ಇಪಿಎಫ್‌ಒ ಚಂದಾದಾರರ ಖಾತೆಗೆ ಬರಲಿದೆ 81,000 ರೂ. .! ನಿಮ್ಮ ಪಿಎಫ್ ಬ್ಯಾಲೆನ್ಸ್ ಹೀಗೆ ತಿಳಿಯಿರಿ

ಸರ್ಕಾರವು 2022 ರ ಹಣಕಾಸು ವರ್ಷದ ಬಡ್ಡಿಯನ್ನು ಇಪಿಎಫ್ ಖಾತೆದಾರರ ಖಾತೆಗೆ ವರ್ಗಾಯಿಸಲಿದೆ. ಈ ಬಾರಿ ಶೇಕಡಾ 8.1 ರ ದರದಲ್ಲಿ ಬಡ್ಡಿ ಲಭ್ಯವಾಗಲಿದೆ. 

Written by - Ranjitha R K | Last Updated : Oct 4, 2022, 03:29 PM IST
  • ಇಪಿಎಫ್‌ಒನ ಚಂದಾದಾರರಿಗೆ ಸಿಹಿ ಸುದ್ದಿ
  • ಶೀಘ್ರದಲ್ಲೇ ಖಾತೆದಾರರ ಖಾತೆಗೆ ಬಡ್ಡಿ ವರ್ಗ
  • ಪಿಎಫ್ ಬ್ಯಾಲೆನ್ಸ್ ತಿಳಿದುಕೊಳ್ಳುವುದು ಹೇಗೆ ?
ಇಪಿಎಫ್‌ಒ ಚಂದಾದಾರರ ಖಾತೆಗೆ ಬರಲಿದೆ 81,000 ರೂ. .! ನಿಮ್ಮ ಪಿಎಫ್  ಬ್ಯಾಲೆನ್ಸ್ ಹೀಗೆ ತಿಳಿಯಿರಿ  title=
Employees Provident Fund (file photo)

ಬೆಂಗಳೂರು : ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ ಇಪಿಎಫ್‌ಒನ  7 ಕೋಟಿ ಚಂದಾದಾರರಿಗೆ ಈ ತಿಂಗಳ ಅಂತ್ಯದ ವೇಳೆಗೆ  ಸಿಹಿ ಸುದ್ದಿ ಸಿಗಲಿದೆ. ಸರ್ಕಾರವು 2022 ರ ಹಣಕಾಸು ವರ್ಷದ ಬಡ್ಡಿಯನ್ನು ಇಪಿಎಫ್ ಖಾತೆದಾರರ ಖಾತೆಗೆ ವರ್ಗಾಯಿಸಲಿದೆ. ಈ ಬಾರಿ ಶೇಕಡಾ 8.1 ರ ದರದಲ್ಲಿ ಬಡ್ಡಿ ಲಭ್ಯವಾಗಲಿದೆ. ಇಲ್ಲಿಯವರೆಗೆ ಬಂದಿರುವ ಮಾಹಿತಿಯ ಪ್ರಕಾರ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು 2022 ರ ಹಣಕಾಸು ವರ್ಷದಲ್ಲಿ ಪಿಎಫ್ ಖಾತೆಯ ಬಡ್ಡಿಯನ್ನು ಲೆಕ್ಕ ಹಾಕಿದ್ದು,  ಶೀಘ್ರದಲ್ಲೇ ಖಾತೆದಾರರ ಖಾತೆಗೆ ವರ್ಗಾಯಿಸಲಾಗುವುದು. ಈ ಬಾರಿ ಸರ್ಕಾರದ ಖಾತೆಗೆ ಜಮೆಯಾಗಿರುವ ಒಟ್ಟು 72 ಸಾವಿರ ಕೋಟಿ ರೂ.ಗಳನ್ನು ಉದ್ಯೋಗಿಗಳ ಖಾತೆಗೆ ಕಳುಹಿಸಲಾಗುವುದು. 

ಹಣವನ್ನು ಯಾವಾಗ ವರ್ಗಾಯಿಸಲಾಗುತ್ತದೆ?:
ಕಳೆದ ವರ್ಷ ಜನರು ಬಡ್ಡಿಗಾಗಿ 6 ​​ರಿಂದ 8 ತಿಂಗಳು ಕಾಯಬೇಕಾಗಿತ್ತು ಎಂಬುದು ಗಮನಿಸಬೇಕಾದ ಸಂಗತಿ. ಆದರೆ, ಕಳೆದ ವರ್ಷ ಕೋವಿಡ್‌ ಹಿನ್ನೆಲೆಯಲ್ಲಿ ಈ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈ ವರ್ಷ ಸರ್ಕಾರ ವಿಳಂಬ ಮಾಡುವುದಿಲ್ಲ ಎಂದು ಹೇಳಲಾಗುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ತಿಂಗಳ ಅಂತ್ಯದೊಳಗೆ ಬಡ್ಡಿ ಹಣವನ್ನು ಖಾತೆಗೆ ವರ್ಗಾಯಿಸಬಹುದು. 

ಇದನ್ನೂ ಓದಿ : Gold Price Today : ಹಬ್ಬದ ದಿನವೇ ದುಬಾರಿಯಾಯಿತು ಚಿನ್ನ, ಬೆಳ್ಳಿ

ಬಡ್ಡಿಯ ಲೆಕ್ಕಾಚಾರ :
ನಿಮ್ಮ ಪಿಎಫ್ ಖಾತೆಯಲ್ಲಿ 10 ಲಕ್ಷ ರೂಪಾಯಿ ಇದ್ದರೆ ನಿಮಗೆ ಬಡ್ಡಿಯಾಗಿ 81,000 ರೂಪಾಯಿ ಸಿಗುತ್ತದೆ.
ನಿಮ್ಮ ಪಿಎಫ್ ಖಾತೆಯಲ್ಲಿ 7 ಲಕ್ಷ ರೂಪಾಯಿ ಇದ್ದರೆ, ನಿಮಗೆ ಬಡ್ಡಿಯಾಗಿ 56,700 ರೂ. ಲಭಿಸುತ್ತದೆ. 
ನಿಮ್ಮ ಪಿಎಫ್ ಖಾತೆಯಲ್ಲಿ 5 ಲಕ್ಷ ರೂಪಾಯಿ ಇದ್ದರೆ ಬಡ್ಡಿಯಾಗಿ 40,500 ರೂಪಾಯಿ ಬರುತ್ತದೆ.
ನಿಮ್ಮ ಖಾತೆಯಲ್ಲಿ ಒಂದು ಲಕ್ಷ ರೂಪಾಯಿ ಇದ್ದರೆ 8,100 ರೂಪಾಯಿ ಬಡ್ಡಿ ಹಣ ಸಿಗುತ್ತದೆ. 

1. ಮಿಸ್ಡ್ ಕಾಲ್‌ನಿಂದ ಬ್ಯಾಲೆನ್ಸ್ ತಿಳಿಯಿರಿ
ನಿಮ್ಮ ಪಿಎಫ್ ಹಣವನ್ನು ಪರಿಶೀಲಿಸಲು, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 011-22901406 ಗೆ ಮಿಸ್ಡ್ ಕಾಲ್ ನೀಡಬೇಕು. ಇದರ ನಂತರ,   ಸಂದೇಶದ ಮೂಲಕ ಪಿಎಫ್‌ನ ವಿವರಗಳನ್ನು ಪಡೆಯುವುದು ಸಾಧ್ಯವಾಗುತ್ತದೆ. ಆದರೆ ನೆನಪಿರಲಿ ನಿಮ್ಮ ಯುಎಎನ್, ಪ್ಯಾನ್ ಮತ್ತು ಆಧಾರ್ ಲಿಂಕ್ ಆಗಿದ್ದರೆ ಮಾತ್ರ ಈ ಸಂದೇಶ ಸ್ವೀಕರಿಸುವುದು ಸಾಧ್ಯವಾಗುತ್ತದೆ. 

2. ಬ್ಯಾಲೆನ್ಸ್ ಅನ್ನು ಆನ್‌ಲೈನ್  ಮೂಲಕ ಚೆಕ್ ಮಾಡಿಕೊಳ್ಳಬಹುದು : 
1. ಆನ್‌ಲೈನ್ ಬ್ಯಾಲೆನ್ಸ್ ಚೆಕ್ ಮಾಡಲು, EPFO ​​ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಿ, epfindia.gov.in ನಲ್ಲಿ ಇ-ಪಾಸ್‌ಬುಕ್ ಕ್ಲಿಕ್ ಮಾಡಿ.
2. ಈಗ ನಿಮ್ಮ ಇ-ಪಾಸ್‌ಬುಕ್ ಅನ್ನು ಕ್ಲಿಕ್ ಮಾಡಿದಾಗ, passbook.epfindia.gov.in ಹೊಸ ಪುಟ ತೆರೆಯುತ್ತದೆ.
3. ಈಗ ಇಲ್ಲಿ ಹೆಸರು (UAN ಸಂಖ್ಯೆ), ಪಾಸ್‌ವರ್ಡ್ ಮತ್ತು ಕ್ಯಾಪ್ಚಾ
ಭರ್ತಿ ಮಾಡಿ. 
4. ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ, ಹೊಸ ಪುಟ ತೆರೆದುಕೊಳ್ಳುತ್ತದೆ. ಇಲ್ಲಿ  ಮೆಂಬರ್ ID ಅನ್ನು ಆಯ್ಕೆ ಮಾಡಬೇಕಾಗುತ್ತದೆ.
5. ಇಷ್ಟಾದ ಮೇಲೆ ಇ-ಪಾಸ್‌ಬುಕ್‌ನಲ್ಲಿ ಇಪಿಎಫ್ ಬ್ಯಾಲೆನ್ಸ್ ಅನ್ನು ಪಡೆಯಬಹುದು. 

ಇದನ್ನೂ ಓದಿ : Stock Market Closing: Sensex-Nifty ಯಲ್ಲಿ ಭಾರಿ ಕುಸಿತ, ಹೇಗಿತ್ತು ದಿನದ ವಹಿವಾಟು ತಿಳಿಯಲು ಸುದ್ದಿ ಓದಿ

3. ಬ್ಯಾಲೆನ್ಸ್ ಅನ್ನು UMANG ಅಪ್ಲಿಕೇಶನ್‌ನಲ್ಲಿ ಸಹ ಪರಿಶೀಲಿಸಬಹುದು:
1. ಇದಕ್ಕಾಗಿ, ನೀವು ನಿಮ್ಮ UMANG ಅಪ್ಲಿಕೇಶನ್ ಗೆ ಹೋಗಿ EPFO ​​ಮೇಲೆ ಕ್ಲಿಕ್ ಮಾಡಿ.
2. ಈಗ ಇನ್ನೊಂದು ಪುಟದಲ್ಲಿ, employee-centric services ಮೇಲೆ ಕ್ಲಿಕ್ ಮಾಡಿ.
3. ಇಲ್ಲಿ  ವ್ಯೂ ಪಾಸ್ ಬುಕ್ ಮೇಲೆ ಕ್ಲಿಕ್ ಮಾಡಿ. ಇದರೊಂದಿಗೆ,  ನಿಮ್ಮ UAN ಸಂಖ್ಯೆ ಮತ್ತು ಪಾಸ್‌ವರ್ಡ್ (OTP) ಭರ್ತಿ ಮಾಡಿ.
4. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದಿರುವ OTP ಯನ್ನು ನಮೂದಿಸಬೇಕಾಗುತ್ತದೆ.   ಒಟಿಪಿ ನಮೂದಿಸಿದ ಬಳಿಕ ಪಿಎಫ್ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು.

4. SMS ಮೂಲಕ ಬ್ಯಾಲೆನ್ಸ್ ಪರಿಶೀಲಿಸಿ :
ನಿಮ್ಮ UAN ಸಂಖ್ಯೆಯನ್ನು EPFO ​​ನಲ್ಲಿ ನೋಂದಾಯಿಸಿದ್ದರೆ, ಸಂದೇಶದ ಮೂಲಕ PF ಬ್ಯಾಲೆನ್ಸ್ ಕುರಿತು ಮಾಹಿತಿಯನ್ನು ಪಡೆಯಬಹುದು. ಇದಕ್ಕಾಗಿ ನೀವು EPFOHO ಅನ್ನು 7738299899 ಗೆ ಕಳುಹಿಸಬೇಕು. ನಂತರ ಸಂದೇಶದ ಮೂಲಕ ಪಿಎಫ್ ಮಾಹಿತಿ ಸಿಗುತ್ತಿರುತ್ತದೆ. PF ಬ್ಯಾಲೆನ್ಸ್ ಅನ್ನುಇಂಗ್ಲಿಷ್, ಪಂಜಾಬಿ, ಮರಾಠಿ, ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಬೆಂಗಾಲಿ ಭಾಷೆಗಳಲ್ಲಿ ಪಡೆದುಕೊಳ್ಳಬಹುದು. PF ಬ್ಯಾಲೆನ್ಸ್‌ ತಿಳಿದುಕೊಳ್ಳಬೇಕಾದರೆ ನಿಮ್ಮ UAN, ಬ್ಯಾಂಕ್ ಖಾತೆ, PAN ಮತ್ತು ಆಧಾರ್ ಅನ್ನು ಲಿಂಕ್ ಮಾಡಿರಬೇಕಾಗುತ್ತದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News