Video: ಡ್ರೈವರ್ ಬ್ರೇಕ್ ಬದಲು ಆಕ್ಸಿಲೇಟರ್ ಒತ್ತಿದ್ದಾಗ ಮುಂದೆ ಆಗಿದ್ದೇನು ಗೊತ್ತೇ?

ನ್ಯೂಜೆರ್ಸಿ ಮಹಿಳೆಯೊಬ್ಬಳು ತನ್ನ ಕಾರಿನ ಬ್ರೇಕ್ ಬದಲು ಆಕ್ಸಿಲೆಟರ್ ಒತ್ತಿದ ಪರಿಣಾಮವಾಗಿ ಕಾರು ನದಿ ಒಳಗೆ ಹಾರಿದೆ.

Last Updated : Jul 18, 2019, 03:46 PM IST
Video: ಡ್ರೈವರ್ ಬ್ರೇಕ್  ಬದಲು ಆಕ್ಸಿಲೇಟರ್ ಒತ್ತಿದ್ದಾಗ ಮುಂದೆ ಆಗಿದ್ದೇನು ಗೊತ್ತೇ?     title=
Video grab

ನವದೆಹಲಿ: ನ್ಯೂಜೆರ್ಸಿ ಮಹಿಳೆಯೊಬ್ಬಳು ತನ್ನ ಕಾರಿನ ಬ್ರೇಕ್ ಬದಲು ಆಕ್ಸಿಲೆಟರ್ ಒತ್ತಿದ ಪರಿಣಾಮವಾಗಿ ಕಾರು ನದಿ ಒಳಗೆ ಹಾರಿದೆ.

ಹೆಕನ್ ಸಾಕ್ ಫೈರ್ ವಿಭಾಗವು ಈಗ ಫೇಸ್ ಬುಕ್ ಖಾತೆಯಲ್ಲಿ ಈ ವೀಡಿಯೋವನ್ನು ಶೇರ್ ಮಾಡಿಕೊಂಡಿದೆ. ವಾಶ್ ಮಾಡಲು ಕಾರ್ ತೆರಳುತ್ತಿತ್ತು, ಈ ವೇಳೆ ಅಚಾನಕ್ಕಾಗಿ ಬ್ರೇಕ್ ಬದಲು ಆಕ್ಸಿಲೇಟರ್ ನ್ನು ಒತ್ತಲಾಗಿದೆ. ಈ ಹಿನ್ನಲೆಯಲ್ಲಿ ಕಾರು ನೇರವಾಗಿ ನದಿಯೋಳಕ್ಕೆ ಹಾರಿದೆ ಎನ್ನಲಾಗಿದೆ. ಈಗ ನೀರಿನಲ್ಲಿ ಕಾರು ಮುಳುಗಿರುವ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.

ಇದರ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು, ಅವುಗಳನ್ನು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಅದೃಷ್ಟವಶಾತ್ ಈಗ ಇಬ್ಬರು ಗಂಭೀರ ಗಾಯದಿಂದ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ. ಮುನ್ನೆಚರಿಕೆ ಕ್ರಮವಾಗಿ ಈಗ ಚಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. 

ಈ ಹಿಂದೆ ಇದೇ ಮಾದರಿಯ ಘಟನೆಯು ಚೀನಾದಲ್ಲಿ ಸಂಭವಿಸಿತ್ತು, ಆಗ ಹಿರಿಯ ಮಹಿಳೆಯೊಬ್ಬಳು ಬ್ರೇಕ್ ಬದಲು ಆಕ್ಸಿಲೇಟರ್ ನ್ನು ಒತ್ತಿದ್ದಳು.

Trending News