Corona ಪ್ರಕೋಪದ ನಡುವೆಯೇ WHO ನಿಂದ ಅಧಿಕೃತವಾಗಿ ಹೊರಬಿದ್ದ US, UN ಮಹಾ ನಿರ್ದೇಶಕರಿಂದ ಮಾಹಿತಿ

ವಿಶ್ವ ಆರೋಗ್ಯ ಸಂಸ್ಥೆಯೊಂದಿಗಿನ ತನ್ನ ಸಂಬಂಧವನ್ನು ಸಂಪೂರ್ಣವಾಗಿ ಕೊನೆಗೊಳಿಸುವ ಬಗ್ಗೆ ಯುಎಸ್ ಅಧಿಕೃತವಾಗಿ ವಿಶ್ವಸಂಸ್ಥೆಗೆ ಮಾಹಿತಿ ನೀಡಿದೆ.  

Last Updated : Jul 8, 2020, 12:22 PM IST
Corona ಪ್ರಕೋಪದ ನಡುವೆಯೇ WHO ನಿಂದ ಅಧಿಕೃತವಾಗಿ ಹೊರಬಿದ್ದ US, UN ಮಹಾ ನಿರ್ದೇಶಕರಿಂದ ಮಾಹಿತಿ  title=

ವಾಷಿಂಗ್ಟನ್: ಕರೋನಾ ವೈರಸ್ ಸೋಂಕು ವಿಶ್ವಾದ್ಯಂತ ಹರಡಿರುವ ನಡುವೆಯೇ ವಿಶ್ವ ಆರೋಗ್ಯ ಸಂಸ್ಥೆಯೊಂದಿಗಿನ ತನ್ನ ದೇಶದ ಎಲ್ಲಾ ಸಂಬಂಧಗಳನ್ನು ಕೊನೆಗೊಳಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ವಿಶ್ವಸಂಸ್ಥೆಗೆ ಅಧಿಕೃತವಾಗಿ ಮಾಹಿತಿ ನೀಡಿದೆ. ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದರು.

ಕೋವಿಡ್ -19 ಗೆ ಸಂಬಂಧಿಸಿದಂತೆ ಡಬ್ಲ್ಯುಎಚ್‌ಒ ಚೀನಾ ಪರ ಒಲವು ತೋರುತ್ತಿದೆ ಎಂದು ಯುಎಸ್ ನಿರಂತರವಾಗಿ ಆರೋಪಿಸುತ್ತಿದೆ. ಈ ಜಾಗತಿಕ ಸಾಂಕ್ರಾಮಿಕ ರೋಗವು ಕಳೆದ ವರ್ಷ ಚೀನಾದ ವುಹಾನ್ ನಗರದಲ್ಲಿ ಆರಂಭಗೊಂಡಿತ್ತು. ವಿಶ್ವ ಆರೋಗ್ಯ ಸಂಸ್ಥೆ ಈ ಕುರಿತು ಜಗತ್ತನ್ನು ದಾರಿ ತಪ್ಪಿಸಿದ ಕಾರಣ, ಈ ವೈರಸ್‌ ದಾಳಿಗೆ ವಿಶ್ವಾದ್ಯಂತ ಅರ್ಧ ಮಿಲಿಯನ್‌ಗೂ ಅಧಿಕ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಯುಎಸ್ ಆರೋಪಿಸಿದೆ. ಅದರಲ್ಲೂ ವಿಶೇಷವಾಗಿ ಕೇವಲ ಅಮೇರಿಕಾ ಒಂದರಲ್ಲೇ 1,30,000 ಕ್ಕೂ ಹೆಚ್ಚು ಜನರು ಈ ಮಾರಕ ವೈರಸ್ ದಾಳಿಗೆ ಬಲಿಯಾಗಿದ್ದಾರೆ.

ಕಳೆದ ಏಪ್ರಿಲ್ ನಲ್ಲಿಯೇ ಅಮೇರಿಕಾ WHOಗೆ ತನ್ನ ಧನ ಸಹಾಯ ನಿಲ್ಲಿಸಿತ್ತು
ಟ್ರಂಪ್ ಆಡಳಿತದ WHO ಜೊತೆಗಿನ ತನ್ನ ಸಂಬಂಧಗಳನ್ನು ಪರಿಶೀಲಿಸಲು ಪ್ರಾರಂಭಿಸಿದ ನಂತರ ಏಪ್ರಿಲ್ನಲ್ಲಿ ಯುಎಸ್ WHO ಗೆ ಧನ ಸಹಾಯ ಒದಗಿಸುವುದನ್ನು ನಿಲ್ಲಿಸಿತು. ಇದಾದ ಒಂದು ತಿಂಗಳ ನಂತರ, ಟ್ರಂಪ್ ವಿಶ್ವ ಆರೋಗ್ಯ ಸಂಸ್ಥೆಯೊಂದಿಗಿನ ಸಂಬಂಧವನ್ನು ಕೊನೆಗೊಳಿಸುವುದಾಗಿ ಘೋಷಿಸಿದ್ದರು. ಯುಎಸ್ WHO ನಿಧಿಗೆ ವರ್ಷಕ್ಕೆ 45 ಕೋಟಿ ಡಾಲರ್ ಗಿಂತ ಹೆಚ್ಚಿನ ಕೊಡುಗೆ ನೀಡುತ್ತದೆ. ಚೀನಾದ ಕೊಡುಗೆ ಅಮೆರಿಕದ ಹತ್ತನೇ ಒಂದರಷ್ಟು ಮಾತ್ರ ಇದೆ.

1948 ರಿಂದ ಅಮೇರಿಕಾ WHO ಸದಸ್ಯ ರಾಷ್ಟ್ರವಾಗಿದೆ
ಈ ಕುರಿತು ಹೇಳಿಕೆ ನೀಡಿರುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸ್ಟೀಫನ್ ಡುಜಾರಿಕ್, " ಜುಲೈ 6,2020 ರಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬೀಳುವುದಾಗಿ ಅಮೇರಿಕಾ ಮಾಹಿತಿ ನೀಡಿದ್ದು, ಇದು ಜುಲೈ  06, 2021 ರಿಂದ ಜಾರಿಗೆ ಬರಲಿದೆ" ಎಂದು ಹೇಳಿದ್ದಾರೆ.

ಅಮೇರಿಕ ವಿಶ್ವ ಆರೋಗ್ಯ ಸಂಘಟನೆಯಿಂದ ಹೊರಬೀಳುವ ಎಲ್ಲ ಕಾರ್ಯವಿಧಾನಗಳು ಪೂರ್ಣಗೊಳಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು WHO ಪ್ರಧಾನ ಕಾರ್ಯದರ್ಶಿಯಿಂದ ದೃಢಪಡಿಸಲಾಗುತ್ತಿದೆ ಎಂದು ಡುಜಾರಿಕ್ ಹೇಳಿದ್ದಾರೆ. US  21 ಜೂನ್ 1948 ರಿಂದ ವಿಶ್ವ ಆರೋಗ್ಯ ಸಂಸ್ಥೆಯ ಒಂದು ಸಾಂವಿಧಾನಿಕ ಪಕ್ಷವಾಗಿದೆ.

Trending News