World's Most Haunted Forest: ಇದುವೇ ವಿಶ್ವದ ಅತ್ಯಂತ ನಿಗೂಢ ಕಾಡು, ಒಳಗೆ ಹೋದವರು ಯಾರು ವಾಪಸ್ ಬಂದಿಲ್ವಂತೆ!

Nobody Returns From This Hoia Baciu Forest Most Mysterious Place: ಈ ಜಾಗವನ್ನು ಜನರು UFO ಹಾಗೂ ಭೂತ-ಪ್ರೇತಗಳಿಗೂ ಕೂಡ ಹೋಲಿಸಿ ನೋಡುತ್ತಾರಂತೆ. ಒಬ್ಬ ಕುರುಬ ಈ ಪ್ರದೇಶದಲ್ಲಿ ಕಾಣೆಯಾದ ಬಳಿಕ, ಈ ಪ್ರದೇಶದ (Mysterious Place) ಕುರಿತು ಜನರ ಆಸಕ್ತಿ ಇನ್ನಷ್ಟು ಹೆಚ್ಚಾಗಿದೆ.

Written by - Nitin Tabib | Last Updated : Oct 17, 2021, 05:07 PM IST
  • ವಿಶ್ವದ ಅತ್ಯಂತ ಭಯಾನಕ ಕಾಡು.
  • ಅಕ್ಕ-ಪಕ್ಕದಲ್ಲಿ ವಾಸಿಸುವ ಜನರಲ್ಲಿ ತುಂಬಾ ಭೀತಿ ಇದೆ.
  • ಈ ಕಾಡಿಗೆ ಎಂಟ್ರಿ ನೀಡಿದವರು ವಾಪಸ್ ಬಂದಿಲ್ವಂತೆ!
World's Most Haunted Forest: ಇದುವೇ ವಿಶ್ವದ ಅತ್ಯಂತ ನಿಗೂಢ ಕಾಡು, ಒಳಗೆ ಹೋದವರು ಯಾರು ವಾಪಸ್ ಬಂದಿಲ್ವಂತೆ! title=
Bermuda Triangle Of Romania (File Photo)

ನವದೆಹಲಿ:  Nobody Returns From This Hoia Baciu Forest Most Mysterious Place - ನಮ್ಮ ಭೂಮಿ ಅನೇಕ ವಿಚಿತ್ರ ಹಾಗೂ ನಿಗೂಢ ಸಂಗತಿಗಳಿಗೆ ಕೇಂದ್ರವಾಗಿದೆ. ವಿಜ್ಞಾನಿಗಳ ಅದೆಷ್ಟೋ ಆವಿಷ್ಕಾರದ ಸುದ್ದಿಗಳು ಹೊರತಾಗಿಯೂ ಕೂಡ ಪವಾಡ ಎಂಬಂತೆ ಇನ್ನೂ ಕೆಲ ರಹಸ್ಯ ಸಂಗತಿಗಳು ಉತ್ತರವಿಲ್ಲದೆ ಹಾಗೆಯೇ ಉಳಿದಿವೆ.  ಇದರಂತೆಯೇ ಜಗತ್ತಿನಲ್ಲಿ ಇಂತಹ ಹಲವು ಭಯಾನಕ (Haunted Places) ಪ್ರದೇಶಗಳಿದ್ದು, ಆ ಪ್ರದೇಶಗಳಿಗೆ ಹೋಗಲು ಅಥವಾ ಅಲ್ಲಿ ವಾಸಿಸಲು ಇಂದಿಗೂ ಕೂಡ ಜನ ಹೆದುರುತ್ತಾರೆ. ಈ ಸಂಚಿಕೆಯಲ್ಲಿ, ಇಂದು ನಾವು ನಿಮಗೆ ರೊಮೇನಿಯಾದ (Romania) ಹೋಯಾ ಬಾಸಿಯು (Hoia Baciu) ಅರಣ್ಯದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಇದೊಂದು ಅರಣ್ಯ ಪ್ರದೇಶವಾಗಿದ್ದು, ಈ ಪ್ರದೇಶಕ್ಕೆ ಭೇಟಿ ನೀಡಿದ ವ್ಯಕ್ತಿ ಮರಳಿ ಮನೆ ಸೇರುವುದಿಲ್ಲ ಎಂದು ಹೇಳಲಾಗುತ್ತದೆ.

ಟ್ರಾನ್ಸಲ್ ವೇನಿಯಾ ಪ್ರಾಂತ್ಯದಲ್ಲಿ ಸ್ವಲ್ಪ ಎಚ್ಚರದಿಂದ!
ಟ್ರಾನ್ಸಿಲ್ವೇನಿಯಾದಲ್ಲಿ ಇಂತಹ ಅನೇಕ ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗಿದ್ದು, ಜನರು ಅಲ್ಲಿಗೆ ಹೋಗಲು ಹೆದರುತ್ತಾರೆ. ಅದಕ್ಕೆ ಕಾರಣ ಏನು ತಿಳಿಯೋಣ ಬನ್ನಿ.  'ಹೋಯಾ ಬಾಸು', ವಿಶ್ವದ ಅತ್ಯಂತ ಭಯಾನಕ ಅರಣ್ಯಗಳಲ್ಲಿ ಒಂದಾಗಿದೆ, ಇದು ಟ್ರಾನ್ಸಿಲ್ವೇನಿಯಾ ಪ್ರಾಂತ್ಯದ ಕ್ಲುಜ್ ಕೌಂಟಿಯಲ್ಲಿದೆ. ಕಾಡಿನಲ್ಲಿ ನಡೆಯುತ್ತಿರುವ  ನಿಗೂಢ (Mysterious) ಘಟನೆಗಳನ್ನು ನೋಡಿದರೆ, ಇದನ್ನು 'ಟ್ರಾನ್ಸಿಲ್ವೇನಿಯಾದ ಬರ್ಮುಡಾ ಟ್ರಯಾಂಗಲ್' ಎಂದೇ ಕರೆಯಲಾಗುತ್ತದೆ. 

ಇದನ್ನೂ ಓದಿ-Mysterious Temples: ದೇಶದ ಕೆಲ ನಿಗೂಢ ದೇವಾಲಯಗಳಿವು

ಸಾವಿರಾರು ಜನ ನಾಪತ್ತೆಯಾಗಿದ್ದಾರೆ
'ದಿ ಇಂಡಿಪೆಂಡೆಂಟ್' ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಹೊಯಾ ಬಾಸು ಅನ್ನು ವಿಶ್ವದ ಅತ್ಯಂದ ಭಯಾನಕ ಅರಣ್ಯಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ಬರ್ಮುಡಾ ಟ್ರಯಾಂಗಲ್ ನಂತೆಯೇ 'ಟ್ರಾನ್ಸಿಲ್ವೇನಿಯಾ ಟ್ರಯಾಂಗಲ್' (Bermuda Triangle Of Romania) ಎಂದು ಹೆಸರಿಸಲಾಗಿದೆ. ಈ ಕಾಡಿನಲ್ಲಿರುವ ಮರಗಳು ಅಡ್ಡಲಾಗಿ ಮತ್ತು ಬಾಗಿದಂತೆ ಕಾಣುತ್ತವೆ, ಇವು ಸೂರ್ಯನ ಬೆಳಕಿನಲ್ಲಿ ಇನ್ನಷ್ಟು ಭಯಾನಕ ಕಂಗೊಳಿಸುತ್ತವೆ. 

ಇದನ್ನೂ ಓದಿ-Mysterious Lake: ದೇಶದ ಈ ನಿಗೂಢ ಸರೋವರದಲ್ಲಿದೆ ನೂರಾರು ಮಾನವ ಅಸ್ಥಿಪಂಜರಗಳು

ಭೂತ ಪ್ರೇತಗಳ ಅಸ್ತಿತ್ವ!
ಈ ಪ್ರದೇಶವನ್ನು ಜನರು UFO ಹಾಗೂ ಭೂತ-ಪ್ರೇತಗಳಿಗೂ ಹೋಲಿಸಿ ನೋಡುತ್ತಾರೆ. ಕುರುಬನೊಬ್ಬ ಈ ಕಾಡಿನಲ್ಲಿ ಕಣ್ಮರೆಯಾದಾಗಿನಿಂದ ಈ ಕಾಡಿನ ಕುರಿತು ಜನರ ಕುತೂಹಲ ಇನ್ನಷ್ಟು ಹೆಚ್ಚಾಗಿದೆ. 

ಈ ಕಾಡಿನ ಬಳಿ ವಾಸಿಸುವ ಜನರು ಹೇಳುವ ಪ್ರಕಾರ, ಅವರು ಕಳೆದ  ನೂರಾರು ವರ್ಷಗಳಿಂದ ತಮ್ಮ ಪೂರ್ವಜರಿಂದ ಇಂತಹ ವಿಷಯಗಳನ್ನು ಕೇಳುತ್ತಿದ್ದಾರೆ. ವಾಸ್ತವವಾಗಿ, ಹಳೆಯ ಪೂರ್ವನಿದರ್ಶನದ ಪ್ರಕಾರ, ಮನುಷ್ಯನು ಅರಣ್ಯವನ್ನು ಪ್ರವೇಶಿಸಿದ ತಕ್ಷಣ ಕಣ್ಮರೆಯಾಗಿದ್ದಾನೆ. ಆಶ್ಚರ್ಯಕರವಾಗಿ, ಆ ಸಮಯದಲ್ಲಿ 200 ಕುರಿಗಳೂ ಅವನ ಜೊತೆಯಲ್ಲಿದ್ದವು.

ಇಂದಿಗೂ, ಲಕ್ಷಾಂತರ ಕುತೂಹಲಗಳ ನಡುವೆಯೂ ಜನರು ಇಲ್ಲಿಗೆ ಹೋಗಲು ಹೆದರುತ್ತಾರೆ.

ಇದನ್ನೂ ಓದಿ-Mysterious Places In India: ಭಾರತದಲ್ಲಿರುವ ಈ Magnetic Hill ಬಗ್ಗೆ ನಿಮಗೆಷ್ಟು ತಿಳಿದಿದೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News