ಇನ್ನು ಪೆಟ್ರೋಲ್ ಪಂಪ್ ನಲ್ಲಿ ಪೆಟ್ರೋಲ್ ಡಿಸೇಲ್ ಜೊತೆಗೆ ಈ ವಸ್ತು ಕೂಡಾ ಲಭ್ಯ ! ಮಕ್ಕಳ ಜೊತೆ ಹೋಗುವಾಗ ಜೋಪಾನ

Indian Oil Corporation Limited: ಚಂಡೀಗಢ, ಮೊಹಾಲಿ ಮತ್ತು ಪಂಚಕುಲದಲ್ಲಿ ಮೊದಲ 5 ಅರ್ಬನ್ ಟಾಟ್ಸ್ ಸ್ಟೋರ್‌ಗಳನ್ನು ಪ್ರಾರಂಭಿಸಲಾಗಿದೆ. ಇನ್ನು ಈ ವ್ಯವಸ್ಥೆಯನ್ನು  ದೇಶಾದ್ಯಂತ ವಿಸ್ತರಿಸಲಾಗುವುದು. 

Written by - Ranjitha R K | Last Updated : Apr 14, 2023, 10:00 AM IST
  • ಪೆಟ್ರೋಲ್ ಪಂಪ್‌ ನಲ್ಲಿ ತೈಲದ ಜೊತೆಗೆ ಟೈರ್ ಏರ್ ಮತ್ತು ಟಾಯ್ಲೆಟ್ ಸೌಲಭ್ಯ ಸಿಗುತ್ತದೆ
  • ಆದರೆ ಮುಂದಿನ ದಿನಗಳಲ್ಲಿ ಈ ಸೌಲಭ್ಯಗಳ ಪಟ್ಟಿ ದೊಡ್ದದಾಗಲಿದೆ.
  • ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಈ ಮಾಹಿತಿ
ಇನ್ನು ಪೆಟ್ರೋಲ್ ಪಂಪ್ ನಲ್ಲಿ ಪೆಟ್ರೋಲ್ ಡಿಸೇಲ್ ಜೊತೆಗೆ ಈ ವಸ್ತು ಕೂಡಾ ಲಭ್ಯ ! ಮಕ್ಕಳ ಜೊತೆ ಹೋಗುವಾಗ ಜೋಪಾನ  title=

Indian Oil Corporation Limited : ಪೆಟ್ರೋಲ್ ಪಂಪ್‌ಗೆ ಹೋದಾಗ, ಪೆಟ್ರೋಲ್, ಡಿಸೇಲ್ ಜೊತೆಗೆ ಟೈರ್ ಏರ್ ಮತ್ತು ಟಾಯ್ಲೆಟ್ ಇತ್ಯಾದಿಗಳಲ್ಲಿ ಸೌಲಭ್ಯ ಸಿಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಮುಂದಿನ ದಿನಗಳಲ್ಲಿ ಈ ಸೌಲಭ್ಯಗಳ ಪಟ್ಟಿ ದೊಡ್ದದಾಗಲಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ  ಈ ಮಾಹಿತಿ ನೀಡಿದ್ದಾರೆ. ದೇಶದ ತೈಲ ಮಾರುಕಟ್ಟೆ ಕಂಪನಿಗಳು ನಿರ್ವಹಿಸುವ ಪೆಟ್ರೋಲ್ ಪಂಪ್‌ಗಳಲ್ಲಿನ ಸೌಲಭ್ಯಗಳನ್ನು ಇನ್ನಷ್ಟು ಸುಧಾರಿಸಲಾಗುತ್ತಿದೆ.

ಸ್ಟಾರ್ಟ್‌ಅಪ್‌ನೊಂದಿಗೆ IOCL ಒಪ್ಪಂದ : 
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಪಂಪ್‌ನಲ್ಲಿ ಆಟಿಕೆ ಅಂಗಡಿಗಳನ್ನು ತೆರೆಯಲು ಸ್ಥಳಾವಕಾಶವನ್ನು ಒದಗಿಸಲು ಸ್ಟಾರ್ಟಪ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಸ್ಟಾರ್ಟಪ್ ಆಟಿಕೆಗಳ ತಯಾರಿಕೆ ಮತ್ತು ಮಾರಾಟದ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. 

ಇದನ್ನೂ ಓದಿ : New Pension Rule: ದೇಶದ ಲಕ್ಷಾಂತರ ಪಿಂಚಣಿದಾರರಿಗೆ ಬಂಪರ್ ಸುದ್ದಿ ಪ್ರಕಟಿಸಿದ ಕೇಂದ್ರ ಸರ್ಕಾರ, ಹೆಚ್ಚಾಗಲಿದೆ ಪಿಂಚಣಿ ಮತ್ತು ವೇತನ!

ದೇಶಾದ್ಯಂತ 500 ಅಂಗಡಿಗಳನ್ನು ತೆರೆಯಲಾಗುವುದು :
ಚಂಡೀಗಢ, ಮೊಹಾಲಿ ಮತ್ತು ಪಂಚಕುಲದಲ್ಲಿ ಮೊದಲ 5 ಅರ್ಬನ್ ಟಾಟ್ಸ್ ಸ್ಟೋರ್‌ಗಳನ್ನು ಪ್ರಾರಂಭಿಸಲಾಗಿದೆ. ಇನ್ನು ಈ ವ್ಯವಸ್ಥೆಯನ್ನು  ದೇಶಾದ್ಯಂತ ವಿಸ್ತರಿಸಲಾಗುವುದು. ಹೌದು ದೇಶಾದ್ಯಂತ 500 ಇಂತಹ ಮಳಿಗೆಗಳನ್ನು ತೆರೆಯಲಾಗುವುದು.  

ಏರೋಸಿಟಿಯಲ್ಲಿರುವ ಇಂಡಿಯನ್ ಆಯಿಲ್ ನ ರಿಟೇಲ್ ಔಟ್ ಲೆಟ್ ನಲ್ಲಿ ಅರ್ಬನ್ ಟಾಟ್ಸ್ ಟಾಯ್ಸ್ ಕಿಯೋಸ್ಕ್ ಅನ್ನು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಉದ್ಘಾಟಿಸಿದ್ದಾರೆ. ಈ ವೇಳೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮಕ್ಕಳೊಂದಿಗೆ ಸಂವಾದ ನಡೆಸಿದ್ದಾರೆ. ತಮ್ಮ ಮಕ್ಕಳಲ್ಲಿ ಉದ್ಯಮಶೀಲತೆಯ ಮನೋಭಾವವನ್ನು ಉತ್ತೇಜಿಸುವಂತೆ ಇದೆ ವೇಳೆ ಅವರು ಪೋಷಕರಿಗೆ ಸಲಹೆ ನೀಡಿದ್ದಾರೆ. 

ಇದನ್ನೂ ಓದಿ : Provident Fund ಚಂದಾದಾರರಿಗೊಂದು ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಮೋದಿ ಸರ್ಕಾರ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News