ನವದೆಹಲಿ: ಯುಎಸ್ ವಾಯುದಾಳಿಯಲ್ಲಿ ಇರಾನಿನ ಜನರಲ್ ಕಾಸಿಮ್ ಸುಲೇಮಾನಿ ಹತ್ಯೆಯ ಬಳಿಕ ಬುಧವಾರ ಪ್ರಿತಿಕಾರದ ದಾಳಿ ನಡೆಸಿರುವ ಇರಾನ್, ಇರಾಕ್ ಮೂರು ಯುಎಸ್ ಮಿಲಿಟರಿ ನೆಲೆಗಳಾದ ಇರ್ಬೀರ್, ಅಲ್-ಅಸ್ಸಾದ್ ಹಾಗೂ ತಾಜಿ ಏರ್ ಬೇಸ್ ಗಳ ಮೇಲೆ ಹಲವಾರು ರಾಕೆಟ್ ಗಳಿಂದ ದಾಳಿ ನಡೆಸಿದೆ. ಈ ದಾಳಿ ಮತ್ತೊಮ್ಮೆ ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಇರಾನ್ ಮತ್ತು ಉತ್ತರ ಕೊರಿಯಾ ಜೊತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಂಬಂಧ ಹದಗೆಡುತ್ತಿರುವುದರಿಂದ ಯುದ್ಧದ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ. ಅತ್ತ ರಷ್ಯಾದ ಮೇಲಿನ ಅನೇಕ ನಿರ್ಬಂಧಗಳು ವಿಭಿನ್ನ ಕಥೆಯನ್ನು ಹೇಳುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ಜಾಗತಿಕವಾಗಿ ಮೂರನೇ ಮಹಾಯುದ್ದ ದೂರವಿಲ್ಲ ಎಂದು ಜನರು ಭಾವಿಸಲಾರಂಭಿಸಿದ್ದಾರೆ.
ಒಂದು ವೇಳೆ ಮೂರನೇ ಮಹಾಯುದ್ಧ ನಡೆದರೆ ಏನಾಗಲಿದೆ?
ಒಂದು ವೇಳೆ ನಿಜವಾಗಿಯೂ ಮೂರನೆಯ ಮಹಾಯುದ್ಧವುಸಂಭವಿಸಿದಲ್ಲಿ, ಅದು ಅತ್ಯಂತ ಭೀಕರ ಯುದ್ಧ ಎಂದು ಸಾಬೀತಾಗಲಿದೆ. ಇದರಲ್ಲಿ, ಇದು ಹಲವು ದೇಶಗಳ ಅಸ್ತಿತ್ವವನ್ನು ಅಳಿಸಿ ಹಾಕಬಲ್ಲದು. ಒಂದು ವೇಳೆ ಮೂರನೆಯ ಮಹಾಯುದ್ಧವು ಪ್ರಾರಂಭವಾದರೆ, ಯಾವ ದೇಶವು ಯಾರ ಪರವಾಗಿರುತ್ತದೆ. ಸದ್ಯ ಇರಾನ್ ನಡೆಸಿರುವ ದಾಳಿಯ ಬಳಿಕ ಯಾವ ದೇಶಗಳು ಇರಾನ್ ದೇಶಕ್ಕೆ ಬೆಂಬಲ ನೀಡಲಿವೆ. ಮೊದಲನೆಯದಾಗಿ ರಷ್ಯಾ ಇರಾನ್ ಸ್ನೇಹಿತ ರಾಷ್ಟ್ರ. ರಷ್ಯಾ ಬಳಿಕ ಚೀನಾ ಕೂಡ ಅಮೇರಿಕಾದ ವಿರುದ್ಧ ಇರಾನ್ ಗೆ ಬೆಂಬಲ ನೀಡಲಿದೆ. ಈ ದಾಳಿಯ ಬಳಿಕ ಇರಾಕ್ ಕೂಡ ಇರಾನ್ ಬೆಂಬಲಿಸಿ ಹೇಳಿಕೆಗಳನ್ನು ನೀಡುತ್ತಿದ್ದು, ಯೆಮನ್, ಲೆಬನಾನ್, ಸಿರಿಯಾ ಹಾಗೂ ಪ್ಯಾಲಿಸ್ತೇನ್ ಗಳಂತಹ ರಾಷ್ಟ್ರಗಳೂ ಸಹ ಇರಾನ್ ಗೆ ಬೆಂಬಲ ನೀಡಲಿವೆ.
ಇರಾನ್ ನಡೆಸಿರುವ ಈ ದಾಳಿಯ ಬಳಿಕ ಬ್ರಿಟನ್, ಫ್ರಾನ್ಸ್, ಇಸ್ರೇಲ್, ಸೌದಿ ಅರೇಬಿಯಾ, ಜಾರ್ಡನ್ ಹಾಗೂ ಯುಎಇ ರಾಷ್ಟ್ರಗಳು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಬೆಂಬಲ ನೀಡಿವೆ. ಡೊನಾಲ್ಡ್ ಟ್ರಂಪ್ ಕೈಗೊಂಡ ನಿರ್ಧಾರಕ್ಕೆ ಹಲವು ದೇಶಗಳು ಅಸಮಾಧಾನ ವ್ಯಕ್ತಪಡಿಸಿವೆ. ಆದರೆ ಒಂದು ವೇಳೆ ಯುದ್ಧವೇ ಪರ್ಯಾಯವಾದಲ್ಲಿ ಈ ಎಲ್ಲ ರಾಷ್ಟ್ರಗಳು ಅಮೆರಿಕಾಗೆ ಬೆಂಬಲ ನೀಡಲಿವೆ. ಏಕೆಂದರೆ ಪಶ್ಚಿಮ ಏಷ್ಯಾದಲ್ಲಿ ಇರಾನ್ ವರ್ಚಸ್ಸಿಗೆ ಪೆಟ್ಟು ನೀಡಲು ಹಲವು ದೇಶಗಳು ಬಯಸುತ್ತಿವೆ.
ಅಮೇರಿಕಾ ಹಾಗೂ ಇರಾನ್ ಯುದ್ಧವನ್ನು ಭಾರತ ತಡೆಯಲಿದೆಯೇ?
ಪ್ರಪಂಚದ ನಕ್ಷೆಯಲ್ಲಿ ದಾಳಿ-ಪ್ರತಿದಾಳಿಯಲ್ಲಿ ತೊಡಗಿರುವ ಅಮೇರಿಕಾ ಹಾಗೂ ಇರಾನ್ ಗಳ ಜೊತೆಗೆ ವಿಶ್ವಾದ್ಯಂತ ಇದೀಗ ಭೀತಿಯ ವಾತಾವರಣ ಸೃಷ್ಟಿಯಾಗಿದೆ. ಇವೆಲ್ಲವುಗಳ ನಡುವೆ ಇರಾನ್ ಕೂಡ ಇದೀಗ ತನ್ನ ಮಿತ್ರರಾಷ್ಟ್ರಗಳತ್ತ ಮುಖ ಮಾಡಿದೆ. ಈ ಕುರಿತು ಮಾತನಾಡಿರುವ ಭಾರತದಲ್ಲಿನ ಇರಾನ್ ರಾಜದೂತ ಅಲಿ ಚೆಗೆನಿ, ಅಮೇರಿಕಾ ಹಾಗೂ ಇರಾನ್ ಮಧ್ಯೆ ಏರ್ಪಟ್ಟ ಈ ವೈಮನಸ್ಸನ್ನು ತಿಳಿಗೊಳಿಸಲು ಒಂದು ವೇಳೆ ಭಾರತ ಮುಂದಾದಲ್ಲಿ ಅದನ್ನು ಇರಾನ್ ಸ್ವಾಗತಿಸಲಿದೆ ಎಂದು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಅಲಿ ಚೆಗೆನಿ, "ನಾವು ಯುದ್ಧ ಬಯಸುವುದಿಲ್ಲ, ನಾವು ನಮ್ಮ ಕ್ಷೇತ್ರದಲ್ಲಿ ಎಲ್ಲರ ಶಾಂತಿ ಮತ್ತು ಸಮೃದ್ಧಿಯನ್ನು ಬಯಸುತ್ತೇವೆ. ಇದಕ್ಕಾಗಿ ಭಾರತ ಕೈಗೊಳ್ಳುವ ಯಾವುದೇ ನಿಲುವು ಅಥವಾ ಯೋಜನೆಯನ್ನು ನಾವು ಸ್ವಾಗತಿಸುತ್ತೇವೆ" ಎಂದು ಹೇಳಿದ್ದಾರೆ.