೈನ್ ಬುಕಿಂಗ್ ಪ್ರಾರಂಭವಾಗಲು ಇನ್ನೂ ಸ್ವಲ್ಪ ಸಮಯ ಕಾಯಬೇಕಾಗಲಿದೆ. ಆದರೆ ಅದರ ಬುಕಿಂಗ್ ಕಂಪನಿಯ ಡೀಲರ್‌ಶಿಪ್ ಸ್ಟೋರ್‌ನಲ್ಲಿ ಪ್ರಾರಂಭವಾಗಿದೆ. ಈ ಬೈಕ್ (Bikes) ಅನ್ನು ಬುಕ್ ಮಾಡಲು ಗ್ರಾಹಕರು ಮುಂಗಡವಾಗಿ 1,000 ರೂ.ನಿಂದ 5,000 ರೂ.ವರೆಗಿನ ಮೊತ್ತವನ್ನು ಠೇವಣಿ ಮಾಡಬೇಕಾಗುತ್ತದೆ. ಈ ಹಿಂದೆ ಬಜಾಜ್ ಸಹ ಈ ಬೈಕ್‌ನ ಟೀಸರ್ ಅನ್ನು ಬಿಡುಗಡೆ ಮಾಡಿತ್ತು, ಅದರಲ್ಲಿ ಈ ಬೈಕ್ ನ ಕಿರುನೋಟ ಕಾಣಿಸಿಕೊಂಡಿದೆ. ಇದು ಫೇರಿಂಗ್-ಮೌಂಟೆಡ್ ರಿಯರ್‌ವ್ಯೂ ಮಿರರ್‌ಗಳು, ಸ್ಪ್ಲಿಟ್ ಸೀಟ್‌ಗಳು, ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳೊಂದಿಗೆ ಸೆಮಿ ಫೇರಿಂಗ್ ಅನ್ನು ಹೊಂದಿದೆ. ಕಂಪನಿಯು ಇದೀಗ ಅಧಿಕೃತವಾಗಿ ಬಜಾಜ್ ಪಲ್ಸರ್ 250 - ನೇಕೆಡ್ ಅಥವಾ N250 ಮತ್ತು ಸೆಮಿ-ಫೇರ್ಡ್ 250F ನ ಎರಡು ರೂಪಾಂತರಗಳನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ-Indian Railways New Rules: ಟಿಕೆಟ್ ಕಾಯ್ದಿರಿಸುವಾಗ ಈ ವಿಶೇಷ ಕೋಡ್ ನೆನಪಿನಲ್ಲಿಡಿ, ಇಲ್ಲದಿದ್ದರೆ ಸೀಟು ಸಿಗುವುದಿಲ್ಲ

ಮುಂದಿನ ವಾರದಿಂದ  Pulsar 250 ಡಿಲೆವರಿ ಆರಂಭವಾಗಲಿದೆ
ಬಜಾಜ್ ಆಟೋ ತನ್ನ ಹೊಸ ಪಲ್ಸರ್ 250 ನ ಎರಡೂ ರೂಪಾಂತರಗಳ ವಿತರಣೆಯನ್ನು ನವೆಂಬರ್ 10 ರಿಂದ ಆರಂಭಿಸಲಿದೆ. 20 ವರ್ಷಗಳ ಹಿಂದೆ, ಕಂಪನಿಯು ಈ ದಿನದಂದು ಪಲ್ಸರ್‌ನ ಮೊದಲ ಮಾದರಿಯ ವಿತರಣೆಯನ್ನು ಪ್ರಾರಂಭಿಸಿತ್ತು ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-SBI ಗ್ರಾಹಕರಿಗೆ ಗುಡ್ ನ್ಯೂಸ್! ಉಚಿತವಾಗಿ ಸಿಗಲಿದೆ 2 ಲಕ್ಷ ರೂ., ಕೂಡಲೇ ಈ ಕೆಲಸ ಮಾಡಿ

ನೂತನ ಪಲ್ಸರ್ ಬೆಲೆ ಎಷ್ಟು?
Bajaj Pulsar 250 ನಲ್ಲಿ, ಕಂಪನಿಯು DTS-i 4 ಸ್ಟ್ರೋಕ್ ಆಯಿಲ್ ಕೂಲ್ಡ್ ಎಂಜಿನ್ ಅನ್ನು ನೀಡಿದೆ. ಈ ಬೈಕ್ BS-6 ಕಂಪ್ಲೈಂಟ್ ಆಗಿದೆ. ಈ ಬೈಕ್ ಗರಿಷ್ಠ 24.5 ಪಿಎಸ್ ಪವರ್ ಮತ್ತು 21.5 ಎನ್ ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕ್‌ನಲ್ಲಿ ಕಂಪನಿಯು 5-ಸ್ಪೀಡ್ ಟ್ರಾನ್ಸ್‌ಮಿಷನ್ ಮೋಡ್ ಅನ್ನು ನೀಡಿದೆ ಮತ್ತು ಸೆಮಿ-ಡಿಜಿಟಲ್ ಮೀಟರ್ ಅನ್ನು ನೀಡಿದೆ ಮತ್ತು ಅದರೊಂದಿಗೆ ಟ್ಯಾಕೋಮೀಟರ್ ಸೂಜಿಯನ್ನು ಉಳಿಸಿಕೊಂಡಿದೆ. ಹೊಸ ಬಜಾಜ್ ಪಲ್ಸರ್ 250 ಬೆಲೆಯ ಬಗ್ಗೆ ಹೇಳುವುದಾದರೆ, ಕಂಪನಿಯು ಅದನ್ನು 1.5 ಲಕ್ಷಕ್ಕಿಂತ ಕಡಿಮೆ ಬೆಲೆಯ ವಿಭಾಗದಲ್ಲಿ ಇರಿಸಿದೆ. ಇದರ ಬಜಾಜ್ ಪಲ್ಸರ್ N250 ಮಾಡೆಲ್ ದೆಹಲಿಯಲ್ಲಿ 1,38,000 ಎಕ್ಸ್ ಶೋ ರೂಂ ಮತ್ತು ಬಜಾಜ್ ಪಲ್ಸರ್ F250 ಗೆ 1.40,000 ರೂ. ನಿಗದಿಪಡಿಸಲಾಗಿದೆ. 

ಇದನ್ನೂ ಓದಿ-Drop of Edible Oil : ಪೆಟ್ರೋಲ್-ಡೀಸೆಲ್ ನಂತರ ಅಡುಗೆ ಎಣ್ಣೆ ಬೆಲೆಯಲ್ಲಿ ಭಾರೀ ಇಳಿಕೆ! ಎಷ್ಟು ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News