ಶೇ.50 ಅಲ್ಲ... ಶೇ.51ಕ್ಕೆ ತಲುಪಲಿದೆ ಸರ್ಕಾರಿ ನೌಕರರ ತುಟ್ಟಿಭತ್ಯೆ! ಜನವರಿ 2024ರಲ್ಲಿ ಸಿಗಲಿದೆ ಬಹುದೊಡ್ಡ ಉಡುಗೊರೆ!

7th Pay Commission: ಜುಲೈ 1, 2023 ರಿಂದ, ಕೇಂದ್ರ ಸರ್ಕಾರಿ ನೌಕರರ ಶೇಕಡಾ 46 ಕ್ಕೆ ಪರಿಷ್ಕರಿಸಲಾಗಿದೆ. ಇದರ ನಂತರ, ತುಟ್ಟಿಭತ್ಯೆಯನ್ನು ಜನವರಿ 2024 ರಲ್ಲಿ ಮತ್ತೊಮ್ಮೆ ಪರಿಷ್ಕರಿಸಲಾಗುವುದು. ಈ ಪರಿಷ್ಕರಣೆ ಇಡುವರೆಗಿನ ಬಹುದೊಡ್ಡ  ಪರಿಷ್ಕರಣೆಯಾಗಿರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. (Business News In Kannada)  

Written by - Nitin Tabib | Last Updated : Oct 23, 2023, 05:25 PM IST
  • 7 ನೇ ವೇತನ ಆಯೋಗದ ಅಡಿಯಲ್ಲಿ, ಜುಲೈನಿಂದ ಡಿಸೆಂಬರ್ 2023 ರವರೆಗಿನ AICPI ಅಂಕಿಯಂಶಗಳು ಕೇಂದ್ರ ಉದ್ಯೋಗಿಗಳಿಗೆ ತುಟ್ಟಿ ಭತ್ಯೆಯನ್ನು ನಿರ್ಧರಿಸುತ್ತವೆ.
  • ತುಟ್ಟಿಭತ್ಯೆ ಸುಮಾರು 48 ಪ್ರತಿಶತ ತಲುಪಿದೆ. ಇನ್ನೂ ನಾಲ್ಕು ತಿಂಗಳ ಸಂಖ್ಯೆ ಪ್ರಕಟವಾಗಬೇಕಿದೆ.
  • 3ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಶೇ.50 ಅಲ್ಲ... ಶೇ.51ಕ್ಕೆ ತಲುಪಲಿದೆ ಸರ್ಕಾರಿ ನೌಕರರ ತುಟ್ಟಿಭತ್ಯೆ! ಜನವರಿ 2024ರಲ್ಲಿ ಸಿಗಲಿದೆ ಬಹುದೊಡ್ಡ ಉಡುಗೊರೆ! title=

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಇತ್ತೀಚೆಗಷ್ಟೇ ಹಬ್ಬದ ಉಡುಗೊರೆ ಲಭಿಸಿದೆ. ಬೋನಸ್, ತುಟ್ಟಿಭತ್ಯೆ ಹೆಚ್ಚಳ, 3 ತಿಂಗಳ ಬಾಕಿ ಹಣ, ಇದೆಲ್ಲವೂ ದೀಪಾವಳಿಗೆ ಮುನ್ನವೇ ದೊರೆತ ಕಾರಣ ನೌಕರರು ಸಂತಸಗೊಂಡಿದ್ದಾರೆ. ಆದರೆ, ಮುಂಬರುವ ಹೊಸ ವರ್ಷ ಅವರಿಗೆ ಇನ್ನೂ ಉತ್ತಮವಾದ ಉಡುಗೊರೆಯನ್ನು ತರಲಿದೆ. ವಿಶೇಷವಾಗಿ ತುಟ್ಟಿಭತ್ಯೆಯ ವಿಷಯದಲ್ಲಿ, ಅತಿ ದೊಡ್ಡ ಒಳ್ಳೆಯ ಸುದ್ದಿ ನೌಕರರಿಗೆ ಕಾದಿದೆ ಎಂದರೆ ತಪ್ಪಾಗಲಾರದು. ಜುಲೈ 1, 2023 ರಿಂದ, ತುಟ್ಟಿಭತ್ಯೆಯನ್ನು ಶೇಕಡಾ 46 ಕ್ಕೆ ಪರಿಷ್ಕರಿಸಲಾಗಿದೆ. ಇದರ ನಂತರ, ತುಟ್ಟಿಭತ್ಯೆಯನ್ನು ಜನವರಿ 2024 ರಲ್ಲಿ ಮತ್ತೊಮ್ಮೆ ಪರಿಷ್ಕರಿಸಲಾಗುವುದು. ಈ ಪರಿಷ್ಕರಣೆ ಇಡುವರೆಗಿನ ಬಹುದೊಡ್ಡ  ಪರಿಷ್ಕರಣೆಯಾಗಿರುವ ಸಾಧ್ಯತೆ ಇದೆ ಎಂಬುದು ತಜ್ಞರ ಅಭಿಮತವಾಗಿದೆ. (Business News In Kannada)

ತುಟ್ಟಿಭತ್ಯೆ ಶೇಕಡಾ 5 ರಷ್ಟು ಹೆಚ್ಚಾಗಬಹುದೇ?
2024 ರ ವರ್ಷವು ಕೇಂದ್ರ ಸರ್ಕಾರಿ ನೌಕರರಿಗೆ ಹಲವು ರೀತಿಯಲ್ಲಿ ಮಹತ್ವದ್ದಾಗಿದೆ. ಹೊಸ ವೇತನ ಆಯೋಗದ ಬಗ್ಗೆ ಕೆಲವು ಕಾಂಕ್ರೀಟ್ ಚರ್ಚೆಗಳು ನಡೆಯುವ ಸಾಧ್ಯತೆಗಳು ಇವೆ. ಅಲ್ಲದೆ, ತುಟ್ಟಿಭತ್ಯೆ (ಡಿಎ) 50 ಪ್ರತಿಶತ ದಾಟಬಹುದು. ಇದೇ ವೇಳೆ, ನಾವು ತುಟ್ಟಿಭತ್ಯೆ ಹೆಚ್ಚಳದ ಪ್ರವೃತ್ತಿಯನ್ನು ಗಮನಿಸಿದರೆ, ಕಳೆದ 4 ಬಾರಿ ಕೇಂದ್ರ ನೌಕರರ ತುಟ್ಟಿಭತ್ಯೆ (ಡಿಎ) 4 ರಷ್ಟು ಹೆಚ್ಚಾಗಿದೆ. ಆದರೆ, ಹೊಸ ವರ್ಷದಲ್ಲಿ ಅವರಿಗೆ ಮತ್ತೊಂದು ದೊಡ್ಡ ಉಡುಗೊರೆ ಸಿಗುವ ಸಾಧ್ಯತೆ ಇದೇ. ತುಟ್ಟಿಭತ್ಯೆಯಲ್ಲಿ ಶೇ.5 ರಷ್ಟು ಏರಿಕೆ ಖಚಿತ ಎನ್ನಲಾಗುತ್ತಿದೆ. 

AICPI ಸೂಚ್ಯಂಕ DA ಸ್ಕೋರ್ ಅನ್ನು ನಿರ್ಧರಿಸುತ್ತದೆ
ನಿಜವಾಗಿಯೂ ಶೇ.5 ರಷ್ಟು ತುಟ್ಟಿಭತ್ಯೆ ಹೆಚ್ಚಳವಾಗಲಿದೆಯೇ? ಎಂಬ ಪ್ರಶ್ನೆ ನಿಮ್ಮ ಮನದಲ್ಲಿಯೂ ಮೂಡಿರಬಹುದು. ಹಾಗಾದರೆ ಕೇಳಿ, ಪ್ರಸ್ತುತ ಪ್ರವೃತ್ತಿಯ ಪ್ರಕಾರ, ತುಟ್ಟಿಭತ್ಯೆ 51 ಪ್ರತಿಶತವನ್ನು ತಲುಪಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇದು ಸಂಭವಿಸಿದಲ್ಲಿ, ಶೇಕಡಾ 5 ರಷ್ಟು ದೊಡ್ಡ ಜಿಗಿತ ಸಂಭವಿಸಲಿದೆ. ತುಟ್ಟಿಭತ್ಯೆಯನ್ನು AICPI ಸೂಚ್ಯಂಕದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಸೂಚ್ಯಂಕದಲ್ಲಿ ವಿವಿಧ ವಲಯಗಳಿಂದ ಸಂಗ್ರಹಿಸಿದ ಹಣದುಬ್ಬರ ದತ್ತಾಂಶವು ಹಣದುಬ್ಬರಕ್ಕೆ ಹೋಲಿಸಿದರೆ ನೌಕರರ ಭತ್ಯೆ ಎಷ್ಟು ಹೆಚ್ಚಾಗಬೇಕು ಎಂಬುದನ್ನು ತೋರಿಸುತ್ತದೆ.

ಪ್ರಸ್ತುತ ಪರಿಸ್ಥಿತಿ ಹೇಗಿದೆ?
ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಜುಲೈ ಮತ್ತು ಆಗಸ್ಟ್ ತಿಂಗಳ ಎಐಸಿಪಿಐ ಸೂಚ್ಯಂಕದ ಅಂಕಿಅಂಶಗಳು ಬಿಡುಗಡೆಯಾಗಿವೆ. ಶೀಘ್ರದಲ್ಲೇ ಸೆಪ್ಟೆಂಬರ್‌ನ ಅಂಕಿಅಂಶಗಳು ಸಹ ಬಹಿರಂಗಗೊಳ್ಳಲಿವೆ. ಪ್ರಸ್ತುತ ಸೂಚ್ಯಂಕವು 139.2 ಪಾಯಿಂಟ್‌ಗಳಲ್ಲಿದೆ, ಈ ಕಾರಣದಿಂದಾಗಿ ತುಟ್ಟಿಭತ್ಯೆ 47.98 ಶೇಕಡಾ ತಲುಪಿದೆ. ಸೆಪ್ಟೆಂಬರ್‌ನಲ್ಲಿ ಈ ಅಂಕಿ ಅಂಶವು ಶೇಕಡಾ 48.50 ದಾಟಬಹುದು ಎಂದು ಅಂದಾಜಿಸಲಾಗಿದೆ. ಇದರ ನಂತರ, ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳ ದತ್ತಾಂಶಗಳು ಜನವರಿ 2024 ರಲ್ಲಿ ಎಷ್ಟು ಡಿಎ ಹೆಚ್ಚಾಗುತ್ತದೆ ಎಂಬುದನ್ನು ನಿರ್ಧರಿಸುತ್ತವೇ. ಆದಾಗ್ಯೂ, ಇದಕ್ಕಾಗಿ ನಾವು ಡಿಸೆಂಬರ್ 2023 AICPI ಸೂಚ್ಯಂಕ ಅಂಕಿಯಂಶಗಳಿಗಾಗಿ ಕಾಯಬೇಕಾಗಿದೆ.

ಇದನ್ನೂ ಓದಿ-ಸರ್ಕಾರಿ ನೌಕರರಿಗೆ ಸಿಗಲಿದೆ 10288+10288+10288=30864 ಡಿಎ ಬಾಕಿ, ಇಲ್ಲಿದೆ ಲೆಕ್ಕಾಚಾರ!

ತುಟ್ಟಿಭತ್ಯೆಯಲ್ಲಿ ಭಾರಿ ಏರಿಕೆಯಾಗಲಿದೆ
7 ನೇ ವೇತನ ಆಯೋಗದ ಅಡಿಯಲ್ಲಿ, ಜುಲೈನಿಂದ ಡಿಸೆಂಬರ್ 2023 ರವರೆಗಿನ AICPI ಅಂಕಿಯಂಶಗಳು ಕೇಂದ್ರ ಉದ್ಯೋಗಿಗಳಿಗೆ ತುಟ್ಟಿ ಭತ್ಯೆಯನ್ನು ನಿರ್ಧರಿಸುತ್ತವೆ. ತುಟ್ಟಿಭತ್ಯೆ ಸುಮಾರು 48 ಪ್ರತಿಶತ ತಲುಪಿದೆ. ಇನ್ನೂ ನಾಲ್ಕು ತಿಂಗಳ ಸಂಖ್ಯೆ ಪ್ರಕಟವಾಗಬೇಕಿದೆ. 3ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 2024 ರ ಜನವರಿಯಲ್ಲಿ ತುಟ್ಟಿ ಭತ್ಯೆಯಲ್ಲಿ ಶೇಕಡಾ 5 ರಷ್ಟು ಹೆಚ್ಚಳ ಕಂಡುಬರಬಹುದು. ಡಿಯರ್ನೆಸ್ ಅಲೋವೆನ್ಸ್ ಕ್ಯಾಲ್ಕುಲೇಟರ್ ಉಳಿದ ತಿಂಗಳುಗಳಲ್ಲಿ 1 ಪಾಯಿಂಟ್ ಹೆಚ್ಚಳವನ್ನು ತೋರಿಸುತ್ತಿದೆ, ಆದ್ದರಿಂದ ಡಿಯರ್ನೆಸ್ ಭತ್ಯೆಯಲ್ಲಿ ಶೇಕಡಾ 5 ರಷ್ಟು ಜಿಗಿತವನ್ನು ನೌಕರರು ಕಾಣಬಹುದು.

ಇದನ್ನೂ ಓದಿ-ತುಟ್ಟಿಭತ್ಯೆಯಲ್ಲಿ ಬಿಗ್ ಟ್ವಿಸ್ಟ್! ಸರ್ಕಾರಿ ನೌಕರರಿಗೆ ಸಿಗಲಿದೆ ಇದುವರೆಗಿನ ಅತಿದೊಡ್ಡ ಗಿಫ್ಟ್!

ಕೆಳಗೆ ಕೊಟ್ಟಿರುವ ಕೋಷ್ಟಕವನ್ನು ಗಮನಿಸಿದರೆ ನೀವು ಅದರ ಒಂದು ಚಿತ್ರಣವನ್ನು ಕಾಣಬಹುದು.

ತಿಂಗಳು/ವರ್ಷ           CPI(IW) BY2016=100       DA% ಮಾಸಿಕ ಹೆಚ್ಚಳ

ಜನವರಿ 2023          132.8                                 43.09

ಫೆಬ್ರವರಿ 2023         132.7                                 43.80

ಮಾರ್ಚ್ 2023         133.3                                 44.47

ಏಪ್ರಿಲ್ 2023           134.2                                45.07

ಮೇ 2023               134.7                                45.59

ಜೂನ್ 2023            136.4                                46.25

ಜುಲೈ 2023             139.7                                47.15

ಆಗಸ್ಟ್ 2023            139.2                                47.98

ಸೆಪ್ಟೆಂಬರ್ 2023                                                48.76

ಅಕ್ಟೋಬರ್ 2023                                               49.45

ನವೆಂಬರ್ 2023                                                50.21

ಡಿಸೆಂಬರ್ 2023                                                 50.93

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News