ರಷ್ಯಾದ ಸದಸ್ಯತ್ವ ಅಮಾನತುಗೊಳಿಸುವ ನಿರ್ಣಯ ಮಂಡಿಸಿದ ವಿಶ್ವಸಂಸ್ಥೆ, ಮತದಾನದಿಂದ ದೂರ ಉಳಿದ ಭಾರತ

ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಗುರುವಾರ (ಏಪ್ರಿಲ್ 7) ದಂದು ಮಾನವ ಹಕ್ಕುಗಳ ಮಂಡಳಿಯಲ್ಲಿ ರಷ್ಯಾದ ಸದಸ್ಯತ್ವವನ್ನು ಅಮಾನತುಗೊಳಿಸುವ ನಿರ್ಣಯವನ್ನು ಅಂಗೀಕರಿಸಿತು.

Written by - Zee Kannada News Desk | Last Updated : Apr 7, 2022, 11:37 PM IST
  • ಒಟ್ಟು 93 ರಾಷ್ಟ್ರಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದರೆ, ಭಾರತ ಸೇರಿದಂತೆ 58 ದೇಶಗಳು ಮತದಾನದಿಂದ ದೂರ ಉಳಿದವು, ಇನ್ನೊಂದೆಡೆಗೆ 24 ದೇಶಗಳು ಕರಡು ನಿರ್ಣಯದ ವಿರುದ್ಧ ಮತ ಚಲಾಯಿಸಿದವು.
 ರಷ್ಯಾದ ಸದಸ್ಯತ್ವ ಅಮಾನತುಗೊಳಿಸುವ ನಿರ್ಣಯ ಮಂಡಿಸಿದ ವಿಶ್ವಸಂಸ್ಥೆ, ಮತದಾನದಿಂದ ದೂರ ಉಳಿದ ಭಾರತ  title=

ನವದೆಹಲಿ: ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಗುರುವಾರ (ಏಪ್ರಿಲ್ 7) ದಂದು ಮಾನವ ಹಕ್ಕುಗಳ ಮಂಡಳಿಯಲ್ಲಿ ರಷ್ಯಾದ ಸದಸ್ಯತ್ವವನ್ನು ಅಮಾನತುಗೊಳಿಸುವ ನಿರ್ಣಯವನ್ನು ಅಂಗೀಕರಿಸಿತು.

193 ಸದಸ್ಯರ ಸಾಮಾನ್ಯ ಸಭೆಯು ವಿಶ್ವಸಂಸ್ಥೆಯ ಉನ್ನತ ಮಾನವ ಹಕ್ಕುಗಳ ಸಂಸ್ಥೆಯಾದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ (UNHRC) ರಷ್ಯಾವನ್ನು ಅಮಾನತುಗೊಳಿಸುವ ಅಮೇರಿಕಾ ನೇತೃತ್ವದ ನಿರ್ಣಯವನ್ನು ಅಂಗೀಕರಿಸಲು ಮತ ಹಾಕಿತು.ಒಟ್ಟು 93 ರಾಷ್ಟ್ರಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದರೆ, ಭಾರತ ಸೇರಿದಂತೆ 58 ದೇಶಗಳು ಮತದಾನದಿಂದ ದೂರ ಉಳಿದವು, ಇನ್ನೊಂದೆಡೆಗೆ 24 ದೇಶಗಳು ಕರಡು ನಿರ್ಣಯದ ವಿರುದ್ಧ ಮತ ಚಲಾಯಿಸಿದವು.

ಇದನ್ನೂ ಓದಿ: Ukraine : "ಮರಿಯುಪೋಲ್‌ನಲ್ಲಿ ರಷ್ಯಾ ಸಾವಿರಾರು ಜನರನ್ನು ಹತ್ಯೆಗೈದಿದೆ": ಝೆಲೆನ್‌ಸ್ಕಿ ಆರೋಪ

47 ಸದಸ್ಯರ ಯುಎನ್‌ಎಚ್‌ಆರ್‌ಸಿಯಿಂದ ರಷ್ಯಾವನ್ನು ಅಮಾನತುಗೊಳಿಸಲು ಮತದಾನದ ಮೂರನೇ ಎರಡರಷ್ಟು ಬಹುಮತದ ಸದಸ್ಯರು ಅಗತ್ಯವಿತ್ತು.ಯುಎನ್ ಜನರಲ್ ಅಸೆಂಬ್ಲಿ ಕರಡು ಅಂಗೀಕರಿಸಿದ ನಿರ್ಣಯವು "ಉಕ್ರೇನ್‌ನಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳು ಮತ್ತು ಮಾನವೀಯ ಬಿಕ್ಕಟ್ಟಿನ ಬಗ್ಗೆ ತೀವ್ರ ಕಳವಳವನ್ನು ವ್ಯಕ್ತಪಡಿಸಿದೆ" ಎಂದು ರಾಯಿಟರ್ಸ್ ವರದಿ ಮಾಡಿದೆ.

ಇದನ್ನೂ ಓದಿ: Career: ಅಮೃತ್ ಮುನ್ನಡೆ ಯೋಜನೆಯಡಿ ಉಚಿತ ಕೋರ್ಸ್ : ಅರ್ಜಿ ಆಹ್ವಾನ

ರಷ್ಯಾದ ಅಮಾನತಿಗೆ ಪ್ರತಿಕ್ರಿಯಿಸಿದ ಉಕ್ರೇನ್, ಯುಎನ್ ಸಂಸ್ಥೆಗಳಲ್ಲಿ "ಯುದ್ಧ ಅಪರಾಧಿಗಳಿಗೆ" ಸ್ಥಳವಿಲ್ಲ ಎಂದು ಹೇಳಿದೆ.ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಟ್ವೀಟ್ ಮಾಡಿ  “ಯುಎನ್ ಮಾನವ ಹಕ್ಕುಗಳ ಮಂಡಳಿಯಲ್ಲಿ ರಷ್ಯಾದ ಸದಸ್ಯತ್ವದ ಹಕ್ಕುಗಳನ್ನು ಇದೀಗ ಅಮಾನತುಗೊಳಿಸಲಾಗಿದೆ. ಮಾನವ ಹಕ್ಕುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ಯುಎನ್ ಸಂಸ್ಥೆಗಳಲ್ಲಿ ಯುದ್ಧ ಅಪರಾಧಿಗಳಿಗೆ ಸ್ಥಾನವಿಲ್ಲ. ಇದಕ್ಕೆ ಸಂಬಂಧಿತ ವಿಶ್ವ ಸಂಸ್ಥೆ ಸಾಮಾನ್ಯ ಸಭೆಯ ನಿರ್ಣಯವನ್ನು ಬೆಂಬಲಿಸಿದ ಮತ್ತು ಇತಿಹಾಸದ ಸರಿಯಾದ ಭಾಗದ ಆಯ್ಕೆ ಮಾಡಿದ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಕೃತಜ್ಞರಾಗಿರುತ್ತೇನೆ' ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News