LIC: ಈಗ ಏಜೆಂಟ್ ಗಳ ಅಗತ್ಯವಿಲ್ಲ, ವಿಮೆಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಒಂದೇ ಕರೆಯಲ್ಲಿ ಲಭ್ಯ

ಈಗ ನೀವು LIC ನೀತಿಗೆ ಸಂಬಂಧಿಸಿದ ಯಾವುದೇ ರೀತಿಯ ಮಾಹಿತಿ ಅಥವಾ ನವೀಕರಣಕ್ಕಾಗಿ LIC ಏಜೆಂಟ್ ಅನ್ನು ಭೇಟಿಯಾಗುವ ಅಗತ್ಯವಿರುವುದಿಲ್ಲ. ಈಗ ನಿಮ್ಮ ಫೋನ್‌ನಲ್ಲಿ ಎಲ್‌ಐಸಿ ಪಾಲಿಸಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಪಡೆಯಬಹುದು.  

Written by - Ranjitha R K | Last Updated : Nov 21, 2021, 01:30 PM IST
  • ಒಂದು ಕರೆಯಲ್ಲಿ ಎಲ್ಲಾ LIC ಸಂಬಂಧಿತ ಅಪ್ಡೇಟ್ ಗಳು ಲಭ್ಯ
  • ಈಗ ಎಲ್ಲದಕ್ಕೂ ಏಜೆಂಟ್ ಬಳಿ ಹೋಗುವ ಅಗತ್ಯವಿಲ್ಲ
  • ವಿಶೇಷ ಸೇವೆಯ ಲಾಭ ಪಡೆಯುವುದು ಹೇಗೆ?
LIC:  ಈಗ ಏಜೆಂಟ್ ಗಳ ಅಗತ್ಯವಿಲ್ಲ, ವಿಮೆಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಒಂದೇ ಕರೆಯಲ್ಲಿ ಲಭ್ಯ title=
ಒಂದು ಕರೆಯಲ್ಲಿ ಎಲ್ಲಾ LIC ಸಂಬಂಧಿತ ಅಪ್ಡೇಟ್ ಗಳು ಲಭ್ಯ (file photo)

ನವದೆಹಲಿ : ಇಲ್ಲಿಯವರೆಗೆ ಭಾರತೀಯ ಜೀವ ವಿಮಾ ನಿಗಮ (LIC) ಪಾಲಿಸಿಯ ಬಗ್ಗೆ ಯಾವುದೇ ಮಾಹಿತಿ ಪಡೆಯಬೇಕಾದರೆ ಏಜೆಂಟ್ ಅನ್ನು ಅವಲಂಬಿಸಬೇಕಾಗಿತ್ತು. ಆದರೆ, ಈಗ ಪಾಲಿಸಿಗೆ ಸಂಬಂಧಿಸಿದ ಮಾಹಿತಿ ಪಡೆಯಲು ಚಿಂತಿಸಬೇಕಾಗಿಲ್ಲ. ಈಗ ಕೇವಲ ಒಂದು ಕರೆಯಲ್ಲಿ ಎಲ್ಲಾ ಮಾಹಿತಿ ಸಿಗಲಿದೆ. 

ಒಂದು ಕರೆಯಲ್ಲಿ ಎಲ್ಲಾ LIC ಸಂಬಂಧಿತ ಅಪ್ಡೇಟ್ ಗಳು :  
LIC ಈಗ ತನ್ನ ಗ್ರಾಹಕರಿಗೆ ಹೊಸ ಸೌಲಭ್ಯವನ್ನು ನೀಡುತ್ತಿದೆ. ಇದರ ಅಡಿಯಲ್ಲಿ, ಪಾಲಿಸಿಗೆ ಸಂಬಂಧಿಸಿದ ಯಾವುದೇ ರೀತಿಯ ಮಾಹಿತಿ ಅಥವಾ ಅಪ್ಡೇಟ್ ಗಳಿಗಾಗಿ LIC ಏಜೆಂಟ್ ಅನ್ನು ಭೇಟಿ ಮಾಡಬೇಕಾಗಿಲ್ಲ. ಈಗ ಎಲ್ಐಸಿ ಪಾಲಿಸಿಗೆ (LIC Policy) ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು, ಯಾವುದೇ ಹೊಸ ಯೋಜನೆ ಅಥವಾ ಹಳೆಯ ಯೋಜನೆಯಲ್ಲಿನ ಬದಲಾವಣೆಯನ್ನ ಒಂದು ಕರೆಯ ಮೂಲಕವೇ ಪಡೆದುಕೊಳ್ಳಬಹುದು. ಇದಕ್ಕಾಗಿ ಒಂದು ಸಣ್ಣ ಪ್ರಕ್ರಿಯೆಯನ್ನು ಅನುಸರಿಸಬೇಕು. 

ಇದನ್ನೂ ಓದಿ : 7th Pay Commission: Good News - ಶೀಘ್ರದಲ್ಲಿಯೇ ಈ ಸರ್ಕಾರಿ ನೌಕರರ ಖಾತೆ ಸೇರಲಿದೆ 4 ತಿಂಗಳ DA ಬಾಕಿ

ಸಂಪೂರ್ಣ ಪ್ರಕ್ರಿಯೆ ಹೀಗಿರಲಿದೆ :  
1. ಇದಕ್ಕಾಗಿ ನೀವು ಮೊದಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ಭಾರತೀಯ ಜೀವ ವಿಮಾ ನಿಗಮದ ಅಧಿಕೃತ ವೆಬ್‌ಸೈಟ್‌ನಲ್ಲಿಅಪ್ಡೇಟ್ ಮಾಡಬೇಕು.
2. ಇದಕ್ಕಾಗಿ ನೀವು ಮೊದಲು LIC www.licindia.in ನ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು .
3. ಇದರ ನಂತರ ನೀವು ಮುಖಪುಟದ ಮೇಲ್ಭಾಗದಲ್ಲಿ ಕಸ್ಟಮರ್ ಸರ್ವಿಸ್ ಆಯ್ಕೆ ಕಾಣಿಸುತ್ತದೆ. 
4. ಈಗ ಅದರ ಮೇಲೆ ಕ್ಲಿಕ್ ಮಾಡಿದರೆ ಸ್ಕ್ರೀನ್ ಮೇಲೆ ಹೆಚ್ಚಿನ ಉಪ ವಿಭಾಗಗಳು ಕಾಣಿಸುತ್ತವೆ. 
5. ಈ ವಿಭಾಗದಲ್ಲಿ ಅಪ್ಡೇಟ್ ಯುವರ್ ಕಾಂಟಾಕ್ಟ್ ಡೀಟೇಲ್ಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
6. ಈಗ ಹೊಸ ಪೇಜ್ ತೆರೆಯುತ್ತದೆ. ಈ ಪುಟದಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
7. ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ, ಡಿಕ್ಲೇರೇಶನ್ ನೀಡಬೇಕಾಗುತ್ತದೆ. ಅದರ ಮೇಲೆ YES ಎಂದು ಕೊಟ್ಟು, ರೈಟ್ ಕ್ಲಿಕ್ ಮೂಲಕ ಸಬ್ಮಿಟ್ ಮಾಡಿ. 

ಇದನ್ನೂ ಓದಿ : Aadhaar-Ration Link: ಕುಳಿತಲ್ಲೇ ಮಾಡಿಬಿಡಬಹುದು ಆಧಾರ್ ಮತ್ತು ರೇಶನ್ ಕಾರ್ಡ್ ಲಿಂಕ್, ಸಿಗಲಿದೆ ಬಹಳಷ್ಟು ಪ್ರಯೋಜನ

ಪಾಲಿಸಿಯ ವಿವರವನ್ನು ನೀಡಬೇಕು :
1. ಈ ಸಂಪೂರ್ಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ನೀವು ಅಸ್ತಿತ್ವದಲ್ಲಿರುವ LIC ಗ್ರಾಹಕರಾಗಿದ್ದರೆ, ನಿಮ್ಮ ಪಾಲಿಸಿ ಸಂಖ್ಯೆಯನ್ನು ನೀಡಬೇಕಾಗುತ್ತದೆ.
2. ಇಲ್ಲಿ ನಿಮ್ಮ ಪಾಲಿಸಿ ಸಂಖ್ಯೆಯನ್ನು (Policy number)  ನಮೂದಿಸಿದ ನಂತರ, ಪಾಲಿಸಿ ಡೀಟೇಲ್ದ್ ಮೇಲೆ ಕ್ಲಿಕ್ ಮಾಡಿ, ಪಾಲಿಸಿ ಸಂಖ್ಯೆಯನ್ನು ವೆರಿಫೈ ಮಾಡಬೇಕಾಗುತ್ತದೆ.
3. ಈ ಪ್ರಕ್ರಿಯೆಯ ನಂತರ ನಿಮ್ಮ ಸಂಪರ್ಕ ವಿವರಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ನವೀಕರಿಸಲಾಗುತ್ತದೆ.
4. ಇದರ ನಂತರ, ಎಲ್ಐಸಿ ಪಾಲಿಸಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ, ಯಾವುದೇ ಹೊಸ ನೀತಿ ಅಥವಾ ಹಳೆಯ ಪಾಲಿಸಿಯಲ್ಲಿನ ಅಪ್ಡೇಟ್ ಬಗ್ಗೆ ನೊಟಿಫಿಕೆಶನ್ ಗಳು ನಿಮ್ಮ ಫೋನ್‌ನಲ್ಲಿ ಬರಲು ಆರಂಭವಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News