ಕೊರೋನಾ ಸಾಗಿಬಂದ ಹಾದಿ, WHO ತೆಗೆದುಕೊಂಡ ಕೆಲ ಪ್ರಮುಖ ಮಾಹಿತಿಗಳ ಟೈಮ್ ಲೈನ್...

ಕೊರೊನಾ ವೈರಸ್ "ಮಾನವನಿಂದ ಮಾನವರಿಗೆ ಹರಡುವುದಿಲ್ಲ" ಎಂದಿದ್ದ ಡಬ್ಲ್ಯುಎಚ್‌ಓ

Written by - Yashaswini V | Last Updated : May 18, 2020, 10:15 AM IST
ಕೊರೋನಾ ಸಾಗಿಬಂದ ಹಾದಿ, WHO ತೆಗೆದುಕೊಂಡ ಕೆಲ ಪ್ರಮುಖ ಮಾಹಿತಿಗಳ ಟೈಮ್ ಲೈನ್... title=

ನವದೆಹಲಿ: ಕೊರೊನಾ ಸೋಂಕು ವ್ಯಾಪಕವಾಗಿ ಜಗತ್ತಿನಾದ್ಯಂತ ಹರಡಲು ಚೀನಾ ಕೈವಾಡವಿದೆಯೇ ಎಂದು ಚರ್ಚಿಸಲು ವಿಶ್ವ ಆರೋಗ್ಯ ಸಂಸ್ಥೆ (WHO) ಇಂದು ತನ್ನ ಮಹತ್ವದ ಸಾಮಾನ್ಯ ಸಭೆ ನಡೆಸುತ್ತಿದೆ. ಈ ಸಭೆಯ ಹಿನ್ನೆಲೆಯಲ್ಲಿ ಕೊರೋನಾವೈರಸ್ ಕೋವಿಡ್-19 ಸಾಗಿಬಂದ ಹಾದಿ, ಕಾಲಕಾಲಕ್ಕೆ ವಿಶ್ವ ಆರೋಗ್ಯ ಸಂಸ್ಥೆ ತೆಗೆದುಕೊಂಡ ಕೆಲ ಪ್ರಮುಖ ನಿರ್ಧಾರಗಳು, ನೀಡಿದ ಮಾಹಿತಿಗಳು ಮತ್ತು ವಿವರಣೆಗಳು ಹೀಗಿವೆ...

2019ರ ಡಿಸೆಂಬರ್ 31: ವುಹಾನ್ ನಗರದಲ್ಲಿ ಕೊರೋನಾವೈರಸ್ (Coronavirus) ಪತ್ತೆ ಎಂದು ಡಬ್ಲ್ಯುಎಚ್‌ಓ ಚೀನಾ ವರದಿ ಆಗ ಚೀನಾದ ಕೊರೊನಾ ಪೀಡಿತರ ಸಂಖ್ಯೆ 44. 44 ಜನರ ಪೈಕಿ‌ 11 ಮಂದಿಗೆ ತೀವ್ರ ಅನಾರೋಗ್ಯ
2020ರ ಜನವರಿ 1: ತುರ್ತು ಕ್ರ‌ಮ ಕೈಗೊಳ್ಳುವಂತೆ ಚೀನಾ(China)ಗೆ ಡಬ್ಲ್ಯುಎಚ್‌ಓ ಸೂಚನೆ
ಜ‌ನವರಿ 4:  ವುಹಾನ್‌ನಲ್ಲಿ ಯಾವುದೇ ಸಾವುಗಳಾಗಿಲ್ಲ,  ನ್ಯುಮೋನಿಯಾ ಪ್ರಕರಣಗಳು ಮಾತ್ರ ಇವೆ ಎಂದು ಡಬ್ಲ್ಯುಎಚ್‌ಓ ಘೋಷಣೆ
ಜನವರಿ 5: ವೈರಸ್ ಕುರಿತು ಸಂಶೋಧಿಸಲು ವಿಜ್ಞಾನಿಗಳು ಮತ್ತು ಸಾರ್ವಜನಿಕ ಆರೋಗ್ಯ ತಜ್ಞರಿಗೆ ಸೂಚನೆ
ಜನವರಿ 10 - ಸಂಭಾವ್ಯ ಪ್ರಕರಣಗಳನ್ನು ಹೇಗೆ ಕಂಡುಹಿಡಿಯುವುದು, ಪರೀಕ್ಷಿಸುವುದು ಮತ್ತು ನಿರ್ವಹಿಸುವುದು ಎಂಬುದರ ಕುರಿತು ಎಲ್ಲಾ ದೇಶಗಳಿಗೆ  "ತಾಂತ್ರಿಕ ಮಾರ್ಗದರ್ಶನ"  ಕಳುಹಿಸಿದ ಡಬ್ಲ್ಯುಎಚ್‌ಓ
ಕೊರೊನಾ ವೈರಸ್ "ಮಾನವನಿಂದ ಮಾನವರಿಗೆ ಹರಡುವುದಿಲ್ಲ" ಎಂದಿದ್ದ ಡಬ್ಲ್ಯುಎಚ್‌ಓ
ಜನವರಿ 1: ಡಬ್ಲ್ಯುಎಚ್‌ಓಗೆ ಕೊವಿಡ್-19 (Covid-19)ರ ಆನುವಂಶಿಕ ಅನುಕ್ರಮ ನೀಡಿದ ಚೀನಾ
ಜನವರಿ 13: ಥೈಲ್ಯಾಂಡ್ ನಲ್ಲಿ ಕೊರೊನಾ ವೈರಸ್  ಮೊದಲ ಪ್ರಕರಣ ಪತ್ತೆ
ಜನವರಿ 14: ಡಬ್ಲ್ಯುಎಚ್‌ಓದ ಕೊವಿಡ್-19ರ ತಾಂತ್ರಿಕ ಪ್ರಮುಖರಾದ ಮಾರಿಯಾ ವ್ಯಾನ್ ಕೆರ್ಖೋವ್ ಸುದ್ದಿಗೋಷ್ಠಿಯಲ್ಲಿ 41 ಪಾಸಿಟಿವ್ ಪ್ರಕರಣಗಳು ಇರುವ ಬಗ್ಗೆ ಮಾಹಿತಿ
ಮನುಷ್ಯರಿಂದ ಮನುಷ್ಯರಿಗೆ ಹರಡುವುದನ್ನು ಮತ್ತು ವ್ಯಾಪಕವಾಗಿ ಹರಡಬಹುದೆಂಬ ಅಪಾಯದ ಮುನ್ಸೂಚನೆ ನೀಡಿದ ಡಬ್ಲ್ಯುಎಚ್‌ಓ
ಜನವರಿ 20, 21:  - ಚೀನಾ ಮತ್ತು ಪಶ್ಚಿಮ ಪೆಸಿಫಿಕ್ ಪ್ರದೇಶಕ್ಕೆ  ಡಬ್ಲ್ಯುಎಚ್‌ಓ ತಜ್ಞರ ಭೇಟಿ
ಜನವರಿ 22: ಕುಟುಂಬಗಳಿಗೆ ಅಥವಾ ನಿಕಟ ಸಂಪರ್ಕ ಇರುವವರಿಗೆ ಕೊರೊನಾ ವೈರಸ್ ಹರಡುತ್ತದೆ. ಈ ಬಗ್ಗೆ  ವುಹಾನ್‌ನಲ್ಲಿ ಮಾನವನಿಂದ ಮನುಷ್ಯನಿಗೆ ಹರಡಿರುವ ಪುರಾವೆಗಳಿವೆ ಎಂದು ಚೀನಾಕ್ಕೆ ಹೇಳಿದ ಡಬ್ಲ್ಯುಎಚ್‌ಓ
ಕೊರೊನಾ ವೈರಸ್ ಅನ್ನು ಸಂಪೂರ್ಣವಾಗಿ  ಅರ್ಥಮಾಡಿಕೊಳ್ಳಲು ಹೆಚ್ಚಿನ ತನಿಖೆ ಅಗತ್ಯ ಎಂದ ಡಬ್ಲ್ಯುಎಚ್‌ಓ
ಜನವರಿ 22, 23: ಅಂತರರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಅಗತ್ಯವಿದೆಯೇ ಎಂದು ನಿರ್ಣಯಿಸಲು WHO ಮುಖ್ಯಸ್ಥ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ನೇತೃತ್ವದಲ್ಲಿ ತುರ್ತು ಸಮಿತಿ ಸಭೆ
ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಬಗ್ಗೆ ಒಮ್ಮತಕ್ಕೆ ಬರಲು ಅಂತರರಾಷ್ಟ್ರೀಯ ತಜ್ಞರನ್ನು ಒಳಗೊಂಡ ಸಮಿತಿ ವಿಫಲ 10 ದಿನಗಳ ನಂತರ ಮತ್ತೆ ಸಭೆ ಸೇರಲು ನಿರ್ಧಾರ
ಜನವರಿ 28: ಡಬ್ಲ್ಯುಎಚ್‌ಓ ನಿಯೋಗವು ಟೆಡ್ರೊಸ್ ನೇತೃತ್ವದ ಬೀಜಿಂಗ್‌ಗೆ ಪ್ರಯಾಣ
ಅಂತರರಾಷ್ಟ್ರೀಯ ವಿಜ್ಞಾನಿಗಳ ತಂಡವನ್ನು ಚೀನಾಕ್ಕೆ ಆಹ್ವಾನಿಸಲು ಒಪ್ಪಿದ ಚೀನಾ ಸರ್ಕಾರ
ಜನವರಿ 30: ಕೊವಿಡ್-19 ಅನ್ನು "ಅಂತರರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ" ಎಂದು ಘೋಷಿಸಿದ ಡಬ್ಲ್ಯುಎಚ್‌ಓ
ಜನವರಿ 30: ಭಾರತದಲ್ಲಿ ಮೊದಲ ಕೊರೊನಾ ವೈರಸ್ ಪ್ರಕರಣ ಪತ್ತೆ, ಕೇರಳದಲ್ಲಿ ಕಂಡುಬಂದ ಕೊರೊನಾ ವೈರಸ್
ಫೆಬ್ರವರಿ 16-24: ಅಂತರರಾಷ್ಟ್ರೀಯ ವೈಜ್ಞಾನಿಕ ಮಿಷನ್ ಅಡಿ ಅಮೇರಿಕಾ, ಚೀನಾ, ಜರ್ಮನಿ, ಜಪಾನ್, ದಕ್ಷಿಣ ಕೊರಿಯಾ, ನೈಜೀರಿಯಾ, ರಷ್ಯಾ, ಸಿಂಗಾಪುರ್ ಮತ್ತು ಕೆನಡಾದ ತಜ್ಞರನ್ನು ಒಳಗೊಂಡ ನಿಯೋಗ ವುಹಾನ್ ಗೆ ಭೇಟಿ
ಫೆಬ್ರವರಿ 24: ಡಬ್ಲ್ಯುಎಚ್‌ಓ ಮತ್ತು ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಷನ್ ಅಂಡ್ ಕಂಟ್ರೋಲ್‌ ತಜ್ಞರ ತಂಡದಿಂದ ಚೀನಾದ ನಂತರ ಕರೋನವೈರಸ್  ಕೇಂದ್ರವಾಗಿದ್ದ ಇಟಲಿಗೆ ಪ್ರಯಾಣ
ಮಾರ್ಚ್ 11: COVID-19 ಸಾಂಕ್ರಾಮಿಕ ವೈರಸ್ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದ ಡಬ್ಲ್ಯುಎಚ್‌ಓ
ಕೇವಲ ನಾಲ್ಕು ದೇಶಗಳಲ್ಲಿ ಶೇಕಡಾ 90ರಷ್ಟು ಪ್ರಕರಣಗಳು ದೃಢಪಟ್ಟಿವೆ. 81 ದೇಶಗಳು ಯಾವುದೇ ಪ್ರಕರಣಗಳನ್ನು ವರದಿ ಮಾಡಿಲ್ಲ, 57 ದೇಶಗಳು 10 ಪ್ರಕರಣಗಳನ್ನು ವರದಿ ಮಾಡಿವೆ ಎಂದು ಡಬ್ಲ್ಯುಎಚ್‌ಓ ಘೋಷಣೆ
ಏಪ್ರಿಲ್ 9: ಚೀನಾ ವಿರುದ್ದ ಎಚ್ಚರಿಕೆ ನೀಡಲು ನಿಧಾನ ಮಾಡುತ್ತಿದೆ ಎಂದು ಡಬ್ಲ್ಯುಎಚ್‌ಓ ಬಗ್ಗೆ ಟೀಕೆ
ಏಪ್ರಿಲ್ 14: "ಕರೋನವೈರಸ್ ಹರಡುವಿಕೆಯನ್ನು ತೀವ್ರವಾಗಿ ದುರುಪಯೋಗಪಡಿಸಿಕೊಳ್ಳುವಲ್ಲಿ ಮತ್ತು ಮುಚ್ಚಿಹಾಕುವಲ್ಲಿ" ಡಬ್ಲ್ಯುಎಚ್‌ಓ ಪಾತ್ರವನ್ನು ಪರಿಶೀಲಿಸಬೇಕಿದೆ. ಡಬ್ಲ್ಯುಎಚ್‌ಓ, ಚೀನಾ ಬಗ್ಗೆ ಪಕ್ಷಪಾತ ತೋರುತ್ತಿದೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪ
ಏಪ್ರಿಲ್ 24 - ಚಿಕಿತ್ಸೆಗಳು ಮತ್ತು ಲಸಿಕೆಗಳ ಅಭಿವೃದ್ಧಿ, ಉತ್ಪಾದನೆ ಮತ್ತು ವಿತರಣೆಯನ್ನು ವೇಗಗೊಳಿಸಲು ಮತ್ತು ಚಿಕಿತ್ಸಕ ವಿಧಾನಗಳಿಗೆ ಸಾರ್ವತ್ರಿಕ ಪ್ರವೇಶವನ್ನು ಖಾತ್ರಿಪಡಿಸಿಕೊಳ್ಳಲು ಸದಸ್ಯ ರಾಷ್ಟ್ರಗಳಿಗೆ ಡಬ್ಲ್ಯುಎಚ್‌ಓ ಒತ್ತಾಯ
ಏಪ್ರಿಲ್ 27: ಸಾಮಾಜಿಕ ಅಂತರ ಖಾತರಿಪಡಿಸುವುದರ ಜೊತೆಗೆ ಶಂಕಿತ ಪ್ರಕರಣಗಳನ್ನು ಪರೀಕ್ಷಿಸಲು, ಪ್ರತ್ಯೇಕಿಸಲು ಮತ್ತು ಚಿಕಿತ್ಸೆ ನೀಡಲು ತಮ್ಮ ಲಾಕ್‌ಡೌನ್ ಕ್ರಮ ಅನುಸರಿಸುವಂತೆ ಡಬ್ಲ್ಯುಎಚ್‌ಓ ಸೂಚನೆ
ಜಾಗತಿಕವಾಗಿ ಕೊರೊನಾ ವೈರಸ್ ಎರಡನೇ ಹಂತ ತಲುಪಬಹುದೆಂದು ಅಪಾಯದ ಮುನ್ಸೂಚನೆ ನೀಡಿದ ಡಬ್ಲ್ಯುಎಚ್‌ಓ
ಮೇ 14: ಕೊರೋನಾ ವೈರಸ್ ಎಂದಿಗೂ ಹೋಗುವುದಿಲ್ಲ ಮತ್ತು ಪ್ರಪಂಚವು ಅದರ ವಿರುದ್ಧ ನಿರಂತರವಾಗಿ ಹೋರಾಡಲು ಕಲಿಯಬೇಕಾದ ರೋಗವಾಗಬಹುದು ಎಂದ ಡಬ್ಲ್ಯುಎಚ್‌ಓ
ಮೇ 18-19: ಕೊರೊನಾ ಸೋಂಕು ವ್ಯಾಪಕವಾಗಿ ಜಗತ್ತಿನಾದ್ಯಂತ ಹರಡಲು ಚೀನಾ ಕೈವಾಡವಿದೆಯೇ ಎಂದು ಚರ್ಚಿಸಲು ಡಬ್ಲ್ಯುಎಚ್‌ಓ ಸಾಮಾನ್ಯ ಸಭೆ
 

Trending News