'ಭಾರತಕ್ಕೆ ಏಕೆ ಸಹಾಯ ಮಾಡಬೇಕು?' - ಮುಷರಫ್

ಎರಡು ದಿನಗಳ ಹಿಂದೆಯಷ್ಟೇ ಕೇಂದ್ರದ ಗೃಹ ಕಾರ್ಯದರ್ಶಿ ರಾಜೀವ್ ಮೆಹರಿಷಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿದ್ದಾನೆ ಎಂದು ಹೇಳಿದ್ದ ಬೆನ್ನಲ್ಲೇ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪವ್ರೇಜ್ ಮುಷರಫ್ ದಾವೂದ್ ಕರಾಚಿಯಲ್ಲಿದ್ದಾನೆ ಎಂದು ದೂರಿದ್ದಾರೆ.

Last Updated : Aug 31, 2017, 01:55 PM IST
'ಭಾರತಕ್ಕೆ ಏಕೆ ಸಹಾಯ ಮಾಡಬೇಕು?' - ಮುಷರಫ್ title=

ಲಾಹೋರ್ : ಎರಡು ದಿನಗಳ ಹಿಂದೆಯಷ್ಟೇ ಕೇಂದ್ರದ ಗೃಹ ಕಾರ್ಯದರ್ಶಿ ರಾಜೀವ್ ಮೆಹರಿಷಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿದ್ದಾನೆ ಎಂದು ಹೇಳಿದ್ದ ಬೆನ್ನಲ್ಲೇ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪವ್ರೇಜ್ ಮುಷರಫ್ ದಾವೂದ್ ಕರಾಚಿಯಲ್ಲಿದ್ದಾನೆ ಎಂದು ದೂರಿದ್ದಾರೆ.

ಪಾಕಿಸ್ತಾನದ ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ಮುಷರಫ್, "ಭಾರತ ಪಾಕಿಸ್ತಾನವನ್ನು ದೀರ್ಘಕಾಲದವರೆಗೆ ದೂಷಿಸುತ್ತಿದೆ, ನಾವು ಈಗ ಅವರಿಗೆ ಸಹಾಯ ಮಾಡಬೇಕೇ? ಎಂದು ಕೇಳಿದ್ದಾರೆ.
1993 ರ ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲಿ ಪ್ರಮುಖ ಆರೋಪಿ ದಾವೂದ್ ಎಲ್ಲಿದ್ದಾನೆಂದು ನನಗೆ ಗೊತ್ತಿಲ್ಲ. ಎಲ್ಲೋ ಇಲ್ಲಿಯೇ ಇರಬೇಕು.  ಭಾರತ ಮುಸ್ಲಿಮರನ್ನು ಕೊಲ್ಲುತ್ತಿದೆ ಮತ್ತು ದಾವೂದ್ ಇಬ್ರಾಹಿಂ ಅದಕ್ಕೆ ಪ್ರತಿಕ್ರಿಯಿಸುತ್ತಿದ್ದಾನೆ. "ಪಾಕಿಸ್ತಾನದ ಮೇಲೆ ಈ ಬಗ್ಗೆ ಕ್ರಿಮಿನಲ್ ಮೊಕದ್ದಮೆ ಹೂಡುವ ಸಾಧ್ಯತೆ ಇದೇ ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ."

ದಾವೂದ್ ಕರಾಚಿಯಲ್ಲಿ ಭವ್ಯ ಬಂಗಲೆಯಲ್ಲಿ ವಾಸಿಸುತ್ತಿದ್ದಾನೆ ಎಂದು ವಾದವನ್ನು ಪಾಕಿಸ್ತಾನ ಕಳೆದ 10 ವರ್ಷಗಳಿಂದ ನಿರಂತರವಾಗಿ ನಿರಾಕರಿಸುತ್ತಾ ಬಂದಿದೆ. ಮುಂಬೈ ಸ್ಫೋಟ ಪ್ರಕರಣದಲ್ಲಿ ಇಬ್ರಾಹಿಂನನ್ನು ಆರೋಪ ಸಾಭೀತು ಪಡಿಸುವ ಹಲವಾರು ದಾಖಲೆಗಳನ್ನು ದೆಹಲಿಯು ಹಲವು ಬಾರಿ ಇಸ್ಲಾಮಾಬಾದ್ಗೆ ಕಳುಹಿಸಿದೆ.

ಮೊನ್ನೆಯಷ್ಟೇ ಕೇಂದ್ರದ ಗೃಹ ಕಾರ್ಯದರ್ಶಿ ಇಬ್ರಾಹಿಮ್ನ್ನು ಭಾರತಕ್ಕೆ ಮರಳಿ ತರಲು ಸರಕಾರವು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದ್ದರು. ಆದರೆ ಪಾಕಿಸ್ತಾನವು ಪಾತಕಿಗೆ ಆಶ್ರಯ ನೀಡಿದ್ದು ಕಾನೂನಾತ್ಮಕವಾಗಿ ಹೋರಾಡಲು ಅಡಚಣೆ ಉಂಟುಮಾಡುತ್ತಿದೆ ಎಂದು ಅವರು ಪಿತಿಐಗೆ ತಿಳಿಸಿದ್ದರು.

ಪಾಕಿಸ್ತಾನದ "ವರ್ತನೆ" ಅಂತರರಾಷ್ಟ್ರೀಯ ಕಾನೂನುಗೆ ಅನುಗುಣವಾಗಿಲ್ಲ ಮತ್ತು ಇಬ್ರಾಹಿಂ ಪ್ರಕರಣದಲ್ಲಿ ಭಾರತ ವಿರುದ್ಧ ಕಾರ್ಯನಿರ್ವಹಿಸುತ್ತಿದೆ ಎಂದು ಗೃಹ ಕಾರ್ಯದರ್ಶಿ ಹೇಳಿದ್ದರು. "ದಾವೂದ್ನನ್ನು ವಶಕ್ಕೆ ಪಡೆಯಲು ಸಿದ್ಧವಿದ್ದೇವೆ ಎಂದು ಅವರು ಪಿಟಿಐಗೆ ತಿಳಿಸಿದ್ದರು.

1993 ರಲ್ಲಿ ಮುಂಬೈನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಇಬ್ರಾಹಿಂ ಪ್ರಮುಖ ಆರೋಪಿಯಾಗಿದ್ದಾನೆ. ಇದರಲ್ಲಿ ಸುಮಾರು 260 ಜನರು ಮೃತಪಟ್ಟಿದ್ದಾರೆ ಮತ್ತು 700 ಕ್ಕಿಂತ ಹೆಚ್ಚು ಜನರು ಗಾಯಗೊಂಡಿದ್ದಾರೆ. ಬಾಂಬ್ ದಾಳಿಯ ನಂತರ ಅವನು ಭಾರತದಿಂದ ಪಲಾಯನ ಮಾಡಿದ್ದು, ಪ್ರಸ್ತುತ ಪಾಕಿಸ್ತಾನದಲ್ಲಿ ಅಡಗಿದ್ದಾನೆ.

ಏಪ್ರಿಲ್ ನಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಇಬ್ರಾಹಿಂ ಇನ್ನೂ ಪಾಕಿಸ್ತಾನದಲ್ಲಿದ್ದಾನೆ ಎಂಬುದರ ಬಗ್ಗೆ ಯಾವುದೇ ಸಂದೇಹವಿಲ್ಲ. ಕಳೆದ 10 ವರ್ಷಗಳಲ್ಲಿ ಇಬ್ರಾಹಿಂ ಮುಂಬೈ ಸ್ಫೋಟ ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸಿ ಭಾರತವು ಹಲವಾರು ದಾಖಲೆಗಳನ್ನು ಪಾಕಿಸ್ತಾನಕ್ಕೆ ಒದಗಿಸಿದೆ. 2011 ರಲ್ಲಿ, ಯುಪಿಎ ಸರ್ಕಾರದ ಆಗಿನ ಗೃಹ ಸಚಿವ ಪಿ. ಚಿದಂಬರಂ ಸಹ ಇಬ್ರಾಹಿಂ ಕರಾಚಿಯಲ್ಲಿ ನೆಲೆಸಿದ್ದಾನೆ ಎಂದು ಹೇಳಿದ್ದರು.

Trending News