ನವದೆಹಲಿ:ಕೋಟ್ಯಂತರ ರೂ. ಹಣ ಗಳಿಕೆ ಮಾಡುವ ವ್ಯಕ್ತಿಯ ಜೀವನದಲ್ಲಿ ಎಲ್ಲ ರೀತಿಯ ಸೌಕರ್ಯಗಳು ಇರುತ್ತವೆ ಎಂದು ಹೇಳಲಾಗುತ್ತದೆ. ಅವರ ಮನೆ ಮತ್ತು ಕಚೇರಿಗಳಲ್ಲಿ ನೌಕರರ ದಂಡೆ ಇರುತ್ತದೆ ಎನ್ನಲಾಗುತ್ತದೆ. ಸಾವಿರಾರು ನೌಕರರಿಗೆ ನೌಕರಿ ನೀಡಿರುವ ಓರ್ವ ಉದ್ಯಮಿ ತನ್ನ ಮನೆಯಲ್ಲಿ ಸ್ವಚ್ಚತೆ ಮಾಡುತ್ತಾರೆ ಮತ್ತು ಪಾತ್ರೆ ತೊಳೆಯುತ್ತಾರೆ ಎಂದು ಹೇಳಿದರೆ ನೀವು ನಂಬುತ್ತೀರಾ? ಹೌದು, ಇದು ನಿಜ, ಇತ್ತೀಚೆಗಷ್ಟೇ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಬಿಲ್ ಗೇಟ್ಸ್ ಇದನ್ನು ಬಹಿರಂಗಪಡಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು ತಾವು ನಿತ್ಯ ರಾತ್ರಿ ಮನೆಯಲ್ಲಿ ತಮ್ಮ ಕುಟುಂಬ ಸದಸ್ಯರ ಪಾತ್ರೆ ತೊಳೆಯುತ್ತೇನೆ ಮತ್ತು ಈ ಕಾರ್ಯದಲ್ಲಿ ತಮಗೆ ತಮ್ಮ ಪತ್ನಿ ಸಾಥ್ ನೀಡುತ್ತಾರೆ ಎಂದು ಹೇಳಿದ್ದಾರೆ. ತಮ್ಮ ನೌಕರರಿಂದ ಎಂದಿಗೂ ಕೂಡ ರಾತ್ರಿ ಊಟದ ಪಾತ್ರೆ ತೊಳೆಸದ ಈ ವ್ಯಕ್ತಿ ಪಾತ್ರೆ ತೊಳೆಯುತ್ತಾರೆ ಎಂದು ಹೇಳಿದ್ದು ಇಲ್ಲಿ ವಿಶೇಷ.
ಕಾರಣ ಇಲ್ಲಿದೆ
ಫ್ಯಾಷನ್ ಪತ್ರಿಕೆಯೊಂದಕ್ಕೆ ನೀಡಿದ ಒಂದು ಸಂದರ್ಶನದಲ್ಲಿ ಮಾತನಾಡಿರುವ ಬಿಲ್ ಗೇಟ್ಸ್, ತಾವು ಕಳೆದ 25 ವರ್ಷಗಳಿಂದ ತಮ್ಮ ಪತ್ನಿ ಮೆಲಿಂಡಾ ಗೇಟ್ಸ್ ಅವರ ಜೊತೆಗೂಡಿ ತಮ್ಮ ಕುಟುಂಬ ಸದಸ್ಯರ ಪಾತ್ರೆ ತೊಳೆಯುತ್ತಿರುವುದಾಗಿ ಹೇಳಿದ್ದಾರೆ. ಮೆಲಿಂಡಾ ಗೇಟ್ಸ್ ಪ್ರಕಾರ ರಾತ್ರಿ ಹೊತ್ತಿನಲ್ಲಿ ಪತಿ ಜೊತೆಗೂಡಿ ಪಾತ್ರೆ ತೊಳೆಯುವ ಹಿಂದಿನ ಕಾರಣ, ಇದು ದಂಪತಿಗಳಿಗೆ ಒಟ್ಟಿಗೆ ಮಾತನಾಡಲು ಸಿಗುವ ಒಂದು ಅವಕಾಶ ಎನ್ನಲಾಗಿದೆ. ಬಿಲ್ ಗೇಟ್ಸ್ ಹೇಳುವ ಪ್ರಕಾರ ತಮ್ಮ ಕುಟುಂಬ ಸದಸ್ಯರ ಪಾತ್ರೆ ತೊಳೆಯಲು ಕೇವಲ 15 ರಿಂದ 20 ನಿಮಿಷ ಬೇಕಾಗುತ್ತದೆ. ಈ ಅವಧಿಯಲ್ಲಿ ತಮ್ಮ ಪತ್ನಿಯ ಜೊತೆಗೆ ತಮಾಷೆ ಮತ್ತು ಲೈಟ್ ಕ್ಷಣಗಳನ್ನು ಆನಂದಿಸಲು ತಮಗೆ ಇಷ್ಟವಾಗುತ್ತದೆ ಎಂದು ಹೇಳುತ್ತಾರೆ.
ಟೆನ್ನಿಸ್ ಆಟವಾಡಲು ಇಷ್ಟಪಡುತ್ತಾರಂತೆ ಗೇಟ್ಸ್
ಇತ್ತೀಚೆಗಷ್ಟೇ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬಿಲ್ ಗೇಟ್ಸ್ ತಮಗೆ ಸಮಯ ಸರಿದೂಗಿಸಿ ವ್ಯಾಯಾಮ ಮಾಡಲು ಇಷ್ಟವಾಗುತ್ತದೆ ಎಂದಿದ್ದರು. ಸಮಯ ಸಿಕ್ಕಾಗಲೆಲ್ಲ ತಾವು ಟೆನ್ನಿಸ್ ಆಟ ಆಡುವ ಅವಕಾಶವನ್ನು ತಪ್ಪಿಸಿಕೊಳ್ಳುವುದಿಲ್ಲ ಎಂದಿದ್ದರು.
ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಇಂದಿಗೂ ಕೂಡ ಬಿಲ್ ಗೇಟ್ಸ್ ಅವರ ಹೆಸರು ಶಾಮೀಲಾಗಿರುತ್ತದೆ. ಮೈಕ್ರೋಸಾಫ್ಟ್ ಸಂಸ್ಥೆಯ ಸಂಸ್ಥಾಪಕರಾಗಿದ್ದ ಬಿಲ್ ಗೇಟ್ಸ್ ಅವರು ಒಟ್ಟು 89.9 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದಾರೆ ಎನ್ನಲಾಗುತ್ತದೆ. ಸದ್ಯ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಹೇಳಲಾಗುವ ಅಮೆಜಾನ್ ಕಂಪನಿಯ ಮಾಲೀಕರಾಗಿರುವ ಜೆಫ್ ಬೆಜೋಸ್ ಹಾಗೂ ಬಿಲ್ ಗೇಟ್ಸ್ ಅವರ ಆಸ್ತಿಯ ನಡುವೆ ತುಂಬಾ ಕಡಿಮೆ ಅಂತರವಿದೆ ಎನ್ನಲಾಗುತ್ತದೆ.