7th Pay Commission : ಕೇಂದ್ರ ನೌಕರರಿಗೆ ಹೋಳಿ ಗಿಫ್ಟ್ : ಸಂಬಳ ಹೆಚ್ಚಳ ಸಾಧ್ಯತೆ - ಲೆಕ್ಕಾಚಾರ ಪರಿಶೀಲಿಸಿ

ಕೇಂದ್ರ ಸರ್ಕಾರಿ ನೌಕರರು ಸ್ವಲ್ಪ ಹೆಚ್ಚುವರಿ ವೇತನವನ್ನು ಪಡೆಯಬಹುದು. ಮಾರ್ಚ್ ತಿಂಗಳ ಸಂಬಳದ ಜೊತೆಗೆ ಕಳೆದ ಎರಡು ತಿಂಗಳಿನಿಂದ ಹೆಚ್ಚಿದ ಡಿಎ ಹೆಚ್ಚಳ ಮತ್ತು ಬಾಕಿ ಹಣವನ್ನು ಸರ್ಕಾರ ವರ್ಗಾಯಿಸಬಹುದು ಎಂದು ಹೇಳಲಾಗುತ್ತಿದೆ.

Written by - Channabasava A Kashinakunti | Last Updated : Mar 4, 2022, 05:29 PM IST
  • ಹೋಳಿ ಹಬ್ಬಕ್ಕೂ ಮುನ್ನ ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ
  • ಕೇಂದ್ರ ಸರ್ಕಾರಿ ನೌಕರರು ಸ್ವಲ್ಪ ಹೆಚ್ಚುವರಿ ವೇತನ
  • ಕೇಂದ್ರ ಸರ್ಕಾರಿ ನೌಕರರ ಒಟ್ಟು ಡಿಎ 34% ಆಗಿರುತ್ತದೆ
7th Pay Commission : ಕೇಂದ್ರ ನೌಕರರಿಗೆ ಹೋಳಿ ಗಿಫ್ಟ್ : ಸಂಬಳ ಹೆಚ್ಚಳ ಸಾಧ್ಯತೆ - ಲೆಕ್ಕಾಚಾರ ಪರಿಶೀಲಿಸಿ title=

ಬೆಂಗಳೂರು : ಹೋಳಿ ಹಬ್ಬಕ್ಕೂ ಮುನ್ನ ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ ಸಿಗಬಹುದು. ಮಾಧ್ಯಮ ವರದಿಗಳ ಪ್ರಕಾರ, 7 ನೇ ವೇತನ ಆಯೋಗದ ಅಡಿಯಲ್ಲಿ, ಕೇಂದ್ರ ಸರ್ಕಾರಿ ನೌಕರರು ಸ್ವಲ್ಪ ಹೆಚ್ಚುವರಿ ವೇತನವನ್ನು ಪಡೆಯಬಹುದು. ಮಾರ್ಚ್ ತಿಂಗಳ ಸಂಬಳದ ಜೊತೆಗೆ ಕಳೆದ ಎರಡು ತಿಂಗಳಿನಿಂದ ಹೆಚ್ಚಿದ ಡಿಎ ಹೆಚ್ಚಳ ಮತ್ತು ಬಾಕಿ ಹಣವನ್ನು ಸರ್ಕಾರ ವರ್ಗಾಯಿಸಬಹುದು ಎಂದು ಹೇಳಲಾಗುತ್ತಿದೆ.

ಶೇ.3 ರಷ್ಟು ಡಿಎ ಹೆಚ್ಚಳ ಎಂದರೆ ಕೇಂದ್ರ ಸರ್ಕಾರಿ ನೌಕರರ(Central Government Employees) ಒಟ್ಟು  ಡಿಎ 34% ಆಗಿರುತ್ತದೆ. ಇದರರ್ಥ ರೂ 18,000 ಮೂಲ ವೇತನ ಹೊಂದಿರುವ ಕೇಂದ್ರ ಸರ್ಕಾರಿ ಉದ್ಯೋಗಿ ವಾರ್ಷಿಕ 73,440 ರೂ. ತುಟ್ಟಿ ಭತ್ಯೆಯನ್ನು ಪಡೆಯುತ್ತಾರೆ. ಕೆಳಗಿನ ಲೆಕ್ಕಾಚಾರವನ್ನು ನೋಡಿ:

ಇದನ್ನೂ ಓದಿ : Karnataka Budget 2022: ಗುಣಮಟ್ಟದ ಶಿಕ್ಷಣಕ್ಕೆ ಬೊಮ್ಮಾಯಿ ಬಜೆಟ್ ಕೊಡುಗೆ ಏನು?

ಕನಿಷ್ಠ ಮೂಲ ವೇತನದ ಲೆಕ್ಕಾಚಾರ

- ಉದ್ಯೋಗಿಯ ಮೂಲ ವೇತನ: 18,000 ರೂ.
- ಹೊಸ DA (34%) 6120ರೂ./ತಿಂಗಳು
- ಡಿಎ ಇಲ್ಲಿಯವರೆಗೆ (31%) 5580ರೂ./ತಿಂಗಳು
- ಎಷ್ಟು ತುಟ್ಟಿ ಭತ್ಯೆ ಹೆಚ್ಚಿದೆ 6120- 5580 = 540ರೂ./ತಿಂಗಳು
- ವಾರ್ಷಿಕ ವೇತನದಲ್ಲಿ ಹೆಚ್ಚಳ 540X12 = 6,480 ರೂ.

ಗರಿಷ್ಠ ಮೂಲ ವೇತನದ ಲೆಕ್ಕಾಚಾರ

-ಉದ್ಯೋಗಿಯ ಮೂಲ ವೇತನ: 56900 ರೂ.
- ಹೊಸ DA (34%) 19346 ರೂ./ ತಿಂಗಳು
- ಡಿಎ ಇಲ್ಲಿಯವರೆಗೆ (31%) ರೂ 17639 / ತಿಂಗಳು
- ಎಷ್ಟು ತುಟ್ಟಿ ಭತ್ಯೆ ಹೆಚ್ಚಿದೆ 19346-17639 = 1,707 ರೂ./ತಿಂಗಳು
- ವಾರ್ಷಿಕ ವೇತನದಲ್ಲಿ ಹೆಚ್ಚಳ 1,707 X12 = 20,484 ರೂ.

ಇದನ್ನೂ ಓದಿ : Karnataka Budget 2022: ಸ್ವಸಹಾಯ ಸಂಘಗಳು ಹಾಗೂ ಮಹಿಳೆಯರ ಉದ್ಯೋಗಕ್ಕೆ ಬಜೆಟ್ ಕೊಡುಗೆ ಏನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News