ಈ ಯೋಜನೆಯಲ್ಲಿ ಪತಿ ಮತ್ತು ಪತ್ನಿಗೆ ಪ್ರತಿ ತಿಂಗಳು ಸಿಗಲಿದೆ 10 ಸಾವಿರ ರೂಪಾಯಿ ಪಿಂಚಣಿ..!

ಅಟಲ್ ಪಿಂಚಣಿ ಯೋಜನೆ ಮೋದಿ ಸರ್ಕಾರದ ಜನಪ್ರಿಯ ಯೋಜನೆಯಾಗಿದ್ದು, ಇದರಲ್ಲಿ ನಾಗರಿಕರಿಗೆ ಪ್ರತಿ ತಿಂಗಳು 1000 ರಿಂದ 5000 ರೂ.ಪಿಂಚಣಿ ಸಿಗಲಿದೆ.

Written by - Ranjitha R K | Last Updated : Nov 18, 2021, 06:41 PM IST
  • ನಾವು ಮಾಡುವ ಹೂಡಿಕೆ ವೃದ್ದಾಪ್ಯದಲ್ಲಿ ಸಹಾಯಕ್ಕೆ ಬರುತ್ತದೆ.
  • ನಮ್ಮ ವೃದ್ದಾಪ್ಯ ಜೀವನವನ್ನು ಸರಳವಾಗಿಸುವ ಕೇಂದ್ರ ಸರ್ಕಾರದ ಯೋಜನೆಯಿದೆ.
  • ಯೋಜನೆಯಲ್ಲಿ ಪತಿ ಮತ್ತು ಪತ್ನಿ ಇಬ್ಬರಿಗೂ ಪ್ರತಿ ತಿಂಗಳು 10 ಸಾವಿರ ರೂಪಾಯಿ ಪಿಂಚಣಿ ಸಿಗಲಿದೆ.
ಈ ಯೋಜನೆಯಲ್ಲಿ ಪತಿ ಮತ್ತು ಪತ್ನಿಗೆ ಪ್ರತಿ ತಿಂಗಳು ಸಿಗಲಿದೆ 10 ಸಾವಿರ ರೂಪಾಯಿ ಪಿಂಚಣಿ..!  title=
Atal pension yojana (file photo)

ನವದೆಹಲಿ : ನಮ್ಮ ಇಂದು ಮಾತ್ರವಲ್ಲ, ಭವಿಷ್ಯದ ಬಗ್ಗೆಯೂ ಯೋಚನೆ ಮಾಡಬೇಕಾಗುತ್ತದೆ. ಭವಿಷ್ಯಕ್ಕಾಗಿ ಉತ್ತಮ ಸ್ಥಳದಲ್ಲಿ ಹೂಡಿಕೆ (Investment) ಮಾಡುವುದು ಅಗತ್ಯವಾಗಿರುತ್ತದೆ. ಇಂದು ನಾವು ಮಾಡುವ ಹೂಡಿಕೆ ವೃದ್ದಾಪ್ಯದಲ್ಲಿ ಸಹಾಯಕ್ಕೆ ಬರುತ್ತದೆ. ನಮ್ಮ ವೃದ್ದಾಪ್ಯ ಜೀವನವನ್ನು ಸರಳವಾಗಿಸುವ ಕೇಂದ್ರ ಸರ್ಕಾರದ ಯೋಜನೆಯಿದೆ. ಈ ಯೋಜನೆಯಲ್ಲಿ ಪತಿ ಮತ್ತು ಪತ್ನಿ ಇಬ್ಬರಿಗೂ ಪ್ರತಿ ತಿಂಗಳು 10 ಸಾವಿರ ರೂಪಾಯಿ ಪಿಂಚಣಿ (Pension scheme) ಸಿಗಲಿದೆ.  

ಸರ್ಕಾರ ನೀಡಲಿದೆ ಪಿಂಚಣಿ :   
ಅಟಲ್ ಪಿಂಚಣಿ ಯೋಜನೆ (Atal pension yojana) ಮೋದಿ ಸರ್ಕಾರದ ಜನಪ್ರಿಯ ಯೋಜನೆಯಾಗಿದ್ದು, ಇದರಲ್ಲಿ ನಾಗರಿಕರಿಗೆ ಪ್ರತಿ ತಿಂಗಳು 1000 ರಿಂದ 5000 ರೂ.ಪಿಂಚಣಿ ಸಿಗಲಿದೆ. ಈ ಯೋಜನೆಯಲ್ಲಿ ಪತಿ-ಪತ್ನಿ ಇಬ್ಬರೂ ಅರ್ಜಿ ಸಲ್ಲಿಸಿದರೆ 10,000 ರೂ. ಪಿಂಚಣಿ (Pension) ಸಿಗಲಿದೆ.  ಈ ಯೋಜನೆಯಡಿ ಪತಿ ಮತ್ತು ಪತ್ನಿ ಇಬ್ಬರೂ 5000 ಪಿಂಚಣಿ ಮೊತ್ತಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ತಿಳಿಸುತ್ತದೆ. 

ಇದನ್ನೂ ಓದಿ : 7th Pay Commission : ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳ? ಬಾಕಿ ಉಳಿದಿರುವ DA ಬಾಕಿ ಬಗ್ಗೆ ಬಿಗ್ ನ್ಯೂಸ್!
 
 210 ಹೂಡಿಕೆ ಮಾಡಬೇಕಾಗುತ್ತದೆ :
ಈ ಯೋಜನೆಯಲ್ಲಿ,  ಪ್ರತಿ ತಿಂಗಳು ಪ್ರೀಮಿಯಂ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಅರ್ಜಿದಾರರು 18 ವರ್ಷ ವಯಸ್ಸಿನವರಾಗಿದ್ದರೆ, ಅವರು ಪ್ರತಿ ತಿಂಗಳು 210 ರೂ ಪ್ರೀಮಿಯಂ (Premium payment) ಪಾವತಿಸಬೇಕಾಗುತ್ತದೆ. ಮತ್ತೊಂದೆಡೆ ಇದೇ ಹಣವನ್ನು ಮೂರು ತಿಂಗಳಿಗೊಮ್ಮೆ ಪಾವತಿಸುವುದಾದರೆ, 626 ರೂ., ಆರು ತಿಂಗಳಿಗೆ ಪಾವತಿಸುವುದಾದರೆ  1,239 ರೂ ಹೂಡಿಕೆ ಮಾಡಬೇಕಾಗುತ್ತದೆ. 

60 ವರ್ಷಕ್ಕಿಂತ ಮೊದಲು ಒಬ್ಬ ಸಂಗಾತಿ ಸಾವನ್ನಪ್ಪಿದರೆ ಬದುಕಿ ಉಳಿದ ಸಂಗಾತಿಗೆ ಅಟಲ್ ಪಿಂಚಣಿ ಯೋಜನೆಯ ಹಣವನ್ನು ನೀಡಲಾಗುತ್ತದೆ. ಒಂದು ವೇಳೆ ಇಬ್ಬರೂ ಮೃತಪಟ್ಟರೆ, ಈ ಪಿಂಚಣಿ ಹಣವನ್ನು ನಾಮನಿರ್ದೇಶಿತ ಸದಸ್ಯರಿಗೆ ನೀಡಲಾಗುತ್ತದೆ.

ಇದನ್ನೂ ಓದಿ : ನಿಮ್ಮ PAN Card ಫೋಟೋ ಚೆಂಜ್ ಮಾಡಬಹುದು? ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಅಟಲ್ ಪಿಂಚಣಿ ಯೋಜನೆಯ ವಿಶೇಷ ಲಕ್ಷಣಗಳು :
1.ನೀವು ಇದರಲ್ಲಿ ಮಾಸಿಕ, ತ್ರೈಮಾಸಿಕ ಮತ್ತು ಅರ್ಧವಾರ್ಷಿಕ ಹೂಡಿಕೆ ಮಾಡಬಹುದು.
2.ಇದರಲ್ಲಿ ನೀವು 42 ವರ್ಷ ವಯಸ್ಸಿನವರೆಗೆ ಹೂಡಿಕೆ (investment) ಮಾಡಬೇಕು.
3.42 ವರ್ಷಗಳಲ್ಲಿ ನಿಮ್ಮ ಒಟ್ಟು ಹೂಡಿಕೆ 1.04 ಲಕ್ಷ ರೂ.
4.60 ವರ್ಷಗಳ ನಂತರ ಮಾಸಿಕ 5000 ರೂಪಾಯಿ ಪಿಂಚಣಿ ಪಡೆಯುತ್ತೀರಿ.
5.ಆದಾಯ ತೆರಿಗೆಯ ಸೆಕ್ಷನ್ 80CCD ಅಡಿಯಲ್ಲಿ, ಇದು ತೆರಿಗೆ ವಿನಾಯಿತಿಯ ಪ್ರಯೋಜನವನ್ನು ಪಡೆಯುತ್ತದೆ.
6.ಸದಸ್ಯರ ಹೆಸರಿನಲ್ಲಿ 1 ಖಾತೆಯನ್ನು ಮಾತ್ರ ತೆರೆಯಬಹುದು.
7.ಈ ಯೋಜನೆಯಲ್ಲಿ, ಬ್ಯಾಂಕ್ (Bank) ಮೂಲಕ ಖಾತೆಯನ್ನು ತೆರೆಯಬಹುದು.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News