Ukraine Crisis: YouTube ಬಳಿಕ ಇದೀಗ ರಷ್ಯಾ ಸರ್ಕಾರಿ ಮಾಧ್ಯಮಕ್ಕೆ ಭಾರಿ ಪೆಟ್ಟು ನೀಡಿದ Google

Ukraine Crisis: YouTube ನಂತರ, Google ಭಾನುವಾರದಂದು RT ಸೇರಿದಂತೆ ರಷ್ಯಾದ ಸರ್ಕಾರಿ ಮಾಧ್ಯಮಗಳು ಮತ್ತು ಕೆಲವು ಇತರ ಚಾನಲ್‌ಗಳ ಮೇಲೆ ನಿರ್ಬಂಧ ವಿಧಿಸಿದೆ. ರಷ್ಯಾ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಲ್ಲಿ ವೀಡಿಯೊಗಳೊಂದಿಗೆ ಜಾಹೀರಾತುಗಳಿಗಾಗಿ ಹಣವನ್ನು ಸ್ವೀಕರಿಸದಂತೆ ಗೂಗಲ್ ನಿಷೇಧ ವಿಧಿಸಿದೆ. ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ದಾಳಿಯ ಬಳಿಕ ಫೇಸ್ ಬುಕ್ (Facebook) ಕೂಡ ಇದೆ ಹೆಜ್ಜೆಯನ್ನಿಟ್ಟಿದೆ.  

Written by - Nitin Tabib | Last Updated : Feb 27, 2022, 05:44 PM IST
  • YouTube ಬಳಿಕ ಇದೀಗ ರಷ್ಯಾ ಸರ್ಕಾರಿ ಮಾಧ್ಯಮಕ್ಕೆ ಭಾರಿ ಪೆಟ್ಟು ನೀಡಿದ Google
  • ಜಾಹೀರಾತುಗಳ ಮೂಲಕ ಹಣಗಳಿಕೆಯ ಮೇಲೆ ನಿಷೇಧ ವಿಧಿಸಿದ ಗೂಗಲ್
  • ಯುರೋಪಿಯನ್ ಯೂನಿಯನ್ ಬುಧವಾರ ಮಾರ್ಗರಿಟಾ ಸಿಮೋನಿಯನ್ ಸೇರಿದಂತೆ ಕೆಲವು ವ್ಯಕ್ತಿಗಳ ಮೇಲೆ ನಿಷೇಧ ಘೋಷಿಸಿತ್ತು.
Ukraine Crisis: YouTube ಬಳಿಕ ಇದೀಗ ರಷ್ಯಾ ಸರ್ಕಾರಿ ಮಾಧ್ಯಮಕ್ಕೆ ಭಾರಿ ಪೆಟ್ಟು ನೀಡಿದ Google title=
Ukraine Crisis (File Photo)

ವಾಷಿಂಗ್ಟನ್: YouTube ನಂತರ, Google ಭಾನುವಾರದಂದು ರಷ್ಯಾದ ರಾಜ್ಯ ಮಾಧ್ಯಮ ಸಂಸ್ಥೆ RT ಮತ್ತು ಇತರ ಚಾನಲ್‌ಗಳು ತಮ್ಮ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಲ್ಲಿನ ವೀಡಿಯೊಗಳಲ್ಲಿನ ಜಾಹೀರಾತುಗಳಿಂದ ಹಣವನ್ನು ಸ್ವೀಕರಿಸುವುದನ್ನು ನಿಷೇಧಿಸಿದೆ. ಉಕ್ರೇನ್ ಮೇಲೆ ರಷ್ಯಾದ ದಾಳಿಯ ನಂತರ, ಫೇಸ್‌ಬುಕ್ (Facebook) ರಷ್ಯಾದ (Russia) ಸರ್ಕಾರಿ ಮಾಧ್ಯಮದ ಮೇಲೆ ಇದೇ ರೀತಿಯ ನಿಷೇಧವನ್ನು ವಿಧಿಸಿತ್ತು. ಯೂಟ್ಯೂಬ್‌ನ ಪ್ರಕಟಣೆಯ ಮೊದಲು, ಫೇಸ್‌ಬುಕ್‌ನ ಮಾಲೀಕತ್ವ ಕಂಪನಿ ಮೆಟಾ (Meta) ರಷ್ಯಾದ ಸರ್ಕಾರಿ ಮಾಧ್ಯಮವನ್ನು ಫೇಸ್‌ಬುಕ್‌ನಲ್ಲಿ ಡಿಮೋನಿಟೈಜ್ (Demonetize) ಮಾಡಿತ್ತು.

ಇದನ್ನೂ ಓದಿ-'ಪುಟಿನ್ ಬುದ್ಧಿವಂತರಾಗಿದ್ದಾರೆ ಎನ್ನುವುದು ಸಮಸ್ಯೆಯಲ್ಲ, ನಮ್ಮ ನಾಯಕರು ತುಂಬಾ ಮೂಕರಾಗಿದ್ದಾರೆ'

ಭಾನುವಾರದಂದು Google ಗೂ ಮುನ್ನ, YouTube ರಷ್ಯಾದ ಸರ್ಕಾರದ ಮಾಧ್ಯಮ ಸಂಸ್ಥೆ RT ಸೇರಿದಂತೆ ಹಲವಾರು ರಷ್ಯಾದ ಚಾನಲ್‌ಗಳನ್ನು ತಮ್ಮ ವೀಡಿಯೊಗಳೊಂದಿಗೆ ಜಾಹೀರಾತುಗಳಿಂದ ಹಣ ಗಳಿಸುವುದರ ಮೇಲೆ ನಿಷೇಧ ವಿಧಿಸಿತ್ತು. 'ಅಸಾಧಾರಣ ಸಂದರ್ಭಗಳನ್ನು' ಉಲ್ಲೇಖಿಸಿ, ಯೂಟ್ಯೂಬ್ ಹಲವಾರು ಚಾನೆಲ್‌ಗಳ ಹಣಗಳಿಕೆಯನ್ನು ನಿಷೇಧಿಸುತ್ತಿದೆ ಎಂದು ಯೂಟ್ಯೂಬ್ ಹೇಳಿದೆ. ಇವುಗಳಲ್ಲಿ ಯುರೋಪಿಯನ್ ಒಕ್ಕೂಟದಿಂದ (Europian Union) ಇತ್ತೀಚೆಗಷ್ಟೇ ನಿರ್ಬಂಧನೆಗೆ ಒಳಗಾದ ಹಲವು ಚಾನೆಲ್ಗಳು ಕೂಡ ಶಾಮೀಲಾಗಿವೆ. ವೀಡಿಯೋಗಳಲ್ಲಿ ಜಾಹೀರಾತು ನಿಯೋಜನೆ ಬಹುತೇಕ YouTube ನಿಂದಲೇ  ನಿಯಂತ್ರಿಸಲಾಗುತ್ತದೆ ಎಂಬುದು ಇಲ್ಲಿ ಗಮನಾರ್ಹ. ರಷ್ಯಾದಲ್ಲಿ ಕೆಲವು ಬಳಕೆದಾರರಿಗೆ ಟ್ವಿಟರ್ ಬಳಕೆಯನ್ನು ನಿಷೇಧಿಸಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮ ಕಂಪನಿ ಟ್ವಿಟರ್ (Twitter) ತನ್ನ ಟ್ವೀಟ್‌ನಲ್ಲಿ ತಿಳಿಸಿದೆ.

ಇದನ್ನೂ ಓದಿ-ಬೆಲಾರಸ್ನಲ್ಲಿ ರಷ್ಯಾದ ಶಾಂತಿ ಮಾತುಕತೆಯ ಪ್ರಸ್ತಾಪ ತಿರಸ್ಕರಿಸಿದ ಉಕ್ರೇನ್..!

ಕಳೆದ ಹಲವಾರು ವರ್ಷಗಳಿಂದ, ರಷ್ಯಾ ಸರ್ಕಾರದೊಂದಿಗೆ ಸಂಬಂಧ ಹೊಂದಿರುವ  ಚಾನೆಲ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ YouTube ಅನ್ನು ಕೋರಲಾಗುತ್ತಿದೆ.  ಈ ಚಾನೆಲ್ ಗಳು ಅಪಪ್ರಚಾರ ಮಾಡುತ್ತಿರುವ ಆರೋಪ ಎದುರಿಸುತ್ತಿವೆ. ಅದರಿಂದ ಅವು ಪ್ರಯೋಜನ ಪಡೆಯಬಾರದು ಎಂಬ ಉದ್ದೇಶ ಇದರ ಹಿಂದಿನದ್ದಾಗಿದೆ. ಅಂದಾಜಿನ ಪ್ರಕಾರ, ಡಿಸೆಂಬರ್ 2018 ರಿಂದ ಎರಡು ವರ್ಷಗಳಲ್ಲಿ 26 ಯೂಟ್ಯೂಬ್ ಚಾನೆಲ್‌ಗಳಲ್ಲಿನ ಜಾಹೀರಾತುಗಳಿಂದ ರಷ್ಯಾ 7 ಮಿಲಿಯನ್ ಮತ್ತು 32 ಮಿಲಿಯನ್ ಡಾಲರ್‌ಗಳನ್ನು ಪಡೆದುಕೊಂಡಿದೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಅದರಲ್ಲೂ ವಿಶೇಷವಾಗಿ, ಯುರೋಪಿಯನ್ ಯೂನಿಯನ್ ಬುಧವಾರ ಮಾರ್ಗರಿಟಾ ಸಿಮೋನಿಯನ್ (Margarita Simonyan)  ಸೇರಿದಂತೆ ಕೆಲವು ವ್ಯಕ್ತಿಗಳ ಮೇಲೆ ನಿಷೇಧ ಘೋಷಿಸಿತ್ತು. ಮಾರ್ಗರಿಟಾ ಸಿಮೋನ್ಯನ್ ಅವರನ್ನು RTಯ ಪ್ರಧಾನ ಸಂಪಾದಕಿ ಮತ್ತು ರಷ್ಯಾದ ಪ್ರಚಾರದ 'ಪ್ರಮುಖ ವ್ಯಕ್ತಿ' ಎಂದು ವಿವರಿಸಲಾಗಿದೆ.

ಇದನ್ನೂ ಓದಿ-ತಮ್ಮ ಮೊಮ್ಮಕ್ಕಳಿಗಾಗಿ ಉಕ್ರೇನಿಯನ್ ಸೈನ್ಯ ಸೇರಲು ಮುಂದಾದ 80 ವರ್ಷದ ಅಜ್ಜ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News