WHO ತಜ್ಞರ ತಂಡದಿಂದ ಫೆ.10ರಂದು ಕೊರೊನಾ ವೈರಸ್‌ ಮೂಲ ಪತ್ತೆ ಬಹಿರಂಗ..!?

ಕಳೆದ ಕೆಲವು ತಿಂಗಳಿಂದ ಚೀನಾದಲ್ಲಿ ಬೀಡುಬಿಟ್ಟಿರುವ ವಿಶ್ವ ಆರೋಗ್ಯ ಸಂಸ್ಥೆ(WHO)ಯ ತಜ್ಞರ ತಂಡ

Last Updated : Feb 8, 2021, 11:09 PM IST
  • ವಿಶ್ವವನ್ನೇ ಬೆಚ್ಚಿಬೀಳಿಸಿದ ಕೊರೊನಾ ವೈರಸ್‌ನ ಮೂಲ ಪತ್ತೆ
  • ಕಳೆದ ಕೆಲವು ತಿಂಗಳಿಂದ ಚೀನಾದಲ್ಲಿ ಬೀಡುಬಿಟ್ಟಿರುವ ವಿಶ್ವ ಆರೋಗ್ಯ ಸಂಸ್ಥೆ(WHO)ಯ ತಜ್ಞರ ತಂಡ
  • WHOದಿಂದ ಫೆಬ್ರವರಿ 10ರಂದು ವೈರಸ್‌ನ ಮೂಲ ಬಿಡುಗಡೆ ಮಾಡುವ ಸಾಧ್ಯತೆ ಇದೆ.
WHO ತಜ್ಞರ ತಂಡದಿಂದ ಫೆ.10ರಂದು ಕೊರೊನಾ ವೈರಸ್‌ ಮೂಲ ಪತ್ತೆ ಬಹಿರಂಗ..!? title=

ಬೀಜಿಂಗ್‌: ವಿಶ್ವವನ್ನೇ ಬೆಚ್ಚಿಬೀಳಿಸಿದ ಕೊರೊನಾ ವೈರಸ್‌ನ ಮೂಲ ಪತ್ತೆ ಹಚ್ಚುವ ನಿಟ್ಟಿನಲ್ಲಿ ಕಳೆದ ಕೆಲವು ತಿಂಗಳಿಂದ ಚೀನಾದಲ್ಲಿ ಬೀಡುಬಿಟ್ಟಿರುವ ವಿಶ್ವ ಆರೋಗ್ಯ ಸಂಸ್ಥೆ(WHO)ಯ ತಜ್ಞರ ತಂಡವು ಫೆಬ್ರವರಿ 10ರಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಚೀನಾದ ವುಹಾನ್‌ ಸೀ ಫುಡ್‌ ಮಾರುಕಟ್ಟೆಯಿಂದ ವೈರಸ್‌ ಹರಡಿದೆ ಎಂಬುದು ಒಂದು ವಾದವಾಗಿದ್ದರೆ, ವಿಶ್ವದ ಆರ್ಥಿಕತೆಗೆ ಹೊಡೆತ ನೀಡಲೆಂದೇ ವುಹಾನ್(Wuhan)‌ನಲ್ಲಿರುವ ವೈರಸ್‌ಗಳ ಅಧ್ಯಯನ ಕುರಿತ ಪ್ರಯೋಗಾಲಯದಿಂದ ಉದ್ದೇಶಪೂರ್ವಕವಾಗಿ ವೈರಾಣುವನ್ನುಸೋರಿಕೆ ಮಾಡಲಾಗಿದೆ ಎಂಬ ಅಪವಾದವೂ ಇದೆ.

ವಿಸ್ಮಯ ..! ಕೇಸರಿ ಬಣ್ಣಕ್ಕೆ ತಿರುಗಿತು ಬೆಳ್ಳಗೆ ಕಂಗೊಳಿಸುತ್ತಿದ್ದ ಹಿಮ …

ಬಾವಲಿಗಳಿಂದ ಮನುಷ್ಯನಿಗೆ ಇದು ಹರಡಿದೆ ಎಂಬ ವಾದವೂ ಇದೆ. ಇಂತಹ ಆರೋಪಗಳ, ಅಂತೆ-ಕಂತೆಗಳ ಕುರಿತು ವುದಕ್ಕೂ ತಾರ್ಕಿಕ ಅಂತ್ಯ ಬಿದ್ದಿಲ್ಲ. ಸಾಧ್ಯವಿರುವ ಎಲ್ಲಾ ಕಡೆ ಭೇಟಿ ಕೊಟ್ಟಿರುವ ತಂಡವು, ಪ್ರಮುಖ ಮಾಹಿತಿಗಳನ್ನು ಕಲೆಹಾಕಿದ್ದು, ಕೊರೊನಾ ವೈರಸ್‌ನ ಮೂಲ ಯಾವುದು ಎಂಬ ಬಗ್ಗೆ ಸದ್ಯದ ಮಟ್ಟಿಗೆ ಒಂದು ನಿರ್ಧಾರಕ್ಕೆ ಬರಲು ಸಾಧ್ಯವಾಗಲಿದೆ ಎಂದು ಹೇಳಿದೆ.

WATCH: ಸುಲಭ ಸ್ಟಂಪಿಂಗ್ ಮಿಸ್ ಮಾಡಿದ ರಿಶಬ್ ಪಂತ್ ಗೆ ಆರ್.ಆಶ್ವಿನ್ ಮಾಡಿದ್ದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News