Government Policy: ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ತನ್ನ ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ಈ ಕುರಿತು ಸರ್ಕಾರ ತನ್ನ ನೌಕರರಿಗೆ ಸಂದೇಶ ರವಾನಿಸಿದೆ. ವಿತ್ತ ಸಚಿವಾಲಯವು ಉದ್ಯೋಗಿಗಳಿಗೆ ಅವರು ಅರ್ಹರಾಗಿರುವ ಪ್ರಯಾಣದ ವರ್ಗದಲ್ಲಿ ಅಗ್ಗದ ದರವನ್ನು ಆಯ್ಕೆ ಮಾಡಲು ಸೂಚಿಸಿದೆ. ಇದಲ್ಲದೆ, ನೌಕರರು ತಮ್ಮ ವಿಮಾನ ಟಿಕೆಟ್‌ಗಳನ್ನು ಪ್ರಯಾಣದ ದಿನಾಂಕಕ್ಕಿಂತ ಕನಿಷ್ಠ ಮೂರು ವಾರಗಳ ಮೊದಲು ಎಲ್‌ಟಿಸಿಗೆ ಟಿಕೆಟ್‌ಗಳನ್ನು ಕಾಯ್ದಿರಿಸಬೇಕು ಎಂದು ಸರ್ಕಾರ ಹೇಳಿದೆ.
ಅನಗತ್ಯ ಟಿಕೆಟ್ ರದ್ದು ಮಾಡುವುದನ್ನು ತಪ್ಪಿಸಿ
ಈ ಕುರಿತು ಖರ್ಚು ಇಲಾಖೆವತಿಯಿಂದ ಕಚೇರಿ ಪತ್ರವನ್ನು ರವಾನಿಸಲಾಗಿದೆ. ಇದರಲ್ಲಿ ನೌಕರರಿಗೆ ಕೆಲವು ವಿಷಯಗಳನ್ನು ಸೂಚಿಸಲಾಗಿದೆ. ಉದ್ಯೋಗಿಗಳು ಪ್ರಯಾಣದ ಪ್ರತಿ ಹಂತಕ್ಕೆ ಕೇವಲ ಒಂದು ಟಿಕೆಟ್ ಅನ್ನು ಮಾತ್ರ ಕಾಯ್ದಿರಿಸಬೇಕು ಮತ್ತು ಪ್ರಯಾಣದ ಅನುಮೋದನೆ ಪ್ರಕ್ರಿಯೆಯು ಪ್ರಗತಿಯಲ್ಲಿರುವಾಗ ಬುಕ್ಕಿಂಗ್ ಮಾಡಬಹುದು ಎಂದು ಪತ್ರದಲ್ಲಿ ತಿಳಿಸಲಾಗಿದೆ. ಇದಲ್ಲದೆ, ಅನಗತ್ಯವಾಗಿ ಟಿಕೆಟ್ ರದ್ದುಗೊಳಿಸುವುದನ್ನು ತಪ್ಪಿಸಬೇಕು ಎಂದು ಈ ಪತ್ರದಲ್ಲಿ ನೌಕರರಿಗೆ ಸೂಚಿಸಲಾಗಿದೆ.
ಇದನ್ನೂ ಓದಿ-PM Awas Yojana: ಪಿಎಂ ಆವಾಸ್ ಯೋಜನೆಯ ಕುರಿತು ಸರ್ಕಾರದ ಮಹತ್ವದ ಘೋಷಣೆ! ಎಲ್ಲರ ಮೇಲೆ ಪ್ರಭಾವ ಬೀರಲಿದೆ
ಸ್ವಯಂ ಘೋಷಿತ ವಿವರಣೆಯನ್ನು ನೀಡಬೇಕು
ಸರ್ಕಾರಿ ನೌಕರರು ಮೂರು ಅಧಿಕೃತ ಟ್ರಾವೆಲ್ ಏಜೆಂಟ್‌ಗಳಿಂದ ಮಾತ್ರ ವಿಮಾನ ಟಿಕೆಟ್‌ಗಳನ್ನು ಖರೀದಿಸಬಹುದು ಎಂದು ಹೇಳಲಾಗಿದೆ. ಇವುಗಳಲ್ಲಿ ಬೋಮರ್ ಲಾರಿ & ಕಂಪನಿ, ಅಶೋಕ್ ಟ್ರಾವೆಲ್ ಮತ್ತು ಟೂರ್ಸ್ ಮತ್ತು IRCTC ಶಾಮೀಲಾಗಿವೆ. ಇದೇ ವೇಳೆ ಹೊಸ ಸರ್ಕಾರಿ ವೆಚ್ಚದಲ್ಲಿ ವಿಮಾನ ಟಿಕೆಟ್‌ಗಳ ಬುಕಿಂಗ್‌ಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಸಹ ನೌಕರರಿಗೆ ನೀಡಲಾಗಿದೆ. ಇವುಗಳ ಪ್ರಕಾರ, ಪ್ರಯಾಣದ 72 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಬುಕ್ಕಿಂಗ್ ಮಾಡಲು, ಉದ್ಯೋಗಿ ಸ್ವಯಂ ಘೋಷಿತ ವಿವರಣೆಯನ್ನು ನೀಡಬೇಕಾಗಲಿದೆ ಎಂದು ಸೂಚಿಸಲಾಗಿದೆ. ಇದರ ಜೊತೆಗೆ ಪ್ರಯಾಣದ 24 ಗಂಟೆಯೊಳಗೆ ಟಿಕೆಟ್ ರದ್ದುಪಡಿಸಿದರೂ ಸಹ ಉದ್ಯೋಗಿ ಸ್ವಯಂ ಘೋಷಿತ ವಿವರಣೆಯನ್ನು ನೀಡಬೇಕಾಗಲಿದೆ.
21 ದಿನಗಳ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಿ
ಸರ್ಕಾರ ಹೊರಡಿಸಿರುವ ಪತ್ರದಲ್ಲಿ ನೌಕರರು ತಮ್ಮ ಪ್ರಯಾಣದ ವರ್ಗದಲ್ಲಿ ಲಭ್ಯವಿರುವ ಅಗ್ಗದ ವಿಮಾನ ಟಿಕೆಟ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಅಲ್ಲದೆ, ಯಾವುದೇ ಒಂದು ಪ್ರಯಾಣಕ್ಕಾಗಿ ಎಲ್ಲಾ ಉದ್ಯೋಗಿಗಳ ಟಿಕೆಟ್‌ಗಳನ್ನು ಅದೇ ಟ್ರಾವೆಲ್ ಏಜೆಂಟ್ ಮೂಲಕ ಕಾಯ್ದಿರಿಸಬೇಕು. ಇನ್ನೊಂದೆಡೆ, ಈ ಬುಕಿಂಗ್ ಏಜೆಂಟ್‌ಗಳಿಗೆ ಯಾವುದೇ ಶುಲ್ಕವನ್ನು ಪಾವತಿಸಬಾರದು ಎಂದು ಹೇಳಲಾಗಿದೆ. ಇದರೊಂದಿಗೆ, ನೌಕರರಿಗೆ ಕನಿಷ್ಠ 21 ದಿನಗಳ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಲು ತಿಳಿಸಲಾಗಿದೆ ಇದರಿಂದ ಬೊಕ್ಕಸಕ್ಕೆ ಕನಿಷ್ಠ ಹೊರೆ ಬೀಳಲಿದೆ ಎಂಬ ನಿರೀಕ್ಷೆಯನ್ನು ಹೊಂದಲಾಗಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.