ಕೇರಳ ಪ್ರವಾಹದ ಬಗ್ಗೆ ಅಮೆರಿಕಾದ ನಾಸಾ ಹೇಳಿದ್ದೇನು ಗೊತ್ತಾ?

    

Last Updated : Aug 22, 2018, 07:40 PM IST
ಕೇರಳ ಪ್ರವಾಹದ ಬಗ್ಗೆ ಅಮೆರಿಕಾದ ನಾಸಾ ಹೇಳಿದ್ದೇನು ಗೊತ್ತಾ? title=

ವಾಷಿಂಗ್ಟನ್: ಶತಮಾನದಲ್ಲಿಯೇ ಕಂಡರಿಯದ ಭೀಕರ ಪ್ರವಾಹಕ್ಕೆ ಕೇರಳ ಮತ್ತು ಕರ್ನಾಟಕದ ಕೊಡಗು ಸಾಕ್ಷಿಯಾಗಿದೆ.ಈಗ ಈ ಪ್ರವಾಹಕ್ಕೆ ಕಾರಣವಾದ ಅಂಶಗಳ ಮೇಲೆ ಬೆಳಕು ಚೆಲ್ಲುವ ವೀಡಿಯೋವೊಂದನ್ನು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ  ನಾಸಾ ಬಿಡುಗಡೆ ಮಾಡಿದೆ.

ಈ ವಿಡಿಯೋದಲ್ಲಿ ನಿರಂತರವಾದ ಮಳೆಯಿಂದಾಗಿ ಈ ಭೀಕರ ಪ್ರವಾಹ ಉಂಟಾಗಿದೆ ಎನ್ನುವುದನ್ನು ಈ ವೀಡಿಯೋ ತೋರಿಸುತ್ತದೆ. ಅಮೇರಿಕಾದ ನಾಸಾ  ಮತ್ತು ಜಪಾನ್ ದೇಶದ  ಬಾಹ್ಯಕಾಶ ಸಂಸ್ಥೆ  ಜಿಪಿಎಂ ನ ಮೂಲಕ ಮಳೆ ಪ್ರಮಾಣದ ಅಳತೆಯನ್ನು ಕಂಡು ಹಿಡಿದಿದೆ. ಈ ಡಾಟಾವನ್ನು  ಪ್ರತಿ ಅರ್ಧಗಂಟೆಗೊಮ್ಮೆ ದಾಖಲಿಸುತ್ತದೆ. 

ನಾಸಾ ವಿಡಿಯೋದ ಬ್ಯಾಂಡ್ ನಲ್ಲಿ ಸಾಮಾನ್ಯವಾಗಿ ಪಶ್ಚಿಮ ಘಟ್ಟದ ಭಾಗದಲ್ಲಿ ವಾರದ ಮಳೆ ಪ್ರಮಾಣ 10 ಇಂಚಿನಷ್ಟು ಇರುತ್ತದೆ. ಹೆಚ್ಚೆದಂದರೆ ಅದು 16 ಇಂಚು, ಆದರೆ ಈ ಬಾರಿ ಅದು 18.5 ಇಂಚಿನವರೆಗೆ ತಲುಪಿದೆ ಎಂದು ನಾಸಾ  ತಿಳಿಸಿದೆ. ಮಳೆಯ ಪ್ರಮಾಣವು ತೀವ್ರವಾಗಿ  ಹೆಚ್ಚಳವಾಗಿರುವುದು ಅಗಸ್ಟ್ 13 ರಿಂದ 20 ರವರೆಗಿನ ಅವಧಿಯಲ್ಲಿ  ಲೆಕ್ಕಾಚಾರ ಹಾಕಿದೆ.

ಕೇರಳ ಈ ಭೀಕರ ಪ್ರವಾಹದಿಂದಾಗಿ ಸುಮಾರು 3.14 ಲಕ್ಷ ಜನರು ನಿರಾಶ್ರಿತರಾಗಿದ್ದಾರೆ.ಅಲ್ಲದೆ 231 ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

Trending News