Viral Video: ಕೋಳಿಗೆ ಕಲ್ಲು ಹೊಡೆಯಲು ಹೋದ ಮಹಿಳೆ, ಹಿಂದಿನಿಂದ ಬಂದ ಟಗರು ಮಾಡಿದ್ದೇನು ನೀವೇ ನೋಡಿ

Viral Video- ಮಹಿಳೆಯೊಬ್ಬಳು ಕೋಳಿಯನ್ನು ಕಲ್ಲಿನಿಂದ ಹೊಡೆಯುತ್ತಿದ್ದಳು. ಆಗ ಆ ಮಹಿಳೆಗೆ ಕುರಿ ಏನು ಮಾಡಿದೆ ಎಂದು ನೋಡಿದರೆ ಬೆಚ್ಚಿ ಬೀಳುತ್ತೀರಿ. ಆಲಂ ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.  

Written by - Nitin Tabib | Last Updated : Oct 20, 2022, 05:04 PM IST
  • ವಿನಾಕಾರಣ ಯಾರಿಗೂ ತೊಂದರೆ ಕೊಡಬಾರದು ಎಂಬ ಮಾತಿದೆ.
  • ಆಗ ಅದರಲ್ಲಿ ಮನುಷ್ಯರು ಬಂದ್ರು ಹಾಗೂ ಪ್ರಾಣಿಗಳು ಬಂದ್ವು,
  • ಈ ನಿಯಮವು ಎಲ್ಲರಿಗೂ ಅನ್ವಯಿಸುತ್ತದೆ.
Viral Video: ಕೋಳಿಗೆ ಕಲ್ಲು ಹೊಡೆಯಲು ಹೋದ ಮಹಿಳೆ, ಹಿಂದಿನಿಂದ ಬಂದ ಟಗರು ಮಾಡಿದ್ದೇನು ನೀವೇ ನೋಡಿ title=
Trending Funny Video

Viral Video:  ವಿನಾಕಾರಣ ಯಾರಿಗೂ ತೊಂದರೆ ಕೊಡಬಾರದು ಎಂಬ ಮಾತಿದೆ. ಆಗ ಅದರಲ್ಲಿ ಮನುಷರು ಬಂದ್ರು ಹಾಗೂ ಪ್ರಾಣಿಗಳು ಬಂದವು, ಈ ನಿಯಮವು ಎಲ್ಲರಿಗೂ ಅನ್ವಯಿಸುತ್ತದೆ. ಇದರ ಹೊರತಾಗಿಯೂ, ಅನೇಕ ಜನರು ತಮ್ಮ ಸಂತೋಷ ಮತ್ತು ಲಾಭಕ್ಕಾಗಿ ಈ ನಿಯಮವನ್ನು ಉಲ್ಲಂಘಿಸುತ್ತಾರೆ ಮತ್ತು  ಕೆಲವೊಮ್ಮೆ ಅದರ ಫಲಿತಾಂಶ ತುಂಬಾ ದುಬಾರಿಯಾಗಿ ಪರಿಣಮಿಸುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಇಂತಹ ಅನೇಕ ಟ್ರೆಂಡಿಂಗ್ ವೀಡಿಯೊಗಳನ್ನು ನೋಡಿರಬಹುದು. ಆದರೆ, ಕೆಲವೊಮ್ಮೆ ಇಂತಹ ವೀಡಿಯೋಗಳನ್ನು ಕೆಲವರು ನಕ್ಕರೆ, ಉಳಿದವರು ಆಶ್ಚರ್ಯಪಡುತ್ತಾರೆ. ಅಂತಹುದೇ ಒಂದು ವಿಡಿಯೋ ಇತ್ತೀಚಿನ ದಿನಗಳಲ್ಲಿ ತುಂಬಾ ಹೆಡ್ಲೈನ್ ಗಿಟ್ಟಿಸಿದೆ, ಇದರಲ್ಲಿ ಮಹಿಳೆಯೊಬ್ಬಳು ವಿಹಾಕಾರಣ ಕೋಳಿಯ ಮೇಲೆ ಕಲ್ಲೆಸೆದಿದ್ದಾಳೆ. ಪರಿಣಾಮವಶಾತ್ ಮಹಿಳೆಗೆ ತನ್ನ ಕರ್ಮದ ಫಲ ತಕ್ಷಣವೇ ಸಿಕ್ಕಿದೆ.

ಇದನ್ನೂ ಓದಿ-ಈ ಕೋಣದ ಬೆಲೆ ಬರೋಬ್ಬರಿ 10 ಕೋಟಿ ರೂ.! ಯಾಕಿಷ್ಟು ಬೆಲೆ ಗೊತ್ತಾ..?

ವೈರಲ್ ಆಗಿರುವ ವಿಡಿಯೋದಲ್ಲಿ ಮನೆಯೊಂದರ ಮುಂಭಾಗದ ತೆರೆದ ಪ್ರದೇಶದಲ್ಲಿ ಕೆಲವು ಕುರಿಗಳು ನಿಂತಿರುವುದನ್ನು ನೀವು ಕಾಣಬಹುದು. ಇದ್ದಕ್ಕಿದ್ದಂತೆ ಎಲ್ಲಿಂದಲೋ ಒಬ್ಬ ಮಹಿಳೆ ಬರುತ್ತಾಳೆ. ಮಹಿಳೆ ಹೊರಡುವಾಗ, ಒಂದು ಹುಂಜ ಆಕೆಯ ಕಾಲಿನ ಕೆಳಗಿಂದ ಹಾದುಹೋಗುತ್ತದೆ. ಮಹಿಳೆ ಇದ್ದಕ್ಕಿದ್ದಂತೆ ಅಲ್ಲಿದ್ದ ಕಲ್ಲುಗಳನ್ನು ಎತ್ತಿ  ಆ ಹುಂಜಿಗೆ ಹೊಡೆಯಲು ಪ್ರಾರಂಭಿಸುತ್ತಾಳೆ. ಕುರಿಗಳ ಹಿಂಡು ಸುಮ್ಮನೆ ನಿಂತು ಮಹಿಳೆಯ ಈ ಕೃತ್ಯವನ್ನು ನೋಡುತ್ತಿದೆ. ಅಷ್ಟರಲ್ಲಿ ಮಹಿಳೆಯ ಹಿಂಭಾಗದಿಂದ ಬಂದ ಟಗರು ಮಹಿಳೆಗೆ ಗುದ್ದಿ ಮೇಲಕ್ಕೆ ತೋರಿದೆ. ಟಗರಿನ ಗುದ್ದಿಗೆ ಮಹಿಳೆ ತೀವ್ರವಾಗಿ ಕೆಳಗೆ ಬೀಳುತ್ತಾಳೆ. ಇನ್ನೇನು ಮಹಿಳೆ ಎದ್ದು ಚೇತರಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಮತ್ತೊಮ್ಮೆ ಟಗರು ಹಿಂದಿನಿಂದ ರಭಸವಾಗಿ ಬಂದು ಗುದ್ದುತ್ತದೆ. ಇಡೀ ಘಟನೆ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ-WATCH : ಹನುಮಾನ್ ಚಾಲೀಸಾ ಪಠಿಸುವ ರಷ್ಯನ್ ಬಾಲಕಿ, ವಿಡಿಯೋ ವೈರಲ್

ಕರ್ಮಕ್ಕೆ ತಕ್ಕ ಫಲ
ವಿಡಿಯೋ ನೋಡಿ ನಿಮಗೆ ನಗು ಬರಬಹುದು. ಈ ತಮಾಷೆಯ ವೀಡಿಯೋವನ್ನು ಟ್ವಿಟರ್‌ನಲ್ಲಿ 'IfsSamrat' ಹೆಸರಿನ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಇದುವರೆಗೆ 52 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋ ವೀಕ್ಷಿಸಿದ್ದಾರೆ. ಆದರೆ, 15 ನೂರಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್ ಕೂಡ ಮಾಡಿದ್ದಾರೆ. ಇದೇ ವೇಳೆ, ನೂರಾರು ಜನರು ವೀಡಿಯೊವನ್ನು ರೀಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ವಿಡಿಯೋದಲ್ಲಿ ಜನ ಸಖತ್ ಚಾಟ್ ಮಾಡುತ್ತಿದ್ದಾರೆ. ಹಾಗಾದ್ರೆ ಈ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅಂತ ಕಾಮೆಂಟ್ ಮಾಡಿ ನೀವೂ ತಿಳಿಸಿ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News