ಹೋಳಿ ಹಬ್ಬದ ಹಿನ್ನೆಲೆಯಲ್ಲಿ 2 ಉಚಿತ ಗ್ಯಾಸ್ ಸಿಲಿಂಡರ್ ವಿತರಣೆಗೆ ಸರ್ಕಾರ ನಿರ್ಧಾರ .!

Free Gas Cylinder Scheme :ಈ ಬಾರಿ ಹೋಳಿ ಹಬ್ಬದ ಸಲುವಾಗಿ ಜನತೆಗೆ ಈ ಬೆಲೆ ಏರಿಕೆ ಹೊರೆಯಿಂದ ಮುಕ್ತಿ ನೀಡಲು ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ  2 ಗ್ಯಾಸ್ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲು ಸರ್ಕಾರ  ತೀರ್ಮಾನಿಸಿದೆ.  

Written by - Ranjitha R K | Last Updated : Nov 21, 2022, 12:43 PM IST
  • ಗ್ಯಾಸ್ ಸಿಲಿಂಡರ್ ಬೆಲೆಯಿಂದ ಜನತೆ ತತ್ತರಿಸಿ ಹೋಗಿದೆ.
  • ಏರಿಕೆಯಿಂದ ತತ್ತರಿಸಿರುವ ಜನರಿಗೆ ಸಂತಸದ ಸುದ್ದಿ
  • 2 ಗ್ಯಾಸ್ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲು ಸರ್ಕಾರ ತೀರ್ಮಾನ
 ಹೋಳಿ ಹಬ್ಬದ ಹಿನ್ನೆಲೆಯಲ್ಲಿ  2 ಉಚಿತ ಗ್ಯಾಸ್ ಸಿಲಿಂಡರ್ ವಿತರಣೆಗೆ ಸರ್ಕಾರ  ನಿರ್ಧಾರ .!  title=
Free Gas Cylinder Scheme

Free Gas Cylinder Scheme : ದೇಶಾದ್ಯಂತ ಹೆಚ್ಚುತ್ತಿರುವ ಗ್ಯಾಸ್ ಸಿಲಿಂಡರ್ ಬೆಲೆಯಿಂದ ಜನತೆ ತತ್ತರಿಸಿ ಹೋಗಿದೆ.  ಆದರೆ ಈ ಬಾರಿ ಹೋಳಿ ಹಬ್ಬದ ಸಲುವಾಗಿ ಜನತೆಗೆ ಈ ಬೆಲೆ ಏರಿಕೆ ಹೊರೆಯಿಂದ ಮುಕ್ತಿ ನೀಡಲು ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ  2 ಗ್ಯಾಸ್ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲು ಸರ್ಕಾರ  ತೀರ್ಮಾನಿಸಿದೆ.  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉಜ್ವಲ ಯೋಜನೆಯನ್ನು ನಡೆಸುತ್ತಿದೆ.  ಇದರ ಅಡಿಯಲ್ಲಿ ಸರ್ಕಾರವು ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಅದರ ಮೇಲೆ ಸಬ್ಸಿಡಿಯನ್ನು ನೀಡಲಾಗುತ್ತದೆ.

ಆಹಾರ ಇಲಾಖೆ ನೀಡಿರುವ ಮಾಹಿತಿ ಇದು : 
 ಉತ್ತರ ಪ್ರದೇಶದಲ್ಲಿ ವಾಸಿಸುವ ಜನರಿಗೆ ರಾಜ್ಯ ಸರ್ಕಾರ ಈ ಉಡುಗೊರೆ ನೀಡುತ್ತಿದೆ. ಉತ್ತರ ಪ್ರದೇಶದ ಆಹಾರ ಮತ್ತು ಸರಬರಾಜು ಇಲಾಖೆಯು ಉಚಿತ ಗ್ಯಾಸ್ ಸಿಲಿಂಡರ್‌ಗಳನ್ನು ನೀಡುವ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಕಳುಹಿಸಿದೆ. ಈ ಕುರಿತು ಸರಕಾರದಿಂದ ಬಜೆಟ್‌ ಬಂದ ನಂತರ ಉಚಿತ ಗ್ಯಾಸ್‌ ಸಿಲಿಂಡರ್‌ ವಿತರಣೆ ಆರಂಭವಾಗಲಿದೆ. 
 
 ಇದನ್ನೂ ಓದಿ :
 2023ರಲ್ಲಿ ಸರ್ಕಾರಿ ನೌಕರರಿಗೆ ಬಂಪರ್ ! 3 ಪ್ರಮುಖ ಬೇಡಿಕೆಗಳಿಗೆ ಬೀಳಲಿದೆ ಮುದ್ರೆ .! ವೇತನವಾಗುವುದು ಡಬಲ್

ಹೋಳಿ ಹಬ್ಬದಂದು ಮೊದಲ ಉಚಿತ ಸಿಲಿಂಡರ್  : 
ಚುನಾವಣಾ ಸಮಯದಲ್ಲಿ ರಾಜ್ಯದ ಜನತೆಗೆ ನೀಡಿರುವ ಭರವಸೆಯನ್ನು ಈಡೇರಿಸಲು ಯುಪಿ ಸರ್ಕಾರ ಸಜ್ಜಾಗಿದೆ. ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಉಜ್ವಲ ಯೋಜನೆಯಡಿ ಈ ಬಾರಿ ಹೋಳಿ ಹಬ್ಬದ ವೇಳೆ ಮೊದಲ ಉಚಿತ ಸಿಲಿಂಡರ್ ನೀಡಲಾಗುವುದು. ಇದಾದ ನಂತರ ಮುಂದಿನ  ದೀಪಾವಳಿಯಂದು ಎರಡನೇ ಉಚಿತ ಸಿಲಿಂಡರ್ ಸಿಗಲಿದೆ. 

1.65 ಕೋಟಿ ಫಲಾನುಭವಿಗಳಿಗೆ ಲಾಭ :
ರಾಜ್ಯ ಸರ್ಕಾರದ ಈ ಉಚಿತ ಸಿಲಿಂಡರ್ ಸೌಲಭ್ಯದ ಪ್ರಯೋಜನವನ್ನು  ಸುಮಾರು 1.65 ಕೋಟಿ ಫಲಾನುಭವಿಗಳು ಪಡೆಯಲಿದ್ದಾರೆ. ಈ ಉಚಿತ ಸಿಲಿಂಡರ್‌ ವಿತರಣೆ ಹಿನ್ನೆಲೆಯಲ್ಲಿ, ಸರ್ಕಾರಕ್ಕೆ ಸುಮಾರು 3000 ಕೋಟಿ ರೂಪಾಯಿ ಆರ್ಥಿಕ ಹೊರೆಯಾಗಲಿದೆ. 

ಇದನ್ನೂ ಓದಿ : Gold Price Today : ಚಿನ್ನ ಬೆಳ್ಳಿ ಖರೀದಿಗೂ ಮುನ್ನ ತಿಳಿದಿರಲಿ ಇಂದಿನ ಬೆಲೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News