Trending News: ಮೊದಲ ವಿವಾಹ ದೀರ್ಘಕಾಲ ಉಳಿಯಲಿಲ್ಲ ಎಂಬ ಕೋಪದಲ್ಲಿ 87 ಬಾರಿ ಹಸೆಮಣೆ ಏರಿದ ಭೂಪ!

Viral News: 88ನೇ ಬಾರಿಗೆ ವಿವಾಹ ಮಾಡಿಕೊಳ್ಳಲು ಹೊರಟಿರುವ ಕಾನ್, ತನ್ನ ಈ ವಿವಾಹದಲ್ಲಿ ಆತ ತನ್ನ ಮಾಜಿ ಪತ್ನಿಯನ್ನು ಪುನಃ ವಿವಾಹವಾಗುತ್ತಿರುವುದು ಇಲ್ಲಿ ವಿಶೇಷ. ಈತನು ಮಾಡಿಕೊಂಡಿರುವ ವಿವಾಹಗಳ ಸಂಖ್ಯೆಯನ್ನು ನೋಡಿ ಜನರು ಈತನಿಗೆ 'ಪ್ಲೇ ಬಾಯ್ ಕಿಂಗ್' ಅಂತಾನೆ ಕರೆಯಲಾರಂಭಿಸಿದ್ದಾರೆ. ಮೊಟ್ಟಮೊದಲ ಬಾರಿಗೆ ಈ ಮಹಿಳೆಯನ್ನು ವಿವಾಹವಾದಾಗ ಆತನ ವಿವಾಹ ಕೇವಲ ಒಂದು ತಿಂಗಳವರೆಗೆ ಮಾತ್ರ ಸರಿಯಾಗಿತ್ತು ಮತ್ತು ಉಭಾಯರು ಬೇರ್ಪಟ್ಟು ಸುದೀರ್ಘ ಅವಧಿಯೇ ಕಳೆದುಹೋಗಿದೆ.  

Written by - Nitin Tabib | Last Updated : Nov 2, 2022, 08:26 PM IST
  • ಕಾನ್ ಈ ಮಹಿಳೆಯೊಂದಿಗೆ ಮೊದಲ ಬಾರಿಗೆ ಮದುವೆಯಾದಾಗ, ಸಂಸಾರ ಕೇವಲ ಒಂದು ತಿಂಗಳು ಮಾತ್ರ ಸುಗಮವಾಗಿ ನಡೆದಿತ್ತು.
  • ಪ್ರಸ್ತುತ ಇಬ್ಬರೂ ಬೇರ್ಪಟ್ಟು ಬಹಳ ದಿನಗಳೇ ಕಳೆದಿವೆ.
  • ಇದಾದ ನಂತರವೂ ಇಬ್ಬರ ನಡುವೆ ಗಾಢವಾದ ಪ್ರೀತಿ ಇತ್ತು ಎನ್ನಲಾಗಿದೆ.
Trending News: ಮೊದಲ ವಿವಾಹ ದೀರ್ಘಕಾಲ ಉಳಿಯಲಿಲ್ಲ ಎಂಬ ಕೋಪದಲ್ಲಿ 87 ಬಾರಿ ಹಸೆಮಣೆ ಏರಿದ ಭೂಪ! title=
Trending News

Trending Content: ಒಬ್ಬ ವ್ಯಕ್ತಿ ತನ್ನ 14 ನೇ ವಯಸ್ಸಿನಲ್ಲಿ ತನ್ನ ಮೊದಲ ವಿವಾಹವಾಗಿದ್ದಾನೆ. ಆದರೆ, ಆತ ತೋರಿದ ಕೆಟ್ಟ ವರ್ತನೆಯಿಂದಾಗಿ, ಆತನ ಮೊದಲ ಸಂಬಂಧವು ಹೆಚ್ಚು ಕಾಲ ಉಳಿಯಲಿಲ್ಲ ಮತ್ತು ಎರಡು ವರ್ಷಗಳ ನಂತರ ವಿಚ್ಛೇದನ ನಡೆದುಹೋಗಿದೆ. ಈ ಘಟನೆಯಿಂದ ವ್ಯಕ್ತಿ ತುಂಬಾ ಕೋಪಗೊಂಡಿದ್ದಾನೆ, ಇದಾದ ನಂತರ ಆ ವ್ಯಕ್ತಿ ಒಂದಾದ ಮೇಲೊಂದರಂತೆ ವಿವಾಹ ಮಾಡಿಕೊಳ್ಳಲು ಆರಂಭಿಸಿದ್ದು. ಇದೀಗ ಈ ವ್ಯಕ್ತಿ 88ನೇ ಬಾರಿಗೆ ವರನಾಗಲು ಹೊರಟಿದ್ದಾನೆ ಎಂದು ತಿಳಿದರೆ ನೀವೂ ಕೂಡ ನಿಬ್ಬೆರಗಾಗುವಿರಿ. ಇಲ್ಲಿ ವಿಶೇಷತೆ ಎಂದರೆ ಹುಡುಗಿಯರು ಈ ವ್ಯಕ್ತಿಯ ಹಿಂದೆ ಹುಚ್ಚರಂತೆ ಬಿದ್ದಿದ್ದಾರೆ. ಇದೆ ಕಾರಣದಿಂದ ವ್ಯಕ್ತಿಗೆ ಪ್ಲೇಬಾಯ್ ಎಂಬ ಬಿರುದು ಕೂಡ ಸಿಕ್ಕಿದೆ.

ಇದನ್ನೂ ಓದಿ-Viral Video: ಬಡಪಾಯಿ ಹಸು ತೋರಿದ ಧೈರ್ಯದ ಮುಂದೆ ಶಕ್ತಿಯನ್ನೇ ಕಳೆದುಕೊಂಡ ಕ್ರೂರಿ ಮೊಸಳೆ... ವಿಡಿಯೋ ನೋಡಿ

87 ಬಾರಿ ವಿವಾಹವಾದ ಭೂಪ
ಟ್ರಿಬನ್‌ನ್ಯೂಸ್‌ನ ವರದಿಯ ಪ್ರಕಾರ, ಇಂಡೋನೇಷ್ಯಾದ ಪಶ್ಚಿಮ ಜಾವಾದ ಮಜಲೆಂಗ್ಕಾ ನಿವಾಸಿ 61 ವರ್ಷದ 'ಕಾನ್' ಎಂಬ ವ್ಯಕ್ತಿ ಈ ಹಿಂದೆ 87 ಬಾರಿ ಮದುವೆಯಾಗಿದ್ದಾನೆ. ಇದೀಗ ಅವನು 88ನೇ ಮದುವೆಯಾಗಲಿದ್ದಾರೆ. ಈ ಮದುವೆಯಲ್ಲಿ ಅತ್ಯಂತ ಮುಖ್ಯವಾದ ವಿಷಯವೆಂದರೆ ಕಾನ್ ತನ್ನ ಮಾಜಿ ಪತ್ನಿಯೋರ್ವಳನ್ನೇ ಮರುವಿವಾಹವಾಗುತ್ತಿದ್ದಾನೆ. ವ್ಯಕ್ತಿ ಇಷ್ಟೊಂದು ಬಾರಿ ಮದುವೆಯಾಗಿದ್ದಾನೆ ಎಂಬ ಕಾರಣಕ್ಕಾಗಿ ಆತನಿಗೆ 'ಪ್ಲೇಬಾಯ್ ಕಿಂಗ್' ಎಂಬ ಬಿರುದು ನೀಡಲಾಗಿದೆ. ಕಾನ್ ವೃತ್ತಿಯಲ್ಲಿ ಓರ್ವ ಕೃಷಿಕನಾಗಿದ್ದಾನೆ. ಆತನ ಮಾಜಿ ಪತ್ನಿ ಅವನನ್ನು ವಿವಾಹವಾಗಲು ಸಿದ್ಧವಾದಾಗ, ಆಕೆಗೆ ನಿರಾಕರಿಸಲು ಸಾಧ್ಯವಾಗಲಿಲ್ಲ ಎಂದು ಕಾನ್ ಹೇಳುತ್ತಾನೆ.

ಇದನ್ನೂ ಓದಿ- Relationships:ಎಂಟು ಪುರುಷರ ಜೊತೆಗೆ ಸಂಬಂಧ ಬೆಳೆಸಿ 11 ಮಕ್ಕಳು, 30 ಮಕ್ಕಳ ಪ್ಲ್ಯಾನಿಂಗ್

ಮಾಜಿ ಪತ್ನಿಯನ್ನೇ ಮರುವಿವಾಹವಾಗುತ್ತಿದ್ದಾನೆ
ಕಾನ್ ಈ ಮಹಿಳೆಯೊಂದಿಗೆ ಮೊದಲ ಬಾರಿಗೆ ಮದುವೆಯಾದಾಗ, ಸಂಸಾರ ಕೇವಲ ಒಂದು ತಿಂಗಳು ಮಾತ್ರ ಸುಗಮವಾಗಿ ನಡೆದಿತ್ತು. ಪ್ರಸ್ತುತ ಇಬ್ಬರೂ ಬೇರ್ಪಟ್ಟು ಬಹಳ ದಿನಗಳೇ ಕಳೆದಿವೆ. ಇದಾದ ನಂತರವೂ ಇಬ್ಬರ ನಡುವೆ ಗಾಢವಾದ ಪ್ರೀತಿ ಇತ್ತು ಎನ್ನಲಾಗಿದೆ. ಹೀಗಾಗಿ ಈಗ ಮತ್ತೊಮ್ಮೆ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮಹಿಳೆಯರಿಗೆ ಇಷ್ಟವಾಗದ ಕೆಲಸವನ್ನು ನಾನು ಮಾಡಲು ಬಯಸುವುದಿಲ್ಲ ಎಂದು ಕಾನ್ ಹೇಳುತ್ತಾನೆ. ಅಷ್ಟೇ ಅಲ್ಲ ಮಹಿಳೆಯರ ಭಾವನೆಗಳೊಂದಿಗೆ ನಾನು ಆಟವಾಡುವುದಿಲ್ಲ ಎನ್ನುತ್ತಾನೆ. ಅನೈತಿಕ ಸಂಬಂಧಕ್ಕಿಂತ ಅವರನ್ನು ಮದುವೆಯಾಗುವುದು ಉತ್ತಮ ಎನ್ನುತ್ತಾನೆ. ಕಾನ್ ಇಷ್ಟೊಂದು ಮದುವೆಯಾಗಿದ್ದರೂ ಕೂಡ ಆತನಿಗೆ ಎಷ್ಟು ಜನ ಮಕ್ಕಳಿದ್ದಾರೆ ಎಂಬುದರ ಕುರಿತು ಮಾಹಿತಿ ಇದುವರೆಗೆ ಸಿಕ್ಕಿಲ್ಲ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News