Viral News: Corona ಸೋಂಕಿತನಾಗಲು ಬಯಸುತ್ತಿದ್ದಾನೆ ಓರ್ವ ವ್ಯಕ್ತಿ! ಅದಕ್ಕಾಗಿ ಹಣ ಕೂಡ ಖರ್ಚು ಮಾಡಲು ಸಿದ್ಧ ಅಂತಾನೆ

Man Wants To Become Covid-19 Positive - ಒಬ್ಬ ವ್ಯಕ್ತಿಯು ಕೊರೊನಾವೈರಸ್ ಸೋಂಕಿಗೆ ಒಳಗಾಗಲು ಎಷ್ಟು ಹತಾಶನಾಗಿದ್ದಾನೆ ಎಂದರೆ ಅದಕ್ಕಾಗಿ ಅವನು ಹಣವನ್ನು ಸಹ ಖರ್ಚು ಮಾಡಲು ಸಿದ್ಧನಾಗಿದ್ದಾನೆ. ಇದರ ಹಿಂದಿನ ಕಾರಣ ತಿಳಿದರೆ ನೀವೂ ಕೂಡ ಆಶ್ಚರ್ಯಪಡುವಿರಿ.

Written by - Nitin Tabib | Last Updated : Jan 16, 2022, 06:21 PM IST
  • ಕೊರೊನಾ ಸೋಂಕಿತ ಮಹಿಳೆಯ ಹುಡುಕಾಟ ನಡೆಸುತ್ತಿರುವ ವ್ಯಕ್ತಿ.
  • ಹಣ ಕೊಟ್ಟು ಕೊರೊನಾ ಸೋಂಕು ತಗುಲಿಸಿಕೊಳ್ಳಲು ಹತಾಶನಾದ ವ್ಯಕ್ತಿ.
  • ಕಾರಣ ಕೇಳಿ ನೀವೂ ಆಶ್ಚರ್ಯಚಕಿತರಾಗುವಿರಿ.
Viral News: Corona ಸೋಂಕಿತನಾಗಲು ಬಯಸುತ್ತಿದ್ದಾನೆ ಓರ್ವ ವ್ಯಕ್ತಿ! ಅದಕ್ಕಾಗಿ ಹಣ ಕೂಡ ಖರ್ಚು ಮಾಡಲು ಸಿದ್ಧ ಅಂತಾನೆ title=
Man Wants To Become Covid-19 Positive (File Photo)

ನವದೆಹಲಿ: Man Wants To Become Covid-19 Positive - ಇಂದು ಕರೋನಾ ವೈರಸ್‌ನ (Coronavirus) ಹೆಸರು ಕೇಳಿದರೆ ಸಾಕು ಜನರು ತಕ್ಷಣ  ಭಯಭೀತರಾಗುತ್ತಾರೆ, ಆದರೆ ಒಬ್ಬ ವ್ಯಕ್ತಿಯು ತನ್ನನ್ನು ಕರೋನಾ ಪಾಸಿಟಿವ್ (Covid-19 Postive Girl) ಮಾಡುವ ಹುಡುಗಿಯನ್ನು ತೀವ್ರವಾಗಿ ಹುಡುಕುತ್ತಿದ್ದಾನೆ. ಇದಕ್ಕಾಗಿ ಅವರು ಹಣವನ್ನು ಖರ್ಚು ಮಾಡಲು ಸಿದ್ಧನಾಗಿದ್ದಾನೆ. ಹುಡುಗಿ ಕರೋನಾ ಪಾಸಿಟಿವ್ ಆಗಿರಬೇಕು ಎಂಬುದು ಒಂದೇ ಷರತ್ತು.

ಥೈಲ್ಯಾಂಡ್‌ನ (Thailand) ನಿವಾಸಿಯಾಗಿರುವ ವ್ಯಕ್ತಿಯೊಬ್ಬ ಕರೋನಾ (Covid-19) ಪಾಸಿಟಿವ್ ಇರುವ ಮಹಿಳೆ ಅಥವಾ ಹುಡುಗಿಯೊಂದಿಗೆ ಪಾರ್ಟಿ ಮಾಡಲು ಬಯಸುತ್ತಿದ್ದಾನೆ.  ಪಾರ್ಟಿಯ ಸಮಯದಲ್ಲಿ ಹುಡುಗಿ ಆತನನ್ನು ಕೊರೊನಾ ಪಾಸಿಟಿವ್ ಮಾಡಲಿ ಎಂಬುದು ಮಾತ್ರ ಅವನ ಉದ್ದೇಶ. ಅಷ್ಟೇ ಅಲ್ಲ ಆತ ಯಾವುದೇ ಪ್ರಣಯ ಸಂಬಂಧಕ್ಕೆ ಹೋಗಲು ಬಯಸುವುದಿಲ್ಲ ಎಂದೂ ಕೂಡ ಸ್ಪಷ್ಟಪಡಿಸಿದ್ದಾನೆ. ಆದರೆ ಪಾರ್ಟಿಯ ಸಮಯದಲ್ಲಿ ಕೇವಲ ಕರೋನಾ ಪಾಸಿಟಿವ್ ಇರುವ  ಹುಡುಗಿ / ಮಹಿಳೆ ಮಾತ್ರ ಅವನೊಂದಿಗೆ ಇರಬೇಕು ಎಂಬುದು ಆತನ ಇಚ್ಛೆ.

ಇದನ್ನೂ ಓದಿ-VIDEO: ಜ್ವಾಲಾಮುಖಿ ಹೇಗೆ ಸಿಡಿಯುತ್ತದೆ ಗೊತ್ತಾ? ಕ್ಯಾಮೇರಾ ಕಣ್ಣಲ್ಲಿ ಸೆರೆಯಾಗಿದೆ ಈ ಭಯಾನಕ ದೃಶ್ಯ

ಕೊರೊನಾ ಪಾಸಿಟಿವ್ ಆಗಬೇಕೆಂಬ ತುಡಿತ
ಡೈಲಿ ಸ್ಟಾರ್ ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ವ್ಯಕ್ತಿಯು ತನಗೆ ಬೇಕಾಗಿರುವ ಪರಿಪೂರ್ಣ ಮಹಿಳೆಯನ್ನು  ಹುಡುಕಾಡಲು ಬ್ರೋಕರ್‌ನ ಸಹಾಯವನ್ನು ಕೂಡ ಪಡೆದುಕೊಂಡಿದ್ದಾನೆ ಎನ್ನಲಾಗಿದೆ. ಇದಕ್ಕಾಗಿ ಮಹಿಳೆ ತನ್ನ ಧನಾತ್ಮಕ ಆಂಟಿಜೇನ ಪರೀಕ್ಷೆಯನ್ನು ಆತನಿಗೆ ತೋರಿಸಬೇಕು ಮತ್ತು ನಂತರ ಅವಳು ಆತನನ್ನು ಕರೋನಾ ಪಾಸಿಟಿವ್ ಸಹ  ಮಾಡಬೇಕು ಎಂಬುದೇ ಆತನ ಷರತ್ತು. ಈ ಕೆಲಸಕ್ಕಾಗಿ, ವ್ಯಕ್ತಿಯು 66 ರಿಂದ 110 ಪೌಂಡ್ ಅಂದರೆ ಸುಮಾರು 11 ಸಾವಿರ ರೂಪಾಯಿಗಳನ್ನು ನೀಡಿದ್ದಾನೆ, ಇದಲ್ಲದೆ ಆತ 1300 ರೂಪಾಯಿಗಳ ಬ್ರೋಕರೇಜ್ ಶುಲ್ಕವನ್ನು ಸಹ ನೀಡಿದ್ದಾನೆ. ಈ ವಿಚಿತ್ರ ಬೇಡಿಕೆಯ ವ್ಯಕ್ತಿಯ ಸಂದೇಶವು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ವೈರಲ್ ಆಗುತ್ತಿದೆ. ವ್ಯಕ್ತಿಯ ಈ ವಿಶಿಷ್ಟ ಜಾಹೀರಾತಿನ ಹಿಂದೆ ಥಾಯ್ಲೆಂಡ್‌ನ ಸ್ಥಳೀಯ ಮಾಧ್ಯಮಗಳು ನೀಡಿದ ಕಾರಣವೂ ಸಾಕಷ್ಟು ಆಸಕ್ತಿದಾಯಕವಾಗಿದೆ.

ಇದನ್ನೂ ಓದಿ-Viral Video: ಇಡೀ ಮನೆಯೇ ಸುಟ್ಟು ಕರಕಲಾದರೂ ಬೆಕ್ಕಿನ ಪ್ರಾಣ ಉಳಿಯಿತು, ಭಾವುಕ ವೃದ್ಧನ ವಿಡಿಯೋ ವೈರಲ್!

ಈ ಕಾರಣಕ್ಕಾಗಿ ಆತ ಕೊರೊನಾ ಪಾಸಿಟಿವ್ ಆಗಲು ಬಯಸುತ್ತಿದ್ದಾನೆ
ವಾಸ್ತವವಾಗಿ, ಥೈಲ್ಯಾಂಡ್‌ನ ವಿಮಾ ಕಂಪನಿಗಳು (Medical Insurance) ತಮ್ಮ ಯೋಜನೆಗಳಲ್ಲಿ COVID-19 ಅನ್ನು ಸೇರಿಸಿವೆ. ಒಬ್ಬ ವ್ಯಕ್ತಿಯು ಕರೋನದ ಹಿಡಿತಕ್ಕೆ ಬಂದರೆ, ಆ ವ್ಯಕ್ತಿಗೆ 4 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ. ಈ ಹಿಂದೆ, ವಿಮಾ ಕಂಪನಿಗಳು ಅಷ್ಟೊಂದು ತನಿಖೆ ಮಾಡುತ್ತಿರಲಿಲ್ಲ, ಆದರೆ ಅಧಿಕಾರಿಗಳು ಅಧಿಕಾರಿಗಳು ಮನೆಗಳಿಗೆ ಹೋಗಿ ರೋಗಿಗಳನ್ನು  ನೋಡುತ್ತಿದ್ದಾರೆ. ಹೀಗಾಗಿ  ಜನರು ಕರೋನಾ ಸೋಂಕಿಗೆ ಒಳಗಾಗಲು ಬಯಸುತ್ತಿದ್ದಾರೆ ಎನ್ನಲಾಗಿದೆ.  ಈ ಹಿನ್ನೆಲೆ ಥೈಲ್ಯಾಂಡ್‌ನಲ್ಲಿಯೂ ಸಹ, ಕರೋನಾ ಸೋಂಕಿಗೆ ಒಳಗಾಗುವುದು ಹೇಗೆ ಎಂದು ಅನೇಕ ಜನರು ಹೇಳುತ್ತಿದ್ದಾರೆ.

ಇದನ್ನೂ ಓದಿ-Omicron Latest News: ಐದು ವರ್ಷಕ್ಕಿಂತ ಕೆಳಗಿರುವ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ ಓಮಿಕ್ರಾನ್ ನ ಈ ಲಕ್ಷಣ, ಕೂಡಲೇ ಎಚ್ಚೆತ್ತುಕೊಳ್ಳಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News