ಕೊರೊನಾ ಔಷಧಿಯಿಂದ ಗುಪ್ತರೋಗದ ಅಪಾಯ, ಎಚ್ಚರಿಕೆ ನೀಡಿದ WHO

ಇಡೀ ಜಗತ್ತು ಇಂದು ಕರೋನವೈರಸ್ ಕಪಿಮುಷ್ಠಿಯಲ್ಲಿದೆ. ಪರಿಸ್ಥಿತಿ ಹೇಗಿದೆ ಎಂದರೆ ಪ್ರತಿ ಇಬ್ಬರಲ್ಲಿ ಒಬ್ಬ ವ್ಯಕ್ತಿ ಕೊರೊನಾ ಸೋಂಕಿಗೆ ಗುರಿಯಾಗಿದ್ದಾನೆ.  ಇದರಿಂದ ಚೇತರಿಸಿಕೊಳ್ಳಲು ಜನರಿಗೆ ಅನೇಕ ರೀತಿಯ ಆಂಟಿಬಯೋಟಿಕ್ ಗಳನ್ನು ನೀಡಲಾಗುತ್ತಿದೆ, ಆದರೆ ಅದೇ ಸಮಯದಲ್ಲಿ ಗಂಭೀರ ಕಾಯಿಲೆಗಳ ಅಪಾಯವೂ ಹೆಚ್ಚುತ್ತಿದೆ.

Written by - Nitin Tabib | Last Updated : Dec 28, 2020, 07:52 PM IST
  • ಕೊರೊನಾ ಚಿಕಿತ್ಸೆಗೆ ನೀಡಲಾಗುವ ಆಂಟಿಬಯೋಟಿಕ್ ಗಳು ಅಪಾಯಕಾರಿಯಾಗಿವೆ.
  • ಗೊನೋರಿಯಾ ಅಪಾಯ ಹೆಚ್ಚಾಗುತ್ತಿದೆ.
  • WHO ನೀಡಿದೆ ಈ ಎಚ್ಚರಿಕೆ.
ಕೊರೊನಾ ಔಷಧಿಯಿಂದ ಗುಪ್ತರೋಗದ ಅಪಾಯ, ಎಚ್ಚರಿಕೆ ನೀಡಿದ WHO title=
Gonorrhea (Representational Image)

ನವದೆಹಲಿ: ಕೊರೊನಾ ವೈರಸ್ ನಿಂದ ಬಚಾವಾಗಲು ಜನರು ಹಲವು ರೀತಿಯ ಆಂಟಿ ಬಯೋಟಿಕ್ ಗಳ ಬಳಕೆ ಮಾಡುತ್ತಿದ್ದಾರೆ . ಆದರೆ, ಅತಿ ಹೆಚ್ಚು ಆಂಟಿ ಬಯೋಟಿಕ್ ಬಳಕೆಯಿಂದ ಗಂಭೀರ ಕಾಯಿಲೆಗಳಾಗುತ್ತವೆ ಎಂಬ ವಿಷಯ ನಿಮಗೆ ತಿಳಿದಿದೆಯೇ.  ಇದೀಗ ವಿಶ್ವ ಆರೋಗ್ಯ ಸಂಸ್ಥೆ ಈ ಕುರಿತು ಎಚ್ಚರಿಕೆ ನೀಡಿದೆ. ಅತಿಯಾಗಿ ಆಂಟಿ ಬಯೋಟಿಕ್ ಬಳಸುವುದರಿಂದ ಗೊನೋರಿಯಾ ಪ್ರಕರಣಗಳ ಅಪಾಯ ಹೆಚ್ಚಾಗಿದೆ.

ಕೊರೊನಾ ವೈರಸ್ ಚಿಕಿತ್ಸೆಗೆ ಇದುವರೆಗೆ ಯಾವುದೇ ಔಷಧಿ ಅಥವಾ ಲಸಿಕೆ ಇನ್ನೂ ಭಾರತದಲ್ಲಿ ಲಭ್ಯವಿಲ್ಲ.  ಆದರೂ ಕೂಡ ಆರಂಭಿಕ ಹಂತದಲ್ಲಿ ಆಂಟಿಬಯೋಟಿಕ್ ಗಳ ಬಳಕೆ ಮಾಡಿ ಈ ರೋಗದ ಮೇಲೆ ನಿಯಂತ್ರಣ ಸಾಧಿಸಲಾಗುತ್ತಿದೆ. ಸಂಶೋಧನೆಯೊಂದರ ಪ್ರಕಾರ ಉಸಿರಾಟದ ಸಮಸ್ಯೆಗಳಿಗೆ ಹೆಚ್ಚಾಗಿ ನೀಡಲಾಗುವ ಅಜಿತ್ರೋಮೈಸಿನ್ (Azithromycin) ಆಂಟಿಬಯೋಟಿಕ್ ಔಷಧಿ ಇದರಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ ಮತ್ತು ಇದೊಂದು ಸಾಮಾನ್ಯ ಆಂಟಿಬಯೋಟಿಕ್ ಆಗಿದೆ.

ಇದನ್ನು ಓದಿ- Coronavirus Pandemic: ಕೊರೊನಾ ಅಂತಿಮ ಮಹಾಮಾರಿ ಅಲ್ಲ, ಎಚ್ಚರಿಕೆ ನೀಡಿದ WHO ಮುಖ್ಯಸ್ಥ

WHO ವರದಿಯ ಪ್ರಕಾರ ಅತಿ ಹೆಚ್ಚು ಆಂಟಿ ಬಯೋಟಿಕ್ ಮೇಲೆ ಅವಲಂಭಿಸಿದವರಿಗೆ ಸುಪರ್ ಗೊನೋರಿಯಾ ಕಾಯಿಲೆಯ ಅಪಾಯ ಹೆಚ್ಚಾಗಿದೆ.

ಇದನ್ನು ಓದಿ- ಲಸಿಕೆ ಬಂದರೂ ಮುಂದಿನ ಹತ್ತು ವರ್ಷ ಜಗತ್ತನ್ನು ಕಾಡಲಿದೆ ಕರೋನಾ

ಏನಿದು ಗೊನೋರಿಯಾ?
ಈ ರೋಗ ನಿಸಿರಿಯಾ ಗೊನೋರಿಯಾ ಹೆಸರಿನ ಬ್ಯಾಕ್ಟೀರಿಯಾನಿಂದ ಬರುತ್ತದೆ. ಅಸುರಕ್ಷಿತ ಶಾರೀರಿಕ ಸಂಬಂಧ, ಅನೈಸರ್ಗಿಕ ಶಾರೀರಿಕ ಸಂಬಂಧ, ಒರಲ್ ಸೆಕ್ಸ್ ನಿಂದ ಈ ಕಾಯಿಲೆ ಹರಡುತ್ತದೆ. ಆದರೆ, ಈ ಕಾಯಿಲೆಯನ್ನು ನಿಯಂತ್ರಿಸಲು ನೀಡಲಾಗುವ ಆಂಟಿಬಯೋಟಿಕ್ ಗಳು ಶೀಘ್ರದಲ್ಲಿಯೇ ತನ್ನ ಪ್ರಭಾವ ಕಳೆದುಕೊಳ್ಳುತ್ತಿವೆ. 

ಇದನ್ನು ಓದಿ- Alert...! ಸಿಗರೇಟ್ ಸೇದುವ ಚಟ ಇರುವವರು ಈ ಸಂಶೋಧನಾ ವರದಿ ತಪ್ಪದೆ ಓದಿ

ಈ ರೋಗ ಚಿಕಿತ್ಸೆ ಮೀರಲಿದೆ
ಈ ಕುರಿತು 'ದಿ ಸನ್' ವೃತ್ತಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಬ್ರಿಟನ್ ನ ಬಯೋಟಾಸಫೆರಿಕ್ ಲಿಮಿಟೆಡ್ ಕಂಪನಿಯ CEO ಕೆವಿನ್ ಕಾಕ್ಸ್, ಈ ರೀತಿಯ ಪ್ರ್ಯಾಕ್ಟಿಸ್ ನಿಂದ ಈ ರೋಗ ಚಿಕಿತ್ಸೆಗೂ ಕೂಡ ಮೀರಲಿದೆ ಎಂದಿದ್ದಾರೆ.  ಇದೀಗ WHO ಕೂಡ ಎಚ್ಚರಿಕೆ ನೀಡಿದ್ದು, ಇತ್ತೀಚಿಗೆ ಗೊನೋರಿಯಾ ಕಾಯಿಲೆಯಲ್ಲಿ ಬ್ಯಾಕ್ಟೀರಿಯಾ ರೋಧಕ ಕ್ಷಮತೆ ಅತಿ ಹೆಚ್ಚಾಗಿ ಗಮನಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News