ವಿಶ್ವಸಂಸ್ಥೆ ಭಯೋತ್ಪಾದಕರ ಪಟ್ಟಿಯಲ್ಲಿ 139 ಪಾಕಿಸ್ತಾನದ ಉಗ್ರರು!

     

Last Updated : Apr 4, 2018, 03:32 PM IST
ವಿಶ್ವಸಂಸ್ಥೆ ಭಯೋತ್ಪಾದಕರ ಪಟ್ಟಿಯಲ್ಲಿ 139 ಪಾಕಿಸ್ತಾನದ ಉಗ್ರರು! title=

ನವದೆಹಲಿ: ವಿಶ್ವಸಂಸ್ಥೆಯು ನೂತನ ಭಯೋತ್ಪಾದಕರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಇದರಲ್ಲಿ ಪ್ರಮುಖವಾಗಿ 139 ಪಾಕಿಸ್ತಾನದ ಉಗ್ರರು ಪಟ್ಟಿಯಲ್ಲಿದ್ದಾರೆ. 

ಮಂಗಳವಾರದಂದು ಬಿಡುಗಡೆಯಾಗಿರುವ ಈ ಪಟ್ಟಿಯಲ್ಲಿ ವಿಶೇಷವಾಗಿ ಪಾಕಿಸ್ತಾನದ ಉಗ್ರರು ಪ್ರಮುಖ ಹೈಲೆಟ್ ಎಂದು ಹೇಳಬಹುದು. ಅದರಲ್ಲೂ ಮುಖ್ಯವಾಗಿ ಅಲ್ ಖೈದಾದ ಈಗಿನ ನಾಯಕ - ಅಮಾನ್ ಅಲ್ ಜವಾಹರಿ, ದಾವೂದ್ ಇಬ್ರಾಹಿಂ, ಮತ್ತು ಪಾಕಿಸ್ತಾನದ ಐಎಸ್ಐ, ಲೆಫ್ಟಿನಿನ ಹಫಿಜ್ ಸಯೀದ್, ಅವರ ನಿಯೋಗಿಗಳಾದ ಅಬ್ದುಲ್ ಸಲಾಮ್ ಮತ್ತು ಜಾಫರ್ ಇಕ್ಬಾಲ್.

ಇನ್ನು ಭಯೋತ್ಪಾದನೆಗೆ ಹಲವು ಸಂಘಟನೆಗಳು ಕೂಡ ಬೆಂಬಲ ಸೂಚಿಸಿದ್ದು ಅವುಗಳಲ್ಲಿ  ಪ್ರಮುಖವಾಗಿ ಅಲ್ ರಶೀದ್ ಟ್ರಸ್ಟ್, ಹರ್ಕತುಲ್ ಮುಜಾಹಿದೀನ್, ಉಜ್ಬೇಕಿಸ್ತಾನ್ ಇಸ್ಲಾಮಿಕ್ ಮೂವ್ಮೆಂಟ್, ವಫಾ ಹ್ಯುಮಾನಿಟೇರಿಯನ್ ಆರ್ಗನೈಸೇಶನ್, ಜೆಎಂ, ರಬಿತಾ ಟ್ರಸ್ಟ್, ಉಮ್ಮಾ ತಮೀರ್-ಐ-ನೌ, ಅಫಘಾನ್ ಸಪೋರ್ಟ್ ಕಮಿಟಿ, ಇಸ್ಲಾಮಿಕ್ ಹೆರಿಟೇಜ್ ಸೊಸೈಟಿಯ ಪುನರುಜ್ಜೀವನ, ಲಷ್ಕರ್- ಇ-ಝಾಂಗ್ವಿ, ಅಲ್-ಹರ್ಮೈನ್ ಫೌಂಡೇಶನ್, ಇಸ್ಲಾಮಿಕ್ ಜಿಹಾದ್ ಗ್ರೂಪ್, ಅಲ್ ಅಖ್ತರ್ ಟ್ರಸ್ಟ್ ಇಂಟರ್ನ್ಯಾಷನಲ್, ಹರ್ಕತುಲ್ ಜಿಹಾದ್ ಇಸ್ಲಾಮಿ, ತೆಹೀರಿಕ್-ಐ-ತಾಲಿಬಾನ್ ಪಾಕಿಸ್ತಾನ, ಜಮಾತುಲ್ ಅಹ್ರಾರ್ ಮತ್ತು ಖಾಟಿಬಾ ಇಮಾಮ್ ಅಲ್-ಬುಖಾರಿ ಇನ್ನು ಮುಂತಾದ ಹೆಸರುಗಳು ವಿಶ್ವಸಂಸ್ಥೆ ಪಟ್ಟಿಯಲ್ಲಿವೆ.  

Trending News