ನವದೆಹಲಿ: ಭಾರತದ ಪ್ರವಾಸದಲ್ಲಿರುವ ವಿಶ್ವಸಂಸ್ಥೆಯಲ್ಲಿನ ಅಮೆರಿಕಾದ ರಾಯಭಾರಿ ನಿಕ್ಕಿ ಹ್ಯಾಲಿ ಇಂದು ದೆಹಲಿಯಲ್ಲಿರುವ ಗುರುದ್ವಾರಕ್ಕೆ ಭೇಟಿ ನೀಡಿದರು.
ಚಾಂದಿನಿ ಚೌಕದಲ್ಲಿರುವ ಸಿಸ್ ಗಂಜ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದ ನಿಕ್ಕಿ ಹ್ಯಾಲಿ ಅಲ್ಲಿರುವ ಸಮುದಾಯದ ಅಡುಗೆ ಮನೆಗೆ ಭೇಟಿ ನೀಡಿ ಚಪಾತಿ ಲಟ್ಟಿಸಿದರು. ಮೂಲತಃ ಸಿಖ್ ಧರ್ಮದವರಾಗಿರುವ ನಿಕ್ಕಿ ಹ್ಯಾಲೆ ಟ್ರಾಂಪ್ ಅವರ ಆಡಳಿತದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿದ ಭಾರತೀಯ ಮೂಲದ ಮಹಿಳೆಯಾಗಿದ್ದಾರೆ.
#WATCH: United States Ambassador to the United Nations #NikkiHaley prepares food for the langar (community kitchen) at Gurudwara Sis Ganj Sahib in Delhi. pic.twitter.com/8j7Y81wlSw
— ANI (@ANI) June 28, 2018
ಈಗ ಭಾರತ ಮತ್ತು ಅಮೇರಿಕಾದ ದ್ವೀಪಕ್ಷೀಯ ಸಂಬಂಧ ವೃದ್ದಿಗಾಗಿ ಪ್ರವಾಸವನ್ನು ಕೈಗೊಂಡಿದ್ದಾರೆ. ಪ್ರವಾಸದ ಮೊದಲ ದಿನದಂದು ಹೂಮಾಯೂನ್ ಸಮಾಧಿಗೆ ಭೇಟಿ ನೀಡಿ ಮಾನವನಿಗೆ ಇರುವ ಇತರ ಸ್ವಾತಂತ್ರ್ಯದಂತೆ ಧಾರ್ಮಿಕ ಸ್ವಾತಂತ್ರ್ಯವು ಕೂಡ ಮಹತ್ವವಾದದ್ದು ಎಂದು ಅವರು ಅಭಿಪ್ರಾಯಪಟ್ಟರು.