ಕರೋನಾ ನಂತರ ಜನರನ್ನು ಕಾಡಲಿದೆ ಈ ವೈರಸ್ , WHO ಎಚ್ಚರಿಕೆ !

ಕೀಟಗಳು ಇಡೀ ಜಗತ್ತಿಗೆ ಅಪಾಯವನ್ನುಂಟು ಮಾಡುತ್ತಿವೆ. ಹಳದಿ ಜ್ವರ , ಜಿಕಾ, ಚಿಕೂನ್‌ಗುನ್ಯಾ ಮತ್ತು ಡೆಂಗ್ಯೂ ಮುಂತಾದ ಆರ್ಬೋವೈರಸ್‌ಗಳು ಸೊಳ್ಳೆಗಳು  ಮತ್ತು ಉಣ್ಣಿಗಳಂತಹ ಆರ್ತ್ರೋಪಾಡ್‌ಗಳಿಂದ ಹರಡುತ್ತವೆ. 

Written by - Ranjitha R K | Last Updated : Apr 2, 2022, 12:44 PM IST
  • ಮತ್ತೊಂದು ಮಹಾಮಾರಿಯ ಅಪಾಯ
  • ಕೀಟಗಳಿಂದ ಹರಡಲಿದೆ ರೋಗ
  • WHO ನೀಡಿದೆ ಎಚ್ಚರಿಕೆ
ಕರೋನಾ ನಂತರ ಜನರನ್ನು ಕಾಡಲಿದೆ ಈ ವೈರಸ್ , WHO ಎಚ್ಚರಿಕೆ ! title=
New Virus threat (File photo)

ನವದೆಹಲಿ : ಕರೋನಾ ಮಹಾಮಾರಿ (Coronavirus)ಇಡೀ ಜಗತ್ತನ್ನು ತಲ್ಲಣಗೊಳಿಸಿದೆ. ಇದರಿಂದಾಗಿ ಅಪಾರ ಪ್ರಮಾಣದ ಪ್ರಾಣಹಾನಿ, ಆಸ್ತಿ ಪಾಸ್ತಿ ನಷ್ಟ ಸಂಭವಿಸಿದೆ.  ದೇಶಗಳ ಆರ್ಥಿಕತೆಯ ಮೇಲೂ ಪರಿಣಾಮ ಬೀರಿದೆ.  ಈ ಮಧ್ಯೆ, ಜನರನ್ನು  ಮತ್ತೊಂದು ಸಾಂಕ್ರಾಮಿಕ ರೋಗ ಕಾಡಬಹುದು ಎಂಬ ಎಚ್ಚರಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ (WHO)ನೀಡಿದೆ. 

ಕೀಟಗಳು ಸಾಂಕ್ರಾಮಿಕ ರೋಗವನ್ನು ಹರಡಬಹುದು :
ವರದಿಯ ಪ್ರಕಾರ ಮುಂದೆ ಎದುರಾಗಲಿರುವ ಸಾಂಕ್ರಾಮಿಕ ರೋಗವು ಕೀಟಗಳಿಂದ ಹರಡುವ ರೋಗಗಳಾಗಿರಲಿದೆ (Insect-Borne Diseases)  WHO ಹೇಳಿದೆ. ಕೀಟಗಳು ಇಡೀ ಜಗತ್ತಿಗೆ ಅಪಾಯವನ್ನುಂಟು ಮಾಡುತ್ತಿವೆ. ಹಳದಿ ಜ್ವರ (Yellow Fever) , ಜಿಕಾ, ಚಿಕೂನ್‌ಗುನ್ಯಾ ಮತ್ತು ಡೆಂಗ್ಯೂ ಮುಂತಾದ ಆರ್ಬೋವೈರಸ್‌ಗಳು ಸೊಳ್ಳೆಗಳು (Mosquito) ಮತ್ತು ಉಣ್ಣಿಗಳಂತಹ ಆರ್ತ್ರೋಪಾಡ್‌ಗಳಿಂದ ಹರಡುತ್ತವೆ. ಇವುಗಳ ಕಾರಣದಿಂದಲೇ ಮುಂದಿನ ಸಾಂಕ್ರಾಮಿಕ ರೋಗವು ಬರಬಹುದು ಎನ್ನಲಾಗಿದೆ. 

ಇದನ್ನೂ ಓದಿ : ಅಫ್ಘಾನಿಸ್ತಾನದ ಹೆರಾತ್ ನಗರದಲ್ಲಿ ಸ್ಫೋಟ, 12 ಸಾವು; 25 ಮಂದಿಗೆ ಗಾಯ

ತಂತ್ರವನ್ನು ರೂಪಿಸುವ ತಜ್ಞರು :
ಈ ಕೀಟಗಳು ಹೆಚ್ಚಾಗಿ ಉಷ್ಣವಲಯದಲ್ಲಿ ಬೆಳೆಯುತ್ತವೆ. ಅಲ್ಲಿ ಸುಮಾರು ನಾಲ್ಕು ಶತಕೋಟಿ ಜನರು ವಾಸಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಈಗ ತಜ್ಞರು ಸಾಂಕ್ರಾಮಿಕ ರೋಗವನ್ನು ತಡೆಯಲು ತಂತ್ರವನ್ನು ರೂಪಿಸಲು ಪ್ರಯತ್ನಿಸುತ್ತಿದ್ದಾರೆ.  ಕಳೆದ 2 ವರ್ಷಗಳಿಂದ ನಾವು ಕೋವಿಡ್ (Coronavirus) ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿದ್ದೇವೆ. ಎದುರಾಗುವ ಯಾವುದೇ ಅಪಾಯಗಳಿಗೆ ಪ್ರತಿಯೊಬ್ಬರೂ ಸಿದ್ದರಿರಬೇಕು ಎನ್ನುವುದನ್ನು ನಾವು ಕಲಿತಿದ್ದೇವೆ ಎಂದು WHO ಅಧಿಕಾರಿ  ಹೇಳಿದ್ದಾರೆ.  

ಕಾಣಿಸಿಕೊಂಡಿತ್ತು SARS ಮತ್ತು ಇನ್ಫ್ಲುಯೆನ್ಜಾ :
2003 ರಲ್ಲಿ SARS ಮತ್ತು 2009 ರಲ್ಲಿ ಇನ್ಫ್ಲುಯೆನ್ಜಾ ಕಾಣಿಸಿಕೊಂಡಿತ್ತು. ಅದೇ ರೀತಿ, ಮುಂದಿನ ಸಾಂಕ್ರಾಮಿಕ ರೋಗದ ಬಗ್ಗೆ ಸಾಕಷ್ಟು ಭಯವಿದೆ. ಇದು ಹೊಸ ಆರ್ಬೋವೈರಸ್ ಕಾರಣದಿಂದ ಉಂಟಾಗಬಹುದು. 2016 ರಿಂದ, 89 ಕ್ಕೂ ಹೆಚ್ಚು ದೇಶಗಳು ಝಿಕಾ ವೈರಸ್ ಹರಡುವಿಕೆಯನ್ನು ಎದುರಿಸುತ್ತಿವೆ.  2000ದ  ಆರಂಭದಿಂದಲೂ ಹಳದಿ ಜ್ವರದ ಅಪಾಯವು ಹೆಚ್ಚುತ್ತಿದೆ. 

ಇದನ್ನೂ ಓದಿ : "ನೀವು ಪ್ರಧಾನಿಯಾಗುವ ಮೊದಲು ಪಾಕಿಸ್ತಾನ ಚೆನ್ನಾಗಿತ್ತು...!"

ಈ ಪ್ರತಿಯೊಂದು ರೋಗಗಳ ಮೇಲ್ವಿಚಾರಣೆ ಮತ್ತು ಸಂಶೋಧನೆಯು ಹೆಚ್ಚು ಪ್ರಯೋಜನವನ್ನು ನೀಡಿದೆ ಎಂದು ​WHO ನ ತುರ್ತು ಕಾರ್ಯಕ್ರಮದ ಮುಖ್ಯಸ್ಥ ಡಾ ಮೈಕ್ ರಯಾನ್, ಹೇಳಿದ್ದಾರೆ. ಇದರ ಹೊರತಾಗಿಯೂ, ನಾವು ಇನ್ನೂ ಮರು ಮೌಲ್ಯಮಾಪನ ಮಾಡಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News