ಜಕಾರ್ತ: ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟದ ನಂತರ ಸುನಾಮಿ ಸಂಭವಿಸಿದ್ದು, ಸುನಾಮಿ ಮತ್ತೊಮ್ಮೆ ಶನಿವಾರದಂದು ಇಂಡೋನೇಷ್ಯಾದಲ್ಲಿ ಹಾನಿ ಉಂಟುಮಾಡಿದೆ. ಸುನಾಮಿಯಲ್ಲಿ ಸುಮಾರು 43 ಮಂದಿ ಜಲಸಮಾಧಿಯಾಗಿರುವ ಬಗ್ಗೆ ವರದಿಯಾಗಿದೆ. ಇದಲ್ಲದೆ 600 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೇ ಎನ್ನಲಾಗಿದೆ.
ಇಂಡೋನೇಷ್ಯಾದ ದಕ್ಷಿಣ ಸುಮಾತ್ರದಲ್ಲಿ ಮತ್ತು ಜಾವಾದ ಪಶ್ಚಿಮ ತುದಿಯಲ್ಲಿ ಯಾವ ಮುನ್ಸೂಚನೆಯೂ ಇಲ್ಲದೇ ಶನಿವಾರ ರಾತ್ರಿ 9.30ರ ವೇಳೆಗೆ (ಸ್ಥಳೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 2.30ಕ್ಕೆ) ಈ ಅವಘದ ಸಂಭವಿಸಿದೆ.
'ಚೈಲ್ಡ್' ಎಂದು ಕರೆಯಲಾಗುವ ಅನಕ್ ಕ್ರಾಕ್ಟೊ ಜ್ವಾಲಾಮುಖಿಯ ಸ್ಫೋಟದಿಂದ ಈ ಸುನಾಮಿ ಸಂಭವಿಸಿದೆ ಎಂದು ಇಂಡೊನೇಷ್ಯಾದ ಭೂಗರ್ಭ ಶಾಸ್ತ್ರಜ್ಞರು ಹಾಗೂ ವಿಜ್ಞಾನಿಗಳು ತಿಳಿಸಿದ್ದಾರೆ.
ಸುನಾಮಿಯಿಂದಾಗಿ 20 ಮೀಟರ್ ಎತ್ತರದ ಭಾರೀ ಗಾತ್ರದ ಅಲೆಗಳು ಸಮುದ್ರ ತೀರ ಪ್ರದೇಶಗಳಿಗೆ ಅಪ್ಪಳಿಸಿದ್ದು, ಹೋಟೆಲ್ ಗಳು ಸೇರಿದಂತೆ ನೂರಾರು ಮನೆಗಳು ಹಾನಿಯಾಗಿವೆ ಎಂದು ಸರ್ಕಾರ ತಿಳಿಸಿದೆ.
ಇದಕ್ಕೂ ಮೂಡಲು ಸೆಪ್ಟೆಂಬರ್ ನಲ್ಲಿ ಸಂಭವಿಸಿದ ಪ್ರಬಲ ಭೂಕಂಪ ಮತ್ತು ಸುನಾಮಿಯಿಂದಾಗಿ 832 ಮಂದಿ ಸಾವನ್ನಪ್ಪಿದ್ದರು.
ಪಪುವಾ ಪೂರ್ವ ಪ್ರಾಂತ್ಯದ ಡಿಸೆಂಬರ್ 6 ರಂದು 6.1 ತೀವ್ರತೆಯ ಭೂಕಂಪ ಸಂಭವಿಸಿತು, ಆದರೆ ಸುನಾಮಿ ಎಚ್ಚರಿಕೆ ನೀಡಲಾಗಲಿಲ್ಲ. ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಡಿಸೆಂಬರ್ 16 ರಂದು ಸ್ಥಳೀಯ ಸಮಯದಲ್ಲಿ ಸಂಜೆ 6 ಗಂಟೆಯ ವೇಳೆ ಭೂಕಂಪ ಸಂಭವಿಸಿತು. ಪ್ರಾಂತ್ಯದ ರಾಜಧಾನಿ ಜಯಪುರದಿಂದ ನೈರುತ್ಯ ಸುಮಾರು 158 ಕಿಲೋಮೀಟರ್ಗಳಷ್ಟು ಭೂಕಂಪದ ಆಳವು 61 ಕಿ.ಮೀ. ದಾಖಲಾಗಿತ್ತು.