31 ನೇ ವಯಸ್ಸಿನಲ್ಲಿ 48 ಮಕ್ಕಳ ತಂದೆಯಾದ ಈ ವ್ಯಕ್ತಿ

ಈ ವ್ಯಕ್ತಿಯ ಹೆಸರು ಕೆಲ್ ಗಾಡಿ ಮತ್ತು ಅವನು ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ವಾಸಿಸುತ್ತಾರೆ. ಇವರ ವಯಸ್ಸು 31 ವರ್ಷ. ಲೆಕ್ಕಪರಿಶೋಧಕರಾಗಿ ಕೆಲಸ ಮಾಡುವ ಇವರು, 48 ಮಕ್ಕಳ ತಂದೆಯಾಗಿದ್ದಾರೆ. 

Written by - Chetana Devarmani | Last Updated : Jul 24, 2022, 10:46 AM IST
  • ಇಂದು ನಾವು ನಿಮಗೆ ಒಬ್ಬ ಅಪರೂಪದ ವ್ಯಕ್ತಿಯನ್ನು ಪರಿಚಯಿಸಲಿದ್ದೇವೆ
  • ಇದುವರೆಗೆ ಇವರು 48 ಮಕ್ಕಳ ತಂದೆಯಾಗಿದ್ದಾರೆ
  • ಕೆಲ್ ಗಾಡಿ ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ವಾಸಿಸುತ್ತಾರೆ
31 ನೇ ವಯಸ್ಸಿನಲ್ಲಿ 48 ಮಕ್ಕಳ ತಂದೆಯಾದ ಈ ವ್ಯಕ್ತಿ  title=
ಕೆಲ್ ಗಾಡಿ

ಇಂದು ನಾವು ನಿಮಗೆ  ಒಬ್ಬ ಅಪರೂಪದ ವ್ಯಕ್ತಿಯನ್ನು ಪರಿಚಯಿಸಲಿದ್ದೇವೆ. ಇದುವರೆಗೆ ಇವರು 48 ಮಕ್ಕಳ ತಂದೆಯಾಗಿದ್ದಾರೆ. ಹೌದು, ಕೇವಲ 31 ವರ್ಷ ವಯಸ್ಸಿನ ಕೆಲ್ ಗಾಡಿ 'ಸೀರಿಯಲ್ ಸ್ಪರ್ಮ್‌ ಡೋನಾರ್' ಎಂದೇ ಖ್ಯಾತರಾಗಿದ್ದಾರೆ. ವರದಿಯ ಪ್ರಕಾರ, ಕೆಲ್ ಗಾಡಿ ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ವಾಸಿಸುತ್ತಾರೆ. ಲೆಕ್ಕಪರಿಶೋಧಕರಾಗಿ ಕೆಲಸ ಮಾಡುವ ಕೆಲ್ ಗಾಡಿ, ಇದು ವರೆಗೆರೆ 48 ಬಾರಿ ವೀರ್ಯಾಣು ದಾನ ಮಾಡಿದ್ದಾರೆ. ಮುಂದೆಯೂ ವೀರ್ಯ ದಾನ ಮಾಡುವುದಾಗಿಯೂ, ಮಹಿಳೆಯರಿಗೆ ಅಗತ್ಯವಿರುವವರೆಗೂ ಈ ಕಾರ್ಯ ಮುಂದುವರಿಸುವುದಾಗಿಯೂ ಇವರು ಹೇಳುತ್ತಾರೆ.

ಇದನ್ನೂ ಓದಿ: Optical Illusion: ಈ ಚಿತ್ರದಲ್ಲಿ ನಿಮಗೆ ಮೊದಲು ಕಾಣುವ ದೃಶ್ಯ ಯಾವುದು? ಅದರ ಮೂಲಕ ತಿಳಿಯಬಹುದು  

ಯುಕೆ ದಂಪತಿಗೆ ಕಳೆದ ವರ್ಷ ವೀರ್ಯ ದಾನ:

ಅಕ್ಟೋಬರ್ 2021 ರಲ್ಲಿ, ಅವರು ಯುರೋಪಿಯನ್ ಪ್ರವಾಸಕ್ಕೆ ಹೋಗಿದ್ದರು. ಬ್ರಿಟನ್‌ನಲ್ಲಿ ಲೆಸ್ಬಿಯನ್ ದಂಪತಿಗಳಿಗೆ ತಮ್ಮ ವೀರ್ಯವನ್ನು ದಾನ ಮಾಡಿದರು. ಆಗ ಮಹಿಳೆಯೊಬ್ಬರು ತನ್ನನ್ನು ಇನ್‌ಸ್ಟಾಗ್ರಾಮ್ ಮೂಲಕ ಸಂಪರ್ಕಿಸಿ ಬ್ರಿಟನ್‌ಗೆ ಬಂದು ವೀರ್ಯ ನೀಡುವಂತೆ ಹೇಳಿದ್ದರು ಎಂದು ಕೆಲ್ ಗಾಡಿ ಹೇಳುತ್ತಾರೆ. ಅವರು ಯುರೋಪ್ ಪ್ರವಾಸದಲ್ಲಿದ್ದಾಗ, ಅವರು ಮಹಿಳೆಯ ಮನೆಗೆ ಹೋಗಿ ಸಣ್ಣ ಕಪ್ ನಲ್ಲಿ ವೀರ್ಯವನ್ನು ನೀಡಿದರು. ಜೂನ್ 27ರಂದು ಲೆಸ್ಬಿಯನ್ ದಂಪತಿಯ ಮನೆಯಲ್ಲಿ 2 ಕೆಜಿ 700 ಗ್ರಾಂ ತೂಕದ ಮಗು ಜನಿಸಿತ್ತು. ಮಹಿಳೆ ಮಗುವಿನ ಫೋಟೋಗಳನ್ನು ಕೆಲ್‌ಗೆ ಕಳುಹಿಸಿದ್ದಾರೆ. 

ಇದನ್ನೂ ಓದಿ: ವಿಕ್ರಾಂತ್‌ ರೋಣ ಟಿಕೆಟ್‌ ಬುಕಿಂಗ್‌ಗಾಗಿ ಕಾಯ್ತಿದ್ದೀರಾ? ಇಲ್ಲಿದೆ ಮಹತ್ವದ ಅಪ್‌ಡೇಟ್‌

2014ರಿಂದ ಈ ಕೆಲಸ ಮಾಡುತ್ತಿರುವ ಕೆಲ್ ಗಾಡಿ:

2014ರಿಂದ ಈ ಕೆಲಸ ಆರಂಭಿಸಿದ್ದೇನೆ ಎನ್ನುತ್ತಾರೆ ಕೆಲ್ ಗಾಡಿ. ಮೊದಲ ಬಾರಿಗೆ, ಅವರು ತಮ್ಮ ವೀರ್ಯವನ್ನು ಕ್ಯಾಲಿಫೋರ್ನಿಯಾದಲ್ಲಿ (ಯುಎಸ್ಎ) ವಾಸಿಸುವ ಲೆಸ್ಬಿಯನ್ ದಂಪತಿಗಳಿಗೆ ನೀಡಿದರು. ಡೇಟಿಂಗ್ ಹಾಗೂ ರಿಲೇಶನ್ ಶಿಪ್ ನಲ್ಲಿ ಮೋಸ ಹೋಗಿರುವ ಕೆಲ್ ಗಾಡಿ, ಆ ಬಳಿಕ ತಮ್ಮ ವೀರ್ಯಾಣು ದಾನ ಮಾಡಲು ಆರಂಭಿಸಿದ್ದಾಗಿ ಹೇಳಿದ್ದಾರೆ. ಕೆಲ್ ತನ್ನ ವೀರ್ಯ ನೀಡಿದ ಮಹಿಳೆಯರಿಗಾಗಿ ವಾಟ್ಸಾಪ್ ಗ್ರೂಪ್ ರಚಿಸಲಾಗಿದೆ. ಈ ಗುಂಪಿನಲ್ಲಿ ಸುಮಾರು 40 ಮಹಿಳೆಯರಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News