ಮುಂದಿನ ತಿಂಗಳಿನಿಂದ ಸರ್ಕಾರದ ಈ ಜನಪ್ರಿಯ ಯೋಜನೆ ಸ್ಥಗಿತ.! ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

Atal Pension Yojana:ಮುಂದಿನ ತಿಂಗಳಿನಿಂದ ಅಟಲ್ ಪಿಂಚಣಿ ಯೋಜನೆಯಲ್ಲಿ ಸರ್ಕಾರ ದೊಡ್ಡ ಬದಲಾವಣೆ ತರಲಿದೆ. ಅಕ್ಟೋಬರ್ ತಿಂಗಳಿನಿಂದ ಅನೇಕ ಜನರು ಈ ಯೋಜನೆಯ ಲಾಭವನ್ನು ಪಡೆಯುವುದು ಸಾಧ್ಯವಾಗುವುದಿಲ್ಲ.

Written by - Ranjitha R K | Last Updated : Sep 5, 2022, 03:24 PM IST
  • ಅಟಲ್ ಪಿಂಚಣಿ ಯೋಜನೆಯಲ್ಲಿ ಸರ್ಕಾರ ದೊಡ್ಡ ಬದಲಾವಣೆ
  • ಮುಂದಿನ ತಿಂಗಳಿಂದ ಹೊಸ ನಿಯಮ ಜಾರಿಗೆ
  • ಎಲ್ಲರೂ ಈ ಯೋಜನೆಯ ಲಾಭ ಪಡೆಯುವುದು ಸಾಧ್ಯವಿಲ್ಲ
ಮುಂದಿನ ತಿಂಗಳಿನಿಂದ ಸರ್ಕಾರದ ಈ ಜನಪ್ರಿಯ ಯೋಜನೆ ಸ್ಥಗಿತ.! ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ  title=
Atal Pension Yojana (file photo)

Atal Pension Yojana : ಮುಂದಿನ ತಿಂಗಳಿನಿಂದ ಅಟಲ್ ಪಿಂಚಣಿ ಯೋಜನೆಯಲ್ಲಿ ಸರ್ಕಾರ ದೊಡ್ಡ ಬದಲಾವಣೆ ತರಲಿದೆ. ಅಕ್ಟೋಬರ್ ತಿಂಗಳಿನಿಂದ ಅನೇಕ ಜನರು ಈ ಯೋಜನೆಯ ಲಾಭವನ್ನು ಪಡೆಯುವುದು ಸಾಧ್ಯವಾಗುವುದಿಲ್ಲ. ಅಂದರೆ ಈಗ ದೇಶದ  ಪ್ರತಿಯೊಬ್ಬರೂ ಈ ಯೋಜನೆಯ ಪ್ರಯೋಜನವನ್ನು ಪಡೆಯುವುಡು ಸಾಧ್ಯವಿಲ್ಲ. 

ಅಕ್ಟೋಬರ್ ನಿಂದ ಬದಲಾದ ನಿಯಮ ಜಾರಿಗೆ : 
ಅಟಲ್ ಪಿಂಚಣಿ ಯೋಜನೆಯ ಹೊಸ ನಿಯಮಗಳ ಅಡಿಯಲ್ಲಿ, ಆದಾಯ ತೆರಿಗೆ ಪಾವತಿಸುವವರು ಈ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಈ ಸರ್ಕಾರಿ ಯೋಜನೆಯ ಹೊಸ ನಿಯಮವು ಅಕ್ಟೋಬರ್ 2022 ರಿಂದ ಜಾರಿಗೆ ಬರಲಿದೆ. 

ಇದನ್ನೂ ಓದಿ : Kisan Credit Card: ಮನೆಯಲ್ಲಿಯೇ ಕುಳಿತು ಎಸ್‌ಬಿಐ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಸುಲಭ ಪ್ರಕ್ರಿಯೆ

ತೆರಿಗೆದಾರರು ಸೆಪ್ಟೆಂಬರ್ 30 ರವರೆಗೆ ಪ್ರಯೋಜನಗಳನ್ನು ಪಡೆಯಬಹುದು :
ತೆರಿಗೆದಾರರು, ಸರ್ಕಾರದ ಈ ಯೋಜನೆಯ ಲಾಭವನ್ನು ಸೆಪ್ಟೆಂಬರ್ ತಿಂಗಳವರೆಗೆ ಮಾತ್ರ ಪಡೆಯಬಹುದಾಗಿದೆ. ಮುಂದಿನ ತಿಂಗಳಿನಿಂದ ಇದರ ಲಾಭ ಪಡೆಯಲು ಸಾಧ್ಯವಿಲ್ಲ. ತೆರಿಗೆದಾರರು ಈ ಯೋಜನೆಯ ಲಾಭವನ್ನು ಸೆಪ್ಟೆಂಬರ್ 30 ರವರೆಗೆ ಪಡೆಯಬಹುದು. 

ಈಗಾಗಲೇ ತೆರೆದಿರುವ ಖಾತೆಗಳು ಕಾರ್ಯನಿರ್ವಹಿಸುತ್ತಲೇ ಇರುತ್ತವೆ : 
ಈಗಾಗಲೇ ಖಾತೆಯನ್ನು ತೆರೆದಿರುವವರು ಈ ಯೋಜನೆಯ ಲಾಭವನ್ನು ಪಡೆಯುವುದನ್ನು ಮುಂದುವರಿಸುತ್ತಾರೆ. ಒಂದು ವೇಳೆ ಆದಾಯ ತೆರಿಗೆ ಪಾವತಿದಾರ ಅಕ್ಟೋಬರ್ 1 ರ ನಂತರ ಅಟಲ್ ಪಿಂಚಣಿ ಯೋಜನೆ ಖಾತೆಯನ್ನು ತೆರೆದರೆ  ಆ ಖಾತೆಯನ್ನು ಮುಚ್ಚಲಾಗುತ್ತದೆ.

ಇದನ್ನೂ ಓದಿ : ದೇಶದ ಈ ಪ್ರದೇಶಗಳಲ್ಲಿ SBI- Bank of Baroda ದ 300 ಹೊಸ ಶಾಖೆ ಓಪನ್

ಈ ಯೋಜನೆಯನ್ನು  2015-16 ರ ಆರ್ಥಿಕ ವರ್ಷದಲ್ಲಿ ಪ್ರಾರಂಭಿಸಲಾಯಿತು.  ಈಗಾಲೇ  ಈ ಯೋಜನೆಯ ಪ್ರಯೋಜನವನ್ನು 4 ಕೋಟಿ ಜನರು ಪಡೆದುಕೊಂಡಿದ್ದಾರೆ. ಈ ಯೋಜನೆಯನ್ನು ವಿಶೇಷವಾಗಿ ಯಾವುದೇ ಸರ್ಕಾರಿ ಪಿಂಚಣಿಯ ಲಾಭ ಪಡೆಯಲು ಸಾಧ್ಯವಾಗದ ಜನರಿಗಾಗಿ ಪ್ರಾರಂಭಿಸಲಾಗಿದೆ. ಆರಂಭವಾದ ಕೇವಲ 6 ವರ್ಷಗಳಲ್ಲಿ ಈ ಯೋಜನೆಯು ಸುಮಾರು 4 ಕೋಟಿ ಜನರಿಗೆ ಪ್ರಯೋಜನವನ್ನು ನೀಡಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News